See also 2lay  3lay  4lay  5lay
1lay ಲೇ
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ laid ಉಚ್ಚಾರಣೆ ಲೇಡ್‍)

ಸಕರ್ಮಕ ಕ್ರಿಯಾಪದ
  1. (ಒಂದು ಸಮತಲದ ಮೇಲೆ) (ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಇರಿಸು; ಹಾಸು; ಮಡಗು; ಮಲಗಿಸು.
  2. (ಒಂದು ನಿರ್ದಿಷ್ಟ ಯಾ ಗೊತ್ತಾದ ಸ್ಥಾನ ಯಾ ಸ್ಥಿತಿಯಲ್ಲಿ) ಇಡು; ಇರಿಸು; ನಿಲ್ಲಿಸು; ಸ್ಥಾಪಿಸು: laid his hand on her arm ಅವಳ ತೋಳಿನ ಮೇಲೆ ತನ್ನ ಕೈಯನ್ನಿಟ್ಟನು. lay a carpet on the floor ಯಾ lay the floor with a carpet ನೆಲದ ಮೇಲೆ ಜಮಖಾನೆ ಹಾಸು. lay the land fallow ಜಮೀನನ್ನು ಪಾಳು ಬಿಡು.
  3. ಹಾಕು; ಸ್ಥಾಪಿಸು: lay the foundations ತಳಪಾಯ ಹಾಕು.
  4. (ಹೆಣ್ಣು ಪಕ್ಷಿಯ ವಿಷಯದಲ್ಲಿ) (ಮೊಟ್ಟೆ) ಇಡು; ಹಾಕು.
  5. ಮಲಗುವಂತೆ – ಕೆಡೆ, ಕೆಡವು; ಅಡ್ಡಡ್ಡಲಾಗಿ ಕೆಳಕ್ಕೆ ಬೀಳಿಸು.
  6. (ಗಾಳಿ, ಮಳೆಗಳ ವಿಷಯದಲ್ಲಿ) (ಪಯಿರನ್ನು) ನೆಲಕ್ಕೆ – ಕೆಡವು; ಬೀಳಿಸು, ಉರುಳಿಸು.
  7. (ಸಮುದ್ರ, ಗಾಳಿ, ಧೂಳು, ಶಂಕೆ, ಭಯ, ಭೂತ, ಮೊದಲಾದವನ್ನು) ಅಣಗಿಸು; ಅಡಗಿಸು; ನಿವಾರಿಸು; ಶಾಂತಮಾಡು; ಶಮನಗೊಳಿಸು: what shall we do to lay his doubts? ಅವನ ಶಂಕೆಗಳನ್ನು ನಿವಾರಿಸಲು ನಾವೇನು ಮಾಡಬೇಕು?
  8. (ವಿಷಯವನ್ನು, ಸಂಗತಿಯನ್ನು) ಪರಿಶೀಲನೆಗಾಗಿ – ಇಡು, ಇರಿಸು, ಮಂಡಿಸು: the foreign secretary etc. will lay the papers on the table ವಿದೇಶ ಕಾರ್ಯದರ್ಶಿ ಮೊದಲಾದ(ಶಾಸನಸಭೆಯ) ಸದಸ್ಯರ ಅವಗಾಹನೆಗಾಗಿ ಕಾಗದ ಪತ್ರಗಳನ್ನು ಮೇಜಿನ ಮೇಲೆ ಇಡುತ್ತಾರೆ.
  9. (ಆಧಾರವಾಗಿ ಯಾ ಪ್ರಾರಂಭವಾಗಿ) ಇಡು; ಸ್ಥಾಪಿಸು.
  10. (ವ್ಯಕ್ತಿಯ ಮೇಲೆ) ತಪ್ಪು ಹೊರಿಸು; ಆಪಾದನೆ ಮಾಡು; ತಪ್ಪನ್ನು (ವ್ಯಕ್ತಿಯ) ತಲೆಗೆ ಕಟ್ಟು, ಸೆರಗಿಗೆ ಕಟ್ಟು.
  11. (ಒಂದು ಸ್ಥಳದಲ್ಲಿ) ಸ್ಥಾಪಿಸು; ನೆಲೆಗೊಳಿಸು: the scene of the tale is laid in Mysore ಕಥೆಯ ದೃಶ್ಯದ ನೆಲೆ ಮೈಸೂರಿನಲ್ಲಿದೆ.
  12. (ಬಲೆ, ಜಾಲ, ಬೋನು, ಮೊದಲಾದವನ್ನು) ಇಡು; ಇರಿಸು; ಹಾಕು; ಒಡ್ಡು; ಉರುಳಿಡು: lay a snare, trap ಬೋನಿಡು.
  13. (ಯೋಜನೆ, ಹಂಚಿಕೆ, ಮೊದಲಾದವನ್ನು) ತಯಾರಿಸು; ಸಿದ್ಧ ಮಾಡು; ಹಾಕು.
  14. (ಮೇಜನ್ನು ಊಟಕ್ಕಾಗಿ) ಸಿದ್ಧಮಾಡು; ಅಣಿ ಮಾಡು.
  15. (ಬೆಂಕಿ ಮಾಡಲು) ಕಟ್ಟಿಗೆ ಮೊದಲಾದವನ್ನು – ಸಿದ್ಧಗೊಳಿಸು, ಅಣಿಗೊಳಿಸು.
  16. (ಯಾವುದೇ ಮೇಲ್ಮೈ ಮೇಲೆ) (ಜಮಖಾನೆ, ಒಣಹುಲ್ಲು, ಮೊದಲಾದವನ್ನು) ಹಾಸು; ಹೊದೆಸು; ಹರಡು.
  17. (ಯಾವುದೇ ಮೇಲ್ಮೈ ಮೇಲೆ) (ಲೋಹವನ್ನು) ಹಚ್ಚು; ಹೊದಿಸು.
  18. (ಬಣ್ಣ ಮೊದಲಾದವನ್ನು ಮೇಲ್ಮೈ ಮೇಲೆ ವರಿಸೆಗಳಾಗಿ) ತೊಡೆ; ಬಳಿ; ಹಚ್ಚು; ಲೇಪಿಸು; ಸವರು.
  19. (ಅಶಿಷ್ಟ) (ಮುಖ್ಯವಾಗಿ ಹೆಂಗಸನ್ನು) ಸಂಭೋಗಿಸು; ಸಂಭೋಗ ಮಾಡು.
  20. (ಹಣ, ತಲೆ, ಪ್ರಾಣ, ಮೊದಲಾದವನ್ನು) ಒಡ್ಡು; ಬಾಜಿಕಟ್ಟು; ಪಣವೊಡ್ಡು; ಪಂಥವಾಗಿಡು; ಪೈಜೆಯಿಡು; ಬಾಜಿಯಾಗಿಡು: I lay you ten to one that he wins ಅವನು ಗೆಲ್ಲುತ್ತಾನೆಂದು ನಾನು ಒಂದಕ್ಕೆ ಹತ್ತು ಬಾಜಿ ಕಟ್ಟುತ್ತೇನೆ.
  21. ತೊಡಗಿಸು: lay hounds on scent ವಾಸನೆಯಿಂದ ಸುಳಿವು ತಿಳಿಯಲು, ಜಾದು ತಿಳಿಯಲು ಬೇಟೆ ನಾಯಿಗಳನ್ನು ತೊಡಗಿಸು, ಬಿಡು.
  22. (ಅಂಗ ಮೊದಲಾದವನ್ನು) ನಿರ್ದಿಷ್ಟ ಸ್ಥಾನದಲ್ಲಿಟ್ಟುಕೊ: horse laid his ears back ಕುದುರೆ ತನ್ನ ಕಿವಿಗಳನ್ನು ಹಿಂದಕ್ಕೆ ಇಟ್ಟುಕೊಂಡಿತು.
  23. (ಫಿರಂಗಿಯನ್ನು) (ಗುರಿಗೆ ಹೊಡೆಯಲು) ಸರಿಯಾದ ಜಾಗದಲ್ಲಿರಿಸು; ತಕ್ಕ ಸ್ಥಾನದಲ್ಲಿರಿಸು.
  24. (ಮುಖ್ಯವಾಗಿ ಯಾವುದಕ್ಕೋ ಹಕ್ಕನ್ನು) ಹೂಡು; ಮಂಡಿಸು; ಮುಂದೊಡ್ಡು; ಮುಂದಿಡು: lay claim to ಹಕ್ಕು ಹೂಡು.
  25. (ಅರ್ಜಿದಾರನ ವಿಷಯದಲ್ಲಿ) (ನಷ್ಟ ಪರಿಹಾರದ ಮೊತ್ತವನ್ನು) ನಿಶ್ಚಯಿಸು; ಗೊತ್ತು ಮಾಡು; ನಿರ್ಧರಿಸು; ನಿರ್ಣಯಿಸು.
  26. (ಕೇಡನ್ನು ಯಾವುದೇ ಕಾರಣದ) ಪರಿಣಾಮವಾಗಿ, ಪರಿಣಾಮವೆಂದು – ನಿರೂಪಿಸು, ತೋರಿಸು.
  27. (ದಂಡ, ಆಜ್ಞೆ, ಆಭಾರ, ದೂರು, ನಿಂದೆ, ಹೊರೆ, ತೆರಿಗೆ) ಹಾಕು; ಹೊರಿಸು; ವಿಧಿಸು; ಹೇರು.
  28. (ಕೋಲು ಮೊದಲಾದವನ್ನು) ಕೆಳಕ್ಕೆ – ತರು, ಬರಿಸು, ಇಳಿಸು.
  29. (ಅಸ್ತಿಭಾರ, ನೆಲ, ಇಟ್ಟಿಗೆಗಳು, ನೀರಿನಡಿಯ ಕೇಬಲ್‍ಗಳನ್ನು, ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಹೊರಿಸು; ಅಣಿಯಾಗಿಸು; ಅಣಿಗೊಳಿಸು; ಅಳವಡಿಸು.
  30. (ಹುರಿಯನ್ನು ಯಾ ಎಳೆಗಳನ್ನು) ಹೊಸೆದು (ಹಗ್ಗ) ಮಾಡು.
  31. (ನೌಕಾಯಾನ) (ಭೂಮಿ ಮೊದಲಾದವುಗಳ ವಿಷಯದಲ್ಲಿ) ದಿಗಂತಕ್ಕಿಂತ ಕೆಳಗೆ ಕಾಣುವಷ್ಟು ದೂರ (ಹಡಗನ್ನು) – ತೆಗೆದುಕೊಂಡು ಹೋಗು, ಒಯ್ಯು, ಒಯ್ಯಿ, ನಡೆಸು.
  32. (ಯೋಜನೆ, ನಿವೇಶನಗಳನ್ನು) (ಒಂದು ಯೋಜನೆಯ ಪ್ರಕಾರ) ರೂಪಿಸು; ವಿನ್ಯಾಸ ಮಾಡು; ರೂಪುಗೊಳಿಸು; ರೂಪುರೇಖೆ ರಚಿಸು: lay the ground ನೆಲದ (ಮುಖ್ಯವಾಗಿ ಮನೆ ಕಟ್ಟುವ ಜಾಗ, ತೋಟದ ಭೂಮಿ, ಮೊದಲಾದವುಗಳ) ವಿನ್ಯಾಸ ರಚಿಸು.
ಅಕರ್ಮಕ ಕ್ರಿಯಾಪದ

(ನೌಕಾಯಾನ ಯಾ ಅಸಂಸ್ಕೃತ)

  1. = 1lie.
  2. (ಹೆಣ್ಣು ಪಕ್ಷಿಯ ವಿಷಯದಲ್ಲಿ) ಮೊಟ್ಟೆ – ಇಡು, ಹಾಕು.
ಪದಗುಚ್ಛ
  1. lay aboard (ಒಳಕ್ಕೆ ನುಗ್ಗಿ ಆಕ್ರಮಣ ಮಾಡುವುದಕ್ಕಾಗಿ) ಒಂದು ಹಡಗಿನ ಪಕ್ಕಕ್ಕೆ ಮತ್ತೊಂದು ಹಡಗನ್ನು ತೆಗೆದುಕೊಂಡು ಹೋಗು, ನಡೆಸು.
  2. lay about (ಆಡುಮಾತು) ಹೊಡೆ; ಬಡಿ; ಇಕ್ಕು; ಚಚ್ಚು.
  3. lay about one
    1. ಸುತ್ತಲೂ ಹೊಡೆ; ಎಲ್ಲ ಕಡೆಯಿಂದಲೂ ಹೊಡೆ: he drew his sword and laid about him ಅವನು ಕತ್ತಿಯನ್ನು ಸೆಳೆದು ಸುತ್ತಲೂ ಬೀಸಿದನು.
    2. (ರೂಪಕವಾಗಿ) ಸಿಕ್ಕಾಪಟ್ಟೆ ಖಂಡಿಸು; ಗೊತ್ತುಗುರಿಯಿಲ್ಲದೆ ಟೀಕಿಸು.
  4. lay aside (or by)
    1. (ಉಪಯೋಗ, ಆಚರಣೆ, ಯೋಚನೆಗಳನ್ನು) ನಿಲ್ಲಿಸಿ ಬಿಡು; ಬಿಟ್ಟು ಬಿಡು; ಕೈ ಬಿಡು; ಪಕ್ಕಕ್ಕಿರಿಸು; ಬದಿಗಿಡು; ತೊರೆ; ತ್ಯಜಿಸು.
    2. (ಹಣ ಮೊದಲಾದವನ್ನು ಮುಂದಿನ ಉಪಯೋಗಕ್ಕಾಗಿ) ಮಿಗಿಸು; ಎತ್ತಿಡು; ಉಳಿಸು; ಉಳಿತಾಯ ಮಾಡು.
  5. lay back ನೆಟ್ಟಗಿದ್ದುದನ್ನು ಹಿಂದಕ್ಕೆ ವಾಲಿಸು, ವಾಲುವಂತೆ ಮಾಡು.
  6. lay bare
    1. ಬೆತ್ತಲೆಮಾಡು; ನಗ್ನಗೊಳಿಸು.
    2. ಬಯಲು ಮಾಡು; ಹೊರಗೆಡಹು; ಬಹಿರಂಗಗೊಳಿಸು; ರಟ್ಟುಮಾಡು.
  7. lay blows (ಏಟು) ಹೊಡಿ; ಚಚ್ಚು; ಬಾರಿಸು.
  8. lay claim to ತನ್ನದೇ ಎಂದು ವಾದಿಸು; ಹಕ್ಕುಹೂಡು.
  9. lay down
    1. (ನೆಲ ಮೊದಲಾದವುಗಳ ಮೇಲೆ) ಇಡು; ಇರಿಸು; ಮಡಗು.
    2. (ಅಧಿಕಾರ, ಆಸೆಗಳನ್ನು) ಬಿಟ್ಟುಬಿಡು; ತೊರೆ; ತ್ಯಜಿಸು; ಬಿಟ್ಟುಕೊಡು.
    3. (ನಿಯಮ, ತತ್ತ್ವ. ಮಾರ್ಗಗಳನ್ನು) ಹಾಕು; ವಿಧಿಸು; ರಚಿಸು; ರೂಪಿಸು; ನಿರ್ದಿಷ್ಟ ರೂಪದಲ್ಲಿ ಇಡು.
    4. (ಬಾಜಿ ಹಣ) ಕೊಟ್ಟುಬಿಡು.
    5. ಪಣವೊಡ್ಡು; ಬಾಜಿಕಟ್ಟು.
    6. (ಹಡಗನ್ನು) ಕಟ್ಟು; ನಿರ್ಮಿಸು ಯಾ ಕಟ್ಟಲು ಪ್ರಾರಂಭಿಸು.
    7. (ರೈಲು ಮಾರ್ಗವನ್ನು) ಹಾಕು; ನಿರ್ಮಿಸು; ರಚಿಸು ಯಾ ರಚಿಸಲು ಪ್ರಾರಂಭಿಸು.
    8. (ದ್ರಾಕ್ಷಾಮದ್ಯವನ್ನು ನೆಲಮಾಳಿಗೆಯಲ್ಲಿ) ಇಡು; ಶೇಖರಿಸು; ದಾಸ್ತಾನುಮಾಡು; ಸಂಗ್ರಹಿಸಿಡು; ಕೂಡಿಡು.
    9. (ನಕ್ಷೆ ಮೊದಲಾದವನ್ನು) ಕಾಗದದ ಮೇಲೆ – ನಮೂದಿಸು, ಬರೆದಿಡು.
    10. (ಪ್ರಾಣವನ್ನು) ಬಲಿಕೊಡು; ತ್ಯಾಗಮಾಡು; ತೆರು; ಅರ್ಪಿಸು; ಆಹುತಿಕೊಡು.
    11. (ಹುಲ್ಲು, ಕುದುರೆ ಮೇವು, ಮೊದಲಾದವನ್ನು ಬೆಳೆಸಿ) ಜಮೀನನ್ನು ಹುಲ್ಲುಗಾವಲನ್ನಾಗಿ – ಮಾಡು, ಬದಲಾಯಿಸು.
    12. (ಮುಖ್ಯವಾಗಿ ಜನಪ್ರಿಯ ಸಂಗೀತವನ್ನು) ಧ್ವನಿಮುದ್ರಿಸು; ರೆಕಾರ್ಡು ಮಾಡು.
  10. lay hold on (or of)
    1. ಹಿಡಿದುಕೊ; ಹಿಡಿ; ಭದ್ರವಾಗಿ ಹಿಡಿದುಕೊ.
    2. (ರೂಪಕವಾಗಿ) (ಎದುರಾಳಿಯ ಕೊರತೆ, ದೌರ್ಬಲ್ಯ, ಮೊದಲಾದವನ್ನು)ಸ್ವಪ್ರಯೋಜನಕ್ಕೆ ಬಳಸಿಕೊ.
  11. lay in
    1. (ತನಗೋಸ್ಕರ) ಕೂಡಿಡು; ಶೇಖರಿಸು; ಸಂಗ್ರಹಿಸಿಕೊ.
    2. (ಆಡುಮಾತು) ಏಟುಗಳ ಮಳೆಯನ್ನು – ಕರೆ, ಸುರಿಸು; ಒಂದೇ ಸಮನೆ ಹೊಡೆ, ಬಡಿ.
  12. lay into (ಆಡುಮಾತು) ಸದೆಬಡಿ; ಚಚ್ಚಿಹಾಕು; ಚೆನ್ನಾಗಿ ಶಿಕ್ಷಿಸು ಯಾ ಬಯ್ಯು.
  13. lay it on = ಪದಗುಚ್ಛ \((7)\).
  14. lay off
    1. (ಕೆಲಸವಿಲ್ಲದಿರುವುದರಿಂದ ತಾತ್ಕಾಲಿಕವಾಗಿ) ಕೆಲಸದಿಂದ – ತೆಗೆದುಹಾಕು, ವಜಾಮಾಡು; ಮನೆಗೆ ಕಳುಹಿಸು.
    2. (ಆಡುಮಾತು) (ಮಾಡುವುದನ್ನು) ನಿಲ್ಲಿಸು; ಬಿಟ್ಟುಬಿಡು.
  15. lay on
    1. (ಉಪಾಹಾರ, ಮನರಂಜನೆ, ವಾಹನ, ಮೊದಲಾದ ಸೌಲಭ್ಯ, ಸೌಕರ್ಯಗಳನ್ನು) ಒದಗಿಸು; ದೊರಕಿಸು.
    2. (ತೆರಿಗೆ, ದಂಡ, ಆಜ್ಞೆ, ಮೊದಲಾದವನ್ನು) ಹಾಕು; ವಿಧಿಸು; ಹೊರಿಸು; ಹೇರು.
    3. (ಏಟುಗಳನ್ನು) ಬಾರಿಸು; ಕೊಡು; ಹಾಕು.
    4. (ಬಣ್ಣ ಮೊದಲಾದವನ್ನು) ಬಳಿ; ಹಚ್ಚು; ಸವರು; ಲೇಪಿಸು; ತೊಡೆ.
    5. (ಬಲವಾಗಿ) ಏಟು ಹಾಕು; ಹೊದೆ; ಬಡಿ.
    6. (ಚಾಟಿ ಮೊದಲಾದವುಗಳಿಂದ) ಬಲವಾಗಿ ಬಾರಿಸು.
    7. (ಅನಿಲ, ನೀರು, ವಿದ್ಯುಚ್ಛಕ್ತಿಗಳನ್ನು ಸರಬರಾಜು ಮಾಡುವ) ಕೊಳವೆ ಮೊದಲಾದವನ್ನು – ಹಾಕು, ಒದಗಿಸು.
  16. lay out
    1. ಹರಡು; ಹರವು.
    2. ಪ್ರದರ್ಶಿಸು; ಪ್ರಕಟಗೊಳಿಸು; ಅನಾವರಣಮಾಡು; ಕಾಣುವಂತೆ ತೆರೆದಿಡು.
    3. (ಕಳೇಬರವನ್ನು) ಹೂಳಲು ಸಿದ್ಧಪಡಿಸು, ತಯಾರು ಮಾಡು.
    4. (ಆಡುಮಾತು) ಹೊಡೆದು – ಪ್ರಜ್ಞೆತಪ್ಪಿಸು, ಮೂರ್ಛೆ ಬೀಳಿಸು.
    5. (ಮೈದಾನ, ನಿವೇಶನ, ಉದ್ಯಾನಗಳನ್ನು) ನಕಾಸೆಯ, ನಕ್ಷೆಯ ಪ್ರಕಾರ – ರೂಪಿಸು, ವಿನ್ಯಾಸ ಮಾಡು, ವ್ಯವಸ್ಥೆಗೊಳಿಸು.
    6. (ಹಣ) ಖರ್ಚು ಮಾಡು; ವ್ಯಯಮಾಡು; ವೆಚ್ಚಮಾಡು.
    7. (ಆತ್ಮಾರ್ಥಕ) (ಯಾವುದೋ ಒಂದನ್ನು ಮಾಡಲು) ಶ್ರಮಪಡು; ಶ್ರಮವಹಿಸು; ಕಷ್ಟತೆಗೆದುಕೊ: laid themselves out to help ಸಹಾಯ ಮಾಡಲು ತಾವೇ ಶ್ರಮ ವಹಿಸಿದರು.
    8. (ಅಶಿಷ್ಟ) ಕೊಲ್ಲು; ಸಾಯಿಸು; ಕೊಂದುಹಾಕು.
    9. (ಆಡುಮಾತು) (ಹುಟ್‍ಬಾಲ್‍ ಮೊದಲಾದವುಗಳಲ್ಲಿ) (ಆಟಗಾರನನ್ನು) ತಾತ್ಕಾಲಿಕವಾಗಿ ಆಟವಾಡದಿರುವಂತೆ ಮಾಡು; ತಾತ್ಕಾಲಿಕವಾಗಿ ಕುಳ್ಳಿರಿಸು, ಹೊರಕ್ಕೆ ಕಳುಹಿಸು, ಆಚೆಗೆ ದೂಡು.
    10. (ಮುಷ್ಟಿಯುದ್ಧದಲ್ಲಿ ಮಲ್ಲನಿಗೆ) ಪ್ರಜ್ಞೆ ತಪ್ಪಿಸು.
  17. lay (stress, weight, emphasis) on (or upon) ಒತ್ತಿಹೇಳು; ಪ್ರಾಧಾನ್ಯಕೊಡು; ಮುಖ್ಯವೆಂದು ಪರಿಗಣಿಸು.
  18. lay table, cloth, breakfast, etc. ಊಟಕ್ಕೆ ಅಣಿಗೊಳಿಸು, ಸಿದ್ಧತೆಮಾಡು; ಕುರ್ಚಿ, ಮೇಜು, ಹಾಸು, ತಿಂಡಿತೀರ್ಥ, ಮೊದಲಾದವನ್ನು ಅಣಿಮಾಡು.
  19. lay up
    1. ಶೇಖರಿಸಿಡು; ಸಂಗ್ರಹಿಸಿಡು; ಕೂಡಿಡು; ಎತ್ತಿಡು; ತೆಗೆದಿಡು.
    2. (ವಾಹನವನ್ನು, ಹಡಗನ್ನು) ಬಳಕೆಯಿಂದ ತೆಗೆದುಬಿಡು.
    3. (ಹಣವನ್ನು) ಉಳಿಸು; ಮಿಗಿಸು; ಉಳಿತಾಯ ಮಾಡು.
    4. (ಕರ್ಮಣಿಪ್ರಯೋಗ) ಹಾಸಿಗೆ ಹಿಡಿದಿರು; ಕಾಯಿಲೆ ಮಲಗಿರು.
    5. (ಕರ್ಮಣಿಪ್ರಯೋಗ) (ಕಾಯಿಲೆ ಮೊದಲಾದವುಗಳಿಂದ) ಮನೆಯೊಳಗಿರು.
    6. (ಹಗ್ಗವನ್ನು) ಅಡ್ಡಡ್ಡಲಾಗಿ ಪೇರಿಸು.
ನುಡಿಗಟ್ಟು
  1. lay a charge (ವ್ಯಕ್ತಿಯ ಮೇಲೆ) ದೋಷಾರೋಪಣೆ ಮಾಡು; ದೋಷ – ಹೊರಿಸು, ಕೂರಿಸು; ಆಪಾದನೆ ಹೊರಿಸು.
  2. lay an information ಕಾನೂನನ್ನನುಸರಿಸಿ ಆಪಾದನೆ ಹೊರಿಸು; ಕಾಯಿದೆ ಪ್ರಕಾರ ತಪ್ಪು ಹೊರಿಸು.
  3. lay at (or to) the door of (ಜವಾಬ್ದಾರಿ, ತಪ್ಪು, ಮೊದಲಾದವನ್ನು) ಮೇಲೆ ಹೊರಿಸು; ಮೇಲೆ ಆರೋಪಿಸು.
  4. lay by the $^1$heels.
    1. ದಸ್ತಗಿರಿ ಮಾಡು; ಕೋಳ ತೊಡಿಸು.
    2. (ಎದುರಾಳಿಯನ್ನು) ಕಾಲು ಹಿಡಿದು ಎತ್ತಿ ಎಸೆ.
  5. lay down one’s arms ಕೈದುಗಳನ್ನು ಕೆಳಗಿಡು; ಅಸ್ತ್ರಗಳನ್ನು ಕೆಳಗಿಡು; ಶರಣಾಗತನಾಗು.
  6. lay down the 1law.
  7. lay fast ಸೆರೆಯಲ್ಲಿಡು; ಬಂಧನದಲ್ಲಿಡು.
  8. lay (fault) to person’s charge (ತಪ್ಪನ್ನು) ವ್ಯಕ್ತಿಯದೆನ್ನು; ವ್ಯಕ್ತಿಯ ತಲೆಗೆ ಕಟ್ಟು.
  9. lay great store by (or on or upon) ಹೆಚ್ಚು ಬೆಲೆಯುಳ್ಳದ್ದಾಗಿ ಭಾವಿಸು; ಹೆಚ್ಚು ಬೆಲೆಕೊಡು; ಮಹತ್ವದ್ದೆಂದು ತಿಳಿ.
  10. lay hands on
    1. ತುಡುಕು; ಹಿಡಿದುಕೊ.
    2. ವಶಪಡಿಸಿಕೊ; ಸ್ವಾಧೀನಪಡಿಸಿಕೊ; ತನ್ನದಾಗಿಸಿಕೊ.
    3. ಸ್ವಂತಕ್ಕಾಗಿ ಬಳಸಿಕೊ; ತನಗಾಗಿ ಉಪಯೋಗಿಸಿಕೊ.
    4. (ಯಾರ ಮೇಲಾದರೂ) ಕೈಮಾಡು; ಹಲ್ಲೆ ಮಾಡು; ಆಕ್ರಮಣ ಮಾಡು.
    5. ಸಿಕ್ಕು; ದೊರೆ; ಕಾಣು: cannot lay my hands upon it ಅದು ನನ್ನ ಕೈಗೆ ಸಿಕ್ಕುವಂತಿಲ್ಲ.
    6. (ಕ್ರೈಸ್ತಧರ್ಮ) ಸ್ಥಿರೀಕರಿಸುವಾಗ ಯಾ ದೀಕ್ಷೆ ನೀಡುವಾಗ ಕೈಗಳನ್ನು ಮೇಲೆ ಇಡು.
  11. lay hands on oneself ಆತ್ಮಹತ್ಯೆ ಮಾಡಿಕೊ; ಪ್ರಾಣ ಕಳೆದುಕೊ.
  12. lay heads together ಸಮಾಲೋಚಿಸು; ಸಮಾಲೋಚನೆ ನಡೆಸು; ಕೂಡಿ ಮಾತನಾಡು, ಆಲೋಚಿಸು.
  13. lay it on thick (or with a trowel) (ಆಡುಮಾತು) ಅತಿಯಾಗಿ, ಮಿತಿಮೂರಿ – ಹೊಗಳು; ವಿಪರೀತ ಮುಖಸ್ತುತಿ ಮಾಡು.
  14. lay low ಸೊಕ್ಕು ಮುರಿ; ಹಮ್ಮಡಗಿಸು; ಅಹಂಕಾರ ಅಡಗಿಸು; ತಲೆ ತಗ್ಗುವಂತೆ, ಬಗ್ಗುವಂತೆ – ಮಾಡು.
  15. lay one’s $^2$account with (ಯಾವುದನ್ನೇ) ಲೆಕ್ಕಾಚಾರದಲ್ಲಿ ಸೇರಿಸಿಕೊ.
  16. lay one’s bones (ನಿರ್ದಿಷ್ಟ ಪ್ರದೇಶವೊಂದರಲ್ಲಿ) ಸಮಾಧಿಯಾಗು; ಶರೀರ – ತ್ಯಜಿಸು, ಬಿಡು; ದೇಹತ್ಯಾಗ ಮಾಡು.
  17. lay one’s $^1$hand on (ಯಾವುದೇ ವಸ್ತು) ಕೈಗೆ ಸಿಕ್ಕು; ದೊರೆ; ಲಭ್ಯವಾಗು.
  18. lay one’s hopes on (ಒಬ್ಬನ, ಒಂದರ) ಮೇಲೆ ಆಸೆ ಇಡು; ಮೇಲೆ ಭರವಸೆ ಇಟ್ಟುಕೊ.
  19. lay on your oars (ಹುಟ್ಟುಗಳನ್ನು ನೀರಿನಲ್ಲಿ ಇಳಿಬಿಟ್ಟು) ಹುಟ್ಟು ಹಾಕುವುದನ್ನು ನಿಲ್ಲಿಸು.
  20. lay open
    1. (ಅಂಗದ ಮೇಲಿನ) ಚರ್ಮವನ್ನು ಸೀಳು.
    2. ವಿವರಿಸು; ವಿಶದಗೊಳಿಸು.
    3. ತೆರೆದಿಡು; ತೆರೆದು ತೋರಿಸು; ಬಹಿರಂಗಪಡಿಸು; ಪ್ರದರ್ಶಿಸು; ಪ್ರಕಟಿಸು.
  21. lay open to (ಟೀಕೆ, ಖಂಡನೆ, ಮೊದಲಾದವುಗಳಿಗೆ) ಒಡ್ಡು; ಒಳಪಡಿಸು; ಪಕ್ಕಾಗುವಂತೆ ಮಾಡು.
  22. lay person under contribution (ವ್ಯಕ್ತಿಯನ್ನು) ತೆರುವಂತೆ, ಕೊಡುವಂತೆ – ಮಾಡು.
  23. lay person under necessity (ವ್ಯಕ್ತಿಯನ್ನು) ಕಟ್ಟುಬೀಳುವಂತೆ ಮಾಡು; ಒತ್ತಾಯಿಸು; ಒತ್ತಾಯಕ್ಕೆ ಸಿಲುಕಿಸು; ಕಟ್ಟಿಗೆ ಬೀಳಿಸು, ಒಳಗಾಗಿಸು.
  24. lay person under obligation (ಸಹಾಯ ಮೊದಲಾದವನ್ನು ಮಾಡಿ, ವ್ಯಕ್ತಿಯನ್ನು) ಋಣಿಯಾಗಿಸು; ಋಣಿಯಾಗಿ ಮಾಡು; ದಾಕ್ಷಿಣ್ಯಕ್ಕೊಳಗಾಗಿಸು; ಹಂಗಿಗೆ ಬೀಳಿಸು.
  25. lay seize to
    1. ಮುತ್ತಿಗೆ ಹಾಕು.
    2. ಮೇಲಿಂದ ಮೇಲೆ ಬೇಡಿಕೊ; ದುಂಬಾಲು ಬೀಳು; ಯಾಚಿಸು; ಅಂಗಲಾಚಿಕೊ.
  26. lay the fire ಹೊತ್ತಿಸುವುದಕ್ಕೆ ಸೌದೆಯನ್ನು, ಉರುವಲನ್ನು – ಜೋಡಿಸು, ಅಣಿಮಾಡು, ಸಿದ್ಧಪಡಿಸು.
  27. lay to heart (ಏನಾದರೂ ವಿಷಯವನ್ನು) ಮನಸ್ಸಿಗೆ ತೆಗೆದುಕೊ; ಗಂಭೀರವಾಗಿ ಚಿಂತಿಸು; ತೀರ್ವವಾಗಿ ಪರ್ಯಾಲೋಚಿಸು.
  28. lay to sleep (or rest)
    1. ಮಲಗಿಸು.
    2. (ರೂಪಕವಾಗಿ) ಹೂಳು; ಗೋರಿಮಾಡು; ಸಮಾಧಿ ಮಾಡು.
  29. lay wait ಕಾದಿರು; ಹೊಂಚು ಹಾಕಿಕೊಂಡಿರು.
  30. lay waste ಹಾಳುಗೆಡವು; ನೆಲಸಮ ಮಾಡು; ಧ್ವಂಸಮಾಡು.
See also 1lay  3lay  4lay  5lay
2lay ಲೇ
ನಾಮವಾಚಕ
  1. ಯಾವುದಾದರೂ ಒಂದು (ಮುಖ್ಯವಾಗಿ ದೇಶ) ಇರುವ – ರೀತಿ, ಸ್ಥಾನ ಯಾ ದಿಕ್ಕು.
  2. (ಅಶಿಷ್ಟ) ಸಂಭೋಗದಲ್ಲಿನ ಜೊತೆಗಾರ್ತಿ.
  3. (ಹಗ್ಗದ ಎಳೆಗಳ, ಹುರಿಯ) ತಿರುಚು; ತಿರುಚಿನ ಮೊತ್ತ ಯಾ ದಿಕ್ಕು.
  4. ಉದ್ಯೋಗ; ಕಸುಬು; ವೃತ್ತಿ; ಕೆಲಸ; ಜೀವನೋಪಾಯ.
ಪದಗುಚ್ಛ

in lay (ಹೇಂಟೆಯ ವಿಷಯದಲ್ಲಿ) ನಿಯತಕಾಲಿಕವಾಗಿ ಮೊಟ್ಟೆ ಹಾಕುತ್ತಿರುವ.

See also 1lay  2lay  4lay  5lay
3lay ಲೇ
ಗುಣವಾಚಕ
  1. ಲೌಕಿಕ; ಅದೀಕ್ಷಿತ; (ಕ್ರೈಸ್ತ) ದೀಕ್ಷೆ ಪಡೆದಿಲ್ಲದ; ಕ್ರೈಸ್ತ ಪಾದ್ರಿಯಲ್ಲದ: lay-preachers (ಕ್ರೈಸ್ತ) ದೀಕ್ಷೆ ಪಡೆಯದ ಯಾ ಅದೀಕ್ಷಿತ ಧರ್ಮೋಪದೇಶಕರು.
  2. (ಕ್ರೈಸ್ತಧರ್ಮ) ಅದೀಕ್ಷಿತ ಉಪದೇಶಕನ ಯಾ ಅವನು ಮಾಡಿದ.
  3. (ಮುಖ್ಯವಾಗಿ ನ್ಯಾಯಶಾಸ್ತ್ರಕ್ಕೆ ಯಾ ವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ) ಕಸಬಿನವನಲ್ಲದ; ವೃತ್ತಿಗೆ ಸೇರದ; ಅಪರಿಣತ; ತಜ್ಞನಲ್ಲದ; ಅತಜ್ಞ; ಪರಿಶ್ರಮವಿಲ್ಲದ: the prevention of disease is too technical for lay interference ರೋಗ ನಿವಾರಣೆಯು ಅಪರಿಣತರು ತಲೆಹಾಕಕೂಡದಂಥ ತಾಂತ್ರಿಕ ವಿಷಯ.
  4. (ವೃತ್ತಿ) ಪರಿಣತರಲ್ಲದವರ; ಅಪರಿಣತರ ಯಾ ಅವರು ಮಾಡಿದ.
See also 1lay  2lay  3lay  5lay
4lay ಲೇ
ನಾಮವಾಚಕ
  1. ಹಾಡುಗಬ್ಬ; ಗೀತಕವನ; ಕಥನ ಕವನ; ಹಾಡುವುದಕ್ಕಾಗಿ ರಚಿಸಿದ ಚಿಕ್ಕ ಭಾವಗೀತೆ ಯಾ ಕಥನಕವಿತೆ.
  2. (ಕಾವ್ಯಪ್ರಯೋಗ) ಹಾಡು; ಗೀತೆ; ಕವನ; ಪದ್ಯ.
  3. (ಕಾವ್ಯಪ್ರಯೋಗ) ಹಕ್ಕಿಗಳ ಹಾಡು, ಉಲಿ.
See also 1lay  2lay  3lay  4lay
5lay ಲೇ
ಕ್ರಿಯಾಪದ

1lie ಪದದ ಭೂತರೂಪ.