See also 2smack  3smack  4smack  5smack  6smack  7smack
1smack ಸ್ಮಾಕ್‍
ನಾಮವಾಚಕ
  1. ಅಪ್ಪಳಿಕೆ; ತಟ್ಟು; ಅಂಗೈಯಿಂದ ಯಾ ಚಪ್ಪಟೆ ವಸ್ತುವಿನಿಂದ ಕೊಟ್ಟ ಏಟು, ಹೊಡೆತ.
  2. (ಕ್ರಿಕೆಟ್‍ನಲ್ಲಿ) ಬಿರುಸು, ಭರ್ಜರಿ, ಜೋರು – ಹೊಡೆತ.
  3. ಲೊಟಿಕೆ ಮುತ್ತು; ಚಪ್ಪರಿಕೆ ಚುಂಬನ; ಸದ್ದಾಗುವಂತೆ ಚಪ್ಪರಿಸಿಕೊಟ್ಟ ಮುತ್ತು: gave her a hearty smack ಅವಳಿಗೊಂದು ಭರ್ಜರಿ ಲೊಟಿಕೆ ಮುತ್ತು ಕೊಟ್ಟ.
  4. (ಯಾವುದಾದರೂ ಮೇಲ್ಮೆ ಯನ್ನು ಅಂಗೈಯಿಂದ ಹೊಡೆದಾಗ ಉಂಟಾಗುವ) ಭಾರಿ – ಶಬ್ದ, ಸದ್ದು: heard the smack as it hit the floor ಅದು ನೆಲಕ್ಕೆ ಬಡಿದಾಗ ಧಡ್‍ ಎಂಬ ಸದ್ದು ಕೇಳಿದೆ.
  5. (ತುಟಿಗಳನ್ನು ತಟಕ್ಕನೆ ತೆರೆದಾಗ ಉಂಟಾಗುವ, ಸವಿಯನ್ನು ಯಾ ನಿರೀಯನ್ನು ಸೂಚಿಸುವ) ಲೊಟ್ಟೆ; ಲೊಟಿಕೆ; (ಬಾಯಿ) ಚಪ್ಪರಿಕೆ.
ಪದಗುಚ್ಛ
  1. a smack in the eye (or face) (ರೂಪಕವಾಗಿ)
    1. ಮುಖಭಂಗ; ಮುಖಮುರಿತ; ಅಪಮಾನ; ಮುಖದ ಮೇಲೆ ಹೊಡೆತ.
    2. ಹಿನ್ನಡೆ; ವೈಫಲ್ಯ.
  2. have a smack at (ಆಡುಮಾತು) ಒಂದು ಕೈ ನೋಡು:
    1. ಪ್ರಯತ್ನಿಸು; ಪರೀಕ್ಷಿಸಿ ಯಾ ಪ್ರಯೋಗ ಮಾಡಿ ನೋಡು.
    2. ಮೇಲೆ ಬೀಳು; ಎರಗು; ಆಕ್ರಮಣ ಮಾಡು.