See also 2circle
1circle ಸರ್ಕ್‍ಲ್‍
ನಾಮವಾಚಕ
  1. ವರ್ತುಲ; ವೃತ್ತ; ವೃತ್ತರೇಖೆ; ವರ್ತುಲರೇಖೆ:
    1. ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಿಲ್ಲದ ರೇಖೆ.
    2. ಆ ರೇಖೆಯಿಂದ ಆವೃತವಾದ ಪ್ರದೇಶ.
  2. (ಸಡಿಲವಾಗಿ) ಸರಿ ಸುಮಾರು ಗುಂಡಗಿರುವ ಆವರಣ.
  3. (ಆಕಾಶದಲ್ಲಿನ) ಪರಿವೇಷ; ಪ್ರಭಾಮಂಡಲ; ಪ್ರಭಾವಲಯ; ಬೆಳಕುಬಳೆ.
  4. (ಯಾವುದರದೇ) ವರ್ತುಲ; ಮಂಡಲ; ವೃತ್ತ; ವೃತ್ತಾಕಾರದಲ್ಲಿರುವ ಯಾವುದೇ ವಸ್ತು, ರಚನೆ ಯಾ ವಿನ್ಯಾಸ: a circle of dancersನರ್ತಕರ ವೃತ್ತ.a circle of trees ವೃಕ್ಷವರ್ತುಲ.
  5. ಉಂಗುರ; ಅಂಗುಲೀಯಕ.
  6. ದುಂಡುಪಟ್ಟಿ.
  7. ಗುಂಡುಕಿರೀಟ.
  8. ವರ್ತುಲಪಥ; ಚಕ್ರರಸ್ತೆ; ಸುತ್ತು ರೈಲುಹಾದಿ; ಸಂಚಾರ ಸತತವಾಗಿ ಸಾಗುವಂತೆ ತುದಿಗಳನ್ನು ಕೂಡಿಸಿರುವ ರಸ್ತೆ, ರೈಲುಹಾದಿ ಮೊದಲಾದವು, ಮುಖ್ಯವಾಗಿ (Circle) ಲಂಡನ್ನಿನ ಭೂಗತ ಹಾದಿ.
  9. ಸರ್ಕಸ್ಸಿನ ಕಣ, ಅಖಾಡ.
  10. (ನಾಟಕಶಾಲೆ ಮೊದಲಾದವುಗಳಲ್ಲಿ) ಆಸನಗಳ ಬಾಗುಸೋಪಾನ; ವರ್ತುಲ(ವಾಗಿ ಜೋಡಿಸಿರುವ ಆಸನಗಳ) ಹಂತ, ಪಂಕ್ತಿ, ಅಂತಸ್ತು: dress circle (ಬ್ರಿಟಿಷ್‍ ಪ್ರಯೋಗ) ಹೆಚ್ಚು ಬೆಲೆಯ ಸೋಪಾನ ಸಾಲು. upper circle ಕಡಿಮೆ ಬೆಲೆಯ ಸೋಪಾನ ಸಾಲು.
  11. (ಪ್ರಾಕ್ತನಶಾಸ್ತ್ರ) (ಇಂಗ್ಲಂಡಿನ ಸ್ಟೋನ್‍ ಹೆಂಜ್‍ನಲ್ಲಿರುವಂಥ) ಶಿಲಾವೃತ್ತ; ಕಲ್ಲುಗಳ–ಸುತ್ತುವರಿ, ಸುತ್ತುಬೇಲಿ.
  12. (ಕಾಲದ) ಸುತ್ತು; ಉರುಳು; ಆವರ್ತ; ಆವೃತ್ತಿ; ಚಕ್ರ: the circle of the seasons ಋತುಚಕ್ರ. the circle of the year ವಾರ್ಷಿಕಚಕ್ರ; ವರ್ಷದುರುಳು.
  13. (ಅಂಗಸಾಧನೆಯಲ್ಲಿ) ಚಕ್ರವರಿಸೆ; ಸುತ್ತುವರಿಸೆ.
  14. ಸಮಗ್ರಶ್ರೇಣಿ; ಗುಂಪು; ಸಮೂಹ: the circle of sciences ವಿಜ್ಞಾನಗಳ ಶ್ರೇಣಿ.
  15. (ತರ್ಕಶಾಸ್ತ್ರ) ಚಕ್ರಕ ದೋಷ; ಚಕ್ರಕಾಪತ್ತಿ; ಅನ್ಯೋನ್ಯಾಶ್ರಯ; ಒಂದು ಪ್ರತಿಜ್ಞೆಯನ್ನು ಅದನ್ನವಲಂಬಿಸಿರುವ ಮತ್ತೊಂದು ಪ್ರತಿಜ್ಞೆಯಿಂದ ಸಮರ್ಥಿಸುವ ದೋಷ.
  16. ವಿಷ–ವೃತ್ತ, ವರ್ತುಲ, ವ್ಯೂಹ; ಪರಸ್ಪರ ವರ್ಧಕ; ಅನ್ಯೋನ್ಯವರ್ಧಕ; ಒಂದನ್ನೊಂದು ತೀವ್ರಗೊಳಿಸುವ ಕ್ರಿಯೆ ಪ್ರತಿಕ್ರಿಯೆಗಳು.
  17. ಕೊನೆಗಾಣದ ಕಾರ್ಯಕಾರಣ ಚಕ್ರ; ನಿಲ್ಲದ ಕಾರ್ಯಕಾರಣ ಪರಂಪರೆ.
  18. ಆಸಕ್ತವಲಯ; ಆಸಕ್ತ ವಿಷಯದ ಸುತ್ತ ಗುಂಪು ಕಟ್ಟಿರುವವರು; ಸಮಾನಾಸಕ್ತಿ ಹೊಂದಿರುವ ಗುಂಪು, ಬಣ, ಕೂಟ, ಪಂಗಡ, ಪಕ್ಷ.
  19. (ಸಾಮಾಜಿಕ) ವರ್ಗ; ತರಗತಿ; ವಲಯ: upper circles ಉತ್ತಮ ವರ್ಗಗಳು; ಮೇಲ್ತರಗತಿಗಳು: circles in which one moves ಒಬ್ಬನು ವ್ಯವಹರಿಸುವ ವರ್ಗಗಳು; ವ್ಯವಹಾರ ಕ್ಷೇತ್ರ.
  20. (ಪ್ರಭಾವ, ಕಾರ್ಯ, ಅನುಭವ, ಆಡಳಿತ ಮೊದಲಾದವುಗಳ) ಕ್ಷೇತ್ರ; ವ್ಯಾಪ್ತಿ; ಆವರಣ; ವಲಯ.
  21. (ಭೂಗೋಳಶಾಸ್ತ್ರ) ಅಕ್ಷಾಂಶ ರೇಖೆ.
  22. (ಹಾಕಿ) ಹೊಡೆಯುವ ವೃತ್ತ; ಚೆಂಡನ್ನು ಹೊಡೆಯಬೇಕಾದ, ಗೋಲಿನ ಮುಂದೆ ಹಾಕಿರುವ, ಅರ್ಧವೃತ್ತದ ಗೆರೆ, ಆವರಣ.
ಪದಗುಚ್ಛ
  1. great circle ಮಹಾವೃತ್ತ; ಘನವೃತ್ತ; ಒಂದು ಗೋಲದ ಕೇಂದ್ರವನ್ನೇ ತನ್ನ ಕೇಂದ್ರವಾಗುಳ್ಳ, ಆ ಗೋಲದ ಹೊರ ಮೈಮೇಲೆ ರಚಿಸಿರುವ ವರ್ತುಲ.
  2. small circle ಕಿರುವೃತ್ತ; ಲಘುವೃತ್ತ; ಒಂದು ಗೋಲದ ಒಳಗಡೆ ಆ ಗೋಲದ ಕೇಂದ್ರವಲ್ಲದ ಯಾವುದೇ ಬಿಂದುವನ್ನು ತನ್ನ ಕೇಂದ್ರವಾಗುಳ್ಳ, ಆ ಗೋಲದ ಹೊರ ಮೈಮೇಲೆ ರಚಿಸಿರುವ ವರ್ತುಲ.
  3. square the circle
    1. ವೃತ್ತವನ್ನು ಚೌಕಿಸು; ವೃತ್ತದ ಕ್ಷೇತ್ರಫಲದಷ್ಟೇ ಚದರಳತೆಯಿರುವ ಸಮ ಚತುರಸ್ರ ರಚಿಸು.
    2. (ರೂಪಕವಾಗಿ) ಅಸಾಧ್ಯವಾದುದನ್ನು ಮಾಡಲು ಯತ್ನಿಸು.
  4. vicious circle = 1circle(15, 16, 17).
ನುಡಿಗಟ್ಟು
  1. come full circle ಹೊರಟಲ್ಲಿಗೆ ಬಾ; ಹೊರಟಲ್ಲಿಗೆ ಮರಳು; ಸುತ್ತಿಕೊಂಡು ಮೊದಲ ಸ್ಥಿತಿಯನ್ನೇ ತಲುಪು.
  2. go round in circles ಸುತ್ತುತ್ತಾ ಅಲ್ಲೇ ಇರು; ಸುತ್ತಿಸುತ್ತಿ ಅಲ್ಲಿಗೇ ಬರು; ಎಷ್ಟೇ ಪ್ರಯತ್ನಪಟ್ಟರೂ ಮುಂದುವರಿಯದಿರು, ಪ್ರಗತಿ ಸಾಧಿಸದಿರು.
  3. run round in circles (ಆಡುಮಾತು) ಬರಿ ಓಡಾಟ ಓಡಾಡು; ಹೆಚ್ಚೇನನ್ನೂ ಸಾಧಿಸದೆ ಕೆಲಸ ಮಾಡುತ್ತಿರುವಂತೆ ಓಡಾಡು, ಸಡಗರದಿಂದ ಓಡಾಡು; ಆಡಂಬರದ ಕೆಲಸ ಮಾಡು.
  4. to argue in a circle ಚಕ್ರವಾದ ಮಾಡುವುದು; ಪ್ರತಿಜ್ಞೆಯನ್ನು ಸಾಧಿಸಲು ನಿಗಮನವನ್ನೂ, ನಿಗಮನವನ್ನು ಸಾಧಿಸಲು ಪ್ರತಿಜ್ಞೆಯನ್ನೂ ಆಧಾರವಾಗಿ ಕೊಟ್ಟು ವಾದಿಸುವುದು; ಆಧಾರವಾಕ್ಯದಿಂದ ತೀರ್ಮಾನವನ್ನೂ ತೀರ್ಮಾನದಿಂದ ಆಧಾರವನ್ನೂ ಸಮರ್ಥಿಸುವುದು.