1house
ಹೌಸ್
ನಾಮವಾಚಕ
(ಬಹುವಚನ houses ಉಚ್ಚಾರಣೆ ಹೌಸಿಸ್).
- ಮನೆ; ನಿವಾಸ; ಗೃಹ; ನಿಲಯ; ವಸತಿ; ಜನರ ವಾಸಕ್ಕಾಗಿ ಯಾ (ವಿಶೇಷಣ ಪೂರ್ವಪ್ರತ್ಯಯದೊಡನೆ) ಯಾವುದಾದರೂ ನಿರ್ದಿಷ್ಟ ಉದ್ದೇಶಕ್ಕಾಗಿ ಯಾ ಕೆಲಸಕ್ಕಾಗಿ ಕಟ್ಟಿದ ಯಾ ಬಳಸುವ ಕಟ್ಟಡ: alms house ಭಿಕ್ಷುಕ ಗೃಹ.
- ಪಥಿಕಗೃಹ; ಪ್ರಯಾಣಿಕರಿಗೆ ತಂಗಲು, ಅವರ ವಾಹನಗಳನ್ನು ನಿಲ್ಲಿಸಲು, ಅವರಿಗೆ ಊಟತಿಂಡಿಗಳನ್ನು ಒದಗಿಸಲು ಕಟ್ಟಿರುವ ಕಟ್ಟಡ
- ಹೋಟೆಲು; ಉಪಾಹಾರಗೃಹ; ತಿಂಡಿತೀರ್ಥದ ಅಂಗಡಿ: coffee-house ಕಾಹಿ ಹೋಟೆಲುeating house ಭೋಜನಾಲಯ; ಖಾನಾವಳಿ.
- (ಅಮೆರಿಕನ್ ಪ್ರಯೋಗ) ಸೂಳೆಮನೆ; ವೇಶ್ಯಾಗೃಹ.
- (ಸ್ಕಾಟ್ಲೆಂಡ್) ವಠಾರದ ಮನೆ; ವಠಾರದ ಯಾ ಗೃಹಸಂಕೀರ್ಣದಲ್ಲಿನ ಒಂದು ಮನೆ.
- ಪ್ರಾಣಿ(ಗಳನ್ನು ಇಡುವ) ಮನೆ: hen house ಕೋಳಿ ಮನೆ.
- ಕೋಠಿ; ಉಗ್ರಾಣ; ಮಳಿಗೆ; ಗಡಂಗು; ದಾಸ್ತಾನು ಮನೆ; ಸರಕುಗಳನ್ನು ಇಡುವ ಕಟ್ಟಡ.
- ಪ್ರಾಣಿಯ ಗುಹೆ, ಚಿಪ್ಪು, ಮೊದಲಾದವು.
- ಮಠ; ಚೈತ್ಯ; ಧಾರ್ಮಿಕ ಪಂಥದವರ ನಿವಾಸ
- ಧಾರ್ಮಿಕ ಪಂಥ.
- ವಿಶ್ವವಿದ್ಯಾನಿಲಯದ ಕಾಲೇಜು ಮೊದಲಾದವು.
- ವಿಶ್ವವಿದ್ಯಾನಿಲಯದ ಕಾಲೇಜಿನ ಸದಸ್ಯರು.
- (ಶಾಲೆಯ) ವಿದ್ಯಾರ್ಥಿನಿಲಯ; ನಿಗದಿತ ಹಣಕ್ಕೆ ವಿದ್ಯಾರ್ಥಿಗಳಿಗೆ ವಸತಿ ಊಟ ಒದಗಿಸುವ ಮನೆ.
- (ಶಾಲೆಯ) ವಿದ್ಯಾರ್ಥಿ ನಿಲಯದ ಹುಡುಗರು ಯಾ ಹುಡುಗಿಯರು.
- (ಕ್ರೀಡೆಗಳು ಮೊದಲಾದವುಗಳಿಗಾಗಿ ವಿಂಗಡಿಸಿದ) ಶಾಲೆಯ ವಿಭಾಗ.
- ಶಾಸನ ಸಭಾ ಮಂದಿರ; ಶಾಸನಸಭಾಭವನ.
- ಶಾಸಕರು; ಶಾಸನಸಭಾ ಸದಸ್ಯರು.
- ಸಭಾ - ಸದನ, ಮಂದಿರ, ಭವನ; ಯಾವುದೇ ವಿಷಯ ಮೊದಲಾದವನ್ನು ಚರ್ಚಿಸಲು ಕಟ್ಟಿದ ಯಾ ಬಳಸುವ ಕಟ್ಟಡ.
- ಸಭೆ; ಸಭಾಸದರು; ಸಭಿಕರು.
- (ಯಾವುದೇ) ಸಂಸ್ಥೆ; ಸಂಘ.
- (ಯಾವುದೇ) ಸಂಸ್ಥೆಯ – ಕಾರ್ಯಾಲಯ, ಕೇಂದ್ರ.
- (ಕಟ್ಟಡದ ಹೆಸರುಗಳಲ್ಲಿ) ನಿಲಯ; ಕೇಂದ್ರ; ಭವನ: Broadcasting House ಆಕಾಶವಾಣಿ ನಿಲಯ, ಕೇಂದ್ರ.
- ವಾಣಿಜ್ಯ ಸಂಸ್ಥೆ ಯಾ ಅದರ ಕಾರ್ಯಾಲಯ, ಕೇಂದ್ರ: a trading house ವಾಣಿಜ್ಯ ಸಂಸ್ಥೆ.
- ನಾಟಕ ಶಾಲೆ; ರಂಗಮಂದಿರ; ಸಿನಿಮಾ ಮಂದಿರ; ಸಂಗೀತ ಭವನ.
- (ರಂಗಮಂದಿರ ಮೊದಲಾದವುಗಳ) ಪ್ರೇಕ್ಷಕರು; ಶ್ರೋತೃಗಳು; ಪ್ರೇಕ್ಷಕವೃಂದ; ಶ್ರೋತೃವೃಂದ: full house ತುಂಬಿದ ಮಂದಿರ; ಪ್ರೇಕ್ಷಕರಿಂದ ಯಾ ಶ್ರೋತೃಗಳಿಂದ ಭರ್ತಿಯಾದ ಮಂದಿರ.
- (ರಂಗಮಂದಿರ ಮೊದಲಾದವುಗಳಲ್ಲಿ ನಡೆಯುವ) ಪ್ರದರ್ಶನ; ಆಟ; ಕಚೇರಿ: the second house starts at 9 O’clock ಎರಡನೆಯ ಆಟ 9 ಗಂಟೆಗೆ ಪ್ರಾರಂಭವಾಗುತ್ತದೆ.
- ಕುಟುಂಬ; ಸಂಸಾರ; ಮನೆ.
- ಮನೆತನ; ವಂಶ; ಕುಲ; ಸಂತತಿ; ಪೀಳಿಗೆ: the house of Windsor ಬ್ರಿಟನ್ನಿನ ರಾಜಮನೆತನ; ವಿಂಡ್ಸರ್ವಂಶ.
- (ಜ್ಯೋತಿಷ) ರಾಶಿ; ಗೃಹ; ಖಗೋಳದ 1/12 ಭಾಗ.
- (ಸೈನಿಕ ಅಶಿಷ್ಟ) ಲಾಟೋ ಎಂಬ ಜೂಜಾಟ.
- (ಶಾಸನಸಭೆ ಮೊದಲಾದವುಗಳಿಗೆ ಅವಶ್ಯವಾದ) ಕೋರಂ; ಕನಿಷ್ಠ ಸಂಖ್ಯೆ; ನಿಯತ ಸಂಖ್ಯೆ.
ಪದಗುಚ್ಛ
- as safe as house ಪೂರ್ತಿ ಸುರಕ್ಷಿತ; (ಮನೆಗಳಲ್ಲಿದ್ದಂತೆಯೇ) ಸಂಪೂರ್ಣವಾಗಿ ಸುರಕ್ಷಿತವಾದ.
- house and home (ಅವಧಾರಣಾತ್ಮಕವಾಗಿ, ಒತ್ತಿಹೇಳುವಲ್ಲಿ) ಮನೆ.
- house of call ಮಾಹಿತಿ ಮನೆ; ಕೂಲಿಯವರು, ಸಾಮಾನು ಹೊರುವವರು ಕೆಲಸ ಹುಡುಕಿಕೊಂಡು ಬರುವ ಯಾ ಯಾರದೇ ನೆಲೆ ತಿಳಿಯಬಹುದಾದ ಮನೆ.
- house of cards
- ಇಸ್ಪೀಟಿನ ಮನೆ; ಮಕ್ಕಳು ಆಟಕ್ಕಾಗಿ ಇಸ್ಪೀಟಿನ ಎಲೆಗಳಿಂದ ಕಟ್ಟುವ ಮನೆ.
- (ರೂಪಕವಾಗಿ) ಅಸ್ಥಿರ ರಚನೆ; ಅಭದ್ರ ವ್ಯವಸ್ಥೆ; ಬುಡ ಭದ್ರವಿಲ್ಲದ ಯೋಜನೆ, ವಿಚಾರ, ಮೊದಲಾದವು.
- House of $^1$commons.
- house of God ಚರ್ಚು; ಇಗರ್ಜಿ; ಗುಡಿ; ದೇವಾಲಯ; ಪೂಜಾ ಮಂದಿರ.
- House of Keys ಹೌಸ್ ಆಹ್ ಕೀಸ್; ಮ್ಯಾನ್ ದ್ವೀಪದ ಪಾರ್ಲಿಮೆಂಟಿನ ಚುನಾಯಿತ ಸಭೆ, ಕೆಳಸಭೆ.
- house of $^1$lords.
- house of representatives.
- houses of parliament.
- house-to-house
- ಮನೆ ಮನೆಯಲ್ಲೂ; ಪ್ರತಿಗೃಹದಲ್ಲೂ
- ಸರದಿಯ ಪ್ರಕಾರ ಮನೆಯಿಂದ ಮನೆಗೆ ಹೋಗಿ ಮಾಡಿದ, ನಡೆಸಿದ.
- keep house ಸಂಸಾರ ಮಾಡು; ಗೃಹಕೃತ್ಯ ನಡೆಸು; ಕುಟುಂಬ ನಿರ್ವಹಿಸು.
- $^1$man of the house.
- $^2$move house.
- set up house ಬೇರೆ ಮನೆ ಮಾಡು; ಬೇರೆ ಮನೆಯಲ್ಲಿ ವಾಸಮಾಡಲು ಪ್ರಾರಂಭಿಸು; ಸ್ವಂತ ಸಂಸಾರ ಹೂಡು.
- the House (ಆಕ್ಸ್ಹರ್ಡ್ ವಿಶ್ವವಿದ್ಯಾನಿಲಯದಲ್ಲಿ) ಕ್ರೈಸ್ಟ್ಚರ್ಚ್ ಕಾಲೇಜು.
- the House of Windsor ವಿಂಡ್ಸರ್ ಸಂತತಿ;ಬ್ರಿಟಿಷ್ ರಾಜಮನೆತನ.
- the lower house.
ನುಡಿಗಟ್ಟು
- (a drink) on the house (ಕುಡಿತದ ವಿಷಯದಲ್ಲಿ) ಹೋಟೆಲು ಮಾಲೀಕನ ಖರ್ಚಿನಲ್ಲಿ, ಯಜಮಾನನ ಲೆಕ್ಕದಲ್ಲಿ(ಪಾನೀಯ)
- bow down in the house of Rimmon ಸರ್ವಸಮ್ಮತವಾದ ಆಚಾರ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿರಲು ತತ್ತ್ವವನ್ನು ಬಲಿಗೊಡು
- bring down the house.
- dress the house ನಾಟಕ ಶಾಲೆಯನ್ನು ಭರ್ತಿಮಾಡು:
- (ಪುಕ್ಕಟೆ ಪ್ರವೇಶ ಕೊಟ್ಟು ಅನೇಕ ಪ್ರೇಕ್ಷಕರನ್ನು ಆಹ್ವಾನಿಸಿ) ನಾಟಕಶಾಲೆ ತುಂಬು
- ನಾಟಕಶಾಲೆ ಭರ್ತಿಯಾಗುವಂತೆ ಕಾಣಿಸುವ ಹಾಗೆ ಆಹ್ವಾನಿತರ ಪೀಠಗಳನ್ನು ಅಳವಡಿಸು.
- house of ill fame (ಪ್ರಾಚೀನ ಪ್ರಯೋಗ) ಸೂಳೆ ಮನೆ; ವೇಶ್ಯಾಗೃಹ.
- keep open houses ಎಲ್ಲರಿಗೂ ಬಾಗಿಲು ತೆರೆದಿರು; ಬಂದವರಿಗೆಲ್ಲ ಅತಿಥಿ ಸತ್ಕಾರ ಮಾಡು; ಅವರಿವರೆನ್ನದೆ ಎಲ್ಲರಿಗೂ ಆತಿಥ್ಯ ನಡೆಸು, ನೀಡು
- keep (or make) a House ಹೌಸ್ ಆಹ್ ಕಾಮನ್ಸ್ ಸಭೆಯಲ್ಲಿ ಕೋರಂಗೆ ಸಾಕಾಗುವಷ್ಟು ಸದಸ್ಯರು ಹಾಜರಿರುವಂತೆ ಏರ್ಪಡಿಸು.
- keep (to) the house ಮನೆಯಲ್ಲೇ ಇರು; ಹೊರಗೆ ಹೋಗದಿರು.
- like a house afire = ನುಡಿಗಟ್ಟು \((10)\).
- like a house on fire
- ಮನೆಗೆ ಬೆಂಕಿ ಬಿದ್ದಂತೆ; ಬಿರುಸಾಗಿ; ಬಹಳ ಚುರುಕಾಗಿ; ಬೇಗಬೇಗ; ಅತಿ ವೇಗವಾಗಿ: she talks like a house on fire ಅವಳು ಅತಿ ವೇಗವಾಗಿ ಮಾತನಾಡುತ್ತಾಳೆ
- ಬಹಳ ಚೆನ್ನಾಗಿ; ಅತ್ಯುತ್ತಮವಾಗಿ.
- play house ಕುಟುಂಬದ ಆಟ ಆಡು; ಸಂಸಾರದ ಆಟ ಆಡು; ತನ್ನ ಸ್ವಂತ ಮನೆಯಲ್ಲಿರುವ ಕುಟುಂಬವೊಂದರಂತೆ ಆಟ ಆಡು.
- put (or set) one’s house in order. ತನ್ನಸಮಸ್ಯೆಗಳನ್ನು ಬಗೆಹರಿಸಿಕೊ; ವ್ಯವಹಾರಗಳನ್ನು ಸರಿಪಡಿಸಿಕೊ, ತಿದ್ದಿಕೊ.
- to clean house ಶುದ್ಧ ಮಾಡು; ಬೇಡದ ವ್ಯಕ್ತಿಗಳನ್ನು ಬಲಾತ್ಕಾರವಾಗಿ ಹೊರದೂಡು: the new mayor cleaned house ಹೊಸ ಮೇಯರು ಬೇಡದ ವ್ಯಕ್ತಿಗಳನ್ನು ಹೊರಹಾಕಿದನು, ಕಾರ್ಪೊರೇಷನ್ನನ್ನು ಶುದ್ಧಗೊಳಿಸಿದ
- to throw the house out of the windows ಅತಿ ಸಂಭ್ರಮದಲ್ಲಿ, ಉತ್ಸಾಹದಲ್ಲಿ, ಮನೆಯನ್ನೆಲ್ಲ ಅಸ್ತವ್ಯಸ್ತಗೊಳಿಸು, ತಲೆಕಳಗುಮಾಡು; (ಮನೆಯಲ್ಲಿನ) ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡು.