door ಡೋರ್‍
ನಾಮವಾಚಕ
  1. ಬಾಗಿಲು; ಕದ; ದ್ವಾರ.
  2. ಪ್ರವೇಶ; ಒಳಹೊಗುವ – ಮಾರ್ಗ, ಹಾದಿ, ದಾರಿ.
  3. ಹೊರಬರುವ ಮಾರ್ಗ; ನಿರ್ಗಮನ ದ್ವಾರ.
ಪದಗುಚ್ಛ
  1. lives next door ಪಕ್ಕದ ಮನೆಯಲ್ಲಿ ಯಾ ಕೋಣೆಯಲ್ಲಿ ವಾಸಮಾಡುತ್ತಾನೆ.
  2. out of doors ಮನೆಯ – ಹೊರಗೆ, ಆಚೆ; ಬಯಲಿನಲ್ಲಿ.
  3. three doors away ಮೂರು ಬಾಗಿಲು, ಮನೆ, ಕೋಣೆ – ಆಚೆ.
  4. within doors ಮನೆಯೊಳಗೆ.
ನುಡಿಗಟ್ಟು
  1. at death’s door ಸಾವಿನ ಹೊಸ್ತಿಲಲ್ಲಿ; ಮರಣಾಸನ್ನನಾಗಿ; ಪ್ರಾಣಾಂತಿಕದಲ್ಲಿ: ಮೃತ್ಯುಮುಖದಲ್ಲಿ.
  2. close the door to (ಸಂಧಾನ, ಮಾತುಕತೆ, ಮೊದಲಾದವುಗಳಿಗೆ) ಅವಕಾಶವಿಲ್ಲದಂತೆ ಮಾಡು; ಅಸಾಧ್ಯನಾಗುವಂತೆ ಮಾಡು; ಅಸಾಧ್ಯವಾಗಿಸು.
  3. darken one’s door (ಸಾಮಾನ್ಯವಾಗಿ ನಿಷೇಧಾರ್ಥದಲ್ಲಿ) ಹೊಸಲು ಮೆಟ್ಟು; ಬಾಗಿಲಿಗೆ ಸುಳಿ; ಭೇಟಿಕೊಡು.
  4. dead as a doors nail ಪೂರಾ ಸತ್ತ.
  5. deaf as a door nail ಪೂರಾ ಕಿವುಡಾದ.
  6. foot in the door ಅಂತಿಮ ವಿಜಯಕ್ಕೆ ಮೊದಲ ಹೆಜ್ಜೆ; ಕಟ್ಟ ಕಡೆಗೆ ಗೆಲವು ಲಭಿಸುವ ಸಂಭವ.
  7. lay at the door of (ಜವಾಬ್ದಾರಿ, ತಪ್ಪು, ಮೊದಲಾದವನ್ನು) ಮೇಲೆ ಹೊರಿಸು; ಮೇಲೆ ಆರೋಪಿಸು.
  8. leave the door open ಬಾಗಿಲು ತೆರೆದಿರು; ಯಾವುದೇ ವಿಷಯದಲ್ಲಿಸಂಧಾನಕ್ಕೆ, ಅಂತಿಮ ತೀರ್ಮಾನಕ್ಕೆ – ಅವಕಾಶ ಉಳಿಸಿರು.
  9. lie at the door of (ಜವಾಬ್ದಾರಿ, ತಪ್ಪು, ಮೊದಲಾದವು) ಮೇಲೆ ಹೊರಿಸಲಾಗು; ಮೇಲೆ ಆರೋಪಿತವಾಗು.
  10. next door to ಹತ್ತಿರಹತ್ತಿರವಾಗಿ; ಬಹುಮಟ್ಟಿಗೆ; ಮುಕ್ಕಾಲು ಮೂರುವೀಸೆ ಪಾಲು.
  11. open the door to ದಾರಿ ಮಾಡಿಕೊಡು; ಅವಕಾಶ ಕಲ್ಪಿಸು; ಸಾಧ್ಯಮಾಡು.
  12. packed to the doors ಆಚೆ ಕಳುಹಿಸು; ಹೊರಗಟ್ಟು; ಹೊರದೂಡು; ಹೊರಕ್ಕೆ ಹಾಕು.
  13. show one the door ಆಚೆ ಕಳುಹಿಸು; ಹೊರಗಟ್ಟು; ಹೊರದೂಡು; ಹೊರಕ್ಕೆ ಹಾಕು.