See also 1cry
2cry ಕ್ರೈ
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ cried).
ಸಕರ್ಮಕ ಕ್ರಿಯಾಪದ
  1. ಘೋಷಿಸು; ಗಟ್ಟಿಯಾಗಿ ಕೂಗಿಹೇಳು.
  2. ಅಳು; ಕಣ್ಣೀರಿಡು.
  3. ಬೇಡು; ಮೊರೆಯಿಡು; ಕೇಳು; ಕೇಳಿಕೊ.
  4. (ಬೀದಿವ್ಯಾಪಾರಿಯ ವಿಷಯದಲ್ಲಿ) ಸಾರು; ಸಾಮಾನುಗಳು ಮಾರಾಟಕ್ಕೆ ಇವೆಯೆಂದು ಕೂಗು.
  5. ಜಾಹೀರು ಮಾಡು; ಪ್ರಚಾರ ಮಾಡು.
ಅಕರ್ಮಕ ಕ್ರಿಯಾಪದ
  1. ಅಳು; ರೋದನಮಾಡು; ಚೀತ್ಕಾರ ಮಾಡು; ಒರಲು; ಅರಚು; ಗೋಳು ಕರೆ; ಕಣ್ಣೀರು ಸುರಿಸು; ಬೊಬ್ಬೆಯಿಡು; ದುಃಖ, ನೋವು, ನಿರಾಶೆಗಳನ್ನು ಗಟ್ಟಿಯಾಗಿಯೋ ಬಿಕ್ಕಿಬಿಕ್ಕಿ ಅಳುತ್ತಲೋ ವ್ಯಕ್ತಪಡಿಸು.
  2. (ಕಾತರದಿಂದ, ಉದ್ರೇಕದಿಂದ) ಅರಚು; ಕಿರಿಚು; ಕೂಗಿಕೊ; ಕೂಗಿ ಹೇಳು.
  3. (ಪ್ರಾಣಿಯ, ಮುಖ್ಯವಾಗಿ ಹಕ್ಕಿಯ, ವಿಷಯದಲ್ಲಿ) ಗಟ್ಟಿಯಾಗಿ ಕೂಗು.
  4. (ಬೇಟೆನಾಯಿಯ ವಿಷಯದಲ್ಲಿ) ಬೊಗಳು; ಊಳಿಡು.
  5. ಗಟ್ಟಿಯಾಗಿ ಕೂಗು; ಕೇಕೆ ಹಾಕು; ಕಿರಿಚು.
  6. (ಯಾವುದೇ ಲೋಹದ ತಗಡಿನ ವಿಷಯದಲ್ಲಿ) ಬಗ್ಗಿಸಿದಾಗ ಶಬ್ದಮಾಡು.
ಪದಗುಚ್ಛ
  1. cry out
    1. ಕೂಗಿಕೊ; ಒದರು; ಗಟ್ಟಿಯಾಗಿ ಕೂಗಿಹೇಳು.
    2. ಪ್ರತಿಭಟಿಸು.
  2. cry(out) for (ಏನಾದರೂ) ಕೋರು; ಕೇಳು; ಬೇಕೆಂದು ಕೂಗು.
  3. cry to ಯಾರನ್ನಾದರೂ–ಕರೆ, ಬೇಡಿಕೊ.
ನುಡಿಗಟ್ಟು
  1. cry back ಹಿಂದಿನ ಕಾಲದ ಮಾದರಿಗೆ, ಪದ್ಧತಿಗೆ ಮರಳು.
  2. cry bitter tears ಅತಿ ದುಃಖದಿಂದ ಅಳು.
  3. cry craven ಸೋಲೊಪ್ಪಿಕೊ; ಶರಣಾಗತನಾಗು.
  4. cry down ಜರೆ; ಹಳಿ; ಅಲ್ಲಗಳೆ.
  5. cry for the moon ಅಸಾಧ್ಯ ವಸ್ತುವಿಗಾಗಿ ಅಂಗಲಾಚು; ನಿಲುಕದ್ದಕ್ಕೆ ಕೈನೀಡು.
  6. cry halves ಸಮಪಾಲು, ಸಮಭಾಗ–ಕೇಳು.
  7. cry harrow ದೂಷಿಸು; ನಿಂದಿಸು; ತೆಗಳು.
  8. cry havoc
    1. ಅಪಾಯವಿದೆಯೆಂದು ಎಚ್ಚರಿಸು.
    2. (ಸೈನಿಕರಿಗೆ) ‘ಸೂರೆಮಾಡಿ’, ‘ಕೊಳ್ಳೆಹೊಡೆಯಿರಿ’ ಎಂಬ ಆಜ್ಞೆಕೊಡು.
  9. cry off ಒಪ್ಪಂದದಿಂದ ಹಿಮ್ಮೆಟ್ಟು; ಕರಾರನ್ನು ಹಿಂತೆಗೆದುಕೊ; ಮಾತಿನಂತೆ ನಡೆಯಲು ನಿರಾಕರಿಸು.
  10. cry oneself to sleep ಅತ್ತುಅತ್ತು ನಿದ್ದೆಹೋಗು; ಸುಸ್ತಾಗಿ ನಿದ್ದೆಬರುವವರೆಗೂ ಅಳು.
  11. cry one’s eyes out ವಿಪರೀತವಾಗಿ ಅಳು; ಗುಡ್ಡೆ ಕಳಚಿಬೀಳುವಂತೆ ಅಳು; ಕಣ್ಣುದಣಿಯುವಂತೆ ಅಳು.
  12. cry one’s heart out ಎದೆ ಬಿರಿಯುವಂತೆ, ಮನದಣಿಯುವಷ್ಟು–ಅಳು.
  13. cry over split milk ಆಗಿಹೋದುದಕ್ಕೆ ವೃಥಾ ಪೇಚಾಡು; ಕಳೆದುಹೋದುದಕ್ಕೆ ವ್ಯರ್ಥವಾಗಿ ಅಳು; ಮಿಂಚಿಹೋದ ಕಾರ್ಯಕ್ಕೆ ಚಿಂತಿಸು.
  14. cry quarter ಪ್ರಾಣದಾನ ಬೇಡು; ಅಭಯ ಕೇಳು.
  15. cry quits (ವ್ಯವಹಾರ ಮೊದಲಾದವುಗಳಲ್ಲಿ) ಸಮಲೆಕ್ಕಕ್ಕೆ ಬಂದೆವೆಂದು ಒಪ್ಪಿಕೊ; ಸರಿಹೋಯಿತೆಂದು ಒಪ್ಪಿಕೊ; ಮುಂದುವರಿಯುವುದಿಲ್ಲವೆಂದು ಒಪ್ಪಿಗೆ ಕೊಡು.
  16. cry shame upon (ಕೃತ್ಯವನ್ನು, ಮನುಷ್ಯರನ್ನು) ಪ್ರತಿಭಟಿಸು; ತೆಗಳು; ಛೀ ಎನ್ನು, ನಾಚಿಕೆಗೇಡು ಎಂದು ಕೂಗಿ ಹೇಳು.
  17. cry stinking fish ತನ್ನ ಸರಕನ್ನು ತಾನೇ ದೂಷಿಸು, ತೆಗಳು.
  18. cry up ಹೊಗಳು; ಪ್ರಶಂಸಿಸು; ತಾರೀಫು ಮಾಡು.
  19. cry wolf ಕಾರಣವಿಲ್ಲದೆ ಬೆದರಿಸು, ಹೆದರಿಸು; ‘ತೋಳಬಂತು’ ಎಂದು ಕೂಗು.
  20. for crying out loud ( ಭಾವಸೂಚಕ ಅವ್ಯಯ) (ಆಡುಮಾತು) ಆಶ್ಚರ್ಯ ಯಾ ಅಸಮಾಧಾನ ಸೂಚಿಸುವ–ಪದ, ಉದ್ಗಾರ.