See also 1up  3up  4up  5up
2up ಅಪ್‍
ಉಪಸರ್ಗ
  1. ಮೇಲೆ; ಮೇಲುಗಡೆಗೆ; ಮೇಲಕ್ಕೆ; ಕೆಳಗಿನಿಂದ ಮೇಲಿನವರೆಗೆ: climbed up the ladder ಏಣಿಯ ಮೇಲೆ ಹತ್ತಿದ. up the hill ಬೆಟ್ಟದ ಮೇಲಕ್ಕೆ. smoke goes up the chimney ಹೊಗೆಕೊಳವಿಯಲ್ಲಿ ಹೊಗೆ ಮೇಲೇರಿ ಸಾಗುತ್ತದೆ.
  2. (ನದಿಯ) ಮೂಲದವರೆಗೆ.
  3. (ರಸ್ತೆ ಮೊದಲಾದವುಗಳ) ಉದ್ದಕ್ಕೂ: walk up the street ರಸ್ತೆಯುದ್ದಕ್ಕೂ ನಡೆ.
  4. ಮೇಲುಭಾಗದಲ್ಲಿ: lives farther up the road ರಸ್ತೆಯಲ್ಲಿ ಇನ್ನೂ ಸ್ವಲ್ಪ ಮುಂದೆ, ಮೇಲುಗಡೆ ವಾಸಿಸುತ್ತಾನೆ.
ಪದಗುಚ್ಛ
  1. sitting up a tree ಮರದ ಮೇಲೇರಿ, ತುದಿಯಲ್ಲಿ ಕುಳಿತು.
  2. up and down (ರೂಪಕವಾಗಿ) (ಯಾವುದೋ) ಸ್ಥಳಕ್ಕೆ ಮತ್ತು ಅಲ್ಲಿಂದ ಹಿಂದಕ್ಕೆ.
  3. up hill and down dale
    1. (ಪ್ರಯಾಸದ ಪ್ರಯಾಣದಲ್ಲಿ) ಹಳ್ಳ ತಿಟ್ಟು ಎಲ್ಲಾ; ಬೆಟ್ಟ ಹತ್ತಿ ಕಣಿವೆ ಇಳಿದು.
    2. (ರೂಪಕವಾಗಿ) (ಯಾವುದೇ ಸನ್ನಿವೇಶ ಮೊದಲಾದವುಗಳನ್ನು) ಎದುರಿಸುತ್ತಾ; ಹೇಗೆಂದರೆ ಹಾಗೆ ನಡೆದು ಕೊಳ್ಳುತ್ತಾ.
  4. up stage ರಂಗಸ್ಥಳದ – ಹಿಂಭಾಗದಲ್ಲಿ, ಹಿಂಬದಿಯಲ್ಲಿ, ಮೇಲುಭಾಗದಲ್ಲಿ.
  5. up the $^1$pole.
  6. up the $^2$spout.