See also 1eye
2eye
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ eying ಯಾ eying, ಉಚ್ಚಾರಣೆ ಐಇಂಗ್‍).
  1. ಕಣ್ಣಿಡು; ನೋಡು; ವೀಕ್ಷಿಸು; ಗಮನಿಸು.
  2. (ಅಸೂಯೆ, ಅಸಮಾಧಾನ, ಅಸಹ್ಯ, ತಾತ್ಸಾರ, ಮೊದಲಾದವುಗಳಿಂದ) ನೋಡು; ವೀಕ್ಷಿಸು: he eyed me with suspicion ಅವನು ನನ್ನನ್ನು ಸಂಶಯದಿಂದ ನೋಡಿದ.
  3. ತೂತು ಮಾಡು; ಕಣ್ಣುಹಾಕಿಸು; ಕಣ್ಣುಮಾಡು; ಕಣ್ಣು ಕೊರೆ: to eye a needle ಸೂಚಿಗೆ ಕಣ್ಣು ಕೊರೆ.
  4. (ಆಲೂಗಡ್ಡೆಯ) ಮೊಳೆಕೆ ಒಡೆಯದ ಕಣ್ಣನ್ನು ತೆಗೆದು ಹಾಕು.
ಅಕರ್ಮಕ ಕ್ರಿಯಾಪದ
  1. ಕಾಣು; ಕಾಣಿಸು; ಕಣ್ಣಿಗೆ ಬೀಳು: they do not eye well to you ಅವರು ನಿನಗೆ ಸರಿಯಾಗಿ ಕಾಣಿಸುವುದಿಲ್ಲ.
  2. ಕಣ್ಣು ಉಳ್ಳದ್ದಾಗು; ಕಣ್ಣು — ಪಡೆ, ಮೂಡು: the eggs begin to eye up in two weeks ಮೊಟ್ಟೆಗಳು ಎರಡು ವಾರದಲ್ಲಿ ಕಣ್ಣು ಪಡೆಯಲು ಪ್ರಾರಂಭಿಸುತ್ತವೆ.