See also 1seal  2seal  4seal
3seal ಸೀಲ್‍
ನಾಮವಾಚಕ
  1. (ಪ್ರಾಮಾಣ್ಯದ ಖಾತರಿಗಾಗಿ, ಸಹಿಯ ಜೊತೆಗೆ ದಸ್ತಾವೇಜು, ಅಧಿಕೃತ ಪತ್ರ, ಮೊದಲಾದವುಗಳ ಮೇಲೆ ಒತ್ತುವ, ಮುದ್ರಿಕೆ ಹಾಕಿದ, ಅರಗಿನ) ಮುದ್ರೆ; ಸೀಲು; ಮೊಹರು.
  2. ಠಸ್ಸೆ; ಮುದ್ರೆ; ಅರಗಿನ ಮೊಹರಿಗೆ ಸಮಾನವೆಂದು ಪತ್ರ ಮೊದಲಾದವುಗಳ ಮೇಲೆ ಹಾಕಿದ ಯಾವುದೇ ಗುರುತು ಯಾ ಅಂಟಿಸಿದ ಕಾಗದದ ಬಿಲ್ಲೆ.
  3. (ದಾನ ಧರ್ಮ ಮೊದಲಾದವುಗಳನ್ನು ಸೂಚಿಸಲು ಮುದ್ರಿಸಿದ ಯಾ ಅಂಟಿಸಿದ) ಮುದ್ರೆ; ಚಿಹ್ನೆ; ಲಾಂಛನ.
  4. (ರೂಪಕವಾಗಿ) (ಮುಂಬರುವುದನ್ನು ಸೂಚಿಸುವ ಸುಸ್ಪಷ್ಟ) ಚಿಹ್ನೆ; ಲಕ್ಷಣ; ಗುರುತು: he has the seal of death in his face ಅವನ ಮುಖದಲ್ಲಿ ಸಾವಿನ (ಸ್ಪಷ್ಟ) ಗುರುತಿದೆ, ಮೃತ್ಯುಲಾಂಛನವಿದೆ.
  5. (ಅರಗು ಮೊದಲಾದವುಗಳ ಮೇಲೆ ಒತ್ತಿ ಗುರುತು ಬೀಳಿಸಲು ಬಳಸುವ, ಉಂಗುರ, ಲೋಹದ ಬಿಲ್ಲೆ ಮೊದಲಾದವುಗಳ ಮೇಲೆ ಕೆತ್ತಿದ, (ಸಣ್ಣ) ಸಹಿ, ಮೊದಲಾದವುಗಳ ಯಾ ಉಂಗುರಕ್ಕೆ ಹಾಕಿದ ರತ್ನದ) ಸೀಲು; ಮುದ್ರೆ; ಮುದ್ರಿಕೆ; ಉಂಡಿಗೆ.
  6. (ಯಾವುದರದೇ) ಮೊಹರು; ಮುದ್ರೆ; ಚಿಹ್ನೆ; ಲಾಂಛನ; ಕುರುಹು; ಗುರುತು; ಸಾಕ್ಷ್ಯ; ರುಜುವಾತು; ಪ್ರಮಾಣ; ಮಾಡಿದ ಕಾರ್ಯ, ಕೊಟ್ಟ ಕೊಡುಗೆ, ನಡೆದ ಯಾ ನಡೆಸಿದ ಸಮಾರಂಭ, ಮೊದಲಾದವುಗಳ ಗುರುತು: the little darling is the seal of their passionate love ಆ ಮುದ್ದಿನ ಕೂಸು, ಅವರ ಉತ್ಕಟ ಪ್ರೇಮದ ಲಾಂಛನ, ಕಟ್ಟೊಲವಿನ ಕುರುಹು.
  7. (ಕೊಳವೆ ಮೊದಲಾದವುಗಳ ಬಾಯಿಯನ್ನು, ರಂಧ್ರವನ್ನು ಮುಚ್ಚಲು ಬಳಸುವ) ಮುಚ್ಚಿಗೆ; ಮೊಹರು; ಬಿರಡೆ.
  8. (ಮುಖ್ಯವಾಗಿ ಚರಂಡಿಯ ಕೊಳವೆಯಿಂದ ನಾತದ ಗಾಳಿ ಬರದಂತೆ) ತಡೆಯುವ ನೀರು.
  9. (ಮುಖ್ಯವಾಗಿ ಕ್ರೈಸ್ತಧರ್ಮ) (ಪಾದ್ರಿಯ ಎದುರು ಮಾಡಿದ) ಮೌನವ್ರತ; ರಹಸ್ಯಗಳನ್ನು (ಮುಖ್ಯವಾಗಿ ಪಾಪನಿವೇದನೆಯನ್ನು) ಹೊರಗೆಡಹದಿರುವ ಪ್ರತಿಜ್ಞೆ, ನಿಯಮ, ಕಟ್ಟುಪಾಡು.
ಪದಗುಚ್ಛ
  1. Fishers’ Seal ಬೆಸ್ತನ ಮೊಹರು; ಸಂತ ಪೀಟರನನ್ನು ಮೀನುಗಾರನ ರೂಪದಲ್ಲಿ ಚಿತ್ರಿಸಿರುವ, ಪೋಪ್‍ ಗುರುವಿನ ಮೊಹರು, ಅಧಿಕಾರ ಮುದ್ರೆ.
  2. given under my hand and seal ನಾನು ರುಜುಮಾಡಿ ಮೊಹರು ಹಾಕಿ ಕೊಟ್ಟದ್ದು.
  3. leaden seal (ಬಿಗಿದು ಕಟ್ಟಿರುವ ತಂತಿಯ ತುದಿಗಳನ್ನು ಕಚ್ಚಿಸಿ ಹಾಕಿದ) ಸೀಸದ ಮೊಹರು.
  4. seals of office (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಲಾರ್ಡ್‍ ಚಾನ್ಸಲರ್‍ ಯಾ ಸೆಕ್ರೆಟರಿ ಆಫ್‍ ಸ್ಟೇಟ್‍ ಹುದ್ದೆಗಳ ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಬಳಸುವ) ಮೊಹರುಗಳು; ಅಧಿಕಾರ ಮುದ್ರೆಗಳು.
  5. set (one’s) seal to (or on) ಮುದ್ರೆ ಒತ್ತು:
    1. ಅಧಿಕಾರವತ್ತಾಗಿ ಮಾಡು; ಪ್ರಮಾಣೀಕರಿಸು; ಅಧಿಕೃತಗೊಳಿಸು.
    2. ಸ್ಥಿರೀಕರಿಸು; ಪುಷ್ಟೀಕರಿಸು; ದೃಢಪಡಿಸು; ಖಾತರಿಗೊಳಿಸು.
  6. the Great Seal (ಬ್ರಿಟಿಷ್‍ ಪ್ರಯೋಗ) ಮಹಾ – ಮುದ್ರೆ, ಮೊಹರು; ಲಾರ್ಡ್‍ ಚಾನ್ಸಲರ್‍ ಯಾ ಲಾರ್ಡ್‍ ಕೀಪರ್‍ ಅವರ ವಶದಲ್ಲಿರುವ, ಪಾರ್ಲಿಮೆಂಟಿನ ಅಧ್ಯಾದೇಶಗಳು, ವಿದೇಶೀಯ ಕರಾರುಗಳು, ಪ್ರಮುಖ ಸರ್ಕಾರೀ ಪತ್ರಗಳು, ಮೊದಲಾದವುಗಳಿಗೆ ಒತ್ತುವ ಮುದ್ರೆ.
  7. under seal of (ಹೊರಗೆಡಹಕೂಡದೆಂಬ) ನಿರ್ಬಂಧ, ಷರತ್ತು ಹಾಕಿ: under seal of confidence ಬಾಯಿಬಿಡಕೂಡದೆಂಬ, ಗುಟ್ಟು ರಟ್ಟುಮಾಡಬಾರದೆಂಬ ನಿರ್ಬಂಧ ಹಾಕಿ.