ಹಿಮ್ಮಡಿಯಾಕಾರದ ಯಾ ಹಿಮ್ಮಡಿ ಸ್ಥಾನದ ವಸ್ತು (ಉದಾಹರಣೆಗೆ ಪಿಟೀಲು ಕಮಾನಿನ ಹಿಡಿ, ಗಾಲ್ ದಾಂಡಿನ ಕೊಕ್ಕೆ, ಹಡಗಿನ ಅಡಿಗಟ್ಟಿನ ಹಿಂಭಾಗದ ಕೊನೆ, ಮಣಿಕಟ್ಟಿನ ಮಗ್ಗುಲಲ್ಲಿರುವ ಅಂಗೈಯ ಕೆಳಭಾಗ).
at the heels of (ವ್ಯಕ್ತಿ, ಘಟನೆ, ಮೊದಲಾದವುಗಳ ವಿಷಯದಲ್ಲಿ) ಹಿಂದೆಯೇ; ಬೆನ್ನ ಹಿಂದೆಯೇ; ಬೆನ್ನಿಗೇ; ಹಿಂಬಾಲಿಸಿಕೊಂಡೇ: a crowd at his heels ಅವನ ಬೆನ್ನ ಹಿಂದೆಯೇ ಒಂದು ಗುಂಪು.
back on one’s heels:
(ಎದುರಾಳಿಯಿಂದ) ಹಿಮ್ಮೆಟ್ಟಿಸಲ್ಪಟ್ಟು; ಹಿಂದಕ್ಕೆ – ಸರಿಸಲ್ಪಟ್ಟು, ದೂಡಲ್ಪಟ್ಟು.
ಕಕ್ಕಾಬಿಕ್ಕಿಯಾಗಿ; ಗೊಂದಲಕ್ಕೆ ಬಿದ್ದು; ಗಾಬರಿಯಾಗಿ ಯಾ ಆಶ್ಚರ್ಯಗೊಂಡು.
be carried with the heels foremost ಹೆಣದಂತೆ ಸಾಗಿಸು; ಚಟ್ಟದ ಮೇಲೆ ಒಯ್ಯಲ್ಪಡು.
clap by the heels ಬಂಧಿಸು; ಸೆರೆಯಲ್ಲಿಡು; ಕಾಲಿಗೆ ಕೋಳ ತೊಡಿಸು: when they had seized upon him and clapped him by the heels ಅವರು ಅವನನ್ನು ತುಡುಕಿ ಸೆರೆಯಲ್ಲಿಟ್ಟಾಗ.
cool one’s heels (ಮುಖ್ಯವಾಗಿ ಇನ್ನೊಬ್ಬನ ಅನಾದರದಿಂದ) ಕಾಯಿಸಲ್ಪಡು: the producer let the actors cool their heels in the office ಆ ನಿರ್ಮಾಪಕನು ನಟರನ್ನು ಕಚೇರಿಯಲ್ಲಿ ಕಾಯಿಸಿದನು.
down at heel:
(ಪಾದರಕ್ಷೆಯ ವಿಷಯದಲ್ಲಿ) ಹಿಮ್ಮಡಿ ಭಾಗ ಸವೆದು ಹೋಗಿ, ಜೀರ್ಣವಾಗಿ.
(ವ್ಯಕ್ತಿಯ ವಿಷಯದಲ್ಲಿ) ಕೊಳಕಾಗಿ; ಹೊಲಸಾಗಿ; ಚೊಕ್ಕಟವಿಲ್ಲದೆ; ಅಚ್ಚುಕಟ್ಟಿಲ್ಲದೆ: very down at the heel in appearance ನೋಡುವುದಕ್ಕೆ ಬಹಳ ಕೊಳಕಾಗಿ.
kick one’s heels ಕಾಯುವಂತಾಗು; ಕಾಯುತ್ತಾ ನಿಂತಿರು: do not keep me here kicking my heels ನಾನು ಇಲ್ಲಿ ಸುಮ್ಮನೆ ಕಾಯುತ್ತಾ ನಿಂತಿರುವಂತೆ ಮಾಡಬೇಡ.
kick up one’s heels ವಿನೋದವಾಗಿರು; ವಿನೋದವಾಗಿ ಕಾಲಕಳೆ; ಕುಣಿದಾಡು; ನೆಗೆದಾಡು: grand father could still kick up his heels now and then ತಾತ ಇನ್ನೂ ಆಗಾಗ ಕುಣಿದಾಡಬಲ್ಲವನಾಗಿದ್ದ.
lay by the heels:
ದಸ್ತಗಿರಿ ಮಾಡು; ಕೋಳ ತೊಡಿಸು.
(ಎದುರಾಳಿಯನ್ನು) ಕಾಲು ಹಿಡಿದು ಎತ್ತಿ ಎಸೆ.
on the heels of = ನುಡಿಗಟ್ಟು \((1)\): famine often follows on the heels of war ಅನೇಕ ವೇಳೆ ಕ್ಷಾಮ ಯುದ್ಧವನ್ನು ಹಿಂಬಾಲಿಸಿಕೊಂಡೇ ಬರುತ್ತದೆ.
show a clean pair of heels ಓಡಿ ಹೋಗು; ಪರಾರಿಯಾಗು; ಕಂಬಿಕೀಳು; ಕಾಲಿಗೆ ಬುದ್ಧಿಹೇಳು; ಓಟಕೀಳು; ಪಲಾಯನ ಮಾಡು: the thief showed a clean pair of heels ಕಳ್ಳನು ಓಟಕಿತ್ತ.
(ನಾಯಿಯ ವಿಷಯದಲ್ಲಿ) ಹಿಂದೆಯೇ; ಹಿಂಬಾಲಿಸುತ್ತಾ:at a word from his owner the dog moved to heel ಯಜಮಾನನ ಒಂದು ಮಾತಿಗೇ ನಾಯಿ ಅವನ ಹಿಂದೆಯೇ ಹೋಯಿತು.
(ವ್ಯಕ್ತಿಯ ವಿಷಯದಲ್ಲಿ) ಅಂಕೆಯಲ್ಲಿ; ಹತೋಟಿಯಲ್ಲಿ; ಹಿಡಿತದಲ್ಲಿ; ನಿಯಂತ್ರಣದಲ್ಲಿ: it is hard to bring the eye to heel ಕಣ್ಣನ್ನು ಹತೋಟಿಗೆ ತರುವುದು ಕಷ್ಟ.
tread on one’s heel ಹಿಂದೆ ನುಗ್ಗಿಕೊಂಡು ಬರು; ಗುಂಪುಗುಂಪಾಗಿ ಹಿಂದೆಬರು.
trip up one’s heels ಕೆಳಕ್ಕೆ ಕೆಡವು; ಕೆಡವಿ ಹಾಕು; ಬೀಳಿಸು.
turn on one’s heel ಗಿರಕ್ಕನೆ ತಿರುಗು; ತಟಕ್ಕನೆ ಹಿಂದಕ್ಕೆ ತಿರುಗು: he turned upon his heel ಅವನು ತಟಕ್ಕನೆ ತಿರುಗಿಕೊಂಡ.
under the heel ಅಧೀನದಲ್ಲಿ; ಕಾಲಡಿಯಲ್ಲಿ; ತುಳಿಯಲ್ಪಟ್ಟು; ದಮನಕ್ಕೊಳಗಾಗಿ; ತುಳಿತಕ್ಕೊಳಗಾಗಿ; ಅದುಮಿಡಲ್ಪಟ್ಟು; ದಬ್ಬಾಳಿಕೆಗೆ ಈಡಾಗಿ: under the heel of a cruel invader ಕ್ರೂರ ದಾಳಿಕಾರನ ಕಾಲಡಿಯಲ್ಲಿ, ದಬ್ಬಾಳಿಕೆಯಲ್ಲಿ.