See also 2fly  3fly  4fly
1fly ಹ್ಲೈ
ನಾಮವಾಚಕ
  1. ನೊಣ; ಮಕ್ಷಿಕ.
  2. ರೆಕ್ಕೆಗಳುಳ್ಳ ಕೀಟ, ಹುಳು: butterfly ಚಿಟ್ಟೆ. firefly ಮಿಣುಕುಹುಳು.
  3. ನೊಣದ ರೋಗ; ಮಕ್ಷಿಕವ್ಯಾಧಿ; ಅನೇಕ ತೆರದ ನೊಣಗಳಿಂದ ಉಂಟಾಗುವ ಪ್ರಾಣಿಯ ಯಾ ಸಸ್ಯದ ವ್ಯಾಧಿಗಳು: a good deal of fly exists here ಇಲ್ಲಿ ಬಹಳ ನೊಣರೋಗವಿದೆ.
  4. (ಈನಿನ ಗಾಳದಲ್ಲಿ ಉಪಯೋಗಿಸುವ ಸಹಜ ಯಾ ಕೃತಕ) ನೊಣ.
ಪದಗುಚ್ಛ

fly in amber ವಿಚಿತ್ರ ಅವಶೇಷ; ಅಪರೂಪದ ಅವಶೇಷ; ಶಿಲಾರಾಳದ ಗಟ್ಟಿಯೊಳಗೆ ಇರುವ ನೊಣದಂಥ ಯಾ ಒಳಗೆ ನೊಣವಿರುವ ಶಿಲಾರಾಳದ ಗಟ್ಟಿಯಂಥ, ಅಪರೂಪದ ಪದಾರ್ಥ.

ನುಡಿಗಟ್ಟು
  1. a fly in the ointment ಸುಖ ಸಂತೋಷವನ್ನು ಕೆಡಿಸುವ ಕ್ಷುಲ್ಲಕ ಅಂಶ, ಸನ್ನಿವೇಶ; ಪಾಯಸದೊಳಗಿನ ನೊಣ; ಹತ್ತು ಚಿತ್ತಾರವನ್ನು ನುಂಗುವ ಒಂದು ಮಸಿ, ಗೆರೆ.
  2. break fly on wheel ಅನವಶ್ಯಕವಾಗಿ ಶಕ್ತಿಪ್ರಯೋಗ ಮಾಡು; ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರಹೂಡು.
  3. fly on the wheel (ತನ್ನ ಪ್ರಭಾವದ ವಿಷಯದಲ್ಲಿ) ಈತಿಈರಿದ ಅಹಂಭಾವವುಳ್ಳವನು; ತಾನೊಬ್ಬ ಮಹಾಗಣ್ಯನೆಂದು ಭಾವಿಸಿರುವವನು.
  4. like flies ಬಹಳ; ಬಹುಸಂಖ್ಯೆಯಲ್ಲಿ: die like flies ಬಹುಸಂಖ್ಯೆಯಲ್ಲಿ ಸಾಯಿ.
  5. (there are) no flies on him (ಅಶಿಷ್ಟ) ಅವನು ಬಹಳ ಹುಷಾರಿ, ಜಾಗರೂಕ.
See also 1fly  3fly  4fly
2fly ಹ್ಲೈ
ಕ್ರಿಯಾಪದ

(ಭೂತರೂಪ flew ಉಚ್ಚಾರಣೆ ಹ್ಲೂ; ಭೂತಕೃದಂತ flown ಉಚ್ಚಾರಣೆ ಹ್ಲೋನ್‍)

ಸಕರ್ಮಕ ಕ್ರಿಯಾಪದ
  1. ಹಾರಿಸು; ವಿಮಾನದ ಹಾರಾಟವನ್ನು ನಿರ್ದೇಶಿಸಿ, ನಿಯಂತ್ರಿಸು.
  2. (ಪ್ರಯಾಣಿಕರು ಮೊದಲಾದವರನ್ನು) ವಿಮಾನದಲ್ಲಿ ಸಾಗಿಸು. ಒಯ್ಯು.
  3. (ದೂರವನ್ನು, ಪ್ರದೇಶವನ್ನು ವಿಮಾನದಲ್ಲಿ ಯಾ ವಿಮಾನದಲ್ಲಿಯೋ ಎಂಬಂತೆ) ಕ್ರಮಿಸು; ಹಾರು; ಹಾಯ್ದುಹೋಗು.
  4. (ಪಾರಿವಾಳ, ಡೇಗೆ, ಮೊದಲಾದವನ್ನು) ಹಾರಿಸು; ಹಾರಬಿಡು.
  5. (ಬೇಲಿ ಮೊದಲಾದವುಗಳ ಮೇಲೆ) ಸ್ವಲ್ಪವೂ ಸೋಕದಂತೆ ನೆಗೆ; ಹಾರಿಕೊಂಡು ಹೋಗು.
  6. (ಗಾಳಿಪಟವನ್ನು) ಹಾರಿಸು.
  7. (ಬಾವುಟವನ್ನು) ಹಾರಿಸು; ಹಾರಾಡಿಸು; ಹಾರಾಡುವಂತೆ ಯಾ ಹಾರಾಡುತ್ತಿರುವಂತೆ ಮಾಡು.
  8. (ನಿರ್ದೇಶಿತ ಸ್ಥಳವನ್ನು ಬಿಟ್ಟು) ಓಡಿಹೋಗು; ಬಿಟ್ಟೋಡು; ಪಲಾಯನಮಾಡು: must fly the country ದೇಶವನ್ನು ಬಿಟ್ಟೋಡಬೇಕು.
ಅಕರ್ಮಕ ಕ್ರಿಯಾಪದ
  1. (ಹಕ್ಕಿ, ವಿಮಾನ, ಮೊದಲಾದವು) ಹಾರು; ಹಾರಿಹೋಗು.
  2. (ಪಟ, ಬಾವುಟ) ಹಾರು; ಹಾರಾಡು.
  3. ಹಾರು; ವಿಮಾನದಲ್ಲಿ ಯಾ ಆಕಾಶನೌಕೆಯಲ್ಲಿ ಯಾ ಅವುಗಳಲ್ಲಿಯೋ ಎಂಬಂತೆ ಗಾಳಿ ಯಾ ಆಕಾಶದಲ್ಲಿ ಹಾರು, ಚಲಿಸು, ಸಾಗು.
  4. (ಹಕ್ಕಿಯನ್ನು ಅಟ್ಟಿಸಿಕೊಂಡು ಯಾ ಆಕ್ರಮಣ ಮಾಡಲು ಡೇಗೆ) ಮೇಲೇರು; ಮೇಲಕ್ಕೆ, ಎತ್ತರಕ್ಕೆ ಹಾರು.
  5. (ವಾಯುಮಂಡಲದಲ್ಲಿ) ಬೇಗ ಮೇಲೇರು ಯಾ ಸಾಗು.
  6. (ಬೇಲಿ ಮೊದಲಾದವುಗಳ ಆಚೆಗೆ ಯಾ ಮೇಲೆ ಸ್ವಲ್ಪವೂ ಸೋಕದೆ) ಹಾರು; ನೆಗೆ.
  7. (ಬಾವುಟ, ಕೂದಲು, ಉಡುಪು, ಮೊದಲಾದವುಗಳ ವಿಷಯದಲ್ಲಿ) ಹಾರು; ಬೀಸು; ಬಡಿದಾಡು; ಹಾರಾಡು.
  8. ವೇಗವಾಗಿ – ಸಾಗು, ಸಂಚರಿಸು, ಹಾರಿಹೋಗು; ರಭಸವಾಗಿ ಹೋಗು: time flies ಕಾಲ ಹಾರಿಹೋಗುತ್ತದೆ.
  9. ಇದ್ದಕ್ಕಿದ್ದಂತೆ ವೇಗವಾಗಿ ಹಠಾತ್ತಾಗಿ, ಕ್ಷಿಪ್ರವಾಗಿ ಹೋಗು: he flew from the room ಇದ್ದಕ್ಕಿದ್ದಂತೆ ರೂಮಿನಿಂದ ಓಡಿಹೋದ. the door flew open ಬಾಗಿಲು ಹಠಾತ್ತನೆ ತೆರೆದುಕೊಂಡಿತು.
  10. ಓಡು; ಹಾರು; ನೆಗೆ; ತ್ವರೆಯಿಂದ – ಚಲಿಸು, ಹೋಗು.
  11. ಇದ್ದಕ್ಕಿದ್ದಂತೆ ಬಲವಂತವಾಗಿ ಯಾ ರಭಸವಾಗಿ – ಹಾರು, ಓಡು, ಹಾರುವಂತಾಗು, ಹಾರಿಹೋಗುವಂತಾಗು: make sparks fly ಕಿಡಿ ಹಾರಿಸು; ಕಿಡಿಗೆದರುವಂತೆ ಮಾಡು: send flying ರಭಸದಿಂದ ಓಡಿಸು, ಹಾರಿಹೋಗುವಂತೆ ಯಾ ಓಡಿಹೋಗುವಂತೆ ಮಾಡು.
  12. ಓಡಿಹೋಗು; ಪಲಾಯನ ಮಾಡು; ಪರಾರಿಯಾಗು; ಕಾಲಿಗೆ ಬುದ್ಧಿ ಹೇಳು;
  13. (ಆಡುಮಾತು) (ಆತುರಾತುರವಾಗಿ) ಹೋಗು; ಹೊರಡು.
ನುಡಿಗಟ್ಟು
  1. as the $^1$crow flies.
  2. fly a kite
    1. ದರದುಹುಂಡಿಯ ಮೂಲಕ ಹಣ ಎತ್ತು.
    2. ಗಾಳಿ ಹೇಗೆ ಬೀಸುತ್ತಿದೆಯೆಂಬುದನ್ನು ಪರೀಕ್ಷಿಸು; ಸಂದರ್ಭ ಹೇಗಿದೆಯೆಂದು ತಿಳಿದುಕೊ; ಜನರ ಇಂಗಿತ ಪರೀಕ್ಷೆ ಮಾಡು; ಜನಾಭಿಪ್ರಾಯ ತಿಳಿದುಕೊಳ್ಳಲು ಹೇಳಿಕೆ ನೀಡು ಯಾ ಕಾರ್ಯಕ್ರಮ ಕೈಗೊಳ್ಳು.
  3. fly at (ದೈಹಿಕವಾಗಿ ಯಾ ಮಾತಿನ ಮೂಲಕ) ಮೇಲೆ ಬೀಳು; ಮೇಲೆರಗು; ಹಲ್ಲೆಮಾಡು, ಆಕ್ರಮಣ ನಡೆಸು.
  4. fly at higher game ಮಹತ್ವಾಕಾಂಕ್ಷಿಯಾಗಿಸು; ಹಿರಿಯಾಸೆಗಳನ್ನಿಟ್ಟುಕೊಂಡಿರು; ಹೆಗ್ಗುರಿ ಹೊಂದಿರು.
  5. fly high
    1. ಮುಗಿಲು ಮುಟ್ಟಲು ಹೋಗು; ಮಹತ್ವಾಕಾಂಕ್ಷಿಯಾಗಿರು; ಹೆಬ್ಬಯಕೆ ಹೊಂದಿರು.
    2. ಏಳಿಗೆ ಹೊಂದು; ಅಭಿವೃದ್ಧಿ ಹೊಂದು.
  6. fly in ವಿಮಾನದಲ್ಲಿ – ಬರು, ಆಗಮಿಸು.
  7. fly in the 1face of.
  8. fly into a passion ಕೋಪೋದ್ರಿಕ್ತನಾಗು; ಆವೇಶವೇರು.
  9. fly into raptures ಆನಂದಪರವಶನಾಗು.
  10. fly off the $^1$handle.
  11. fly out
    1. ವಿಮಾನದಲ್ಲಿ – ಹೋಗು, ನಿರ್ಗಮಿಸು.
    2. ರೇಗಿಬೀಳು; ಉರಿದುಬೀಳು.
    3. ಬಯ್ಯು; ದುರ್ಭಾಷೆಯಾಡು.
    4. ರೇಗಿ ಹುಚ್ಚುಹುಚ್ಚಾಗಿ ವರ್ತಿಸು.
  12. fly past (ವಿಮಾನಗಳ ವಿಷಯದಲ್ಲಿ) ಗೌರವ ಸೂಚಿಸಲು ವ್ಯಕ್ತಿ ಯಾ ಸ್ಥಳದ ಮೇಲೆ ಶಿಸ್ತಿನಿಂದ ಹಾರು, ಹಾರಾಡು.
  13. fly the coop (ಅಮೆರಿಕನ್‍ ಪ್ರಯೋಗ) (ಆಡುಮಾತು) ಏಕಾಏಕಿ ಹೊರಟುಬಿಡು; ಇದ್ದಕ್ಕಿದ್ದಂತೆ ನಡೆದುಬಿಡು.
  14. fly to arms ಆತುರದಿಂದ ಆಯುಧ ತೊಡು.
  15. fly upon = ನುಡಿಗಟ್ಟು \((3)\).
  16. glass etc. flies (ಗಾಜು ಮೊದಲಾದವುಗಳ ವಿಷಯದಲ್ಲಿ) ಚಿಕ್ಕಚಿಕ್ಕ ಚೂರಾಗುತ್ತದೆ; ಚೂರು ಚೂರಾಗಿ ಹೊಡೆಯುತ್ತದೆ.
  17. go fly a kite (ಅಮೆರಿಕನ್‍ ಪ್ರಯೋಗ) (ಆಡುಮಾತು) ಹೊರಟುಹೋಗು; ಹೊರಕ್ಕೆ ನಡೆ; ನಿಕಲಾಯಿಸು.
  18. high flown ಆಡಂಬರದ; ಉದ್ದಂಡ; ಪ್ರೌಢಿಮಾ ಪ್ರದರ್ಶನದ; ಬೊಜ್ಜುಮಾತಿನ.
  19. let fly
    1. (ಕ್ಷಿಪಣಿ ಮೊದಲಾದವನ್ನು) ಹಾರಿಬಿಡು; ಹಾರಿಸು; ಉಡಾಯಿಸು; ಉಡಾವಣೆ ಮಾಡು.
    2. (ಗುಂಡು, ಬಾಣ, ಮೊದಲಾದವನ್ನು) ಹೊಡೆ: ಹಾರಿಸು; ಎಸೆ; ಬಿಡು.
    3. ನಿಷ್ಠುರವಾಗಿ ಮಾತನಾಡು; ಕಟುವಾಗಿ ಮಾತನಾಡು.
  20. make the money fly ಹಣವನ್ನು ನೀರಿನಂತೆ ಚೆಲ್ಲು.
  21. the bird is (or has) flown ಹಕ್ಕಿ ಹಾರಿಹೋಗಿದೆ; ಬೇಕಾದ ವ್ಯಕ್ತಿ ತಪ್ಪಿಸಿಕೊಂಡು, ನುಣುಚಿಕೊಂಡು ಹೋಗಿದ್ದಾನೆ.
See also 1fly  2fly  4fly
3fly ಹ್ಲೈ
ನಾಮವಾಚಕ
  1. ಹಾರುವುದು; ಉಡ್ಡಯನ; ಹಾರಾಡುವುದು; ಹಾರಾಟ; ಹಾರು; ಹಾರಿಕೆ.
  2. ಹಾರುದೂರ; ಹಾರಿಕೆದೂರ.
  3. (ಬಹುವಚನ, ಸಾಮಾನ್ಯವಾಗಿ flys) (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಒಂಟಿಕುದುರೆಯ (ಬಾಡಿಗೆ) ಬಂಡಿ.
  4. (ಉಡುಗೆಯ ಮುಖ್ಯವಾಗಿ ಷರಾಯಿಯ, ಕಾಜಾಗಳಿರುವ ಭಾಗವನ್ನು ಯಾ ಕಾಜಾಗಳನ್ನು ಮುಚ್ಚುವಂಥ) ಮುಚ್ಚುಪಟ್ಟಿ; ಹೊದಿಕೆ.
  5. (ಡೇರೆಯ ಬಾಗಿಲಿನ) ಬಾಗಿಲುತೆರೆ; ದ್ವಾರಪಟ.
  6. = tent-fly.
  7. (ಬಾವುಟದ) ಹಾರು ತುದಿ; ಕಂಬದಿಂದ ಅತ್ಯಂತ ದೂರದಲ್ಲಿರುವ ಅಂಚು, ತುದಿ.
  8. (ಕಂಬದಿಂದ ಬಾವುಟದ ಕೊನೆಯವರೆಗಿನ) ಬಾವುಟದ – ಹರವು, ಅಗಲ, ವಿಸ್ತಾರ.
  9. (ಗಡಿಯಾರದಲ್ಲಿ ಮತ್ತು ಇತರ ಯಂತ್ರಗಳಲ್ಲಿ) ವೇಗ ನಿಯಂತ್ರಕ (ಸಾಧನ).
ಪದಗುಚ್ಛ

on the fly ಹಾರಾಡುತ್ತ; ಗಾಳಿಯಲ್ಲಿ ಚಲಿಸುತ್ತ.

See also 1fly  2fly  3fly
4fly ಹ್ಲೈ
ಗುಣವಾಚಕ
  1. (ಅಶಿಷ್ಟ) ಜಾಗರೂಕ; ಹುಷಾರಿ; ಪೂರ್ತಿ ಎಚ್ಚತ್ತಿರುವ.
  2. (ಬೆರಳುಗಳ ವಿಷಯದಲ್ಲಿ) ಕುಶಲ; ಚಾಕಚಕ್ಯವುಳ್ಳ; ಚುರುಕಾದ.