See also 1man
2man ಮ್ಯಾನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ manned, ವರ್ತಮಾನ ಕೃದಂತ manning).
  1. (ಕೋಟೆ, ಹಡಗು, ಮೊದಲಾದವುಗಳ ಕೆಲಸಕ್ಕಾಗಿ, ರಕ್ಷಣೆಗಾಗಿ) ಜನ ಒದಗಿಸು.
  2. (ನೌಕಾಯಾನ) (ಹಡಗಿನ ಒಂದು ಭಾಗದಲ್ಲಿ) ಜನರನ್ನು ಇರಿಸು, ಸ್ಥಾಪಿಸು.
  3. (ಹುದ್ದೆಗೆ, ಉದ್ಯೋಗಕ್ಕೆ, ಅಧಿಕಾರ ಸ್ಥಾನಕ್ಕೆ) ಜನರನ್ನು ನೇಮಿಸು.
  4. (ಮುಖ್ಯವಾಗಿ ಆತ್ಮಾರ್ಥಕವಾಗಿ) ಧೈರ್ಯ, ಉತ್ಸಾಹ, ಹುಮ್ಮಸ್ಸು ತುಂಬು; ಹುರಿದುಂಬು: manned herself for the task ಆ ಕೆಲಸಕ್ಕೆ ಧೈರ್ಯ ತುಂಬಿಕೊಂಡಳು.