1lay
ಲೇ
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ laid ಉಚ್ಚಾರಣೆ ಲೇಡ್)
ಸಕರ್ಮಕ ಕ್ರಿಯಾಪದ
- (ಒಂದು ಸಮತಲದ ಮೇಲೆ) (ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಇರಿಸು; ಹಾಸು; ಮಡಗು; ಮಲಗಿಸು.
- (ಒಂದು ನಿರ್ದಿಷ್ಟ ಯಾ ಗೊತ್ತಾದ ಸ್ಥಾನ ಯಾ ಸ್ಥಿತಿಯಲ್ಲಿ) ಇಡು; ಇರಿಸು; ನಿಲ್ಲಿಸು; ಸ್ಥಾಪಿಸು: laid his hand on her arm ಅವಳ ತೋಳಿನ ಮೇಲೆ ತನ್ನ ಕೈಯನ್ನಿಟ್ಟನು. lay a carpet on the floor ಯಾ lay the floor with a carpet ನೆಲದ ಮೇಲೆ ಜಮಖಾನೆ ಹಾಸು. lay the land fallow ಜಮೀನನ್ನು ಪಾಳು ಬಿಡು.
- ಹಾಕು; ಸ್ಥಾಪಿಸು: lay the foundations ತಳಪಾಯ ಹಾಕು.
- (ಹೆಣ್ಣು ಪಕ್ಷಿಯ ವಿಷಯದಲ್ಲಿ) (ಮೊಟ್ಟೆ) ಇಡು; ಹಾಕು.
- ಮಲಗುವಂತೆ – ಕೆಡೆ, ಕೆಡವು; ಅಡ್ಡಡ್ಡಲಾಗಿ ಕೆಳಕ್ಕೆ ಬೀಳಿಸು.
- (ಗಾಳಿ, ಮಳೆಗಳ ವಿಷಯದಲ್ಲಿ) (ಪಯಿರನ್ನು) ನೆಲಕ್ಕೆ – ಕೆಡವು; ಬೀಳಿಸು, ಉರುಳಿಸು.
- (ಸಮುದ್ರ, ಗಾಳಿ, ಧೂಳು, ಶಂಕೆ, ಭಯ, ಭೂತ, ಮೊದಲಾದವನ್ನು) ಅಣಗಿಸು; ಅಡಗಿಸು; ನಿವಾರಿಸು; ಶಾಂತಮಾಡು; ಶಮನಗೊಳಿಸು: what shall we do to lay his doubts? ಅವನ ಶಂಕೆಗಳನ್ನು ನಿವಾರಿಸಲು ನಾವೇನು ಮಾಡಬೇಕು?
- (ವಿಷಯವನ್ನು, ಸಂಗತಿಯನ್ನು) ಪರಿಶೀಲನೆಗಾಗಿ – ಇಡು, ಇರಿಸು, ಮಂಡಿಸು: the foreign secretary etc. will lay the papers on the table ವಿದೇಶ ಕಾರ್ಯದರ್ಶಿ ಮೊದಲಾದ(ಶಾಸನಸಭೆಯ) ಸದಸ್ಯರ ಅವಗಾಹನೆಗಾಗಿ ಕಾಗದ ಪತ್ರಗಳನ್ನು ಮೇಜಿನ ಮೇಲೆ ಇಡುತ್ತಾರೆ.
- (ಆಧಾರವಾಗಿ ಯಾ ಪ್ರಾರಂಭವಾಗಿ) ಇಡು; ಸ್ಥಾಪಿಸು.
- (ವ್ಯಕ್ತಿಯ ಮೇಲೆ) ತಪ್ಪು ಹೊರಿಸು; ಆಪಾದನೆ ಮಾಡು; ತಪ್ಪನ್ನು (ವ್ಯಕ್ತಿಯ) ತಲೆಗೆ ಕಟ್ಟು, ಸೆರಗಿಗೆ ಕಟ್ಟು.
- (ಒಂದು ಸ್ಥಳದಲ್ಲಿ) ಸ್ಥಾಪಿಸು; ನೆಲೆಗೊಳಿಸು: the scene of the tale is laid in Mysore ಕಥೆಯ ದೃಶ್ಯದ ನೆಲೆ ಮೈಸೂರಿನಲ್ಲಿದೆ.
- (ಬಲೆ, ಜಾಲ, ಬೋನು, ಮೊದಲಾದವನ್ನು) ಇಡು; ಇರಿಸು; ಹಾಕು; ಒಡ್ಡು; ಉರುಳಿಡು: lay a snare, trap ಬೋನಿಡು.
- (ಯೋಜನೆ, ಹಂಚಿಕೆ, ಮೊದಲಾದವನ್ನು) ತಯಾರಿಸು; ಸಿದ್ಧ ಮಾಡು; ಹಾಕು.
- (ಮೇಜನ್ನು ಊಟಕ್ಕಾಗಿ) ಸಿದ್ಧಮಾಡು; ಅಣಿ ಮಾಡು.
- (ಬೆಂಕಿ ಮಾಡಲು) ಕಟ್ಟಿಗೆ ಮೊದಲಾದವನ್ನು – ಸಿದ್ಧಗೊಳಿಸು, ಅಣಿಗೊಳಿಸು.
- (ಯಾವುದೇ ಮೇಲ್ಮೈ ಮೇಲೆ) (ಜಮಖಾನೆ, ಒಣಹುಲ್ಲು, ಮೊದಲಾದವನ್ನು) ಹಾಸು; ಹೊದೆಸು; ಹರಡು.
- (ಯಾವುದೇ ಮೇಲ್ಮೈ ಮೇಲೆ) (ಲೋಹವನ್ನು) ಹಚ್ಚು; ಹೊದಿಸು.
- (ಬಣ್ಣ ಮೊದಲಾದವನ್ನು ಮೇಲ್ಮೈ ಮೇಲೆ ವರಿಸೆಗಳಾಗಿ) ತೊಡೆ; ಬಳಿ; ಹಚ್ಚು; ಲೇಪಿಸು; ಸವರು.
- (ಅಶಿಷ್ಟ) (ಮುಖ್ಯವಾಗಿ ಹೆಂಗಸನ್ನು) ಸಂಭೋಗಿಸು; ಸಂಭೋಗ ಮಾಡು.
- (ಹಣ, ತಲೆ, ಪ್ರಾಣ, ಮೊದಲಾದವನ್ನು) ಒಡ್ಡು; ಬಾಜಿಕಟ್ಟು; ಪಣವೊಡ್ಡು; ಪಂಥವಾಗಿಡು; ಪೈಜೆಯಿಡು; ಬಾಜಿಯಾಗಿಡು: I lay you ten to one that he wins ಅವನು ಗೆಲ್ಲುತ್ತಾನೆಂದು ನಾನು ಒಂದಕ್ಕೆ ಹತ್ತು ಬಾಜಿ ಕಟ್ಟುತ್ತೇನೆ.
- ತೊಡಗಿಸು: lay hounds on scent ವಾಸನೆಯಿಂದ ಸುಳಿವು ತಿಳಿಯಲು, ಜಾದು ತಿಳಿಯಲು ಬೇಟೆ ನಾಯಿಗಳನ್ನು ತೊಡಗಿಸು, ಬಿಡು.
- (ಅಂಗ ಮೊದಲಾದವನ್ನು) ನಿರ್ದಿಷ್ಟ ಸ್ಥಾನದಲ್ಲಿಟ್ಟುಕೊ: horse laid his ears back ಕುದುರೆ ತನ್ನ ಕಿವಿಗಳನ್ನು ಹಿಂದಕ್ಕೆ ಇಟ್ಟುಕೊಂಡಿತು.
- (ಫಿರಂಗಿಯನ್ನು) (ಗುರಿಗೆ ಹೊಡೆಯಲು) ಸರಿಯಾದ ಜಾಗದಲ್ಲಿರಿಸು; ತಕ್ಕ ಸ್ಥಾನದಲ್ಲಿರಿಸು.
- (ಮುಖ್ಯವಾಗಿ ಯಾವುದಕ್ಕೋ ಹಕ್ಕನ್ನು) ಹೂಡು; ಮಂಡಿಸು; ಮುಂದೊಡ್ಡು; ಮುಂದಿಡು: lay claim to ಹಕ್ಕು ಹೂಡು.
- (ಅರ್ಜಿದಾರನ ವಿಷಯದಲ್ಲಿ) (ನಷ್ಟ ಪರಿಹಾರದ ಮೊತ್ತವನ್ನು) ನಿಶ್ಚಯಿಸು; ಗೊತ್ತು ಮಾಡು; ನಿರ್ಧರಿಸು; ನಿರ್ಣಯಿಸು.
- (ಕೇಡನ್ನು ಯಾವುದೇ ಕಾರಣದ) ಪರಿಣಾಮವಾಗಿ, ಪರಿಣಾಮವೆಂದು – ನಿರೂಪಿಸು, ತೋರಿಸು.
- (ದಂಡ, ಆಜ್ಞೆ, ಆಭಾರ, ದೂರು, ನಿಂದೆ, ಹೊರೆ, ತೆರಿಗೆ) ಹಾಕು; ಹೊರಿಸು; ವಿಧಿಸು; ಹೇರು.
- (ಕೋಲು ಮೊದಲಾದವನ್ನು) ಕೆಳಕ್ಕೆ – ತರು, ಬರಿಸು, ಇಳಿಸು.
- (ಅಸ್ತಿಭಾರ, ನೆಲ, ಇಟ್ಟಿಗೆಗಳು, ನೀರಿನಡಿಯ ಕೇಬಲ್ಗಳನ್ನು, ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಹೊರಿಸು; ಅಣಿಯಾಗಿಸು; ಅಣಿಗೊಳಿಸು; ಅಳವಡಿಸು.
- (ಹುರಿಯನ್ನು ಯಾ ಎಳೆಗಳನ್ನು) ಹೊಸೆದು (ಹಗ್ಗ) ಮಾಡು.
- (ನೌಕಾಯಾನ) (ಭೂಮಿ ಮೊದಲಾದವುಗಳ ವಿಷಯದಲ್ಲಿ) ದಿಗಂತಕ್ಕಿಂತ ಕೆಳಗೆ ಕಾಣುವಷ್ಟು ದೂರ (ಹಡಗನ್ನು) – ತೆಗೆದುಕೊಂಡು ಹೋಗು, ಒಯ್ಯು, ಒಯ್ಯಿ, ನಡೆಸು.
- (ಯೋಜನೆ, ನಿವೇಶನಗಳನ್ನು) (ಒಂದು ಯೋಜನೆಯ ಪ್ರಕಾರ) ರೂಪಿಸು; ವಿನ್ಯಾಸ ಮಾಡು; ರೂಪುಗೊಳಿಸು; ರೂಪುರೇಖೆ ರಚಿಸು: lay the ground ನೆಲದ (ಮುಖ್ಯವಾಗಿ ಮನೆ ಕಟ್ಟುವ ಜಾಗ, ತೋಟದ ಭೂಮಿ, ಮೊದಲಾದವುಗಳ) ವಿನ್ಯಾಸ ರಚಿಸು.
ಅಕರ್ಮಕ ಕ್ರಿಯಾಪದ
(ನೌಕಾಯಾನ ಯಾ ಅಸಂಸ್ಕೃತ)
- = 1lie.
- (ಹೆಣ್ಣು ಪಕ್ಷಿಯ ವಿಷಯದಲ್ಲಿ) ಮೊಟ್ಟೆ – ಇಡು, ಹಾಕು.
ಪದಗುಚ್ಛ
- lay aboard (ಒಳಕ್ಕೆ ನುಗ್ಗಿ ಆಕ್ರಮಣ ಮಾಡುವುದಕ್ಕಾಗಿ) ಒಂದು ಹಡಗಿನ ಪಕ್ಕಕ್ಕೆ ಮತ್ತೊಂದು ಹಡಗನ್ನು ತೆಗೆದುಕೊಂಡು ಹೋಗು, ನಡೆಸು.
- lay about (ಆಡುಮಾತು) ಹೊಡೆ; ಬಡಿ; ಇಕ್ಕು; ಚಚ್ಚು.
- lay about one
- ಸುತ್ತಲೂ ಹೊಡೆ; ಎಲ್ಲ ಕಡೆಯಿಂದಲೂ ಹೊಡೆ: he drew his sword and laid about him ಅವನು ಕತ್ತಿಯನ್ನು ಸೆಳೆದು ಸುತ್ತಲೂ ಬೀಸಿದನು.
- (ರೂಪಕವಾಗಿ) ಸಿಕ್ಕಾಪಟ್ಟೆ ಖಂಡಿಸು; ಗೊತ್ತುಗುರಿಯಿಲ್ಲದೆ ಟೀಕಿಸು.
- lay aside (or by)
- (ಉಪಯೋಗ, ಆಚರಣೆ, ಯೋಚನೆಗಳನ್ನು) ನಿಲ್ಲಿಸಿ ಬಿಡು; ಬಿಟ್ಟು ಬಿಡು; ಕೈ ಬಿಡು; ಪಕ್ಕಕ್ಕಿರಿಸು; ಬದಿಗಿಡು; ತೊರೆ; ತ್ಯಜಿಸು.
- (ಹಣ ಮೊದಲಾದವನ್ನು ಮುಂದಿನ ಉಪಯೋಗಕ್ಕಾಗಿ) ಮಿಗಿಸು; ಎತ್ತಿಡು; ಉಳಿಸು; ಉಳಿತಾಯ ಮಾಡು.
- lay back ನೆಟ್ಟಗಿದ್ದುದನ್ನು ಹಿಂದಕ್ಕೆ ವಾಲಿಸು, ವಾಲುವಂತೆ ಮಾಡು.
- lay bare
- ಬೆತ್ತಲೆಮಾಡು; ನಗ್ನಗೊಳಿಸು.
- ಬಯಲು ಮಾಡು; ಹೊರಗೆಡಹು; ಬಹಿರಂಗಗೊಳಿಸು; ರಟ್ಟುಮಾಡು.
- lay blows (ಏಟು) ಹೊಡಿ; ಚಚ್ಚು; ಬಾರಿಸು.
- lay claim to ತನ್ನದೇ ಎಂದು ವಾದಿಸು; ಹಕ್ಕುಹೂಡು.
- lay down
- (ನೆಲ ಮೊದಲಾದವುಗಳ ಮೇಲೆ) ಇಡು; ಇರಿಸು; ಮಡಗು.
- (ಅಧಿಕಾರ, ಆಸೆಗಳನ್ನು) ಬಿಟ್ಟುಬಿಡು; ತೊರೆ; ತ್ಯಜಿಸು; ಬಿಟ್ಟುಕೊಡು.
- (ನಿಯಮ, ತತ್ತ್ವ. ಮಾರ್ಗಗಳನ್ನು) ಹಾಕು; ವಿಧಿಸು; ರಚಿಸು; ರೂಪಿಸು; ನಿರ್ದಿಷ್ಟ ರೂಪದಲ್ಲಿ ಇಡು.
- (ಬಾಜಿ ಹಣ) ಕೊಟ್ಟುಬಿಡು.
- ಪಣವೊಡ್ಡು; ಬಾಜಿಕಟ್ಟು.
- (ಹಡಗನ್ನು) ಕಟ್ಟು; ನಿರ್ಮಿಸು ಯಾ ಕಟ್ಟಲು ಪ್ರಾರಂಭಿಸು.
- (ರೈಲು ಮಾರ್ಗವನ್ನು) ಹಾಕು; ನಿರ್ಮಿಸು; ರಚಿಸು ಯಾ ರಚಿಸಲು ಪ್ರಾರಂಭಿಸು.
- (ದ್ರಾಕ್ಷಾಮದ್ಯವನ್ನು ನೆಲಮಾಳಿಗೆಯಲ್ಲಿ) ಇಡು; ಶೇಖರಿಸು; ದಾಸ್ತಾನುಮಾಡು; ಸಂಗ್ರಹಿಸಿಡು; ಕೂಡಿಡು.
- (ನಕ್ಷೆ ಮೊದಲಾದವನ್ನು) ಕಾಗದದ ಮೇಲೆ – ನಮೂದಿಸು, ಬರೆದಿಡು.
- (ಪ್ರಾಣವನ್ನು) ಬಲಿಕೊಡು; ತ್ಯಾಗಮಾಡು; ತೆರು; ಅರ್ಪಿಸು; ಆಹುತಿಕೊಡು.
- (ಹುಲ್ಲು, ಕುದುರೆ ಮೇವು, ಮೊದಲಾದವನ್ನು ಬೆಳೆಸಿ) ಜಮೀನನ್ನು ಹುಲ್ಲುಗಾವಲನ್ನಾಗಿ – ಮಾಡು, ಬದಲಾಯಿಸು.
- (ಮುಖ್ಯವಾಗಿ ಜನಪ್ರಿಯ ಸಂಗೀತವನ್ನು) ಧ್ವನಿಮುದ್ರಿಸು; ರೆಕಾರ್ಡು ಮಾಡು.
- lay hold on (or of)
- ಹಿಡಿದುಕೊ; ಹಿಡಿ; ಭದ್ರವಾಗಿ ಹಿಡಿದುಕೊ.
- (ರೂಪಕವಾಗಿ) (ಎದುರಾಳಿಯ ಕೊರತೆ, ದೌರ್ಬಲ್ಯ, ಮೊದಲಾದವನ್ನು)ಸ್ವಪ್ರಯೋಜನಕ್ಕೆ ಬಳಸಿಕೊ.
- lay in
- (ತನಗೋಸ್ಕರ) ಕೂಡಿಡು; ಶೇಖರಿಸು; ಸಂಗ್ರಹಿಸಿಕೊ.
- (ಆಡುಮಾತು) ಏಟುಗಳ ಮಳೆಯನ್ನು – ಕರೆ, ಸುರಿಸು; ಒಂದೇ ಸಮನೆ ಹೊಡೆ, ಬಡಿ.
- lay into (ಆಡುಮಾತು) ಸದೆಬಡಿ; ಚಚ್ಚಿಹಾಕು; ಚೆನ್ನಾಗಿ ಶಿಕ್ಷಿಸು ಯಾ ಬಯ್ಯು.
- lay it on = ಪದಗುಚ್ಛ \((7)\).
- lay off
- (ಕೆಲಸವಿಲ್ಲದಿರುವುದರಿಂದ ತಾತ್ಕಾಲಿಕವಾಗಿ) ಕೆಲಸದಿಂದ – ತೆಗೆದುಹಾಕು, ವಜಾಮಾಡು; ಮನೆಗೆ ಕಳುಹಿಸು.
- (ಆಡುಮಾತು) (ಮಾಡುವುದನ್ನು) ನಿಲ್ಲಿಸು; ಬಿಟ್ಟುಬಿಡು.
- lay on
- (ಉಪಾಹಾರ, ಮನರಂಜನೆ, ವಾಹನ, ಮೊದಲಾದ ಸೌಲಭ್ಯ, ಸೌಕರ್ಯಗಳನ್ನು) ಒದಗಿಸು; ದೊರಕಿಸು.
- (ತೆರಿಗೆ, ದಂಡ, ಆಜ್ಞೆ, ಮೊದಲಾದವನ್ನು) ಹಾಕು; ವಿಧಿಸು; ಹೊರಿಸು; ಹೇರು.
- (ಏಟುಗಳನ್ನು) ಬಾರಿಸು; ಕೊಡು; ಹಾಕು.
- (ಬಣ್ಣ ಮೊದಲಾದವನ್ನು) ಬಳಿ; ಹಚ್ಚು; ಸವರು; ಲೇಪಿಸು; ತೊಡೆ.
- (ಬಲವಾಗಿ) ಏಟು ಹಾಕು; ಹೊದೆ; ಬಡಿ.
- (ಚಾಟಿ ಮೊದಲಾದವುಗಳಿಂದ) ಬಲವಾಗಿ ಬಾರಿಸು.
- (ಅನಿಲ, ನೀರು, ವಿದ್ಯುಚ್ಛಕ್ತಿಗಳನ್ನು ಸರಬರಾಜು ಮಾಡುವ) ಕೊಳವೆ ಮೊದಲಾದವನ್ನು – ಹಾಕು, ಒದಗಿಸು.
- lay out
- ಹರಡು; ಹರವು.
- ಪ್ರದರ್ಶಿಸು; ಪ್ರಕಟಗೊಳಿಸು; ಅನಾವರಣಮಾಡು; ಕಾಣುವಂತೆ ತೆರೆದಿಡು.
- (ಕಳೇಬರವನ್ನು) ಹೂಳಲು ಸಿದ್ಧಪಡಿಸು, ತಯಾರು ಮಾಡು.
- (ಆಡುಮಾತು) ಹೊಡೆದು – ಪ್ರಜ್ಞೆತಪ್ಪಿಸು, ಮೂರ್ಛೆ ಬೀಳಿಸು.
- (ಮೈದಾನ, ನಿವೇಶನ, ಉದ್ಯಾನಗಳನ್ನು) ನಕಾಸೆಯ, ನಕ್ಷೆಯ ಪ್ರಕಾರ – ರೂಪಿಸು, ವಿನ್ಯಾಸ ಮಾಡು, ವ್ಯವಸ್ಥೆಗೊಳಿಸು.
- (ಹಣ) ಖರ್ಚು ಮಾಡು; ವ್ಯಯಮಾಡು; ವೆಚ್ಚಮಾಡು.
- (ಆತ್ಮಾರ್ಥಕ) (ಯಾವುದೋ ಒಂದನ್ನು ಮಾಡಲು) ಶ್ರಮಪಡು; ಶ್ರಮವಹಿಸು; ಕಷ್ಟತೆಗೆದುಕೊ: laid themselves out to help ಸಹಾಯ ಮಾಡಲು ತಾವೇ ಶ್ರಮ ವಹಿಸಿದರು.
- (ಅಶಿಷ್ಟ) ಕೊಲ್ಲು; ಸಾಯಿಸು; ಕೊಂದುಹಾಕು.
- (ಆಡುಮಾತು) (ಹುಟ್ಬಾಲ್ ಮೊದಲಾದವುಗಳಲ್ಲಿ) (ಆಟಗಾರನನ್ನು) ತಾತ್ಕಾಲಿಕವಾಗಿ ಆಟವಾಡದಿರುವಂತೆ ಮಾಡು; ತಾತ್ಕಾಲಿಕವಾಗಿ ಕುಳ್ಳಿರಿಸು, ಹೊರಕ್ಕೆ ಕಳುಹಿಸು, ಆಚೆಗೆ ದೂಡು.
- (ಮುಷ್ಟಿಯುದ್ಧದಲ್ಲಿ ಮಲ್ಲನಿಗೆ) ಪ್ರಜ್ಞೆ ತಪ್ಪಿಸು.
- lay (stress, weight, emphasis) on (or upon) ಒತ್ತಿಹೇಳು; ಪ್ರಾಧಾನ್ಯಕೊಡು; ಮುಖ್ಯವೆಂದು ಪರಿಗಣಿಸು.
- lay table, cloth, breakfast, etc. ಊಟಕ್ಕೆ ಅಣಿಗೊಳಿಸು, ಸಿದ್ಧತೆಮಾಡು; ಕುರ್ಚಿ, ಮೇಜು, ಹಾಸು, ತಿಂಡಿತೀರ್ಥ, ಮೊದಲಾದವನ್ನು ಅಣಿಮಾಡು.
- lay up
- ಶೇಖರಿಸಿಡು; ಸಂಗ್ರಹಿಸಿಡು; ಕೂಡಿಡು; ಎತ್ತಿಡು; ತೆಗೆದಿಡು.
- (ವಾಹನವನ್ನು, ಹಡಗನ್ನು) ಬಳಕೆಯಿಂದ ತೆಗೆದುಬಿಡು.
- (ಹಣವನ್ನು) ಉಳಿಸು; ಮಿಗಿಸು; ಉಳಿತಾಯ ಮಾಡು.
- (ಕರ್ಮಣಿಪ್ರಯೋಗ) ಹಾಸಿಗೆ ಹಿಡಿದಿರು; ಕಾಯಿಲೆ ಮಲಗಿರು.
- (ಕರ್ಮಣಿಪ್ರಯೋಗ) (ಕಾಯಿಲೆ ಮೊದಲಾದವುಗಳಿಂದ) ಮನೆಯೊಳಗಿರು.
- (ಹಗ್ಗವನ್ನು) ಅಡ್ಡಡ್ಡಲಾಗಿ ಪೇರಿಸು.
ನುಡಿಗಟ್ಟು
- lay a charge (ವ್ಯಕ್ತಿಯ ಮೇಲೆ) ದೋಷಾರೋಪಣೆ ಮಾಡು; ದೋಷ – ಹೊರಿಸು, ಕೂರಿಸು; ಆಪಾದನೆ ಹೊರಿಸು.
- lay an information ಕಾನೂನನ್ನನುಸರಿಸಿ ಆಪಾದನೆ ಹೊರಿಸು; ಕಾಯಿದೆ ಪ್ರಕಾರ ತಪ್ಪು ಹೊರಿಸು.
- lay at (or to) the door of (ಜವಾಬ್ದಾರಿ, ತಪ್ಪು, ಮೊದಲಾದವನ್ನು) ಮೇಲೆ ಹೊರಿಸು; ಮೇಲೆ ಆರೋಪಿಸು.
- lay by the $^1$heels.
- ದಸ್ತಗಿರಿ ಮಾಡು; ಕೋಳ ತೊಡಿಸು.
- (ಎದುರಾಳಿಯನ್ನು) ಕಾಲು ಹಿಡಿದು ಎತ್ತಿ ಎಸೆ.
- lay down one’s arms ಕೈದುಗಳನ್ನು ಕೆಳಗಿಡು; ಅಸ್ತ್ರಗಳನ್ನು ಕೆಳಗಿಡು; ಶರಣಾಗತನಾಗು.
- lay down the 1law.
- lay fast ಸೆರೆಯಲ್ಲಿಡು; ಬಂಧನದಲ್ಲಿಡು.
- lay (fault) to person’s charge (ತಪ್ಪನ್ನು) ವ್ಯಕ್ತಿಯದೆನ್ನು; ವ್ಯಕ್ತಿಯ ತಲೆಗೆ ಕಟ್ಟು.
- lay great store by (or on or upon) ಹೆಚ್ಚು ಬೆಲೆಯುಳ್ಳದ್ದಾಗಿ ಭಾವಿಸು; ಹೆಚ್ಚು ಬೆಲೆಕೊಡು; ಮಹತ್ವದ್ದೆಂದು ತಿಳಿ.
- lay hands on
- ತುಡುಕು; ಹಿಡಿದುಕೊ.
- ವಶಪಡಿಸಿಕೊ; ಸ್ವಾಧೀನಪಡಿಸಿಕೊ; ತನ್ನದಾಗಿಸಿಕೊ.
- ಸ್ವಂತಕ್ಕಾಗಿ ಬಳಸಿಕೊ; ತನಗಾಗಿ ಉಪಯೋಗಿಸಿಕೊ.
- (ಯಾರ ಮೇಲಾದರೂ) ಕೈಮಾಡು; ಹಲ್ಲೆ ಮಾಡು; ಆಕ್ರಮಣ ಮಾಡು.
- ಸಿಕ್ಕು; ದೊರೆ; ಕಾಣು: cannot lay my hands upon it ಅದು ನನ್ನ ಕೈಗೆ ಸಿಕ್ಕುವಂತಿಲ್ಲ.
- (ಕ್ರೈಸ್ತಧರ್ಮ) ಸ್ಥಿರೀಕರಿಸುವಾಗ ಯಾ ದೀಕ್ಷೆ ನೀಡುವಾಗ ಕೈಗಳನ್ನು ಮೇಲೆ ಇಡು.
- lay hands on oneself ಆತ್ಮಹತ್ಯೆ ಮಾಡಿಕೊ; ಪ್ರಾಣ ಕಳೆದುಕೊ.
- lay heads together ಸಮಾಲೋಚಿಸು; ಸಮಾಲೋಚನೆ ನಡೆಸು; ಕೂಡಿ ಮಾತನಾಡು, ಆಲೋಚಿಸು.
- lay it on thick (or with a trowel) (ಆಡುಮಾತು) ಅತಿಯಾಗಿ, ಮಿತಿಮೂರಿ – ಹೊಗಳು; ವಿಪರೀತ ಮುಖಸ್ತುತಿ ಮಾಡು.
- lay low ಸೊಕ್ಕು ಮುರಿ; ಹಮ್ಮಡಗಿಸು; ಅಹಂಕಾರ ಅಡಗಿಸು; ತಲೆ ತಗ್ಗುವಂತೆ, ಬಗ್ಗುವಂತೆ – ಮಾಡು.
- lay one’s $^2$account with (ಯಾವುದನ್ನೇ) ಲೆಕ್ಕಾಚಾರದಲ್ಲಿ ಸೇರಿಸಿಕೊ.
- lay one’s bones (ನಿರ್ದಿಷ್ಟ ಪ್ರದೇಶವೊಂದರಲ್ಲಿ) ಸಮಾಧಿಯಾಗು; ಶರೀರ – ತ್ಯಜಿಸು, ಬಿಡು; ದೇಹತ್ಯಾಗ ಮಾಡು.
- lay one’s $^1$hand on (ಯಾವುದೇ ವಸ್ತು) ಕೈಗೆ ಸಿಕ್ಕು; ದೊರೆ; ಲಭ್ಯವಾಗು.
- lay one’s hopes on (ಒಬ್ಬನ, ಒಂದರ) ಮೇಲೆ ಆಸೆ ಇಡು; ಮೇಲೆ ಭರವಸೆ ಇಟ್ಟುಕೊ.
- lay on your oars (ಹುಟ್ಟುಗಳನ್ನು ನೀರಿನಲ್ಲಿ ಇಳಿಬಿಟ್ಟು) ಹುಟ್ಟು ಹಾಕುವುದನ್ನು ನಿಲ್ಲಿಸು.
- lay open
- (ಅಂಗದ ಮೇಲಿನ) ಚರ್ಮವನ್ನು ಸೀಳು.
- ವಿವರಿಸು; ವಿಶದಗೊಳಿಸು.
- ತೆರೆದಿಡು; ತೆರೆದು ತೋರಿಸು; ಬಹಿರಂಗಪಡಿಸು; ಪ್ರದರ್ಶಿಸು; ಪ್ರಕಟಿಸು.
- lay open to (ಟೀಕೆ, ಖಂಡನೆ, ಮೊದಲಾದವುಗಳಿಗೆ) ಒಡ್ಡು; ಒಳಪಡಿಸು; ಪಕ್ಕಾಗುವಂತೆ ಮಾಡು.
- lay person under contribution (ವ್ಯಕ್ತಿಯನ್ನು) ತೆರುವಂತೆ, ಕೊಡುವಂತೆ – ಮಾಡು.
- lay person under necessity (ವ್ಯಕ್ತಿಯನ್ನು) ಕಟ್ಟುಬೀಳುವಂತೆ ಮಾಡು; ಒತ್ತಾಯಿಸು; ಒತ್ತಾಯಕ್ಕೆ ಸಿಲುಕಿಸು; ಕಟ್ಟಿಗೆ ಬೀಳಿಸು, ಒಳಗಾಗಿಸು.
- lay person under obligation (ಸಹಾಯ ಮೊದಲಾದವನ್ನು ಮಾಡಿ, ವ್ಯಕ್ತಿಯನ್ನು) ಋಣಿಯಾಗಿಸು; ಋಣಿಯಾಗಿ ಮಾಡು; ದಾಕ್ಷಿಣ್ಯಕ್ಕೊಳಗಾಗಿಸು; ಹಂಗಿಗೆ ಬೀಳಿಸು.
- lay seize to
- ಮುತ್ತಿಗೆ ಹಾಕು.
- ಮೇಲಿಂದ ಮೇಲೆ ಬೇಡಿಕೊ; ದುಂಬಾಲು ಬೀಳು; ಯಾಚಿಸು; ಅಂಗಲಾಚಿಕೊ.
- lay the fire ಹೊತ್ತಿಸುವುದಕ್ಕೆ ಸೌದೆಯನ್ನು, ಉರುವಲನ್ನು – ಜೋಡಿಸು, ಅಣಿಮಾಡು, ಸಿದ್ಧಪಡಿಸು.
- lay to heart (ಏನಾದರೂ ವಿಷಯವನ್ನು) ಮನಸ್ಸಿಗೆ ತೆಗೆದುಕೊ; ಗಂಭೀರವಾಗಿ ಚಿಂತಿಸು; ತೀರ್ವವಾಗಿ ಪರ್ಯಾಲೋಚಿಸು.
- lay to sleep (or rest)
- ಮಲಗಿಸು.
- (ರೂಪಕವಾಗಿ) ಹೂಳು; ಗೋರಿಮಾಡು; ಸಮಾಧಿ ಮಾಡು.
- lay wait ಕಾದಿರು; ಹೊಂಚು ಹಾಕಿಕೊಂಡಿರು.
- lay waste ಹಾಳುಗೆಡವು; ನೆಲಸಮ ಮಾಡು; ಧ್ವಂಸಮಾಡು.