See also 1clap  3clap
2clap ಕ್ಲಪ್‍
ಸಕರ್ಮಕ ಕ್ರಿಯಾಪದ
  1. ಚಪ್ಪಾಳೆ ಹೊಡೆದು ಒಪ್ಪಿಗೆ ಸೂಚಿಸು.
  2. (ಸ್ನೇಹ, ಮೆಚ್ಚಿಗೆ, ಸಂತೋಷ ಸೂಚಿಸಲು ಯಾ ಸಂಕೇತಸೂಚಕವಾಗಿ) ಚಪ್ಪಾಳೆ–ತಟ್ಟು, ಹೊಡೆ.
  3. (ರೆಕ್ಕೆಗಳನ್ನು) ರಪರಪನೆ–ಬಡಿ, ಹೊಡೆ, ಬಾರಿಸು.
  4. ಬೇಗನೆ ಯಾ ಬಲಪ್ರಯೋಗದಿಂದ (ವ್ಯಕ್ತಿಯನ್ನು ಜೈಲಿಗೆ, ಸರಕಿನ ಮೇಲೆ ತೆರಿಗೆ) ಹಾಕು, ಇಡು, ಹೇರು.
  5. ರಪ್ಪನೆ–ಇಡು, ಬಡಿ, ಬಿಸಾಡು, ಎಸೆ: he clapped the book on the table ಅವನು ಪುಸ್ತಕವನ್ನು ಮೇಜಿನ ಮೇಲೆ ಬಡಿದನು.
  6. (ಸ್ನೇಹ, ಉತ್ತೇಜನ ಮೊದಲಾದವನ್ನು ತೋರಿಸಲು) ತಟ್ಟು; ಮೃದುವಾಗಿ ಪೆಟ್ಟು ಕೊಡು.
ಅಕರ್ಮಕ ಕ್ರಿಯಾಪದ
  1. ಒಂದಕ್ಕೊಂದು ಬಡಿ, ಸದ್ದಾಗುವಂತೆ ತಾಗು: the loose shutters clapped against the house ಸಡಿಲವಾಗಿರುವ ಕದಗಳು ಮನೆಗೆ ಬಡಿಯುತ್ತಿದ್ದವು.
  2. ದಢಾರನೆ ಹಾಕಿಕೊ; ದಢೀರನೆ ಮುಚ್ಚಿಕೊ: the windows clapped shut ಕಿಟಕಿಗಳು ದಢೀರನೆ ಮುಚ್ಚಿಕೊಂಡವು.
  3. (ಮೆಚ್ಚುಗೆ, ಒಪ್ಪಿಗೆ ಸೂಚಿಸಲು) ಚಪ್ಪಾಳೆ–ತಟ್ಟು, ಹಾಕು: the audience clapped ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.
ಪದಗುಚ್ಛ
  1. clap duty on goods ಇದ್ದಕ್ಕಿದ್ದಂತೆ ಸರಕಿನ ಮೇಲೆ ಸುಂಕ ಹೇರು, ಹಾಕು.
  2. clap eyes on (ಆಡುಮಾತು) (ಸಾಮಾನ್ಯವಾಗಿ ನಿಷೇಧ ಪ್ರಯೋಗದಲ್ಲಿ) ನೋಡು; ಕಣ್ಣುಹಾಯಿಸು; ದೃಷ್ಟಿ–ಹಾಕು, ಬೀರು.
  3. clap on all sail ಹಡಗಿಗೆ ಎಲ್ಲ ಹಾಯಿಗಳನ್ನೂ ಸಿದ್ಧಗೊಳಿಸು.
  4. clap one’s hands = 2clap ($1$, $2$).
  5. clap person in jail ವ್ಯಕ್ತಿಯನ್ನು ಜೈಲಿಗೆ–ಹಾಕು, ದಬ್ಬು, ತಳ್ಳು, ನೂಕು.
  6. clap spurs to horse ಕುದುರೆ ಪಕ್ಕಗಳನ್ನು–ತಿವಿ, ಚಪ್ಪರಿಸು, ತಟ್ಟು.
  7. clap up bargain ಅವಸರದಲ್ಲಿ ವ್ಯಾಪಾರ ಮುಗಿಸು, ತೀರಿಸು.
  8. clap up peace ಹಿಂದುಮುಂದು ನೋಡದೆ ಸಂಧಿ ಮಾಡಿಕೊ.
ನುಡಿಗಟ್ಟು
  1. clap on the back = $^2$slap on the back.
  2. clapped out (ಅಶಿಷ್ಟ) ಸುಸ್ತಾಗಿ ಹೋದ; ಉಸಿರು ಉಡುಗಿದ; ತುಂಬ ಆಯಾಸಗೊಂಡ.