See also 2man
1man ಮ್ಯಾನ್‍
ನಾಮವಾಚಕ
(ಬಹುವಚನ men ಉಚ್ಚಾರಣೆ ಮೆನ್‍).
  1. ಮನುಷ್ಯ; ಮಾನವ; ಮನುಜ; ನರ: a man and a brother ನಮ್ಮಂತೆಯೇ ಮನುಷ್ಯ; ನಮ್ಮ ಅಣ್ಣತಮ್ಮ; ಸಹ ಮಾನವ.
  2. (ಅನಿರ್ದಿಷ್ಟ ಯಾ ಸಾಮಾನ್ಯ ಪ್ರಯೋಗ) ಒಬ್ಬ ಮನುಷ್ಯ; ಒಬ್ಬಾನೊಬ್ಬ; ವ್ಯಕ್ತಿ; ಆಳು: any man ಯಾವನೋ ಒಬ್ಬ; ಯಾರಾದರೊಬ್ಬ (ಮನುಷ್ಯ): no man is perfect ಯಾವನೂ ಪರಿಪೂರ್ಣನಲ್ಲ.
  3. ಮನುಷ್ಯಕುಲ; ಮನುಕುಲ; ಮನುಜ ಕುಲ; ಮಾನವ – ವರ್ಗ, ಕೋಟಿ; ಮಾನವತೆ: man is mortal ಮಾನವನು ಮರ್ತ್ಯ. man is born into trouble ಮನುಷ್ಯ ಹುಟ್ಟಿರುವುದೇ ಕಷ್ಟಕ್ಕಾಗಿ.
  4. ವಯಸ್ಕ; ಪ್ರೌಢ; ಹುಡುಗ ಯಾ ಹೆಂಗಸಲ್ಲದ ಪ್ರಾಪ್ತವಯಸ್ಸಿನ ಗಂಡಸು; ಪ್ರಾಯದ ಗಂಡು.
  5. ಪುರುಷ; ಗಂಡಸು.
  6. (ತಾಳ್ಮೆಗೆಟ್ಟಾಗ ಯಾ ಭಾವೋದ್ವೇಗವಿದ್ದಾಗ ಸಂಬೋಧನೆಯಾಗಿ) ಲೋ; ಮಹಾರಾಯ; ಅಯ್ಯಾ; ಮಹಾತ್ಮ: hurry up man (alive); ಬೇಗ ಮಾಡೋ, ಮಹಾರಾಯ.
  7. ಒಬ್ಬ; ಒಬ್ಬ ಮನುಷ್ಯ, ವ್ಯಕ್ತಿ: what can a man do in such a case? ಇಂಥ ಸಂದರ್ಭದಲ್ಲಿ ಒಬ್ಬನಿಂದೇನಾದೀತು?
  8. ಆಳು; ಇಸಮು; ವ್ಯಕ್ತಿ; ಮನುಷ್ಯ: man for man ಆಳಿಗೆ ಆಳು. between man and man ಮನುಷ್ಯ ಮನುಷ್ಯರಲ್ಲಿ. Rs. 5/ – per man ತಲಾ 5 ರೂಪಾಯಿಗಳಂತೆ.
  9. ವಿರೋಧಿ; ಶತ್ರು ಮೊದಲಾದವರು.
  10. ಗಂಡು; ಪುರುಷ; ಗಂಡುತನವುಳ್ಳವನು; ಪೌರುಷವುಳ್ಳವನು; ಗಂಡಿಗೆ ಯೋಗ್ಯವಾದ ಗುಣಗಳನ್ನುಳ್ಳವನು; ಗಂಡುಗಲಿ: she is more of a man than he is ಅವಳು ಅವನಿಗಿಂತ ಗಂಡು, ಹೆಚ್ಚು ಪೌರುಷದಿಂದ ಕೂಡಿದವಳು. play the man ಗಂಡಸಿನಂತೆ ವರ್ತಿಸು, ನಡೆದುಕೊ; ಗಂಡುಗಲಿಯಾಗಿರು.
  11. ಗಂಡ; ಪತಿ: man and wife ಗಂಡ ಹೆಂಡತಿ; ಪತಿ ಪತ್ನಿ.
  12. (ಚರಿತ್ರೆ) ಆಶ್ರಿತ; ಅವಲಂಬಿ; ಅಧೀನನಾದವನು.
  13. ಆಳು; ಸೇವಕ.
  14. ಕೈಯಾಳು; ಪರಿಚಾರಕ; ಅನುಚರ; ಯಜಮಾನನ ಜತೆಯಲ್ಲೇ ಇರುವ ಸೇವಕ.
  15. ಕೆಲಸಗಾರ; ಕೆಲಸದಾಳು; ಕಾರ್ಮಿಕ: the employers dismissed the men ಮಾಲಿಕರು ಕಾರ್ಮಿಕರನ್ನು ವಜಾ ಮಾಡಿದರು, ಕೆಲಸದಿಂದ ತೆಗೆದುಹಾಕಿದರು.
  16. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಅಧಿಕಾರಿಗಳಾಗಿರದ ಸಾಮಾನ್ಯ) ಸೈನಿಕರು, ನಾವಿಕರು, ಮೊದಲಾದವರು: was in command of 200 men ಅವನ ಕೈಕೆಳಗೆ 200 ಸೈನಿಕರು (ಯಾ ನಾವಿಕರು) ಇದ್ದರು.
  17. (ಚದುರಂಗ ಮೊದಲಾದ ಆಟಗಳಲ್ಲಿ) ಯಾವುದೇ ಕಾಯಿ.
  18. ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಗಂಡಸು: fought to the last man ಕೊನೆಯ ವ್ಯಕ್ತಿಯವರೆಗೆ ಹೋರಾಡಿದರು. the (very) man (ನಿರ್ದಿಷ್ಟ ಕೆಲಸಕ್ಕೆ) (ಬಹಳ) ಅರ್ಹನಾದ, ತಕ್ಕ, ಲಾಯಕ್ಕಾದ, ಸೂಕ್ತನಾದ, ಉಚಿತನಾದ, ಅನುರೂಪನಾದ – ವ್ಯಕ್ತಿ: the (very) man for the job ಆ ಕೆಲಸಕ್ಕೆ (ಬಹಳ) ಲಾಯಕ್ಕಾದ ವ್ಯಕ್ತಿ.
  19. (ಆಡುಮಾತು) (ಹುಡುಗಿಯ ಯಾ ತರುಣಿಯ) ನಲ್ಲ; ಪ್ರಿಯ; ಗೆಳೆಯ.
  20. ನಿರ್ದಿಷ್ಟ ಐತಿಹಾಸಿಕ ಕಾಲದ ಯಾ ಲಕ್ಷಣದ ಮನುಷ್ಯ, ಮಾನವ: Renaissance man ನವೋದಯ ಕಾಲದ ಮಾನವ.
  21. ಅವಶೇಷಗಳು ದೊರೆತ ಸ್ಥಳದ ಹೆಸರಿನಿಂದ ಕರೆಯಲಾದ ಇತಿಹಾಸಪೂರ್ವ ಕಾಲದ ಮಾನವ: Peking man ಪೀಕಿಂಗ್‍ ಮಾನವ.
  22. (ಆಡುಮಾತು) ಹಿಪ್ಪಿಗಳು ಮೊದಲಾದವರಲ್ಲಿ ಸಂಬೋಧನೆಯಾಗಿ ಪ್ರಯೋಗ: dig that, man; ಅದನ್ನು ಅರ್ಥಮಾಡಿಕೊಳ್ಳಯ್ಯಾ!
  23. ಬೆನ್ನಟ್ಟಿದ ವ್ಯಕ್ತಿ; ಅನ್ವೇಷಿತ ವ್ಯಕ್ತಿ. the police have so far not caught their man ಪೊಲೀಸರು ಇದುವರೆಗೆ ತಮಗೆ ಬೇಕಾದ ವ್ಯಕ್ತಿಯನ್ನು ಹಿಡಿದಿಲ್ಲ.
  24. (the Man) (ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಪೊಲೀಸಿನವ.
    2. (ನೀಗ್ರೋಗಳ ಅಶಿಷ್ಟ) ಬಿಳಿಯರು; ಶ್ವೇತ ವರ್ಣೀಯರು.
ಪದಗುಚ್ಛ
  1. (all) to a man (ಒಬ್ಬನನ್ನೂ ಬಿಡದೆ, ಒಬ್ಬನೂ ಉಳಿಯದೆ) ಎಲ್ಲರೂ; ಸರ್ವರೂ.
  2. as a man ವ್ಯಕ್ತಿಯಾಗಿ; ಮನುಷ್ಯನಾಗಿ; ಕೇವಲ ಅವನ ವೈಯಕ್ತಿಕ ಸ್ವಭಾವದ ದೃಷ್ಟಿಯಿಂದ ನೋಡಿದರೆ; ಕೇವಲ ಮನುಷ್ಯನನ್ನಾಗಿ ಆತನನ್ನು ಪರಿಗಣಿಸಿದರೆ.
  3. as one man ಒಗ್ಗಟ್ಟಾಗಿ; ಐಕಮತ್ಯದಿಂದ; ಏಕಾಭಿಪ್ರಾಯದಿಂದ; ಒಮ್ಮತದಿಂದ.
  4. be a man ಗಂಡಾಗಿರು; ಧೈರ್ಯದಿಂದಿರು; ಧೈರ್ಯದಿಂದ ವರ್ತಿಸು; ಭಯ ಪಡದಿರು; ಹೆದರದಿರು.
  5. inner man
    1. ಆತ್ಮ; ಅಂತರಾತ್ಮ.
    2. (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಒಳದೇಹ; ಅಂತಃಶರೀರ (ಮುಖ್ಯವಾಗಿ ಹೊಟ್ಟೆ).
  6. little man (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಮರಿ; ಪುಟ್ಟು; ಛೋಟಾ; ಪುಟ್ಟಸ್ವಾಮಿ.
  7. man about town ನಾಗರಿಕ; ನಗರದ ಶ್ರೀಮಂತ ಸೊಗಸುಗಾರ ಸೋಮಾರಿ.
  8. man and boy ಬಾಲ್ಯದಿಂದಲೂ; ಚಿಕ್ಕಂದಿನಿಂದಲೂ; ಹುಡುಗುತನದಿಂದಲೂ; ಎಳೆಯತನದಿಂದಲೂ; ಎಳೆಯ ಹುಡುಗನಾಗಿದ್ದಾಗಿನಿಂದಲೂ; ಬಾಲ್ಯಾರಭ್ಯ.
  9. man Friday ಅಡಿಯಾಳು; ದಾಸ; ಗುಲಾಮ; ಚಾಕರ; ಯಜಮಾನನಿಗಾಗಿ ಎಲ್ಲ ಬಗೆಯ ಸೇವೆಯನ್ನೂ ಸಲ್ಲಿಸುವವನು.
  10. man in the moon ಚಂದ್ರಮಾನವ; ಚಂದ್ರಬಿಂಬದಲ್ಲಿ ಕಾಣುತ್ತದೆಯೆಂದು ಭಾವಿಸಲಾಗಿದ್ದ ಮನುಷ್ಯಾಕೃತಿ (ಮುಖ್ಯವಾಗಿ ಕಲ್ಪನೆಯಲ್ಲಿ ಕಂಡ ಭ್ರಮಾವ್ಯಕ್ತಿ ಎಂಬರ್ಥದಲ್ಲಿ).
  11. man of God
    1. = clergyman.
    2. ಸಂತ.
  12. man of honour ಗೌರವಾನ್ವಿತ ವ್ಯಕ್ತಿ; ನಂಬಿಕಸ್ಥ; ಯಾರ ಮಾತನ್ನು ನಂಬಬಹುದೋ ಅವನು.
  13. man of letters
    1. ಪಂಡಿತ; ವಿದ್ವಾಂಸ.
    2. ಲೇಖಕ; ಬರಹಗಾರ.
  14. man of the house ಮನೆಯ ಯಜಮಾನ.
  15. man of the moment ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾಮುಖ್ಯವುಳ್ಳ ವ್ಯಕ್ತಿ; ಸಮಯ ಪ್ರಮುಖ.
  16. man of straw
    1. ಹುಲುಮನುಷ್ಯ; ಅಗಣ್ಯ ವ್ಯಕ್ತಿ.
    2. ವಿರೋಧಿಯಾಗಿ ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿ.
    3. ಹುಲ್ಲು ಮೊದಲಾದವುಗಳನ್ನು ತುಂಬಿದ ಪ್ರತಿಕೃತಿ; ಹುಲ್ಲು ಬೊಂಬೆ; ಹುಲ್ಲು ಮಾನವ.
    4. ಸಾಕಷ್ಟು ಸಂಪಾದನೆಯಿಲ್ಲದಿದ್ದರೂ ಹಣವನ್ನು ಕೊಡುವುದಾಗಿ ಒಪ್ಪುವ ವ್ಯಕ್ತಿ.
    5. ಸೋಲಲೆಂದು ಕಲ್ಪಿಸಿದ – ಹುಸಿವಾದ, ಸುಳ್ಳುವಾದ.
  17. man of the world.
  18. man to man ಬಿಚ್ಚುಮನಸ್ಸಿನಿಂದ; ಪ್ರಾಮಾಣಿಕವಾಗಿ; ಸತ್ಯವಾಗಿ.
  19. men’s ಗಂಡಸರ ಶೌಚಾಲಯ; ಪುರುಷರ ಶೌಚಾಲಯ.
  20. men’s room = ಪದಗುಚ್ಛ\((19)\).
  21. my man (ಒಬ್ಬನನ್ನು ಪ್ರೋತ್ಸಾಹಿಸುವ ರೀತಿಯ ಸಂಬೋಧನೆಯಾಗಿ) ನನ್ನವನೆ!
  22. my good man = ಪದಗುಚ್ಛ\((21)\).
  23. new man.
  24. old man.
  25. outer man
    1. ಸ್ಥೂಲ ದೇಹ; ಸ್ಥೂಲಶರೀರ.
    2. (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಹೊರದೇಹ; ಬಾಹ್ಯ ಶರೀರ.
  26. play the man = ಪದಗುಚ್ಛ\((4)\).
  27. separate the men from the boys(ಆಡುಮಾತು) ನಿಜವಾಗಿ ಶಕ್ತಿವಂತರಾದವರು, ಸಮರ್ಥರು, ಮೊದಲಾದವರನ್ನು – ಪತ್ತೆಮಾಡು, ಕಂಡುಹಿಡಿ, ಹುಡುಕು.
  28. sort out the men from the boys = ಪದಗುಚ್ಛ\((27)\).
  29. the man in the street ಸಾಮಾನ್ಯ ವ್ಯಕ್ತಿ; ಅನಭಿಜ್ಞ; ಅತಜ್ಞ (ತಜ್ಞನಲ್ಲದವ ಎಂಬರ್ಥದಲ್ಲಿ); ಬೀದಿಹೋಕ.
  30. the man on the street (ಅಮೆರಿಕನ್‍ ಪ್ರಯೋಗ)= ಪದಗುಚ್ಛ\((29)\).
  31. to a man ಒಬ್ಬರನ್ನೂ ಬಿಡದೆ; ಎಲ್ಲರೂ.
  32. to be one’s man
    1. (ಒಬ್ಬನಿಗೆ) ಅರ್ಹ; ಲಾಯಕ್ಕಾದವನು; ತಕ್ಕವನು; ಸರಿಯಾದವನು; (ಒಬ್ಬನ) ಇಷ್ಟಕ್ಕೆ ಅನುಗುಣವದವನು: if you want noise, he is your man ನಿಮಗೆ ಗದ್ದಲ ಬೇಕೆನಿಸಿದರೆ, ಅವನೇ ನಿಮಗೆ ಲಾಯಕ್ಕಾದವನು.
    2. (ಒಬ್ಬನ) ಪರವಾದವನು; ಒಬ್ಬನ ಅಭಿಪ್ರಾಯ ಮೊದಲಾದವನ್ನು ಒಪ್ಪುವವನು: I am your man ನಾನು ನಿಮ್ಮವ; ನಾನೂ ನಿಮ್ಮಂತೆಯೇ, ನಿಮ್ಮ ಕಡೆಗೇ, ಕಡೆಯವನೇ, ಪಕ್ಷದಲ್ಲೇ.
  33. to be one’s own man
    1. ಸ್ವತಂತ್ರ ವ್ಯಕ್ತಿ; (ಇನ್ನೊಬ್ಬರ ಆಳಾಗದೆ) ಸ್ವತಂತ್ರವಾಗಿ ವರ್ತಿಸಬಲ್ಲವನು, ವರ್ತಿಸುವ ಸ್ಥಿತಿಯಲ್ಲಿರುವವನು.
    2. (ಬುದ್ಧಿ ಶಕ್ತಿ, ಇಂದ್ರಿಯಗಳ ಪಾಟವ, ಮೊದಲಾದವುಗಳನ್ನು) ಪೂರ್ಣವಾಗಿ ವಶದಲ್ಲಿ, ಸ್ವಾಧೀನದಲ್ಲಿ, ಉಳ್ಳವನು.