See also 2eye
1eye
ನಾಮವಾಚಕ
  1. ಕಣ್ಣು; ನಯನ; ನೇತ್ರ.
  2. (ಕಣ್ಣಿನ) ಪಾಪೆಪೊರೆ; ಕನೀನಪಟಲ: blue, brown eyes ನೀಲಿಕಣ್ಣು, ಕಂದುಗಣ್ಣು; ನೀಲಿ ಯಾ ಕಂದು ಪೊರೆಯ ಕಣ್ಣುಗಳು.
  3. ಕಣ್ಣಿನ ಪ್ರದೇಶ.
  4. ಕಣ್ಣು; ಕಣ್ಣುಗಳನ್ನು ಹೋಲುವಂಥ ರೂಪ, ಆಕಾರ, ಭಾಗ, ವಸ್ತು, ಮೊದಲಾದವು, ಉದಾಹರಣೆಗೆ ನವಿಲುಗರಿ ಕಣ್ಣು, ಸೂಜಿಕಣ್ಣು, ಕೊಂಡಿಯ ಕುಣಿಕೆ, ಹಗ್ಗದ ಕುಣಿಕೆ, ಅಲೂಗೆಡ್ಡೆಯ ಕಣ್ಣು, ಇತ್ಯಾದಿ.
  5. ದೃಷ್ಟಿ; ನೋಡುವ ಶಕ್ತಿ.
  6. (ಏಕವಚನ ಯಾ ಬಹುವಚನದಲ್ಲಿ) ನೋಟ; ದೃಷ್ಟಿ.
  7. ಹಿಡಿಗಣ್ಣು; ಕೊಡಲಿಯ ಕಾವು ಮೊದಲಾದವನ್ನು ಸಿಕ್ಕಿಸುವ ತೂತು.
  8. ಬಿರುಗಾಳಿ ಮೊದಲಾದವುಗಳ ಕೇಂದ್ರ.
  9. ಹೂವಿನ — ಮಧ್ಯಭಾಗ, ಕೇಂದ್ರ.
  10. ವೀಕ್ಷಣೆ; ಉಸ್ತುವಾರಿ: under the eyes of the police ಪೊಲೀಸರ ಉಸ್ತುವಾರಿಯಲ್ಲಿ.
  11. ಗಮನ; ಉದ್ದೇಶ: eye to one’s advantages ತನ್ನ ಪ್ರಯೋಜನದತ್ತ ಗಮನ.
  12. ಅಭಿಪ್ರಾಯ; ಪರಿಗಣನೆ: in the eyes of law ಕಾನೂನಿನ — ಪ್ರಕಾರ, ದೃಷ್ಟಿಯಲ್ಲಿ.
  13. (ಬಹುವಚನದಲ್ಲಿ) (ನೌಕಾಯಾನ) ಹಡಗಿನ ಮುಂಭಾಗದಲ್ಲಿ ಮೇಲಂತಸ್ತಿನ ತೀರಾ ಮುಂದುಗಡೆಯ ಭಾಗ.
  14. (ಅಶಿಷ್ಟ) ಪತ್ತೇದಾರ: a private eye ಖಾಸಗಿ ಪತ್ತೇದಾರ.
ಪದಗುಚ್ಛ
  1. $^2$clap eyes on.
  2. eye of needle ಸೂಜಿಯ ಕಣ್ಣು, ತೂತು.
  3. eyes down (ಆಡುಮಾತು) ಬಿಂಗೋ ಆಟದ ಆರಂಭ.
  4. eyes right, left, front (ಸೈನ್ಯ) ಕಣ್ಣುಗಳನ್ನು ಬಲಕ್ಕೆ, ಎಡಕ್ಕೆ, ಮುಂದಕ್ಕೆ ತಿರುಗಿಸಿ.
  5. eye witness ಪ್ರತ್ಯಕ್ಷ ಸಾಕ್ಷಿ; ಕಣ್ಣಾರೆ ಕಂಡ ಸಾಕ್ಷಿ.
  6. glass eye (ಗಾಜು ಮೊದಲಾದವುಗಳಿಂದ ಮಾಡಿದ) ಕೃತಕ ಕಣ್ಣು.
ನುಡಿಗಟ್ಟು
  1. a good eye for ಸೂಕ್ಷ್ಮದೃಷ್ಟಿ; ಪರಿಣತ ದೃಷ್ಟಿ; ಗುಣಾವಗುಣಗಳನ್ನು ಸರಿಯಾಗಿ ಗ್ರಹಿಸುವ ಶಕ್ತಿ.
  2. all my eye (ಅಶಿಷ್ಟ) ಬುರುಡೆ; ಅಬದ್ಧ; ಅರ್ಥವಿಲ್ಲದ್ದು.
  3. apple of the eye.
  4. be all eyes ಕಣ್ಣಿನಲ್ಲಿ ಕಣ್ಣಿಟ್ಟು ನೋಡು; ಮೈಯೆಲ್ಲಾ ಕಣ್ಣಾಗಿರು; ಬಹಳ ಎಚ್ಚರಿಕೆಯಿಂದ ನೋಡು.
  5. beam or mole in one’s eye ತನ್ನ ಎಲೆಯ ಮೇಲಿನ ಸತ್ತ ಕತ್ತೆ; (ಇನ್ನೊಬ್ಬನದರೊಡನೆ ಹೋಲಿಸಿದಾಗ) ಅಗಾಧವೆನಿಸುವ ತನ್ನ ದೋಷ.
  6. cast or run an or one’s eye over ಕಣ್ಣಾಡಿಸು; ಕಣ್ಣುಹಾಯಿಸು; ದೃಷ್ಟಿ ಹಾಯಿಸು; ಮೇಲೆ ಮೇಲೆ ನೋಡು; ಸ್ಥೂಲವಾಗಿ ನೋಡು, ಪರಿಶೀಲಿಸು.
  7. cast sheep’s eye ಕಾಮುಕದೃಷ್ಟಿ ಬೀರು.
  8. catch the eye ಕಣ್‍ಸೆಳೆ; ದೃಷ್ಟಿ ಸೆಳೆ.
  9. close one’s eyes to (ಒಂದರ ಕಡೆ) ನೋಡದಿರು; ನೋಡಲು ನಿರಾಕರಿಸು; (ಒಂದರ ವಿಷಯದಲ್ಲಿ) ಕುರುಡಾಗಿರು; ಗಮನಿಸದಿರು.
  10. $^2$cry one’s eyes out.
  11. do (person) in the eye.
    1. ಮೋಸಗೊಳಿಸು; ಒಬ್ಬನ ದೌರ್ಬಲ್ಯ ಮೊದಲಾದವನ್ನು ದುರುಪಯೋಗಪಡಿಸಿಕೊ: born to do the other fellow in the eye and enjoy life ಮತ್ತೊಬ್ಬನನ್ನು ಮೋಸಗೊಳಿಸಿಯೇ ತಾನು ಸುಖಪಡಲು ಹುಟ್ಟಿರುವ.
    2. (ಒಬ್ಬನ ಉದ್ದೇಶ ಮೊದಲಾದವನ್ನು) ಮುರಿ; ಹಾಳುಮಾಡು; ಕೆಡಿಸು; ಭಂಗಗೊಳಿಸು.
  12. 1easy on the eye.
  13. eye for an eye ಸೇಡು; ಮುಯ್ಯಿಗೆ ಮುಯ್ಯಿ; ಕಣ್ಣಿಗೆ ಕಣ್ಣು.
  14. eye of day ಹಗಲಿನ ಕಣ್ಣು; ಸೂರ್ಯ.
  15. eyes on stalks (ಆಡುಮಾತು) (ಅಚ್ಚರಿ, ಗಾಬರಿ, ಕುತೂಹಲ, ಮೊದಲಾದವುಗಳಿಂದ) ಕಣ್ಣು ಬಿಟ್ಟಿರುವ; ಕಣ್ಣುಗುಡ್ಡೆ ಹೊರಕ್ಕೆ ಚಾಚಿರುವ.
  16. get one’s eye in ಕಣ್ಣು ಹೊಂದಿಸಿಕೊ; (ಕ್ರಿಕೆಟ್‍ ಮೊದಲಾದ ಚೆಂಡಾಟಗಳಲ್ಲಿ) ಚೆಂಡಿನ ವೇಗ, ಚಲನೆ, ಮೊದಲಾದವುಗಳನ್ನು ಕಣ್ಣಿನಿಂದಲೇ ಊಹಿಸಿಕೊಳ್ಳುವ ಸಾಮರ್ಥ್ಯ ಪಡೆ.
  17. give one a black eye ಕಣ್ಣು ನೀಲಿಗಟ್ಟುವಂತೆ ಯಾ ಕಣ್ಣ ಸುತ್ತಲೂ ಕಪ್ಪಾಗುವಂತೆ ಹೊಡೆ.
  18. half an eye ಅರೆಗಣ್ಣು; ಅರೆನೋಟ: see with half an eye ಅರೆನೋಟದಲ್ಲಿ ಗ್ರಹಿಸು.
  19. have an eye for ಅಭಿರುಚಿ ಹೊಂದಿರು; ಸೂಕ್ಷ್ಮ ಪರಿಜ್ಞಾನ ಹೊಂದಿರು; ಗುಣಾವಗುಣ ಗ್ರಹಿಸಲು ಸಮರ್ಥವಾಗಿರು: have an eye for proportions ಪ್ರಮಾಣಗಳ ಬಗ್ಗೆ ಸೂಕ್ಷ್ಮ ಪರಿಜ್ಞಾನ ಹೊಂದಿರು.
  20. have an eye to
    1. ಗುರಿಯಾಗಿ ಹೊಂದಿರು; ದೃಷ್ಟಿಯಲ್ಲಿಟ್ಟುಕೊಂಡಿರು.
    2. ವಿವೇಚನೆಯಿಂದ ಪರಿಗಣಿಸು; ವಿವೇಕದಿಂದ ಪರಿಶೀಲಿಸು.
  21. have eyes only for ಏಕೈಕ ದೃಷ್ಟಿ, ಗುರಿ ಯಾ ಅಭಿಲಾಷೆ ಹೊಂದಿರು; ನಿರ್ದಿಷ್ಟ ವ್ಯಕ್ತಿ ಯಾ ವಸ್ತುವನ್ನು ಬಿಟ್ಟು ಬೇರೆ ಯಾರನ್ನೂ, ಯಾವುದನ್ನೂ ನೋಡದಿರು ಯಾ ಇಚ್ಛಿಸದಿರು.
  22. his eyes are bigger than his belly ಅವನು ದುರಾಸೆಯವನು; ಹೊಟ್ಟೆ ಹಿಡಿಯುವುದಕ್ಕಿಂತ ಹೆಚ್ಚು ಬಡಿಸಿಕೊಳ್ಳುವವನು.
  23. hit person in the eye (ವ್ಯಕ್ತಿಗೆ) ಕಣ್ಣಿಗೆ ಹೊಡೆಯುವಂತೆ, ರಾಚುವಂತೆ — ಕಾಣು; ವಿಸ್ಪಷ್ಟವಾಗಿ ಗೋಚರಿಸು.
  24. if you had half an eye ನೀನು ಪೂರಾ ಕುರುಡನೋ ದಡ್ಡನೋ ಆಗದೆ ಇದ್ದಿದ್ದರೆ.
  25. in a pig’s eye (ಅಶಿಷ್ಟ) ಖಂಡಿತವಾಗಿಯೂ ಇಲ್ಲ; ಎಂದಿಗೂ ಇಲ್ಲ: in a pig’s eye I will! ನಾನೆಂದಿಗೂ ಹೀಗಲ್ಲ, ಹೀಗೆ ಮಾಡಲಾರೆ ಇತ್ಯಾದಿ.
  26. in or through the eyes of- ದೃಷ್ಟಿಯಲ್ಲಿ, ಅಭಿಪ್ರಾಯದಲ್ಲಿ: in the eyes of law ಕಾನೂನಿನ ದೃಷ್ಟಿಯಲ್ಲಿ.
  27. in the mind’s eye ಮನಸ್ಸಿನಲ್ಲಿ; ಕಲ್ಪನೆಯಲ್ಲಿ; ಭಾವನೆಯಲ್ಲಿ: in my mind’s eye I pictured the whole scene ಇಡೀ ದೃಶ್ಯವನ್ನು ನಾನು ನನ್ನ ಕಲ್ಪನೆಯಲ್ಲಿ ಚಿತ್ರಿಸಿಕೊಂಡೆ.
  28. in the wind’s eye.
    1. ಗಾಳಿಯ, ಗಾಳಿ ಬೀಸುವ — ದಿಕ್ಕಿನಲ್ಲಿ.
    2. ಗಾಳಿಗೆ ಎದುರಾಗಿ.
  29. keep an eye on ಕಣ್ಣಿಟ್ಟಿರು; ನಿಗಾ ಇಟ್ಟಿರು; ಎಚ್ಚರಿಕೆಯಿಂದ ನೋಡುತ್ತಿರು, ಗಮನಿಸುತ್ತಿರು.
  30. keep an eye open or out (ಯಾವುದಕ್ಕಾದರೂ) ಎಚ್ಚರಿಕೆಯಿಂದ ಎದುರು ನೋಡುತ್ತಿರು; ಕಾಯು; ನಿರೀಕ್ಷಿಸು; ಕಣ್ಣು ಬಿಟ್ಟುಕೊಂಡಿರು.
  31. keep one’s eye on the $^1$ball.
  32. keep one’s eyes open or skinned = ನುಡಿಗಟ್ಟು \((30)\).
  33. look person in the eye ವ್ಯಕ್ತಿಯನ್ನು ನೇರವಾಗಿ ನೋಡು, ಲಜ್ಜೆಯಿಲ್ಲದೆ ನೋಡು.
  34. lose an eye ಒಂದು ಕಣ್ಣು (ಅದರ ದೃಷ್ಟಿ) ಕಳೆದುಕೊ.
  35. make (sheep’s) eyes at ಕಾಮುಕದೃಷ್ಟಿಯಿಂದ ನೋಡು.
  36. $^1$meet the eye.
  37. mind your eye ಜೋಕೆ! ಹುಷಾರ್‍! ಎಚ್ಚರಿಕೆ!
  38. my eye! (ಅಶಿಷ್ಟ) (ಆಶ್ಚರ್ಯ ಸೂಚಕ ಉದ್ಗಾರ) ಅಬದ್ಧ! ಬುರುಡೆ!
  39. one in the eye for (ವ್ಯಕ್ತಿಗೆ) ಆಶಾಭಂಗ; ಸೋಲು.
  40. pipe or put one’s finger in one’s eye (ತುಚ್ಛವಾಗಿ) ಅಳು; ಕಣ್ಣೀರಿಡು.
  41. pore etc. one’s eyes out ನೋಡಿ ನೋಡಿ ಕಣ್ಣುಗಳನ್ನು — ದಣಿಸು, ಆಯಾಸಗೊಳಿಸು.
  42. see eye to eye with ಪೂರ್ತಿ ಒಪ್ಪು; ಪೂರ್ಣವಾಗಿ ಸಮ್ಮತಿಸು; ಸಂಪೂರ್ಣವಾಗಿ ಅನುಮೋದಿಸು; ಏಕಾಭಿಪ್ರಾಯ ಹೊಂದಿರು; ಒಮ್ಮತ ಹೊಂದಿರು.
  43. set eyes on ದೃಷ್ಟಿ ನೆಡು; ನೋಡು.
  44. shut one’s eye to ಗಮನಿಸದಿರು; ಎಣಿಸದಿರು; ನೋಡಿದರೂ ನೋಡದಂತಿರು.
  45. $^1$smack in the eye.
  46. take one’s eyes off ಕಣ್ಣನ್ನು ಬೇರೆಡೆಗೆ ತಿರುಗಿಸು; ದೃಷ್ಟಿ ಬೇರೆ ಕಡೆಗೆ ತಿರುಗಿಸು; ನೋಡುವುದನ್ನು ನಿಲ್ಲಿಸು.
  47. the $^1$glad eye.
  48. throw $^1$dust in one’s eyes.
  49. under or before one’s very eyes
    1. (ಒಬ್ಬನ) ಎದುರಿನಲ್ಲಿ; ಸಮಕ್ಷಮದಲ್ಲಿ.
    2. ಪ್ರಕಟವಾಗಿ; ಬಹಿರಂಗವಾಗಿ; ಮುಚ್ಚಿಡಲು ಪ್ರಯತ್ನಿಸದೆ.
  50. up to the eyes ಕಣ್ಣಿನವರಗೆ ಮುಳುಗಿ; ಪೂರಾ ಮುಳುಗಿ; ಪೂರ್ತಿ ಮಗ್ನನಾಗಿ: up to the eyes in work ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿ, ಮಗ್ನನಾಗಿ.
  51. veiw with a friendly, jealous, etc. eye ಸ್ನೇಹದಿಂದ, ಆಸೂಯೆಯಿಂದ, ಮೊದಲಾದ ರೀತಿಯಲ್ಲಿ ನೋಡು.
  52. wipe one’s eye ಕಣ್ಣೊರೆಸಿಕೊ; ಅಳು ನಿಲ್ಲಿಸು.
  53. wipe person’s eye (ಅಶಿಷ್ಟ) ಮೊದಲೇ ಊಹಿಸಿ ವ್ಯಕ್ತಿಯನ್ನು ಮೀರಿಸು; (ವ್ಯಕ್ತಿಯ) ದೌರ್ಬಲ್ಯವನ್ನು ತನ್ನ ಪ್ರಯೋಜನಕ್ಕೆ ಬಳಸಿಕೊ.
  54. with an eye to ದೃಷ್ಟಿಯಿಂದ; ಉದ್ದೇಶದಿಂದ.
  55. with one eye on (ಯಾವುದರ ಮೇಲಾದರೂ) ಒಂದು ಕಣ್ಣಿಟ್ಟು; ಒಂದು ಕಣ್ಣು ಬಿಟ್ಟುಕೊಂಡು; ಭಾಗಶಃ ಮಾತ್ರ ಗಮನ ನೀಡಿ.
  56. with one’s eyes open
    1. ಉದ್ದೇಶಪೂರ್ವಕವಾಗಿ.
    2. ಕಂಡೂ ಕಂಡು; ತಿಳಿದೂ ತಿಳಿದು; ಪೂರ್ಣ ಅರಿವಿನಿಂದ.
  57. with one’s eyes shut
    1. ಕಣ್ಮುಚ್ಚಿಕೊಂಡು; ಪೂರ್ತಿ ಅರಿಯದೆ; ಪೂರ್ಣ ಪರಿಜ್ಞಾನವಿಲ್ಲದೆ.
    2. ಕಣ್ಣು ಮುಚ್ಚಿಕೊಂಡು; ಸರಾಗವಾಗಿ; ಸುಲಭವಾಗಿ.
  58. with the naked eye (ದೂರದರ್ಶಕ ಮೊದಲಾದವುಗಳು ಇಲ್ಲದೆ) ಬರಿಗಣ್ಣಿನಿಂದ.
See also 1eye
2eye
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ eying ಯಾ eying, ಉಚ್ಚಾರಣೆ ಐಇಂಗ್‍).
  1. ಕಣ್ಣಿಡು; ನೋಡು; ವೀಕ್ಷಿಸು; ಗಮನಿಸು.
  2. (ಅಸೂಯೆ, ಅಸಮಾಧಾನ, ಅಸಹ್ಯ, ತಾತ್ಸಾರ, ಮೊದಲಾದವುಗಳಿಂದ) ನೋಡು; ವೀಕ್ಷಿಸು: he eyed me with suspicion ಅವನು ನನ್ನನ್ನು ಸಂಶಯದಿಂದ ನೋಡಿದ.
  3. ತೂತು ಮಾಡು; ಕಣ್ಣುಹಾಕಿಸು; ಕಣ್ಣುಮಾಡು; ಕಣ್ಣು ಕೊರೆ: to eye a needle ಸೂಚಿಗೆ ಕಣ್ಣು ಕೊರೆ.
  4. (ಆಲೂಗಡ್ಡೆಯ) ಮೊಳೆಕೆ ಒಡೆಯದ ಕಣ್ಣನ್ನು ತೆಗೆದು ಹಾಕು.
ಅಕರ್ಮಕ ಕ್ರಿಯಾಪದ
  1. ಕಾಣು; ಕಾಣಿಸು; ಕಣ್ಣಿಗೆ ಬೀಳು: they do not eye well to you ಅವರು ನಿನಗೆ ಸರಿಯಾಗಿ ಕಾಣಿಸುವುದಿಲ್ಲ.
  2. ಕಣ್ಣು ಉಳ್ಳದ್ದಾಗು; ಕಣ್ಣು — ಪಡೆ, ಮೂಡು: the eggs begin to eye up in two weeks ಮೊಟ್ಟೆಗಳು ಎರಡು ವಾರದಲ್ಲಿ ಕಣ್ಣು ಪಡೆಯಲು ಪ್ರಾರಂಭಿಸುತ್ತವೆ.