See also 2world
1world ವರ್ಲ್‍
ನಾಮವಾಚಕ
  1. ಲೋಕ; ಪ್ರಪಂಚ; ಜಗತ್ತು.
  2. ಲೌಕಿಕಾಸಕ್ತಿಗಳು; ಪ್ರಾಪಂಚಿಕ ವ್ಯಾಪಾರಗಳು, ವ್ಯವಹಾರಗಳು; ಐಹಿಕ ಪ್ರಲೋಭನೆಗಳು.
    1. ವಿಶ್ವ; ಸೃಷ್ಟಿ; ಸಮಸ್ತ; ಸರ್ವಸ್ವ: the best of all possible worlds ಸೃಷ್ಟಿಯಲ್ಲೆಲ್ಲಾ ಅತ್ಯುತ್ತಮ ಸೃಷ್ಟಿ.
    2. ಸಮಸ್ತಜನ; ಲೋಕ; ಮಾನವಸಮಷ್ಟಿ.
  3. (ತನ್ನನ್ನು ಬಿಟ್ಟು) ಹೊರಗಣ ಲೋಕ; ಬಾಹ್ಯ ಪ್ರಪಂಚ: dead to the world ಹೊರಪ್ರಪಂಚಕ್ಕೆ ಸತ್ತ, ಮೃತಪ್ರಾಯನಾದ.
  4. ಲೋಕದ – ಸರ್ವಸ್ವವೂ, ಸಮಸ್ತವೂ: she is all the world to me ನನ್ನ ಸರ್ವಸ್ವವೂ ಅವಳೇ.
  5. ಭೂಮಿ; ಭೂಲೋಕ; ಭೂಮಂಡಲ ಯಾ ಅದರಂಥದೇ ಗ್ರಹಕಾಯ: go round the world ಪ್ರಪಂಚವನ್ನು ಸುತ್ತು.
  6. ಪ್ರಪಂಚದ ದೇಶಗಳು ಮತ್ತು ಅವುಗಳ ನಿವಾಸಿಗಳು.
  7. ಮಾನವ ವ್ಯಾಪಾರ; ಲೋಕವ್ಯವಹಾರ; ಲೋಕದ – ರೀತಿನೀತಿ ಮತ್ತು ಸ್ಥಿತಿಗತಿಗಳು; ಐಹಿಕ ಜೀವನ; ಸಂಸಾರ; ಲೌಕಿಕ : so wags the world ಹೀಗೆ ಈ ಲೋಕ ನಡೆಯುತ್ತಾ ಬಂದಿದೆ.
  8. (ಸಾಮಾನ್ಯ ದರ್ಜೆಯ, ಗೌರವಸ್ಥ ಯಾ ನವನಾಜೂಕಿನ) ಜನ; ಸಮಾಜ; ಸಾಮಾಜಿಕ – ಪದ್ಧತಿ, ಅಭಿಪ್ರಾಯ.
  9. ಲೋಕ; ವಿಶ್ವ; ಪ್ರಪಂಚ; ವಿಶಿಷ್ಟ ವರ್ಗದ, ವಲಯದ, ಕ್ಷೇತ್ರದ ಜನ ಮತ್ತು ಅವರಿಗೆ ಸಂಬಂಧಿಸಿದ ಸಕಲವೂ: the literary world or the world of letters ಸಾಹಿತಿಗಳ ಲೋಕ; ಸಾಹಿತ್ಯ ಪ್ರಪಂಚ. the medieval world ಮಧ್ಯಯುಗದ ಸಮಾಜ. the world of sport ಕ್ರೀಡಾ ಪ್ರಪಂಚ.
  10. ಭಾರಿ ಮೊತ್ತ; ಅಪಾರ ಸಂಖ್ಯೆ; ಅಪಾರ ವಿಸ್ತಾರ: a world of meaning ಬ್ರಹ್ಮಾಂಡ ಅರ್ಥ. a world of difference ಭಾರಿ ವ್ಯತ್ಯಾಸ.
  11. ಮಾನವ ಜಗತ್ತು; ಜೀವನದ ಕಾಲ, ಸ್ಥಿತಿ ಯಾ ದೃಶ್ಯ.
  12. ಮರ್ತ್ಯಜೀವನ; ಮರ್ತ್ಯಲೋಕ.
ಪದಗುಚ್ಛ
  1. a world (or worlds) too wide ಬಹುಮಟ್ಟಿಗೆ; ಬಹಳಷ್ಟು.
  2. all the world and his wife.
    1. ನವನಾಜೂಕನ್ನು ಪ್ರದರ್ಶಿಸುವ ಸಕಲರೂ.
    2. ನಾನಾ ಬಗೆಯ ಜನಗಳಿರುವ ದೊಡ್ಡ ಗುಂಪು, ಸಮೂಹ, ಸಭೆ.
  3. all’s right with the world ಪ್ರಪಂಚದಲ್ಲಿ, ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ (ಏನೂ ಕೊರತೆಯಿಲ್ಲ, ಕೆಟ್ಟದ್ದು ಯಾವುದೂ ಇಲ್ಲ ಎಂಬ ಆಶಾವಾದದ ಸೂತ್ರೋಕ್ತಿ).
  4. all the world knows ಲೋಕಕ್ಕೆಲ್ಲಾ ತಿಳಿದಿದೆ; ಎಲ್ಲರಿಗೂ ಗೊತ್ತು; ಜಗಜ್ಜಾಹೀರಾಗಿದೆ.
  5. (all) the world over ವಿಶ್ವದಲ್ಲೆಲ್ಲಾ; ಪ್ರಪಂಚದ ಎಲ್ಲಾ ಕಡೆ.
  6. bring into the world
    1. ಹುಟ್ಟಿನಿಂದಲೇ ಪಡೆ; ಆಜನ್ಮ ಪ್ರಾಪ್ತವಾಗಿರು; ಜನ್ಮತಃ, ಹುಟ್ಟುತ್ತಾ – ತರು.
    2. (ಹೆರಿಗೆಯ ವಿಷಯದಲ್ಲಿ) ಹಡೆಯಲು, ಹೆರಲು ನೆರವಾಗು; ಹೆರಿಗೆ ಮಾಡಿಸು.
    3. (ಮಗುವನ್ನು) ಹಡೆ; ಹೆರು.
  7. carry the world before one ಕ್ಷಿಪ್ರವಾಗಿ ಪೂರ್ಣಜಯ ಸಾಧಿಸು; ಬೇಗ ಪೂರ್ತಿ ಗೆಲ್ಲು; ಶೀಘ್ರವಾಗಿ ಪೂರ್ಣಯಶಸ್ಸು ಗಳಿಸು.
  8. come into the world ಹುಟ್ಟು; ಜನ್ಮತಾಳು.
  9. for all the world (like or as if) ಕರಾರುವಾಕ್ಕಾಗಿ; ಖಚಿತವಾಗಿ; ನಿಖರವಾಗಿ; ತದ್ವತ್ತಾಗಿ: looked for all the world as if they were real ಅವು ನಿಜವಾಗಿರುವಂತೆಯೇ, ಸತ್ಯಸಂಗತಿಯೆಂಬಂತೆಯೇ ಕಂಡವು.
  10. get the best of both worlds
    1. ಇಹಪರಗಳೆರಡನ್ನೂ ಸಾಧಿಸು; ಲೌಕಿಕ ಮತ್ತು ಆಧ್ಯಾತ್ಮಿಕ ಎರಡರ ಲಾಭವನ್ನೂ, ಪ್ರಯೋಜನವನ್ನೂ ಗಳಿಸು, ಪಡೆದುಕೊ.
    2. ಪರಸ್ಪರ ವಿರುದ್ಧವಾಗಿ ಕಾಣುವ ಎರಡೂ ಗುರಿಗಳನ್ನು, ಧ್ಯೇಯಗಳನ್ನು ಸಾಧಿಸು.
  11. give to the world ಪ್ರಕಟಿಸು; ಬಹಿರಂಗಗೊಳಿಸು.
  12. in the world ಭೂಮಿಯ ಮೇಲೆ; ಲೋಕದಲ್ಲಿ (ಪ್ರಶ್ನೆಯಲ್ಲಿ ಒತ್ತುಹಾಕುವಾಗ ಬಳಸುವ ಪದಗುಚ್ಛ): what in the world is it? ಅದು, ಭೂಮಿಯ ಮೇಲೆ, ಆಗಿರುವುದಾದರೂ ಏನು? (ಅದು ಏನು? ಯಾರು? ಎಂಬರ್ಥ).
  13. it will do him a (or the) world of good ಅದರಿಂದ ಅವನಿಗೆ ಬಹಳ ಒಳ್ಳೆಯದಾಗುತ್ತದೆ.
  14. man (or woman) of the world ಲೋಕಾನುಭವಿ; ಲೋಕವಿವೇಕಿ; ಮಾನವ ವ್ಯವಹಾರಗಳಲ್ಲಿ ನುರಿತ ಮತ್ತು ವಾಸ್ತವಿಕ ದೃಷ್ಟಿಯುಳ್ಳ ವ್ಯಕ್ತಿ.
  15. on $^1$top of the world.
  16. out of this world (ಆಡುಮಾತು) (ಯಾವುದಾದರೂ ವಸ್ತು ಮೊದಲಾದವುಗಳ ವಿಷಯದಲ್ಲಿ) ಅತ್ಯುತ್ಕೃಷ್ಟ; ದಿವ್ಯವಾದ; ದೇವಲೋಕದ; ಅವರ್ಣನೀಯ: she bakes an apple pie that is out of this world ಅವಳು ತಯಾರಿಸುವ ಸೇಬಿನ ಕಡಬಉ ದಿವ್ಯವಾಗಿರುತ್ತದೆ.
  17. see (or know) the world
    1. ವ್ಯಾಪಕವಾಗಿ ಸಂಚಾರ ಮಾಡು; ಪ್ರಪಂಚ ನೋಡು; ಲೋಕ ಸುತ್ತಾಡು.
    2. ಲೋಕಾನುಭವ ಗಳಿಸು; ವ್ಯಾಪಕವಾದ, ವಿಶಾಲವಾದ ಅನುಭವ ಪಡೆ.
  18. take the world as it is (or take the world as one finds it) ಪ್ರಪಂಚವನ್ನು, ಬದುಕನ್ನು ಅದು ಇರುವಂತೆ – ತೆಗೆದುಕೊ, ಗ್ರಹಿಸು, ಒಪ್ಪಿಕೊ; (ಗೊಣಗದೆ, ವಿರೋಧಿಸದೆ) ಅದಕ್ಕೆ ಒಗ್ಗಿಸಿಕೊಂಡು, ಹೊಂದಿಕೊಂಡು ಹೋಗು, ಸಾಗು.
  19. the ancient world ಪ್ರಾಚೀನ, ಪುರಾತನ ಪ್ರಪಂಚ.
  20. the end of the world ಪ್ರಳಯ; (ಪ್ರಪಂಚದ) ಸರ್ವನಾಶ.
  21. the external world (ತನ್ನ ದೇಹದಿಂದ ಆಚೆಗಿರುವ) ಬಾಹ್ಯಪ್ರಪಂಚ.
  22. the great world ನವನಾಜೂಕಿನ ಸಮಾಜ.
  23. the next (or other) world ಮರಣೋತ್ತರ ಲೋಕ; ಪರಲೋಕ; ಆಮುಷ್ಮಿಕ ಜೀವನ; ಸಾವಿನ ನಂತರ ಇರಬಹುದೆಂದು ನಂಬಲಾಗಿರುವ ಜೀವನ.
  24. the Roman (etc.) world ರೋಮ್‍ಗೆ ಸಂಬಂಧಿಸಿದ ಪ್ರಪಂಚದ ಭಾಗಗಳು.
  25. the wise old world ಲೋಕಾನುಭವ ಮತ್ತು ಲೋಕರೂಢಿ.
  26. the world of art ಕಲಾ ಪ್ರಪಂಚ.
  27. the world of dreams ಕನಸಿನ ಲೋಕ; ಸ್ವಪ್ನಪ್ರಪಂಚ.
  28. the world ’s end ಸಂಚಾರದಲ್ಲಿ ಮುಟ್ಟಬಹುದಾದ ಪ್ರಪಂಚದ ತುತ್ತ ತುದಿ, ಕೊನೆ.
  29. the world , the flesh, and the devil ಲೋಕ, ಶರೀರ ಮತ್ತು ಸೈತಾನ; ಪ್ರಾಪಂಚಿಕ ವ್ಯಾಮೋಹಗಳು; ವಿವಿಧ ರೀತಿಯ ಆಸೆ ಆಮಿಷ ಪ್ರಲೋಭನಗಳು.
  30. the world to come = ಪದಗುಚ್ಛ \((23)\).
  31. think the world of ಭಾರಿ ಗೌರವ, ಮಹತ್ತ ನೀಡು; ಸರ್ವಸ್ವವೆಂದು ಭಾವಿಸು; ಅತ್ಯಮೂಲ್ಯವೆಂದೆಣಿಸು.
  32. what will the world say? (ಸಾರ್ವಜನಿಕ ಅಭಿಪ್ರಾಯವನ್ನು ಕಡೆಗಣಿಸಲಾಗದು ಎಂಬರ್ಥದಲ್ಲಿ) ಲೋಕ ಏನಂದೀತು? ಜನ ಏನೆಂದಾರು?
  33. wireless (etc.) world (ವೃತ್ತಪತ್ರಿಕೆ ಮೊದಲಾದವುಗಳ ಹೆಸರಿನ ಶೀರ್ಷಿಕೆಯಲ್ಲಿ) ‘ರೇಡಿಯೋ ಲೋಕ’ (ಇತ್ಯಾದಿ).
  34. world without end ಎಂದೆಂದಿಗೂ; ಶಾಶ್ವತವಾಗಿ; ಕೊನೆಯೇ ಇಲ್ಲದೆ.