See also 2new
1new ನ್ಯೂ
ಗುಣವಾಚಕ
  1. ಹೊಸ(ದಾದ); ನವ; ನವೀನ; ನೂತನ; ಆಗ ತಾನೆ ನಿರ್ಮಿಸಿದ; ಹೊಸದಾಗಿ ಬಳಕೆಗೆ ತಂದ; ಆಗ ತಾನೆ ಕಂಡುಹಿಡಿದ; ಹೊಸದಾಗಿ – ಕೇಳಿದ, ತಿಳಿದ, ಅನುಭವಕ್ಕೆ ಬಂದ.
  2. ಪರಿಚಿತವಲ್ಲದ; ಗೊತ್ತಿಲ್ಲದ ideas new to us ನಮಗೆ ಗೊತ್ತಿಲ್ಲದ ವಿಚಾರಗಳು.
  3. ನವೀಕರಿಸಿದ.
  4. ತಾಜಾ.
  5. ಹೆಚ್ಚಿನ.
  6. ಸೇರಿಸಿದ.
  7. ಬೇರೆಯಾದ.
  8. ಮಾರ್ಪಾಡಾದ; the new chairman ಹೊಸ(ದಾಗಿ ಬದಲಾಯಿಸಿದ) ಅಧ್ಯಕ್ಷರು. my new tailor ನನ್ನ ಹೊಸ(ದಾಗಿ ಈಚೆಗೆ ಪರಿಚಯವಾದ) ದರ್ಜಿ.
  9. (ಸ್ಥಳದ ಹೆಸರುಗಳ ವಿಷಯದಲ್ಲಿ, ‘ಮೂಲದ ಹೆಸರಿಗಿಂತಲೂ ಈಚಿನ’. ‘ಈಚೆಗೆ ಸ್ಥಾಪಿಸಿದ’ ಎಂಬರ್ಥದಲ್ಲಿ) ಹೊಸ; ನವೀನ: new Orleansಹೊಸ ಆರ್ಲಿಯನ್ಸ್‍.
  10. ತಾಜಾ; ಹೊಸದಾಗಿ – ತಯಾರಿಸಿದ, ಹುಟ್ಟಿದ, ಬೆಳೆದ, ಬಂದ; ಈಗ ತಾನೇ ಮೊಟ್ಟಮೊದಲು ಬಳಸುತ್ತಿರುವ; ಇನ್ನೂ ಹಳತಾಗಿ ಹೋಗದ. new bread ತಾಜಾ ಬ್ರೆಡ್ಡು.
  11. (ಭಾಷೆಯ ವಿಷಯದಲ್ಲಿ) ಆಧುನಿಕ; ಮಧ್ಯಯುಗದಿಂದೀಚೆಗೆ ಬಳಕೆಗೆ ಬಂದ.
ಪದಗುಚ್ಛ
  1. a new life ಹೊಸ – ಬಾಳು, ಬದುಕು, ಜೀವನ; ಹಿಂದಿನ ಪರಿಸ್ಥಿತಿಗಳಿಗಿಂತ ಬಹಳ ಭಿನ್ನವಾದ ಪರಿಸ್ಥಿತಿಯಲ್ಲಿ – ಜೀವನ ನಡೆಸುವುದು.
  2. a new one on(ಆಡುಮಾತು) ಹೊಸದಾದ, ಹಿಂದೆಂದೂ ಕಾಣದ, ತಿಳಿಯದ – ಕಥೆ, ಸಂದರ್ಭ, ಮೊದಲಾದವು.
  3. as good as new ಬಹುತೇಕ ಹೊಸ; ಇನ್ನೂ ಬಳಕೆಯಿಂದ ಮಾಸಿಲ್ಲದ.
  4. new birth.
  5. new $^1$broom.
  6. New Christian ನವ ಕ್ರೈಸ್ತ; ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ, ಮಧ್ಯಯುಗದ ಸ್ಪೇನಿನ ಯೆಹೂದ್ಯ ಯಾ ಮೊರಾಕೊದವನು.
  7. new $^2$chum.
  8. new $^1$deal.
  9. new fashioned ಹೊಸ ಹ್ಯಾಷನ್ನಿನ; ಇತ್ತೀಚಿನ (ಅತ್ಯಾಧುನಿಕ) ಹ್ಯಾಷನ್ನಿಗನುಸಾರವಾಗಿ ಮಾಡಿದ, ತಯಾರಾದ.
  10. new foundation ಹೊಸ ಸಂಸ್ಥಾಪನೆ; ರೆಹರ್ಮೇಷನ್‍ನಿಂದೀಚೆಗೆ ಸ್ಥಾಪಿತವಾದ ಕೆಥೆಡ್ರಲ್‍ ಮೊದಲಾದವು.
  11. new light(ಮತಧರ್ಮಗಳ ವಿಷಯದಲ್ಲಿ) ಆಧುನಿಕ ಯಾ ವಿಶಾಲ ಭಾವನೆಗಳು ಯಾ ಅವನ್ನು ಒಪ್ಪಿಕೊಳ್ಳುವ ವ್ಯಕ್ತಿ.
  12. new man(ದೇವತಾಶಾಸ್ತ್ರ) ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನು.
  13. put on the new man ಗುಣ ಬದಲಾವಣೆಯಿಂದ, ತನ್ನನ್ನು ತಾನೇ ಸುಧಾರಿಸಿಕೊಂಡು ಮತಾಂತರವೆಂದರೇನೆಂಬುದನ್ನು ತೋರಿಸು.
  14. the new
    1. (ಗುಣಭೇದವನ್ನು ಸೂಚಿಸುವ ವಿಶಿಷ್ಟ ಶಬ್ಧವಾಗಿ) ಇತ್ತೀಚಿನ; ಆಧುನಿಕ.
    2. (ನಿಂದಾರ್ಥದಲ್ಲಿ) ನವ್ಯತಾ ಅಭಿಮಾನವುಳ್ಳ; ಅತಿ ನವೀನವಾದ,
  15. the new mathematics ನವೀನ, ನವ್ಯ – ಗಣಿತ; ಪ್ರಾಥಮಿಕ ಹಂತದಲ್ಲಿಯೇ ಗಣಸಿದ್ಧಾಂತ (set theory) ಮುಂತಾದವನ್ನು ಉಪಯೋಗಿಸಿ ಕಲಿಸುವ ಗಣಿತ.
  16. the new poor ಹೊಸ ಬಡವರು; ನವದರಿದ್ರರು; ಈಚಿನ ಸಾಮಾಜಿಕ ಬದಲಾವಣೆಗಳಿಂದ ಬಡವರಾದವರು.
  17. the new rich ನವ ಶ್ರೀಮಂತರು; ಈಚಿನ ಸಾಮಾಜಿಕ ಬದಲಾವಣೆಯಿಂದ ಶ್ರೀಮಂತರಾದವರು.
  18. the new woman (ನಿಂದಾರ್ಥಕ) ನವ ಮಹಿಳೆ; (ಸಂಪ್ರದಾಯವನ್ನು ನಿರಾಕರಿಸಿ ಸ್ವಾತಂತ್ರ್ಯವನ್ನು ಬಯಸುವ) ನವೀನ ಸ್ತ್ರೀ(ಯರು).
  19. turn over a new leaf(ರೂಪಕವಾಗಿ) ಹೊಸ ಅಧ್ಯಾಯ ಪ್ರಾರಂಭಿಸು.