See also 2house  3house
1house ಹೌಸ್‍
ನಾಮವಾಚಕ
(ಬಹುವಚನ houses ಉಚ್ಚಾರಣೆ ಹೌಸಿಸ್‍).
  1. ಮನೆ; ನಿವಾಸ; ಗೃಹ; ನಿಲಯ; ವಸತಿ; ಜನರ ವಾಸಕ್ಕಾಗಿ ಯಾ (ವಿಶೇಷಣ ಪೂರ್ವಪ್ರತ್ಯಯದೊಡನೆ) ಯಾವುದಾದರೂ ನಿರ್ದಿಷ್ಟ ಉದ್ದೇಶಕ್ಕಾಗಿ ಯಾ ಕೆಲಸಕ್ಕಾಗಿ ಕಟ್ಟಿದ ಯಾ ಬಳಸುವ ಕಟ್ಟಡ: alms house ಭಿಕ್ಷುಕ ಗೃಹ.
  2. ಪಥಿಕಗೃಹ; ಪ್ರಯಾಣಿಕರಿಗೆ ತಂಗಲು, ಅವರ ವಾಹನಗಳನ್ನು ನಿಲ್ಲಿಸಲು, ಅವರಿಗೆ ಊಟತಿಂಡಿಗಳನ್ನು ಒದಗಿಸಲು ಕಟ್ಟಿರುವ ಕಟ್ಟಡ
  3. ಹೋಟೆಲು; ಉಪಾಹಾರಗೃಹ; ತಿಂಡಿತೀರ್ಥದ ಅಂಗಡಿ: coffee-house ಕಾಹಿ ಹೋಟೆಲುeating house ಭೋಜನಾಲಯ; ಖಾನಾವಳಿ.
  4. (ಅಮೆರಿಕನ್‍ ಪ್ರಯೋಗ) ಸೂಳೆಮನೆ; ವೇಶ್ಯಾಗೃಹ.
  5. (ಸ್ಕಾಟ್ಲೆಂಡ್‍) ವಠಾರದ ಮನೆ; ವಠಾರದ ಯಾ ಗೃಹಸಂಕೀರ್ಣದಲ್ಲಿನ ಒಂದು ಮನೆ.
  6. ಪ್ರಾಣಿ(ಗಳನ್ನು ಇಡುವ) ಮನೆ: hen house ಕೋಳಿ ಮನೆ.
  7. ಕೋಠಿ; ಉಗ್ರಾಣ; ಮಳಿಗೆ; ಗಡಂಗು; ದಾಸ್ತಾನು ಮನೆ; ಸರಕುಗಳನ್ನು ಇಡುವ ಕಟ್ಟಡ.
  8. ಪ್ರಾಣಿಯ ಗುಹೆ, ಚಿಪ್ಪು, ಮೊದಲಾದವು.
  9. ಮಠ; ಚೈತ್ಯ; ಧಾರ್ಮಿಕ ಪಂಥದವರ ನಿವಾಸ
  10. ಧಾರ್ಮಿಕ ಪಂಥ.
  11. ವಿಶ್ವವಿದ್ಯಾನಿಲಯದ ಕಾಲೇಜು ಮೊದಲಾದವು.
  12. ವಿಶ್ವವಿದ್ಯಾನಿಲಯದ ಕಾಲೇಜಿನ ಸದಸ್ಯರು.
  13. (ಶಾಲೆಯ) ವಿದ್ಯಾರ್ಥಿನಿಲಯ; ನಿಗದಿತ ಹಣಕ್ಕೆ ವಿದ್ಯಾರ್ಥಿಗಳಿಗೆ ವಸತಿ ಊಟ ಒದಗಿಸುವ ಮನೆ.
  14. (ಶಾಲೆಯ) ವಿದ್ಯಾರ್ಥಿ ನಿಲಯದ ಹುಡುಗರು ಯಾ ಹುಡುಗಿಯರು.
  15. (ಕ್ರೀಡೆಗಳು ಮೊದಲಾದವುಗಳಿಗಾಗಿ ವಿಂಗಡಿಸಿದ) ಶಾಲೆಯ ವಿಭಾಗ.
  16. ಶಾಸನ ಸಭಾ ಮಂದಿರ; ಶಾಸನಸಭಾಭವನ.
  17. ಶಾಸಕರು; ಶಾಸನಸಭಾ ಸದಸ್ಯರು.
  18. ಸಭಾ - ಸದನ, ಮಂದಿರ, ಭವನ; ಯಾವುದೇ ವಿಷಯ ಮೊದಲಾದವನ್ನು ಚರ್ಚಿಸಲು ಕಟ್ಟಿದ ಯಾ ಬಳಸುವ ಕಟ್ಟಡ.
  19. ಸಭೆ; ಸಭಾಸದರು; ಸಭಿಕರು.
  20. (ಯಾವುದೇ) ಸಂಸ್ಥೆ; ಸಂಘ.
  21. (ಯಾವುದೇ) ಸಂಸ್ಥೆಯ – ಕಾರ್ಯಾಲಯ, ಕೇಂದ್ರ.
  22. (ಕಟ್ಟಡದ ಹೆಸರುಗಳಲ್ಲಿ) ನಿಲಯ; ಕೇಂದ್ರ; ಭವನ: Broadcasting House ಆಕಾಶವಾಣಿ ನಿಲಯ, ಕೇಂದ್ರ.
  23. ವಾಣಿಜ್ಯ ಸಂಸ್ಥೆ ಯಾ ಅದರ ಕಾರ್ಯಾಲಯ, ಕೇಂದ್ರ: a trading house ವಾಣಿಜ್ಯ ಸಂಸ್ಥೆ.
  24. ನಾಟಕ ಶಾಲೆ; ರಂಗಮಂದಿರ; ಸಿನಿಮಾ ಮಂದಿರ; ಸಂಗೀತ ಭವನ.
  25. (ರಂಗಮಂದಿರ ಮೊದಲಾದವುಗಳ) ಪ್ರೇಕ್ಷಕರು; ಶ್ರೋತೃಗಳು; ಪ್ರೇಕ್ಷಕವೃಂದ; ಶ್ರೋತೃವೃಂದ: full house ತುಂಬಿದ ಮಂದಿರ; ಪ್ರೇಕ್ಷಕರಿಂದ ಯಾ ಶ್ರೋತೃಗಳಿಂದ ಭರ್ತಿಯಾದ ಮಂದಿರ.
  26. (ರಂಗಮಂದಿರ ಮೊದಲಾದವುಗಳಲ್ಲಿ ನಡೆಯುವ) ಪ್ರದರ್ಶನ; ಆಟ; ಕಚೇರಿ: the second house starts at 9 O’clock ಎರಡನೆಯ ಆಟ 9 ಗಂಟೆಗೆ ಪ್ರಾರಂಭವಾಗುತ್ತದೆ.
  27. ಕುಟುಂಬ; ಸಂಸಾರ; ಮನೆ.
  28. ಮನೆತನ; ವಂಶ; ಕುಲ; ಸಂತತಿ; ಪೀಳಿಗೆ: the house of Windsor ಬ್ರಿಟನ್ನಿನ ರಾಜಮನೆತನ; ವಿಂಡ್ಸರ್‍ವಂಶ.
  29. (ಜ್ಯೋತಿಷ) ರಾಶಿ; ಗೃಹ; ಖಗೋಳದ 1/12 ಭಾಗ.
  30. (ಸೈನಿಕ ಅಶಿಷ್ಟ) ಲಾಟೋ ಎಂಬ ಜೂಜಾಟ.
  31. (ಶಾಸನಸಭೆ ಮೊದಲಾದವುಗಳಿಗೆ ಅವಶ್ಯವಾದ) ಕೋರಂ; ಕನಿಷ್ಠ ಸಂಖ್ಯೆ; ನಿಯತ ಸಂಖ್ಯೆ.
ಪದಗುಚ್ಛ
  1. as safe as house ಪೂರ್ತಿ ಸುರಕ್ಷಿತ; (ಮನೆಗಳಲ್ಲಿದ್ದಂತೆಯೇ) ಸಂಪೂರ್ಣವಾಗಿ ಸುರಕ್ಷಿತವಾದ.
  2. house and home (ಅವಧಾರಣಾತ್ಮಕವಾಗಿ, ಒತ್ತಿಹೇಳುವಲ್ಲಿ) ಮನೆ.
  3. house of call ಮಾಹಿತಿ ಮನೆ; ಕೂಲಿಯವರು, ಸಾಮಾನು ಹೊರುವವರು ಕೆಲಸ ಹುಡುಕಿಕೊಂಡು ಬರುವ ಯಾ ಯಾರದೇ ನೆಲೆ ತಿಳಿಯಬಹುದಾದ ಮನೆ.
  4. house of cards
    1. ಇಸ್ಪೀಟಿನ ಮನೆ; ಮಕ್ಕಳು ಆಟಕ್ಕಾಗಿ ಇಸ್ಪೀಟಿನ ಎಲೆಗಳಿಂದ ಕಟ್ಟುವ ಮನೆ.
    2. (ರೂಪಕವಾಗಿ) ಅಸ್ಥಿರ ರಚನೆ; ಅಭದ್ರ ವ್ಯವಸ್ಥೆ; ಬುಡ ಭದ್ರವಿಲ್ಲದ ಯೋಜನೆ, ವಿಚಾರ, ಮೊದಲಾದವು.
  5. House of $^1$commons.
  6. house of God ಚರ್ಚು; ಇಗರ್ಜಿ; ಗುಡಿ; ದೇವಾಲಯ; ಪೂಜಾ ಮಂದಿರ.
  7. House of Keys ಹೌಸ್‍ ಆಹ್‍ ಕೀಸ್‍; ಮ್ಯಾನ್‍ ದ್ವೀಪದ ಪಾರ್ಲಿಮೆಂಟಿನ ಚುನಾಯಿತ ಸಭೆ, ಕೆಳಸಭೆ.
  8. house of $^1$lords.
  9. house of representatives.
  10. houses of parliament.
  11. house-to-house
    1. ಮನೆ ಮನೆಯಲ್ಲೂ; ಪ್ರತಿಗೃಹದಲ್ಲೂ
    2. ಸರದಿಯ ಪ್ರಕಾರ ಮನೆಯಿಂದ ಮನೆಗೆ ಹೋಗಿ ಮಾಡಿದ, ನಡೆಸಿದ.
  12. keep house ಸಂಸಾರ ಮಾಡು; ಗೃಹಕೃತ್ಯ ನಡೆಸು; ಕುಟುಂಬ ನಿರ್ವಹಿಸು.
  13. $^1$man of the house.
  14. $^2$move house.
  15. set up house ಬೇರೆ ಮನೆ ಮಾಡು; ಬೇರೆ ಮನೆಯಲ್ಲಿ ವಾಸಮಾಡಲು ಪ್ರಾರಂಭಿಸು; ಸ್ವಂತ ಸಂಸಾರ ಹೂಡು.
  16. the House (ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದಲ್ಲಿ) ಕ್ರೈಸ್ಟ್‍ಚರ್ಚ್‍ ಕಾಲೇಜು.
  17. the House of Windsor ವಿಂಡ್ಸರ್‍ ಸಂತತಿ;ಬ್ರಿಟಿಷ್‍ ರಾಜಮನೆತನ.
  18. the lower house.
ನುಡಿಗಟ್ಟು
  1. (a drink) on the house (ಕುಡಿತದ ವಿಷಯದಲ್ಲಿ) ಹೋಟೆಲು ಮಾಲೀಕನ ಖರ್ಚಿನಲ್ಲಿ, ಯಜಮಾನನ ಲೆಕ್ಕದಲ್ಲಿ(ಪಾನೀಯ)
  2. bow down in the house of Rimmon ಸರ್ವಸಮ್ಮತವಾದ ಆಚಾರ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿರಲು ತತ್ತ್ವವನ್ನು ಬಲಿಗೊಡು
  3. bring down the house.
  4. dress the house ನಾಟಕ ಶಾಲೆಯನ್ನು ಭರ್ತಿಮಾಡು:
    1. (ಪುಕ್ಕಟೆ ಪ್ರವೇಶ ಕೊಟ್ಟು ಅನೇಕ ಪ್ರೇಕ್ಷಕರನ್ನು ಆಹ್ವಾನಿಸಿ) ನಾಟಕಶಾಲೆ ತುಂಬು
    2. ನಾಟಕಶಾಲೆ ಭರ್ತಿಯಾಗುವಂತೆ ಕಾಣಿಸುವ ಹಾಗೆ ಆಹ್ವಾನಿತರ ಪೀಠಗಳನ್ನು ಅಳವಡಿಸು.
  5. house of ill fame (ಪ್ರಾಚೀನ ಪ್ರಯೋಗ) ಸೂಳೆ ಮನೆ; ವೇಶ್ಯಾಗೃಹ.
  6. keep open houses ಎಲ್ಲರಿಗೂ ಬಾಗಿಲು ತೆರೆದಿರು; ಬಂದವರಿಗೆಲ್ಲ ಅತಿಥಿ ಸತ್ಕಾರ ಮಾಡು; ಅವರಿವರೆನ್ನದೆ ಎಲ್ಲರಿಗೂ ಆತಿಥ್ಯ ನಡೆಸು, ನೀಡು
  7. keep (or make) a House ಹೌಸ್‍ ಆಹ್‍ ಕಾಮನ್ಸ್‍ ಸಭೆಯಲ್ಲಿ ಕೋರಂಗೆ ಸಾಕಾಗುವಷ್ಟು ಸದಸ್ಯರು ಹಾಜರಿರುವಂತೆ ಏರ್ಪಡಿಸು.
  8. keep (to) the house ಮನೆಯಲ್ಲೇ ಇರು; ಹೊರಗೆ ಹೋಗದಿರು.
  9. like a house afire = ನುಡಿಗಟ್ಟು \((10)\).
  10. like a house on fire
    1. ಮನೆಗೆ ಬೆಂಕಿ ಬಿದ್ದಂತೆ; ಬಿರುಸಾಗಿ; ಬಹಳ ಚುರುಕಾಗಿ; ಬೇಗಬೇಗ; ಅತಿ ವೇಗವಾಗಿ: she talks like a house on fire ಅವಳು ಅತಿ ವೇಗವಾಗಿ ಮಾತನಾಡುತ್ತಾಳೆ
    2. ಬಹಳ ಚೆನ್ನಾಗಿ; ಅತ್ಯುತ್ತಮವಾಗಿ.
  11. play house ಕುಟುಂಬದ ಆಟ ಆಡು; ಸಂಸಾರದ ಆಟ ಆಡು; ತನ್ನ ಸ್ವಂತ ಮನೆಯಲ್ಲಿರುವ ಕುಟುಂಬವೊಂದರಂತೆ ಆಟ ಆಡು.
  12. put (or set) one’s house in order. ತನ್ನಸಮಸ್ಯೆಗಳನ್ನು ಬಗೆಹರಿಸಿಕೊ; ವ್ಯವಹಾರಗಳನ್ನು ಸರಿಪಡಿಸಿಕೊ, ತಿದ್ದಿಕೊ.
  13. to clean house ಶುದ್ಧ ಮಾಡು; ಬೇಡದ ವ್ಯಕ್ತಿಗಳನ್ನು ಬಲಾತ್ಕಾರವಾಗಿ ಹೊರದೂಡು: the new mayor cleaned house ಹೊಸ ಮೇಯರು ಬೇಡದ ವ್ಯಕ್ತಿಗಳನ್ನು ಹೊರಹಾಕಿದನು, ಕಾರ್ಪೊರೇಷನ್ನನ್ನು ಶುದ್ಧಗೊಳಿಸಿದ
  14. to throw the house out of the windows ಅತಿ ಸಂಭ್ರಮದಲ್ಲಿ, ಉತ್ಸಾಹದಲ್ಲಿ, ಮನೆಯನ್ನೆಲ್ಲ ಅಸ್ತವ್ಯಸ್ತಗೊಳಿಸು, ತಲೆಕಳಗುಮಾಡು; (ಮನೆಯಲ್ಲಿನ) ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡು.