See also 1spout
2spout ಸ್ಪೌಟ್‍
ನಾಮವಾಚಕ
    1. (ಗಿಂಡಿ, ಕೆಟ್‍ಲ್‍, ಮೊದಲಾದವುಗಳಿಂದ, ಟೀ, ಕಾಫಿ, ಮೊದಲಾದವನ್ನು ಸುರಿಯುವ) ಮೂತಿ; ನಾಳ; ಸೊಂಡಿಲು.
    2. ಛಾವಣಿಯಿಂದ ಮಳೆಯ ನೀರು ಹರಿದು ಸುರಿಯುವ ಬಚ್ಚಲ – ಬಾಯಿ, ಮುಖನಾಳ.
    3. ಚಿಲುಮೆಯ – ಕಂಡಿ, ಬಾಯಿ.
    4. ನಲ್ಲಿಯ -ಬಾಯಿ, ಮೂತಿ, ಮುಖ.
  1. (ಪಾತ್ರೆ, ತೊಟ್ಟಿ , ಮೊದಲಾದವಕ್ಕೆ ಒಳಗಿಂದಲೋ ಹೊರಗಿಂದಲೋ ರಭಸದಿಂದ ಸುರಿಯುವುದಕ್ಕಾಗಿ ಮಾಡಿದ) ಇಳಿಜಾರು – ದೋಣಿ, ನಾಲೆ, ನಳಿಕೆ.
  2. (ಚರಿತ್ರೆ) (ಒತ್ತೆಗಾರನ, ಗಿರವಿಗಾರನ ಉಗ್ರಾಣಕ್ಕೆ ಒತ್ತೆಯಿಟ್ಟ ವಸ್ತುಗಳನ್ನು ಜಾರಿಸುವ) ಜಾರುಕಂಡಿ; ಜಾರುದೋಣಿ.
  3. (ಸುರಿದ ದ್ರವ, ಧಾನ್ಯ, ಮೊದಲಾದವುಗಳ) ಧಾರೆ; ಚಿಮ್ಮುಲು; ಹರಿವು.
  4. ತಿಮಿಂಗಿಲದ ಉಸಿರುಕಂಡಿ, ಶ್ವಾಸರಂಧ್ರ.
ಪದಗುಚ್ಛ
  1. (ಅಶಿಷ್ಟ) ಅಡವಾಗಿ; ಒತ್ತೆಯಾಗಿ; ಗಿರವಿಯಾಗಿ: the watch is up the spout ಆ ಗಡಿಯಾರ ಅಡವಾಗಿದೆ.
  2. ನಿಷ್ಪ್ರಯೋಜಕವಾಗಿ; ಕೆಟ್ಟು ಹೋಗಿ; ಹಾಳಾದ ಸ್ಥಿತಿಯಲ್ಲಿ; ಭಗ್ನವಾಗಿ: my holiday plans are completely up the spout ನನ್ನ ರಜದ ಯೋಜನೆಗಳೆಲ್ಲಾ ಭಗ್ನವಾಗಿವೆ.
  3. ಗರ್ಭ ತಾಳಿದ, ಧರಿಸಿದ.