See also 2charter
1charter ಚಾರ್ಟರ್‍
ನಾಮವಾಚಕ
  1. (ಮುಖ್ಯವಾಗಿ ಪುರಸಭೆ, ಸಂಘ ಮೊದಲಾದವುಗಳ ಸ್ಥಾಪನೆಗೆ ರಾಜನಿಂದ ಯಾ ಪಾರ್ಲಿಮಂಟಿನಿಂದ ದತ್ತವಾದ) ಸನ್ನದು; ಚಾರ್ಟರು; ಶಾಸನಪತ್ರ; ಅಧಿಕಾರಪತ್ರ.
  2. ಪರಭಾರೆ ಪತ್ರ; ಭೂಸ್ವತ್ತಿನ ವರ್ಗಾವಣೆ ಪತ್ರ.
  3. = charter-party.
  4. (ಹಕ್ಕುಗಳನ್ನು ಮಾನ್ಯಮಾಡಿ ಕೊಟ್ಟ) ವಿಶೇಷಾಧಿಕಾರ; ಸವಲತ್ತು.
  5. (ರೂಪಕವಾಗಿ) ದುರ್ನಡತೆಗೆ ಕೊಟ್ಟ ಅನುಮತಿ, ರಹದಾರಿ.
  6. (ವಿಶ್ವಸಂಸ್ಥೆಯ) ಲಿಖಿತ ಸಂವಿಧಾನ.
ಪದಗುಚ್ಛ
  1. Atlantic Charter ಅಟ್ಲಾಂಟಿಕ್‍-ಸನ್ನದು, ಘೋಷಣೆ; ಅಟ್ಲಾಂಟಿಕ್‍ ಸಾಗರದಲ್ಲಿ 1941ನೇ ಆಗಸ್ಟ್‍ 14 ರಂದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ರೂವೆಲ್ಟರೂ ಇಂಗ್ಲಂಡಿನ ಪ್ರಧಾನಿ ಚರ್ಚಿಲ್ಲರೂ ಎರಡನೇ ಮಹಾಯುದ್ಧದ ಅನಂತರ ಆಗಬೇಕಾದ ಶಾಂತಿವ್ಯವಸ್ಥೆಯನ್ನು ಕುರಿತು ಸಮಾಲೋಚನೆ ನಡೆಸಿ ಹೊರಡಿಸಿದ ಎಂಟು ತತ್ತ್ವಗಳನ್ನೊಳಗೊಂಡ ಒಂದು ಜಂಟಿ ಘೋಷಣೆ.
  2. Great Charter = (Magna Charta) (ಇಂಗ್ಲಂಡಿನ ಪ್ರಜೆಗಳ ಒತ್ತಾಯದಿಂದ ಜಾನ್‍ ದೊರೆಯು 1215ರಲ್ಲಿ ಮಾನ್ಯತೆ ಕೊಟ್ಟ) ಮಹಾಸನ್ನದು; ಮಹಾಶಾಸನ.