See also 2face
1face ಹೇಸ್‍
ನಾಮವಾಚಕ
  1. ಮುಖ; ಮೋರೆ; ಮೊಗ.
  2. ಮುಖ; ಮುಖಭಾವ; ಮುಖಭಂಗಿ; ಮುಖಮುದ್ರೆ; ಮುಖಲಕ್ಷಣ.
  3. ಮುಖವಿಕಾರ; ಮುಖಚೇಷ್ಟೆ; ಅಣಕ; ಅಣಕಿಸುವ ಮುಖ.
  4. ಧೈರ್ಯ; ಧೃಷ್ಟತೆ; ಧಾರ್ಷ; ನಿರ್ಲಜ್ಜತೆ; ಸಂಕೋಚ ಭಯಗಳೇ ಇಲ್ಲದಿರುವಿಕೆ.
  5. ಹೊರತೋರ್ಕೆ; ಹೊರಲಕ್ಷಣ; ಹೊರನೋಟ; ಬಾಹ್ಯಲಕ್ಷಣ.
  6. ಮೇಲ್ಮೈ; ಹೊರಮೈ; ತಲ: from the face of the earth ಭೂತಲದಿಂದಲೇ.
  7. ಎದುರು; ಮುಂಭಾಗ; ಮುಮ್ಮುಖ: ಮುಂಪಾರ್ಶ; ಮುಂದುಗಡೆಯ ಯಾ ಮೇಲ್ಗಡೆಯ ಭಾಗ.
  8. ಗಡಿಯಾರ ಮೊದಲಾದವುಗಳ ಫಲಕ, ಇಸ್ಪೀಟು ಎಲೆಯ ಮುಖಭಾಗ, ಮೊದಲಾದವು.
  9. (ಉಪಕರಣ ಮೊದಲಾದವುಗಳ) ಮುಖ; ಅಗ್ರಭಾಗ.
  10. (ಜ್ಯಾಮಿತಿ) ತಲ; ಮುಖ; ಪಾರ್ಶ; ಘನವಸ್ತುವಿನ ಮುಖ.
  11. ಅಚ್ಚುಮೊಳೆಯ ಮುಖ.
  12. (ಗಣಿಯಲ್ಲಿ) ಕಲ್ಲಿದ್ದಿಲಿನ ಪದರದ ಮುಖ; ಹೊರಕ್ಕೆ ಕಾಣಿಸುವ ಕಲ್ಲಿದ್ದಲಿನ ಮೈ.
  13. ಕೀರ್ತಿ; ಪ್ರತಿಷ್ಠೆ; ಒಳ್ಳೆಯ ಹೆಸರು: save one’s face ಒಳ್ಳೆಯ ಹೆಸರು ಕಾಪಾಡಿಕೊ.
ನುಡಿಗಟ್ಟು
  1. face to face ಎದುರೆದುರಾಗಿ; ನೇರವಾಗಿ; ಮುಖಾಮುಖಿಯಾಗಿ; ಪ್ರತ್ಯಕ್ಷವಾಗಿ; ಸಮ್ಮುಖದಲ್ಲಿ.
  2. face to face with ಎದುರೆದುರಾಗಿ ನಿಂತು; ಎದುರಿಗೇ ನಿಂತು; ಎದುರಿಸಿ; ಮುಖಾಮುಖಿಯಾಗಿ.
  3. fly in the face ಎದುರುಬೀಳು; ತಿರುಗಿಬೀಳು; ಪ್ರತ್ಯಕ್ಷವಾಗಿ ಅವಿಧೇಯತೆ ತೋರು.
  4. have the face ಮುಖ ಇಟ್ಟುಕೊಂಡಿರು; ನಿರ್ಲಜ್ಜೆಯಿಂದಿರು; ನಾಚಿಕೆಯಿಲ್ಲದಿರು; ಧಾಷ್ಟದಿಂದ ವರ್ತಿಸು.
  5. her face is her fortune ಅವಳ ರೂಪವೇ ಅವಳ ಸಿರಿ.
  6. in face of.
    1. ಎದುರಾಗಿ; ಎದುರಿಗೆ; ಅಭಿಮುಖವಾಗಿ.
    2. ಹಾಗಿದ್ದರೂ; ಹಾಗಾದರೂ; ಹಾಗಿದ್ದಾಗ್ಯೂ.
  7. in one’s face ಮುಖದ ಮೇಲೆ; (ಒಬ್ಬನು ಎದುರಿಗೆ ಬರುತ್ತಿರುವಾಗ) ನೇರವಾಗಿ ಅವನ ಮೇಲೆ, ಅವನಿಗೆ ಎದುರಾಗಿ.
  8. in the face of = ನುಡಿಗಟ್ಟು \((6)\).
  9. in the face of day ಬಹಿರಂಗವಾಗಿ.
  10. look one in the face ಧೈರ್ಯದಿಂದ, ಚಲಿಸದೆ (ಒಬ್ಬನನ್ನು) ದೃಷ್ಟಿಸಿ ನೋಡು, ದಿಟ್ಟಿಸಿ ನೋಡು, ನೇರವಾಗಿ ನೋಡು.
  11. lose face ಮುಖ ಕೆಡಿಸಿಕೊ; ಅವಮಾನ ಹೊಂದು; ಹೆಸರು ಕೆಡಿಸಿಕೊ.
  12. make a face ಅಣಕಿಸು; ಮುಖಮಾಡು.
  13. make faces = ನುಡಿಗಟ್ಟು \((12)\).
  14. on the face of it ಹೊರ ನೋಟಕ್ಕೆ; ಬಾಹ್ಯದೃಷ್ಟಿಗೆ; ಹೊರನೋಟದಿಂದಲೇ ತೀರ್ಮಾನಿಸಿದರೆ.
  15. pull a face = ನುಡಿಗಟ್ಟು \((12)\).
  16. pull a long face ಜೋಲುಮೋರೆ ಹಾಕಿಕೊ; ನಿರುತ್ಸಾಹದಿಂದಿರು; ಉತ್ಸಾಹಹೀನನಾಗಿರು.
  17. pull faces = ನುಡಿಗಟ್ಟು \((12)\).
  18. put a bold face on it
    1. ಒಂದು ವಿಷಯ ಚೆನ್ನಾಗಿ ಕಾಣುವಂತೆ ಮಾಡು.
    2. (ಬಂದದ್ದನ್ನು) ಧೈರ್ಯದಿಂದೆದುರಿಸು; ಬಂದದ್ದಕ್ಕೆ ಧೈರ್ಯವಾಗಿ ಎದೆಯೊಡ್ಡು.
  19. put a good face on matter = ನುಡಿಗಟ್ಟು \((18)\).
  20. put a new face on ಮುಖ ಬದಲಾಯಿಸು; (ಒಂದರ) ಚಹರೆ ಬದಲಾಯಿಸು; ಬೇರೆ ರೀತಿ ಕಾಣುವಂತೆ ಮಾಡು; ಹೊಸ ಮುಖ ತೊಡು ಯಾ ತೊಡಿಸು.
  21. put one’s face on (ಆಡುಮಾತು) (ನಾಟಕ ಮೊದಲಾದವುಗಳಲ್ಲಿ ಅಭಿನಯಿಸಲು) ಮುಖಕ್ಕೆ ಬಣ್ಣ ಹಾಕಿಕೊ.
  22. save one’s (or person’s) face ಮುಖ ಉಳಿಸು; ಮಾನ ಕಾಪಾಡು; ಮಾನ ರಕ್ಷಿಸು; ಬಹಿರಂಗವಾಗಿ ಮರ್ಯಾದೆ ಹೋಗದಂತೆ ನೋಡಿಕೊ.
  23. set one’s face against ಎದುರಿಸು; ವಿರೋಧಿಸು; ವಿರುದ್ಧವಾಗು; ಪ್ರತಿಭಟಿಸು.
  24. show one’s face ಮುಖ ತೋರಿಸು; ಕಾಣಿಸಿಕೊ; ಕಣ್ಣಿಗೆ ಬೀಳು.
  25. to person’s face (ವ್ಯಕ್ತಿಯ) ಮುಖಕ್ಕೇ; ಎದುರಿಗೇ; ಎದುರಿನಲ್ಲೇ; ಸಮ್ಮುಖದಲ್ಲಿಯೇ; ಎದುರೆದುರಾಗಿಯೇ.
  26. wear a long face = ನುಡಿಗಟ್ಟು \((16)\).
  27. with wind (or sun) in one’s face ಗಾಳಿಗೆ (ಯಾ ಬಿಸಿಲಿಗೆ) ಎದುರಾಗಿ; ಮುಖವೊಡ್ಡಿ; ಗಾಳಿ (ಬಿಸಿಲು) ಮುಖಕ್ಕೆ ಹೊಡೆಯುವಂತೆ.