1man
ಮ್ಯಾನ್
ನಾಮವಾಚಕ
(ಬಹುವಚನ men ಉಚ್ಚಾರಣೆ ಮೆನ್).
- ಮನುಷ್ಯ; ಮಾನವ; ಮನುಜ; ನರ: a man and a brother ನಮ್ಮಂತೆಯೇ ಮನುಷ್ಯ; ನಮ್ಮ ಅಣ್ಣತಮ್ಮ; ಸಹ ಮಾನವ.
- (ಅನಿರ್ದಿಷ್ಟ ಯಾ ಸಾಮಾನ್ಯ ಪ್ರಯೋಗ) ಒಬ್ಬ ಮನುಷ್ಯ; ಒಬ್ಬಾನೊಬ್ಬ; ವ್ಯಕ್ತಿ; ಆಳು: any man ಯಾವನೋ ಒಬ್ಬ; ಯಾರಾದರೊಬ್ಬ (ಮನುಷ್ಯ): no man is perfect ಯಾವನೂ ಪರಿಪೂರ್ಣನಲ್ಲ.
- ಮನುಷ್ಯಕುಲ; ಮನುಕುಲ; ಮನುಜ ಕುಲ; ಮಾನವ – ವರ್ಗ, ಕೋಟಿ; ಮಾನವತೆ: man is mortal ಮಾನವನು ಮರ್ತ್ಯ. man is born into trouble ಮನುಷ್ಯ ಹುಟ್ಟಿರುವುದೇ ಕಷ್ಟಕ್ಕಾಗಿ.
- ವಯಸ್ಕ; ಪ್ರೌಢ; ಹುಡುಗ ಯಾ ಹೆಂಗಸಲ್ಲದ ಪ್ರಾಪ್ತವಯಸ್ಸಿನ ಗಂಡಸು; ಪ್ರಾಯದ ಗಂಡು.
- ಪುರುಷ; ಗಂಡಸು.
- (ತಾಳ್ಮೆಗೆಟ್ಟಾಗ ಯಾ ಭಾವೋದ್ವೇಗವಿದ್ದಾಗ ಸಂಬೋಧನೆಯಾಗಿ) ಲೋ; ಮಹಾರಾಯ; ಅಯ್ಯಾ; ಮಹಾತ್ಮ: hurry up man (alive); ಬೇಗ ಮಾಡೋ, ಮಹಾರಾಯ.
- ಒಬ್ಬ; ಒಬ್ಬ ಮನುಷ್ಯ, ವ್ಯಕ್ತಿ: what can a man do in such a case? ಇಂಥ ಸಂದರ್ಭದಲ್ಲಿ ಒಬ್ಬನಿಂದೇನಾದೀತು?
- ಆಳು; ಇಸಮು; ವ್ಯಕ್ತಿ; ಮನುಷ್ಯ: man for man ಆಳಿಗೆ ಆಳು. between man and man ಮನುಷ್ಯ ಮನುಷ್ಯರಲ್ಲಿ. Rs. 5/ – per man ತಲಾ 5 ರೂಪಾಯಿಗಳಂತೆ.
- ವಿರೋಧಿ; ಶತ್ರು ಮೊದಲಾದವರು.
- ಗಂಡು; ಪುರುಷ; ಗಂಡುತನವುಳ್ಳವನು; ಪೌರುಷವುಳ್ಳವನು; ಗಂಡಿಗೆ ಯೋಗ್ಯವಾದ ಗುಣಗಳನ್ನುಳ್ಳವನು; ಗಂಡುಗಲಿ: she is more of a man than he is ಅವಳು ಅವನಿಗಿಂತ ಗಂಡು, ಹೆಚ್ಚು ಪೌರುಷದಿಂದ ಕೂಡಿದವಳು. play the man ಗಂಡಸಿನಂತೆ ವರ್ತಿಸು, ನಡೆದುಕೊ; ಗಂಡುಗಲಿಯಾಗಿರು.
- ಗಂಡ; ಪತಿ: man and wife ಗಂಡ ಹೆಂಡತಿ; ಪತಿ ಪತ್ನಿ.
- (ಚರಿತ್ರೆ) ಆಶ್ರಿತ; ಅವಲಂಬಿ; ಅಧೀನನಾದವನು.
- ಆಳು; ಸೇವಕ.
- ಕೈಯಾಳು; ಪರಿಚಾರಕ; ಅನುಚರ; ಯಜಮಾನನ ಜತೆಯಲ್ಲೇ ಇರುವ ಸೇವಕ.
- ಕೆಲಸಗಾರ; ಕೆಲಸದಾಳು; ಕಾರ್ಮಿಕ: the employers dismissed the men ಮಾಲಿಕರು ಕಾರ್ಮಿಕರನ್ನು ವಜಾ ಮಾಡಿದರು, ಕೆಲಸದಿಂದ ತೆಗೆದುಹಾಕಿದರು.
- (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಅಧಿಕಾರಿಗಳಾಗಿರದ ಸಾಮಾನ್ಯ) ಸೈನಿಕರು, ನಾವಿಕರು, ಮೊದಲಾದವರು: was in command of 200 men ಅವನ ಕೈಕೆಳಗೆ 200 ಸೈನಿಕರು (ಯಾ ನಾವಿಕರು) ಇದ್ದರು.
- (ಚದುರಂಗ ಮೊದಲಾದ ಆಟಗಳಲ್ಲಿ) ಯಾವುದೇ ಕಾಯಿ.
- ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಗಂಡಸು: fought to the last man ಕೊನೆಯ ವ್ಯಕ್ತಿಯವರೆಗೆ ಹೋರಾಡಿದರು. the (very) man (ನಿರ್ದಿಷ್ಟ ಕೆಲಸಕ್ಕೆ) (ಬಹಳ) ಅರ್ಹನಾದ, ತಕ್ಕ, ಲಾಯಕ್ಕಾದ, ಸೂಕ್ತನಾದ, ಉಚಿತನಾದ, ಅನುರೂಪನಾದ – ವ್ಯಕ್ತಿ: the (very) man for the job ಆ ಕೆಲಸಕ್ಕೆ (ಬಹಳ) ಲಾಯಕ್ಕಾದ ವ್ಯಕ್ತಿ.
- (ಆಡುಮಾತು) (ಹುಡುಗಿಯ ಯಾ ತರುಣಿಯ) ನಲ್ಲ; ಪ್ರಿಯ; ಗೆಳೆಯ.
- ನಿರ್ದಿಷ್ಟ ಐತಿಹಾಸಿಕ ಕಾಲದ ಯಾ ಲಕ್ಷಣದ ಮನುಷ್ಯ, ಮಾನವ: Renaissance man ನವೋದಯ ಕಾಲದ ಮಾನವ.
- ಅವಶೇಷಗಳು ದೊರೆತ ಸ್ಥಳದ ಹೆಸರಿನಿಂದ ಕರೆಯಲಾದ ಇತಿಹಾಸಪೂರ್ವ ಕಾಲದ ಮಾನವ: Peking man ಪೀಕಿಂಗ್ ಮಾನವ.
- (ಆಡುಮಾತು) ಹಿಪ್ಪಿಗಳು ಮೊದಲಾದವರಲ್ಲಿ ಸಂಬೋಧನೆಯಾಗಿ ಪ್ರಯೋಗ: dig that, man; ಅದನ್ನು ಅರ್ಥಮಾಡಿಕೊಳ್ಳಯ್ಯಾ!
- ಬೆನ್ನಟ್ಟಿದ ವ್ಯಕ್ತಿ; ಅನ್ವೇಷಿತ ವ್ಯಕ್ತಿ. the police have so far not caught their man ಪೊಲೀಸರು ಇದುವರೆಗೆ ತಮಗೆ ಬೇಕಾದ ವ್ಯಕ್ತಿಯನ್ನು ಹಿಡಿದಿಲ್ಲ.
- (the Man) (ಅಮೆರಿಕನ್ ಪ್ರಯೋಗ) (ಅಶಿಷ್ಟ)
- ಪೊಲೀಸಿನವ.
- (ನೀಗ್ರೋಗಳ ಅಶಿಷ್ಟ) ಬಿಳಿಯರು; ಶ್ವೇತ ವರ್ಣೀಯರು.
ಪದಗುಚ್ಛ
- (all) to a man (ಒಬ್ಬನನ್ನೂ ಬಿಡದೆ, ಒಬ್ಬನೂ ಉಳಿಯದೆ) ಎಲ್ಲರೂ; ಸರ್ವರೂ.
- as a man ವ್ಯಕ್ತಿಯಾಗಿ; ಮನುಷ್ಯನಾಗಿ; ಕೇವಲ ಅವನ ವೈಯಕ್ತಿಕ ಸ್ವಭಾವದ ದೃಷ್ಟಿಯಿಂದ ನೋಡಿದರೆ; ಕೇವಲ ಮನುಷ್ಯನನ್ನಾಗಿ ಆತನನ್ನು ಪರಿಗಣಿಸಿದರೆ.
- as one man ಒಗ್ಗಟ್ಟಾಗಿ; ಐಕಮತ್ಯದಿಂದ; ಏಕಾಭಿಪ್ರಾಯದಿಂದ; ಒಮ್ಮತದಿಂದ.
- be a man ಗಂಡಾಗಿರು; ಧೈರ್ಯದಿಂದಿರು; ಧೈರ್ಯದಿಂದ ವರ್ತಿಸು; ಭಯ ಪಡದಿರು; ಹೆದರದಿರು.
- inner man
- ಆತ್ಮ; ಅಂತರಾತ್ಮ.
- (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಒಳದೇಹ; ಅಂತಃಶರೀರ (ಮುಖ್ಯವಾಗಿ ಹೊಟ್ಟೆ).
- little man (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಮರಿ; ಪುಟ್ಟು; ಛೋಟಾ; ಪುಟ್ಟಸ್ವಾಮಿ.
- man about town ನಾಗರಿಕ; ನಗರದ ಶ್ರೀಮಂತ ಸೊಗಸುಗಾರ ಸೋಮಾರಿ.
- man and boy ಬಾಲ್ಯದಿಂದಲೂ; ಚಿಕ್ಕಂದಿನಿಂದಲೂ; ಹುಡುಗುತನದಿಂದಲೂ; ಎಳೆಯತನದಿಂದಲೂ; ಎಳೆಯ ಹುಡುಗನಾಗಿದ್ದಾಗಿನಿಂದಲೂ; ಬಾಲ್ಯಾರಭ್ಯ.
- man Friday ಅಡಿಯಾಳು; ದಾಸ; ಗುಲಾಮ; ಚಾಕರ; ಯಜಮಾನನಿಗಾಗಿ ಎಲ್ಲ ಬಗೆಯ ಸೇವೆಯನ್ನೂ ಸಲ್ಲಿಸುವವನು.
- man in the moon ಚಂದ್ರಮಾನವ; ಚಂದ್ರಬಿಂಬದಲ್ಲಿ ಕಾಣುತ್ತದೆಯೆಂದು ಭಾವಿಸಲಾಗಿದ್ದ ಮನುಷ್ಯಾಕೃತಿ (ಮುಖ್ಯವಾಗಿ ಕಲ್ಪನೆಯಲ್ಲಿ ಕಂಡ ಭ್ರಮಾವ್ಯಕ್ತಿ ಎಂಬರ್ಥದಲ್ಲಿ).
- man of God
- = clergyman.
- ಸಂತ.
- man of honour ಗೌರವಾನ್ವಿತ ವ್ಯಕ್ತಿ; ನಂಬಿಕಸ್ಥ; ಯಾರ ಮಾತನ್ನು ನಂಬಬಹುದೋ ಅವನು.
- man of letters
- ಪಂಡಿತ; ವಿದ್ವಾಂಸ.
- ಲೇಖಕ; ಬರಹಗಾರ.
- man of the house ಮನೆಯ ಯಜಮಾನ.
- man of the moment ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾಮುಖ್ಯವುಳ್ಳ ವ್ಯಕ್ತಿ; ಸಮಯ ಪ್ರಮುಖ.
- man of straw
- ಹುಲುಮನುಷ್ಯ; ಅಗಣ್ಯ ವ್ಯಕ್ತಿ.
- ವಿರೋಧಿಯಾಗಿ ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿ.
- ಹುಲ್ಲು ಮೊದಲಾದವುಗಳನ್ನು ತುಂಬಿದ ಪ್ರತಿಕೃತಿ; ಹುಲ್ಲು ಬೊಂಬೆ; ಹುಲ್ಲು ಮಾನವ.
- ಸಾಕಷ್ಟು ಸಂಪಾದನೆಯಿಲ್ಲದಿದ್ದರೂ ಹಣವನ್ನು ಕೊಡುವುದಾಗಿ ಒಪ್ಪುವ ವ್ಯಕ್ತಿ.
- ಸೋಲಲೆಂದು ಕಲ್ಪಿಸಿದ – ಹುಸಿವಾದ, ಸುಳ್ಳುವಾದ.
- man of the world.
- man to man ಬಿಚ್ಚುಮನಸ್ಸಿನಿಂದ; ಪ್ರಾಮಾಣಿಕವಾಗಿ; ಸತ್ಯವಾಗಿ.
- men’s ಗಂಡಸರ ಶೌಚಾಲಯ; ಪುರುಷರ ಶೌಚಾಲಯ.
- men’s room = ಪದಗುಚ್ಛ\((19)\).
- my man (ಒಬ್ಬನನ್ನು ಪ್ರೋತ್ಸಾಹಿಸುವ ರೀತಿಯ ಸಂಬೋಧನೆಯಾಗಿ) ನನ್ನವನೆ!
- my good man = ಪದಗುಚ್ಛ\((21)\).
- new man.
- old man.
- outer man
- ಸ್ಥೂಲ ದೇಹ; ಸ್ಥೂಲಶರೀರ.
- (ಹಾಸ್ಯದಲ್ಲಿ ಯಾ ಮಮತೆಯಲ್ಲಿ) ಹೊರದೇಹ; ಬಾಹ್ಯ ಶರೀರ.
- play the man = ಪದಗುಚ್ಛ\((4)\).
- separate the men from the boys(ಆಡುಮಾತು) ನಿಜವಾಗಿ ಶಕ್ತಿವಂತರಾದವರು, ಸಮರ್ಥರು, ಮೊದಲಾದವರನ್ನು – ಪತ್ತೆಮಾಡು, ಕಂಡುಹಿಡಿ, ಹುಡುಕು.
- sort out the men from the boys = ಪದಗುಚ್ಛ\((27)\).
- the man in the street ಸಾಮಾನ್ಯ ವ್ಯಕ್ತಿ; ಅನಭಿಜ್ಞ; ಅತಜ್ಞ (ತಜ್ಞನಲ್ಲದವ ಎಂಬರ್ಥದಲ್ಲಿ); ಬೀದಿಹೋಕ.
- the man on the street (ಅಮೆರಿಕನ್ ಪ್ರಯೋಗ)= ಪದಗುಚ್ಛ\((29)\).
- to a man ಒಬ್ಬರನ್ನೂ ಬಿಡದೆ; ಎಲ್ಲರೂ.
- to be one’s man
- (ಒಬ್ಬನಿಗೆ) ಅರ್ಹ; ಲಾಯಕ್ಕಾದವನು; ತಕ್ಕವನು; ಸರಿಯಾದವನು; (ಒಬ್ಬನ) ಇಷ್ಟಕ್ಕೆ ಅನುಗುಣವದವನು: if you want noise, he is your man ನಿಮಗೆ ಗದ್ದಲ ಬೇಕೆನಿಸಿದರೆ, ಅವನೇ ನಿಮಗೆ ಲಾಯಕ್ಕಾದವನು.
- (ಒಬ್ಬನ) ಪರವಾದವನು; ಒಬ್ಬನ ಅಭಿಪ್ರಾಯ ಮೊದಲಾದವನ್ನು ಒಪ್ಪುವವನು: I am your man ನಾನು ನಿಮ್ಮವ; ನಾನೂ ನಿಮ್ಮಂತೆಯೇ, ನಿಮ್ಮ ಕಡೆಗೇ, ಕಡೆಯವನೇ, ಪಕ್ಷದಲ್ಲೇ.
- to be one’s own man
- ಸ್ವತಂತ್ರ ವ್ಯಕ್ತಿ; (ಇನ್ನೊಬ್ಬರ ಆಳಾಗದೆ) ಸ್ವತಂತ್ರವಾಗಿ ವರ್ತಿಸಬಲ್ಲವನು, ವರ್ತಿಸುವ ಸ್ಥಿತಿಯಲ್ಲಿರುವವನು.
- (ಬುದ್ಧಿ ಶಕ್ತಿ, ಇಂದ್ರಿಯಗಳ ಪಾಟವ, ಮೊದಲಾದವುಗಳನ್ನು) ಪೂರ್ಣವಾಗಿ ವಶದಲ್ಲಿ, ಸ್ವಾಧೀನದಲ್ಲಿ, ಉಳ್ಳವನು.