bring ಬ್ರಿಂಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ brought ಉಚ್ಚಾರಣೆ ಬ್ರಾಟ್‍)
  1. ತಾ; ತರು; ತೆಗೆದುಗೊಂಡು ಯಾ ಕರೆದುಕೊಂಡು – ಬರು.
  2. ಬರಿಸು; ತರಿಸು; ಬರುವಂತೆ, ತರುವಂತೆ – ಮಾಡು.
  3. (ಪರಿಣಾಮ ಮೊದಲಾದವನ್ನು) ಉಂಟುಮಾಡು.
  4. (ಆಪಾದನೆ ಮೊದಲಾದವನ್ನು) ಹೊರಿಸು; ಹೇರು.
  5. (ವಾದ) ಹೂಡು; ಮುಂದಿಡು; ಮಂಡಿಸು.
  6. ಆಗಿಸು; ಆಗುವಂತೆ, ನಡೆಯುವಂತೆ, ಒಂದು ನಿಲುವಿಗೆ ಯಾ ಸ್ಥಿತಿಗೆ ಬರುವಂತೆ – ಮಾಡು.
  7. (ಇಚ್ಛೆಯಿಲ್ಲದಿದ್ದರೂ) ಯಾವುದನ್ನೋ ಮಾಡುವಂತೆ ಯಾ ನಂಬುವಂತೆ – ಮಾಡು, ಒಲಿಸು, ಒಪ್ಪಿಸು, ಒಡಂಬಡಿಸು, ಪ್ರಭಾವ ಬೀರು: cannot bring myself to believe ಅದನ್ನು ನಂಬಲು ನನ್ನ ಮನಸ್ಸನ್ನು ಒಪ್ಪಿಸಲಾಗಲಿಲ್ಲ, ನನ್ನ ಮನಸ್ಸು ಒಡಂಬಡಲಿಲ್ಲ.
  8. (ನ್ಯಾಯಶಾಸ್ತ್ರ) ಕೋರ್ಟಿನ ಮುಂದೆ ತರು; ಕೋರ್ಟಿನಲ್ಲಿ – ವ್ಯಾಜ್ಯಹೂಡು, ಕ್ರಮ ಯಾ ಖಟ್ಲೆ ಜರುಗಿಸು.
  9. (ನ್ಯಾಯಶಾಸ್ತ್ರ) ನ್ಯಾಯಾಲಯದಲ್ಲಿ ಆಪಾದಿಸು: bring a charge (ಕೋರ್ಟಿನಲ್ಲಿ) ಆಪಾದನೆ ಹೊರಿಸು.
  10. (ನ್ಯಾಯಶಾಸ್ತ್ರ) (ವಾದವನ್ನು) ಮಂಡಿಸು; ಮುಂದಿಡು.
  11. (ಪದಾರ್ಥದ ವಿಷಯದಲ್ಲಿ) ಮಾರಾಟವಾಗು; ಬೆಲೆ ತರು: sugar brings a high price to-day ಇಂದು ಸಕ್ಕರೆ ಹೆಚ್ಚಿನ ಬೆಲೆ ತರುತ್ತದೆ, ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.
  12. (ಪರಿಣಾಮವಾಗಿ) ಆಗು; ಉಂಟಾಗು.
ಪದಗುಚ್ಛ

bring-and-buy (sale etc.) ಮಾರಾಟ ಕೊಳ್ಳಾಟ; ಕೊಡು ಕೊಳೆ; ಗಿರಾಕಿಗಳು ತಾವು ತಂದ ಸಾಮಾನನ್ನು ಮಾರಿ, ಬೇರೆ ಗಿರಾಕಿಗಳು ತಂದ ಸಾಮಾನನ್ನು ಕೊಂಡುಕೊಳ್ಳುವ ಮಾರಾಟ ವಸ್ತು ಮೊದಲಾದವು.

ನುಡಿಗಟ್ಟು
  1. bring about
    1. ಆಗಿಸು; ಆಗ ಮಾಡಿಸು; ಘಟನೆ ಯಾ ಪರಿಣಾಮವನ್ನು ನಡೆಯುವಂತೆ, ಆಗುವಂತೆ ಮಾಡು.
    2. (ಹಡಗನ್ನು) ಹಿಂದು ಮುಂದಾಗಿ ತಿರುಗಿಸು.
  2. bring around = ನುಡಿಗಟ್ಟು \((18)\).
  3. bring back (to one or one’s mind) ಹಿಂದಿನದನ್ನು (ಒಬ್ಬನ) ನೆನಪಿಗೆ ತರು; ಸ್ಮರಣೆಗೆ ತರು; ಜ್ಞಾಪಿಸು; ಜ್ಞಾಪಿಸಿಕೊ; ನೆನೆ.
  4. bring down
    1. ನೆಲಕ್ಕೆ – ಕೆಡವು ಯಾ ಬೀಳುವಂತೆ ಮಾಡು.
    2. ಗಾಯಗೊಳಿಸಿ ಯಾ ಕೊಂದು – ಕೆಡವು.
    3. ಶಿಕ್ಷೆಗೆ ಗುರಿಪಡಿಸು; ಶಿಕ್ಷೆ ಯಾ ದಂಡ ಒಬ್ಬನ ತಲೆಯ ಮೇಲೆ ಎರಗುವಂತೆ ಮಾಡು.
    4. (ಒಬ್ಬನ) ಸೊಕ್ಕಿಳಿಸು; ಹಮ್ಮಿಳಿಸು; ತಲೆ ತಗ್ಗುವಂತೆ ಮಾಡು.
    5. (ಬೆಲೆ) ಇಳಿಸು; ತಗ್ಗಿಸು.
    6. (ದಾಖಲೆ ಮೊದಲಾದವನ್ನು) ಒಂದು ಘಟ್ಟಕ್ಕೆ, ಹಂತಕ್ಕೆ – ಇಳಿಸು, ತರು, ಮುಟ್ಟಿಸು, ಒಯ್ಯು.
    7. (ಹಾರುತ್ತಿರುವ ಹಕ್ಕಿ, ವಿಮಾನ, ಮೊದಲಾದವನ್ನು) ಬೀಳಿಸು; ಕೆಡವು; ಬೀಳುವಂತೆ ಮಾಡು.
    8. (ಅಶಿಷ್ಟ) ಮನಸ್ಸು ಕುಗ್ಗಿಸು; ವ್ಯಥೆಯುಂಟುಮಾಡು.
  5. bring down the house (ಮುಖ್ಯವಾಗಿ ನಾಟಕಶಾಲೆ ಯಾ ಸಭೆಯಲ್ಲಿ) ಮನೆ ಕಿತ್ತು ಹಾರಿಹೋಗುವಂತೆ ಪ್ರೇಕ್ಷಕರು, ಸಭಿಕರು ಚಪ್ಪಾಳೆ ಹೊಡೆಯುವಂತೆ ಮಾಡು; ಭಾರಿ ಚಪ್ಪಾಳೆ ಯಾ ಶಹಭಾಸ್‍ಗಿರಿ – ಗಿಟ್ಟಿಸು, ಪಡೆ.
  6. bring forth
    1. ಹೆರು; ಹಡೆ; ಪ್ರಸವಿಸು.
    2. ಈಯು; ಮರಿಹಾಕು.
    3. (ಹಣ್ಣು ಮೊದಲಾದವನ್ನು) ಬಿಡು; ಕೊಡು; ಉತ್ಪಾದಿಸು.
    4. ಆಗಿಸು; ಆಗುವಂತೆ ಮಾಡು.
    5. (ಪರಿಗಣನೆಗಾಗಿ) ತರು; ಮುಂದಿಡು; ಮಂಡಿಸು.
  7. bring forward
    1. ಲೆಕ್ಕದ ಖಾತೆಯಲ್ಲಿ ಪುಟದ ಮೊತ್ತವನ್ನು ಮುಂದಿನ ಪುಟಕ್ಕೆ ಒಯ್ಯು; ಹಿಂದಿನ (ಹಾಳೆಯ) ಲೆಕ್ಕದ ಮೊತ್ತವನ್ನು ಮುಂದಕ್ಕೆ – ತರು, ಒಯ್ಯು, ಎತ್ತಿಕೊ.
    2. ಗಮನಕ್ಕೆ ತರು.
    3. (ವಾದ ಮೊದಲಾದವನ್ನು) ಮುಂದಿಡು; ಮಂಡಿಸು.
    4. ಹಿಂದೂಡು; ಹಿಂದಕ್ಕೆ ಹಾಕು; ಹಿಂದಿನ ಕಾಲಕ್ಕೆ – ಒಯ್ಯು, ತೆಗೆದುಕೊಂಡು ಹೋಗು: the meeting is brought forward from January to December ಸಭೆಯನ್ನು ಜನವರಿಯಿಂದ ಡಿಸೆಂಬರಿಗೆ ಹಿಂದೂಡಲಾಗಿದೆ.
  8. bring home to
    1. ಮನಗಾಣಿಸು; ಮನವರಿಕೆ ಮಾಡಿಕೊಡು.
    2. (ಹೊರಿಸಿದ ಅಪರಾಧವನ್ನು) ಸ್ಥಿರಪಡಿಸು; ತಕ್ಸೀರನ್ನು ರುಜುವಾತು ಪಡಿಸಿ ಶಿಕ್ಷೆಗೆ ಗುರಿಮಾಡು.
  9. bring in
    1. (ಪದ್ಧತಿ, ವಿಷಯ, ಮಸೂದೆ, ಮೊದಲಾದವನ್ನು) ರೂಢಿಗೆ, ಬಳಕೆಗೆ, ಆಚರಣೆಗೆ, ಚಾಲ್ತಿಗೆ – ತರು.
    2. (ಸಮಿತಿ ಮೊದಲಾದವುಗಳ ಮುಂದೆ ಮಸೂದೆ, ಠರಾವು ಮೊದಲಾದವನ್ನು) ತರು; ಮಂಡಿಸು.
    3. ಲಾಭತರು.
    4. ಪುರಾವೆ, ರುಜುವಾತು – ಕೊಡು.
    5. (ನ್ಯಾಯದರ್ಶಿಗಳ ವಿಷಯದಲ್ಲಿ, ಅಪರಾಧಿ ಯಾ ನಿರಪರಾಧಿ ಎಂದು) ತೀರ್ಪುಕೊಡು.
  10. bring into being ಇರುವಂತೆ ಮಾಡು; ಅಸ್ತಿತ್ವಕ್ಕೆ ತರು.
  11. bring into play ಕೆಲಸ ಮಾಡುವಂತೆ ಮಾಡು; ಕಾರ್ಯೋನ್ಮುಖಗೊಳಿಸು.
  12. bring into the world ಹೆರು; ಹಡೆ.
  13. bring off
    1. (ಒಡೆದುಹೋದ ಹಡಗು ಮೊದಲಾದವುಗಳಿಂದ ಜನರನ್ನು) ಒಯ್ಯು; ಉಳಿಸು.
    2. (ಪ್ರಯತ್ನ ಉದ್ಯಮಗಳನ್ನು) ಈಡೇರಿಸು; ಸಫಲಗೊಳಿಸು; ಯಶಸ್ವಿಯಾಗಿ ನಿರ್ವಹಿಸು.
  14. bring on
    1. (ಕಾಯಿಲೆ, ಪರಿಸ್ಥಿತಿ, ಮೊದಲಾದವನ್ನು) ಉಂಟು ಮಾಡು.
    2. (ಯಾವುದೇ ವಿಷಯವನ್ನು) ಪರಿಶೀಲನೆಗೆ ಯಾ ಚರ್ಚೆಗೆ ತರು.
    3. (ವಸ್ತುವಿನ ಭಾಗಗಳನ್ನು) ಜೋಡಿಸು ಯಾ ಬೆಸೆ.
    4. ಅಭಿವೃದ್ಧಿಗೊಳಿಸು; ವರ್ಧಿಸುವಂತೆ, ಬೆಳೆಯುವಂತೆ ಯಾ ಮುಂದುವರಿಯುವಂತೆ ಮಾಡು: good rains are bringing the crops on nicely ಒಳ್ಳೆಯ ಮಳೆಗಳು ಫಸಲನ್ನು ಚೆನ್ನಾಗಿ ಬೆಳೆಯುವಂತೆ ಮಾಡುತ್ತಿವೆ.
  15. bring one low ಕೀಳಾಗಿಸು; ಕೀಳು ಮಟ್ಟಕ್ಕಿಳಿಸು; ಹೀನಸ್ಥಿತಿಗೆ ತರು.
  16. bring out
    1. (ಅರ್ಥ ಮೊದಲಾದವನ್ನು) ವ್ಯಕ್ತಪಡಿಸು; ಹೊರಪಡಿಸು; ಸ್ಪಷ್ಟಪಡಿಸು; ವಿಶದಪಡಿಸು.
    2. (ಸುಪ್ತಶಕ್ತಿ ಮೊದಲಾದವನ್ನು) ಪ್ರಕಾಶಪಡಿಸು; ಪ್ರಕಟಪಡಿಸು; ಅಭಿವ್ಯಕ್ತಿಗೊಳಿಸು; ಬೆಳಕಿಗೆ ತರು.
    3. ಪ್ರಾಪ್ತವಯಸ್ಕಳಾದ ತರುಣಿಯನ್ನು (ಶಿಷ್ಟಸಮಾಜಕ್ಕೆ) ವಿಧ್ಯುಕ್ತವಾಗಿ ಪ್ರವೇಶಗೊಳಿಸು.
    4. (ಗ್ರಂಥ ಮೊದಲಾದವನ್ನು) ಪ್ರಕಟಿಸು; ಪ್ರಕಾಶನ ಮಾಡು.
    5. (ಗ್ರಂಥ ಮೊದಲಾದವನ್ನು) ಮಾರುಕಟ್ಟೆಗೆ ತರು.
  17. bring over ಬೇರೆ ಅಭಿಪ್ರಾಯಕ್ಕೆ ತಿರುಗಿಸು.
  18. bring round
    1. ಮೂರ್ಛೆ ತಿಳಿಯುವಂತೆ ಮಾಡು.
    2. ಬೇರೊಬ್ಬರ ಅಭಿಪ್ರಾಯಕ್ಕೆ ತಿರುಗಿಸು ಯಾ ಬರುವಂತೆ ಮಾಡು.
    3. (ರೋಗದಿಂದ) ಗುಣಪಡಿಸು; ಸ್ವಾಸ್ಥ್ಯಕ್ಕೆ, ಆರೋಗ್ಯ ಸ್ಥಿತಿಗೆ – ತರು.
    4. ಪ್ರಾಸಂಗಿಕವಾಗಿ ತರು.
  19. bring the house down = ನುಡಿಗಟ್ಟು \((5)\).
  20. bring through (ರೋಗದಿಂದ ಒಬ್ಬನನ್ನು) ಪಾರುಮಾಡು; ಉಳಿಸು.
  21. bring to
    1. (ವಾಹನವನ್ನು) ನಿಲ್ಲಿಸು.
    2. (ವಾಹನ) ನಿಲ್ಲು; ನಿಂತು ಹೋಗು.
    3. (ಮೂರ್ಛೆಯಿಂದ) ಎಚ್ಚರಗೊಳಿಸು; ಪ್ರಜ್ಞೆ – ತರು, ಬರಿಸು; ಮೂರ್ಛೆ ತಿಳಿಯುವಂತೆ ಮಾಡು.
  22. bring to bear (ಅಧಿಕಾರ, ಶಕ್ತಿ, ಪ್ರಭಾವ, ಮೊದಲಾದವನ್ನು) ಬೀರು; ಚಲಾಯಿಸು; ಪ್ರಯೋಗಿಸು.
  23. bring to 1book.
  24. bring to mind ನೆನಪಿಗೆ – ತರು, ತಂದುಕೊ; ನೆನಪು ಮಾಡಿಕೊ; ಜ್ಞಾಪಿಸಿಕೊ.
  25. bring to pass (ಘಟನೆ ಯಾ ಪರಿಣಾಮವನ್ನು) ಆಗಿಸು; ಜರುಗುವಂತೆ, ಆಗುವಂತೆ – ಮಾಡು.
  26. bring under
    1. ಅಧೀನಪಡಿಸು; ವಶಪಡಿಸು; ಒಗ್ಗಿಸು: the foeman’s chain could not bring her proud soul under ಶತ್ರುವಿನ ಸಂಕೋಲೆ ಸ್ವಾಭಿಮಾನಿಯಾದ ಆಕೆಯನ್ನು ಅಧೀನ ಪಡಿಸಿಕೊಳ್ಳಲಾಗಲಿಲ್ಲ.
    2. ಒಳಗೊಳ್ಳು; ಅಂತರ್ಗತವಾಗಿಸು: the various points are brought under three main heads ವಿವಿಧ ಅಂಶಗಳನ್ನು ಮೂರು ಮುಖ್ಯ ವಿಭಾಗಗಳಲ್ಲಿ ಒಳಗೊಳ್ಳಲಾಗಿದೆ, ವಿಭಾಗಗಳ ಕೆಳಗೆ ತರಲಾಗಿದೆ.
  27. bring up
    1. ಶಿಕ್ಷಣ, ವಿದ್ಯಾಭ್ಯಾಸ – ಕೊಡು.
    2. ಸಾಕು; ಬೆಳೆಸು; ಸಲಹು; ಪೋಷಿಸು; ಪಾಲನೆಮಾಡು.
    3. ದಾವಾ ಹಾಕು; ಮೊಕದ್ದಮೆ ಹೂಡು.
    4. (ಹಡಗನ್ನು) ನಿಲ್ಲಿಸು; (ಹಡಗಿಗೆ) ಲಂಗರು ಹಾಕು.
    5. (ಹಡಗು ಮೊದಲಾದವು) ನಿಲ್ಲು; ನಿಂತುಬಿಡು.
    6. (ಹಠಾತ್ತನೆ) ನಿಲ್ಲಿಸು; ತಡೆಹಾಕು: his reply brought me up short ಅವನ ಉತ್ತರ ನನ್ನನ್ನು ಅರ್ಧದಲ್ಲೇ ನಿಲ್ಲಿಸಿತು.
    7. ಪರಿಶೀಲನೆಗಾಗಿ – ತರು, ಮುಂದಿಡು, ಮಂಡಿಸು.
    8. (ಲೆಕ್ಕ ಮೊದಲಾದವನ್ನು) ಒಂದು ಘಟ್ಟಕ್ಕೆ ತರು.
    9. ವಾಂತಿ, ವಮನ – ಮಾಡು.
  28. bring up the rear ಹಿಂದಿನ ಸಾಲಿನಲ್ಲಿ, ಕೊನೆಯಲ್ಲಿ – ಬರು.
  29. bring up to date ಇಂದಿನವರೆಗೆ ತರು; ಸಮಕಾಲೀನಗೊಳಿಸು; ಅದ್ಯತನಗೊಳಿಸು; ಅದ್ಯತನವಾಗಿಸು; ಇತ್ತೀಚಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು, ಬಳಸಲು ಅಗತ್ಯವಾದ ವಿಷಯ, ತಿಳಿವು, ಮೊದಲಾದವನ್ನು ಒದಗಿಸು.