See also 2deal  3deal
1deal ಡೀಲ್‍
ನಾಮವಾಚಕ
  1. (ಯಾವುದೇ ಹೆಚ್ಚಾದ) ಮೊತ್ತ; ಅಳವು; ಮಟ್ಟ; ಪ್ರಮಾಣ; ಪರಿಮಾಣ: a good deal of work ತುಂಬ ಕೆಲಸ. a great deal of money ಭಾರೀ ಮೊತ್ತದ ಹಣ; ಅಪಾರ ಹಣ.
  2. ಹಂಚಿಕೆ; ವಿತರಣೆ; ಹಂಚುವಿಕೆ; ಪಾಲು ಮಾಡುವಿಕೆ.
  3. (ಇಸ್ಪೀಟು)
    1. (ಆಟಗಾರರಿಗೆ) ಎಲೆಗಳ ಹಂಚಿಕೆ.
    2. (ಹಂಚಿದ) ಎಳೆಗಳು; ಕೈಎಲೆಗಳು.
    3. (ಆಟಗಾರನ) ಹಂಚಿಕೆ ಸರದಿ.
    4. ಒಂದು ಸುತ್ತು ಇಳಿತದ ಕಾಲ.
    5. (ಆಟದ) ಒಂದು – ಸುತ್ತು, ವರಿಸೆ, ಸೂಳು.
  4. (ಆಡುಮಾತು) (ಮುಖ್ಯವಾಗಿ ಪರಸ್ಪರ ಪ್ರಯೋಜನಕ್ಕಾಗಿ ಮಾಡಿಕೊಂಡ) ಗುಟ್ಟಿನ ಒಪ್ಪಂದ; ಗುಪ್ತ ಕರಾರು; ರಹಸ್ಯವಾದ ಯಾ ನ್ಯಾಯವಾಗಿರದ ವ್ಯಾಪಾರ.
  5. (ಆಡುಮಾತು) (ವ್ಯವಹಾರದಲ್ಲಿ) ನಡೆವಳಿಕೆ; ರೀತಿನೀತಿ; ವರ್ತನೆ.
ಪದಗುಚ್ಛ
  1. a deal (ಆಡುಮಾತು) = ಪದಗುಚ್ಛ \((2)\).
  2. a good deal ದೊಡ್ಡ ಪ್ರಮಾಣ; ಭಾರಿ ಮೊತ್ತ.
  3. a great deal = ಪದಗುಚ್ಛ \((2)\).
  4. new deal
    1. ಹೊಸ ನೀತಿ; ನ್ಯಾಯವೆಂದು ಭಾವಿಸಿದ ಯಾವುದೇ ಹೊಸ ಯೋಜನೆ.
    2. (New Deal) (ಅಮೆರಿಕನ್‍ ಪ್ರಯೋಗ) ನ್ಯೂ ಡೀಲ್‍(ನೀತಿ); 1932ರಲ್ಲಿ ಹ್ರ್ಯಾಂಕ್ಲಿನ್‍ ರೂಸ್‍ವೆಲ್ಟ್‍ ಯೋಜಿಸಿದ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣಾ ಕಾರ್ಯಕ್ರಮ.
ನುಡಿಗಟ್ಟು
  1. fair(or square)deal ನ್ಯಾಯವಾದ ನಡವಳಿಕೆ.
  2. it’s a deal (ಆಡುಮಾತು) ನಿನ್ನ ಕರಾರಿಗೆ ಒಪ್ಪಿದ್ದೇನೆ; ನಿನ್ನ ಷರತ್ತು ನನಗೆ ಸಮ್ಮತ.
  3. raw (or rough) deal ಒರಟಾದ ಯಾ ಅನ್ಯಾಯದ ವರ್ತನೆ ಯಾ ನಡವಳಿಕೆ.