See also 2dust
1dust ಡಸ್ಟ್‍
ನಾಮವಾಚಕ
  1. (ಮಣ್ಣಿನ ಯಾ ಯಾವುದೇ ಪದಾರ್ಥದ) ಧೂಳು; ಧೂಳಿ; ಹುಡಿ.
  2. (ಬ್ರಿಟಿಷ್‍ ಪ್ರಯೋಗ) ಮನೆ ಕಸ.
  3. ಹೂದೂಳಿ; ಪುಷ್ಪಪರಾಗ; ಪುಷ್ಪರೇಣು.
  4. ದೂಳಿನ – ರಾಶಿ, ಗುಪ್ಪೆ, ಗುಡ್ಡೆ, ಒಡ್ಡು: what a dust! ಏನು ದೂಳಿನ ರಾಶಿಯಪ್ಪಾ!
  5. ಸತ್ತವನ – ಅವಶೇಷ, ಉಳಿಕೆ, ಬೂದಿ, ಮಣ್ಣು: honoured dust ಪೂಜ್ಯ ಅವಶೇಷ.
  6. (ಪ್ರಾಚೀನ ಪ್ರಯೋಗ) ಮನುಷ್ಯನ ದೇಹ; ಪಾರ್ಥಿವ ಶರೀರ; ಮನುಷ್ಯ.
  7. ಧೂಳೀಪಟ; ಧೂಳು ಮೋಡ.
  8. (ರೂಪಕವಾಗಿ) ರಂಪ; ಗಲಿಬಿಲಿ; ಗೊಂದಲ; ಗಲಭೆ; ಗಲಾಟೆ; ದೊಂಬಿ; ಉದ್ರೇಕ; ಗಡಿಬಿಡಿ; ಅವಾಂತರ; ಕೋಲಾಹಲ; ಹುಯಿಲು; ಬಡಿದಾಟ: make a dust ಧೂಳೆಬ್ಬಿಸು; ಹುಯಿಲೆಬ್ಬಿಸು.
  9. (ಅಶಿಷ್ಟ) ಹಣ; ರೊಕ್ಕ; ದುಡ್ಡು.
ನುಡಿಗಟ್ಟು
  1. bite the dust ಮಣ್ಣು ಮುಕ್ಕು; ಗಾಯಗೊಂಡು ಯಾ ಕೊಲ್ಲಲ್ಪಟ್ಟು ಬೀಳು.
  2. dust and ashes ತೀವ್ರವಾದ – ಹತಾಶೆ ಯಾ ಭ್ರಮನಿರಸನ.
  3. humbled in the dust ನೆಲಕ್ಕೆ ಬಿದ್ದು; ಮಣ್ಣುಮುಕ್ಕಿ; ಮಾನಹೋಗಿ; ಮರ್ಯಾದೆ ಹಾಳಾಗಿ; ಅಪಮಾನಹೊಂದಿ; ಗೌರವಹಾನಿಯಾಗಿ.
  4. humbled to the dust = ನುಡಿಗಟ್ಟು$(೩)$.
  5. in the dust
    1. ಮಣ್ಣುಪಾಲಾಗಿ; ಸತ್ತು.
    2. ಅವಮಾನಗೊಂಡು.
  6. raise a dust
    1. ಧೂಳೆಬ್ಬಿಸು.
    2. ಗಲಾಟೆ ಎಬ್ಬಿಸು; ಧೂಳೆಬ್ಬಿಸು; ಗೊಂದಲ ಉಂಟು ಮಾಡು.
    3. ಸತ್ಯವನ್ನು ಮರೆಮಾಚು; ನಿಜಾಂಶ ಮರೆಸು.
  7. shake the dust off one’s feet ಕಾಲು ಕೊಡವಿಕೊಂಡು, ಝಾಡಿಸಿಕೊಂಡು ಹೊರಟುಹೋಗು; ತಿರಸ್ಕಾರದಿಂದ ಯಾ ಕೋಪದಿಂದ ಹೊರಟುಹೋಗು.
  8. the dust and burden of the day ಹೋರಾಟದ ಹೊರೆ; ಹೋರಾಟದ ಕಷ್ಟಕಾರ್ಪಣ್ಯಗಳು.
  9. throw dust in one’s eyes ಕಣ್ಣಿಗೆ ಮಣ್ಣೆರಚು; ಮೋಸಮಾಡು; ವಂಚಿಸು; ಮುಖ್ಯ ವಿಷಯದಿಂದ ಗಮನ ಬೇರೆಡೆಗೆ ತಿರುಗಿಸಿ ಯಾ ಸರಿಯಾದ ತಿಳಿವಳಿಕೆ ಕೊಡದೆ ತಪ್ಪು ಅಭಿಪ್ರಾಯ ಕಲ್ಪಿಸು.