parliament ಪಾರ್ಲಮಂಟ್‍
ನಾಮವಾಚಕ
  1. (Parliament)
    1. (ಬ್ರಿಟನ್ನಿನ) ಪಾರ್ಲಿಮೆಂಟು; ಸಂಸತ್ತು; (ಬಿಷಪ್‍ ಮತ್ತು ಶ್ರೀಮಂತರು ಮೊದಲಾದವರು ಸೇರಿದ) ಹೌಸ್‍ ಆಹ್‍ ಲಾರ್ಡ್ಸ್‍ ಮತ್ತು (ನಗರಗಳ, ಜಿಲ್ಲಾ ಕೌಂಟಿಗಳ ಪ್ರಜಾಪ್ರತಿನಿಧಿಗಳು ಮೊದಲಾದವರನ್ನುಳ್ಳ) ಹೌಸ್‍ ಆಹ್‍ ಕಾಮನ್ಸ್‍ ಸಭೆಗಳು, ಬ್ರಿಟನ್ನಿನ ರಾಜ ಯಾ ರಾಣಿಯನ್ನೂ ಒಳಗೊಂಡ ಪರಮಾಧಿಕಾರದ ಶಾಸನ ಮಂಡಲಿ.
    2. (ಒಂದು ನಿರ್ದಿಷ್ಟ ಅವಧಿಯಲ್ಲಿನ, ಮುಖ್ಯವಾಗಿ ಒಂದು ವಿಸರ್ಜನೆಯಿಂದ ಮತ್ತೊಂದು ವಿಸರ್ಜನೆಯ ನಡುವಿನ ಅವಧಿಯಲ್ಲಿನ) ಪಾರ್ಲಿಮೆಂಟಿನ ಸದಸ್ಯರು.
  2. ಪಾರ್ಲಿಮೆಂಟು; ಸಂಸತ್ತು; (ಇತರ ದೇಶಗಳಲ್ಲಿ) ಇದರಂಥ ಶಾಸನ ಸಭೆ.
ಪದಗುಚ್ಛ
  1. Houses of Parliament (ಬ್ರಿಟಿಷ್‍ ಪ್ರಯೋಗ)
    1. ಕಾಮನ್ಸ್‍ ಮತ್ತು ಲಾರ್ಡ್ಸ್‍ ಸಂಸತ್‍ ಸಭೆಗಳು.
    2. ಈ ಸಂಸತ್ತುಗಳ ಭವನಗಳು.
  2. open Parliament (ರಾಜನ ವಿಷಯದಲ್ಲಿ) ವಿಧ್ಯುಕ್ತವಾಗಿ ಪಾರ್ಲಿಮೆಂಟಿನ ಸಭೆಯನ್ನು ಉದ್ಘಾಟಿಸು, ಸಭೆಯ ಆರಂಭೋತ್ಸವ ನಡೆಸು.