See also 1move
2move ಮೂವ್‍
ಸಕರ್ಮಕ ಕ್ರಿಯಾಪದ
  1. ಒಂದರ ಸ್ಥಳ ಬದಲಾಯಿಸು; ಕದಲಿಸು.
  2. (ಚದುರಂಗ ಮೊದಲಾದ ಆಟಗಳಲ್ಲಿ) ಕಾಯಿಯನ್ನು ನಡೆಸು; ಕಾಯಿಯ ಸ್ಥಳ ಬದಲಾಯಿಸು.
  3. ಚಲಿಸುವಂತೆ ಮಾಡು; ಚಲನಗೊಳಿಸು.
  4. ಚಲನೆಯಲ್ಲಿರಿಸು; ಚಲನೆಯಲ್ಲಿಡು.
  5. ಅಲುಗಾಡಿಸು; ಅಲ್ಲಾಡಿಸು; ಕಲಕು.
  6. (ತನ್ನ ದೇಹ, ಕೈಕಾಲು, ಮೊದಲಾದವನ್ನು) ಆಡಿಸು; (ಅವುಗಳ ಭಂಗಿಯನ್ನು) ಬದಲಾಯಿಸು.
  7. (ಮಲ) ವಿಸರ್ಜನೆಗೊಳಿಸು; ಕಳೆ; ವಿಸರ್ಜನೆಯಾಗುವಂತೆ ಮಾಡು.
  8. (ನಗು, ಕೋಪ, ಮೊದಲಾದವನ್ನು ವ್ಯಕ್ತಿಯಲ್ಲಿ) ಕೆರಳಿಸು; ಪ್ರಚೋದಿಸು; ಉಂಟುಮಾಡು.
  9. (ವ್ಯಕ್ತಿಯಲ್ಲಿ) ಸಾಮಾನ್ಯವಾಗಿ ಅನುಕಂಪ, ಕನಿಕರ ಹುಟ್ಟುವಂತೆ ಮಾಡು; ಮನ ಕರಗಿಸು.
  10. (ವ್ಯಕ್ತಿಯನ್ನು ಕಾರ್ಯಕ್ಕೆ) ಪ್ೇರಿಸು; ಪ್ರಚೋದಿಸು; ಪ್ರವೃತ್ತನಾಗುವಂತೆ ಮಾಡು; ಮನಸ್ಸು ಬರುವಂತೆ ಮಾಡು [ಉದಾಹರಣೆಗೆ the spirit moves me:
    1. (ಹಿಂದೆ Quaker ಪಂಥದವರ ಅರ್ಥದಲ್ಲಿ) ಪವಿತ್ರಾತ್ಮ (Holy Spirit) ನನ್ನನ್ನು ಪ್ೇರೇಪಿಸುತ್ತಿದೆ.
    2. (ಈಗಿನ ಅರ್ಥ) (ಮಾಡಲು) ನನಗೆ ಮನಸ್ಸು ಹುಟ್ಟಿದೆ, ಬಂದಿದೆ].
  11. (ನ್ಯಾಯಸ್ಥಾನ ಮೊದಲಾದವಕ್ಕೆ) ವಿಧಿವಿಹಿತವಾಗಿ – ಪ್ರಾರ್ಥನೆ ಸಲ್ಲಿಸು, ಮನವಿ ಸಲ್ಲಿಸು, ಅಹವಾಲು ಸಲ್ಲಿಸು, ಅರ್ಜಿ ಕೊಡು.
  12. (ಮಂತ್ರಾಲೋಚನ ಸಭೆ ಮೊದಲಾದವುಗಳಲ್ಲಿ)
    1. (ಪ್ರಶ್ನೆಯನ್ನು) ಕೇಳು.
    2. (ನಿರ್ಣಯ, ಅಭಿಪ್ರಾಯ, ಮೊದಲಾದವನ್ನು) ಸೂಚಿಸು; ಮಂಡಿಸು; ಮುಂದಿಡು.
  13. (ಆಜ್ಞೆ ಮಾಡಿ) ವ್ಯಕ್ತಿಯನ್ನು ಮುಂದಕ್ಕೆ ಹೋಗುವಂತೆ, ಸರಿಯುವಂತೆ ಮಾಡು.
  14. ಹೊಸ ಸ್ಥಳಕ್ಕೆ ಬದಲಾಯಿಸು: move house ಬೇರೆ ಮನೆಗೆ ಹೋಗು; ಮನೆ ಬದಲಾಯಿಸು. move offices ಕಚೇರಿಯ ಸ್ಥಳವನ್ನು ಬದಲಾಯಿಸು.
ಅಕರ್ಮಕ ಕ್ರಿಯಾಪದ
  1. ಚಲಿಸು; ಸ್ಥಳಾಂತರ ಮಾಡು; ಸ್ಥಳದಿಂದ ಸ್ಥಳಕ್ಕೆ ಹೋಗು.
  2. ಚಲಿಸುತ್ತಿರು; ಚಲನೆಯಲ್ಲಿರು.
  3. ಅಲ್ಲಾಡು; ಅಲ್ಲಾಡುತ್ತಿರು.
  4. ಮುಂದುವರಿ; ಸಾಗು: the work moves slowly ಕೆಲಸ ನಿಧಾನವಾಗಿ ಸಾಗುತ್ತದೆ.
  5. (ಚದುರಂಗ ಮೊದಲಾದ ಆಟಗಳಲ್ಲಿ) ಕಾಯಿ ನಡೆಸು.
  6. ಬೇರೆ ಮನೆಗೆ ಹೋಗು; ಮನೆ ಬಿಡು; ವಾಸಸ್ಥಾನ ಬದಲಾಯಿಸು.
  7. (ವ್ಯಾಪಾರದ ಕಚೇರಿ ಮೊದಲಾದವು) ಹೊಸ ಕಟ್ಟಡಕ್ಕೆ ಹೋಗು.
  8. (ವ್ಯಕ್ತಿಯ ಯಾ ದೇಹದ ಯಾವುದೇ ಭಾಗದ ಭಂಗಿ) ಬದಲಾಗು; ಚಲಿಸು.
  9. (ನಿರ್ಜೀವ ವಸ್ತುಗಳ ವಿಷಯದಲ್ಲಿ) ಸ್ಥಳ ಬದಲಾವಣೆ ಹೊಂದು; ಸ್ಥಾನಾಂತರಿಸು.
  10. (ಮಲ) ಕಳೆ; ವಿಸರ್ಜನೆಯಾಗು.
  11. ಪ್ರಾರ್ಥಿಸು; ಕೇಳಿಕೊ; ಬೇಡಿಕೊ; ಮನವಿ ಸಲ್ಲಿಸು; ಅಹವಾಲು ಮಾಡಿಕೊಳ್ಳು; ಅರ್ಜಿ ಸಲ್ಲಿಸು.
  12. (ಯಾವುದೇ ವಿಷಯದಲ್ಲಿ ಕೂಡಲೇ, ಶೀಘ್ರವಾಗಿ) ಕಾರ್ಯ ಕೈಕೊಳ್ಳು; ಕಾರ್ಯಪ್ರವೃತ್ತವಾಗು: moved to reduce unemployment ನಿರುದ್ೋಗವನ್ನು ಕಡಮೆ ಮಾಡಲು ಕಾರ್ಯಪ್ರವೃತ್ತನಾದ.
  13. ಮುಂದುವರಿ; ಮುಂದೆ ಸಾಗು: the project is moving fast ಯೋಜನೆ ತ್ವರಿತವಾಗಿ ಮುಂದುವರಿಯುತ್ತಿದೆ.
  14. (ಒಂದು ನಿರ್ದಿಷ್ಟ ಸ್ಥಳ ಯಾ ತಂಡದಲ್ಲಿ) ಇರು ಯಾ ಸಕ್ರಿಯವಾಗಿ ಓಡಾಡು: moves in the best circles ವರಿಷ್ಠ ವೃತ್ತದಲ್ಲಿ ಓಡಾಡುತ್ತಾನೆ.
  15. (ಸರಕಿನ ವಿಷಯದಲ್ಲಿ) ಹೋಗು; ಮಾರಾಟವಾಗು.
ಪದಗುಚ್ಛ
  1. move about
    1. (ವಾಸಸ್ಥಾನವನ್ನು) ಪದೇಪದೇ ಬದಲಾಯಿಸುತ್ತಿರು.
    2. ಓಡಾಡುತ್ತಿರು.
  2. move along = ಪದಗುಚ್ಛ\((5)\).
  3. move heaven and earth ಸರ್ವಪ್ರಯತ್ನ ಮಾಡು; ವಿಶ್ವ ಪ್ರಯತ್ನ ಮಾಡು; ಆಕಾಶ ಭೂಮಿ ಒಂದು ಮಾಡು.
  4. move in
    1. ಹೊಸ ಮನೆಗೆ ಹೋಗು, ಪ್ರವೇಶ ಮಾಡು; ಹೊಸ ವಸತಿ ಹಿಡಿ; ಹೊಸ ವಾಸಸ್ಥಾನವನ್ನು ಸ್ವಾಧೀನಕ್ಕೆ ತೆಗೆದುಕೊ.
    2. ಹೊಸ ಕಸುಬು ಮೊದಲಾದವನ್ನು ಪ್ರಾರಂಭಿಸು.
  5. move on
    1. (ಮುಖ್ಯವಾಗಿ ಸಂದಣಿ, ಅಡಚಣೆ, ಮೊದಲಾದವು ಆಗುವುದನ್ನು ತಪ್ಪಿಸಲು) ಮುಂದಕ್ಕೆ ನಡೆ, ಸರಿ.
    2. (ಒಂದೇ ಸ್ಥಳದಲ್ಲಿ ಬಹಳ ಹೊತ್ತು ನಿಂತಿರುವವನಿಗೆ ಪೊಲೀಸಿನವನ ಆಜ್ಞೆ) ಮುಂದಕ್ಕೆ ಸರಿ; ಮುಂದಕ್ಕೆ ನಡೆ; ಮುಂದೆ ಸಾಗು, ಹೋಗು.
  6. move mountain.
  7. move out
    1. ಮನೆ ಬಿಡು; ವಾಸದ ಮನೆಯನ್ನು ಬದಲಾಯಿಸು.
    2. ಸ್ಥಾನ, ಕೆಲಸ, ಮೊದಲಾದವನ್ನು – ಬಿಡು, ತ್ಯಜಿಸು.
  8. move over (or up) ಸರಿ; ಜರುಗು; ಇನ್ನೊಬ್ಬರಿಗೆ ಜಾಗ ಕೊಡಲು ಪಕ್ಕಕ್ಕೆ ಸರಿ.