See also 2fly  3fly  4fly
1fly ಹ್ಲೈ
ನಾಮವಾಚಕ
  1. ನೊಣ; ಮಕ್ಷಿಕ.
  2. ರೆಕ್ಕೆಗಳುಳ್ಳ ಕೀಟ, ಹುಳು: butterfly ಚಿಟ್ಟೆ. firefly ಮಿಣುಕುಹುಳು.
  3. ನೊಣದ ರೋಗ; ಮಕ್ಷಿಕವ್ಯಾಧಿ; ಅನೇಕ ತೆರದ ನೊಣಗಳಿಂದ ಉಂಟಾಗುವ ಪ್ರಾಣಿಯ ಯಾ ಸಸ್ಯದ ವ್ಯಾಧಿಗಳು: a good deal of fly exists here ಇಲ್ಲಿ ಬಹಳ ನೊಣರೋಗವಿದೆ.
  4. (ಈನಿನ ಗಾಳದಲ್ಲಿ ಉಪಯೋಗಿಸುವ ಸಹಜ ಯಾ ಕೃತಕ) ನೊಣ.
ಪದಗುಚ್ಛ

fly in amber ವಿಚಿತ್ರ ಅವಶೇಷ; ಅಪರೂಪದ ಅವಶೇಷ; ಶಿಲಾರಾಳದ ಗಟ್ಟಿಯೊಳಗೆ ಇರುವ ನೊಣದಂಥ ಯಾ ಒಳಗೆ ನೊಣವಿರುವ ಶಿಲಾರಾಳದ ಗಟ್ಟಿಯಂಥ, ಅಪರೂಪದ ಪದಾರ್ಥ.

ನುಡಿಗಟ್ಟು
  1. a fly in the ointment ಸುಖ ಸಂತೋಷವನ್ನು ಕೆಡಿಸುವ ಕ್ಷುಲ್ಲಕ ಅಂಶ, ಸನ್ನಿವೇಶ; ಪಾಯಸದೊಳಗಿನ ನೊಣ; ಹತ್ತು ಚಿತ್ತಾರವನ್ನು ನುಂಗುವ ಒಂದು ಮಸಿ, ಗೆರೆ.
  2. break fly on wheel ಅನವಶ್ಯಕವಾಗಿ ಶಕ್ತಿಪ್ರಯೋಗ ಮಾಡು; ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರಹೂಡು.
  3. fly on the wheel (ತನ್ನ ಪ್ರಭಾವದ ವಿಷಯದಲ್ಲಿ) ಈತಿಈರಿದ ಅಹಂಭಾವವುಳ್ಳವನು; ತಾನೊಬ್ಬ ಮಹಾಗಣ್ಯನೆಂದು ಭಾವಿಸಿರುವವನು.
  4. like flies ಬಹಳ; ಬಹುಸಂಖ್ಯೆಯಲ್ಲಿ: die like flies ಬಹುಸಂಖ್ಯೆಯಲ್ಲಿ ಸಾಯಿ.
  5. (there are) no flies on him (ಅಶಿಷ್ಟ) ಅವನು ಬಹಳ ಹುಷಾರಿ, ಜಾಗರೂಕ.