See also 2high  3high
1high ಹೈ
ಗುಣವಾಚಕ
  1. ಎತ್ತರದ; ಎತ್ತರವಾದ: a high hill ಎತ್ತರವಾದ ಗುಡ್ಡ.
  2. (ಆಖ್ಯಾತಕವಾಗಿ) ನಿರ್ದೇಶಿಸಿದಷ್ಟು ಎತ್ತರವಾದ; ಎತ್ತರದ: one inch high ಒಂದಂಗುಲ ಎತ್ತರದwater was waist-high ನೀರು ಸೊಂಟದ ಎತ್ತರದಷ್ಟು, ಸೊಂಟದ ಮಟ್ಟ ಇತ್ತು.
  3. (ನೆಲಮಟ್ಟ, ಕಡಲಮಟ್ಟ, ಮೊದಲಾದವುಗಳಿಗಿಂತ) ಮೇಲ್ಮಟ್ಟದಲ್ಲಿರುವ; ಬಹು ಮೇಲಿರುವ.
  4. ಮೇಲ್ನಾಡಿನ; ಒಳನಾಡಿನ: High Asia ಒಳ ಏಷ್ಯ; ಏಷ್ಯದ ಒಳನಾಡು.
  5. ಸಾಮಾನ್ಯ ಮಟ್ಟಕ್ಕಿಂತ ಎತ್ತರದ, ಮೇಲಿನ: high neck (ಕವಚ, ಉಡುಪು, ಮೊದಲಾದವುಗಳ) ಎತ್ತರದ ಕತ್ತು, ಕುತ್ತಿಗೆ ಇರುವhigh boots ಎತ್ತರದ ಬೂಟುಗಳು.
  6. ಉದಾತ್ತ; ಶ್ರೇಷ್ಠ; ಉತ್ಕೃಷ್ಟ; ಉನ್ನತ ಗುಣದ: high art ಉನ್ನತ, ಶ್ರೇಷ್ಟ – ಕಲೆhigh minds ಉದಾತ್ತ ಮನಸ್ಕರುhigh principles ಉತ್ಕೃಷ್ಠ ತತ್ತ್ವಗಳು.
  7. ಉಚ್ಚ, ಉನ್ನತ – ದರ್ಜೆಯ, ವರ್ಗದ, ಅಂತಸ್ತಿನ; ಮೇಲ್ತರದ; ಮೇಲ್ವರ್ಗದ; ವರಿಷ್ಠ ವರ್ಗದ: in high society ಸಮಾಜದ ಮೇಲ್ವರ್ಗದವರುis high in the Government ಸರ್ಕಾರದಲ್ಲಿ ಉನ್ನತ ದರ್ಜೆಯಲ್ಲಿದ್ದಾನೆ.
  8. ಅತಿ; ತುಂಬ; ಬಹಳ; ಉತ್ಕಟ; ತೀವ್ರ; ಗಾಢ; ತೀಕ್ಷ್ಣ; ಬಲವಾದ; ಪ್ರಬಲ; ಜೋರಾದ; ಬಿರುಸಿನ: high temperature ಅತಿ – ಶಾಖ, ತಾಪ; ಉತ್ಕಟ ಉಷ್ಣತೆhigh pressure ತೀವ್ರ ಒತ್ತಡhigh wind ಜೋರಾದ ಗಾಳಿ; ಬಿರುಗಾಳಿ.
  9. ಕಡು; ವಿಶೇಷ; ಅಪಾರ: in high favour ಕಟ್ಟೊಲವಿಗೆ, ವಿಶೇಷ ಕೃಪೆಗೆ – ಪಾತ್ರನಾಗಿ high praise ಅಪಾರ ಪ್ರಶಂಸೆ.
  10. ದುಬಾರಿ; ಹೆಚ್ಚು; ಅಧಿಕ; ಪ್ರಿಯ; ತುಟ್ಟಿ(ಯಾದ): corn is high ಧಾನ್ಯ ತೀರ ತುಟ್ಟಿhigh (prices) ಅಧಿಕ ಬೆಲೆಗಳುhigh rents ದುಬಾರಿ ಬಾಡಿಗೆ.
  11. (ಧಾರ್ಮಿಕ ಯಾ ರಾಜಕೀಯ ಅಭಿಪ್ರಾಯದಲ್ಲಿ) ತೀವ್ರ; ಕಟ್ಟಾ; ಉಗ್ರ: high Tory ಕಟ್ಟಾ ಟೋರಿ (ಪಕ್ಷದವನು).
  12. (ದೈಹಿಕ ಕಾರ್ಯಗಳ, ಮುಖ್ಯವಾಗಿ ಕ್ರೀಡಾಸ್ಪರ್ಧೆಗಳ ವಿಷಯದಲ್ಲಿ) ಎತ್ತರದ; ನೆಲಕ್ಕಿಂತ ಸಾಕಷ್ಟು ಮೇಲ್ಮಟ್ಟದವರೆಗೆ, ಮೇಲ್ಮೆಟ್ಟದಿಂದ ಯಾ ಮೇಲ್ಮಟ್ಟದಲ್ಲಿ ಮಾಡಿದ: high jump ಎತ್ತರದ (ಎತ್ತರಕ್ಕೆ, ಎತ್ತರದವರೆಗೆ) ನೆಗೆತhigh diving ಎತ್ತರದಿಂದ ನೀರಿಗೆ ಧುಮುಕುವುದು. high flying ಎತ್ತರದ(ಲ್ಲಿ ವಿಮಾನದ) ಹಾರಾಟ.
  13. (ಆಡುಮಾತು) (ಆಲ್ಕೊಹಾಲ್‍ ಯಾ ಮುಖ್ಯವಾಗಿ ಮಾದಕವಸ್ತುಗಳಿಂದ) ಮತ್ತೇರಿದ; ಅಮಲೇರಿದ: having taken opium, he was high ಅಹೀಮನ್ನು ಸೇವಿಸಿದ್ದರಿಂದ ಅವನು ಅಮಲಿನಲ್ಲಿದ್ದ.
  14. (ಧ್ವನಿಯ ವಿಷಯದಲ್ಲಿ) ಏರಿದ; ಎತ್ತರಿಸಿದ; ಉಚ್ಚ; ಕೀರಲು.
  15. (ಸಂಗೀತ) ಉನ್ನತ ಸ್ಥಾಯಿಯ; ತಾರದ: high note ತಾರಸ್ವರ.
  16. (ಕಾಲ, ಯುಗ, ಅವಧಿ, ಮೊದಲಾದವುಗಳ ವಿಷಯದಲ್ಲಿ).
    1. ಈರಿದ; ಏರಿದ: high noon ಏರಿದ ಹಗಲು; ಮಟಮಟ ಮಧ್ಯಾಹ್ನhigh summer ಏರಿದ ಬೇಸಿಗೆ.
    2. (ಚಳುವಳಿ ಮೊದಲಾದವುಗಳ ಬೆಳವಣಿಗೆಯ, ವಿಕಸನದ ಅವಧಿಯ ವಿಷಯದಲ್ಲಿ) ಪೂರ್ಣಹಂತದಲ್ಲಿನ; ಉಚ್ಛ್ರಾಯ (ಕಾಲ)ದ: High Renaissance ನವೋದಯದ ಉಚ್ಛ್ರಾಯ(ದ) ಕಾಲ.
    3. ಕೂಡಲೇ, ತಕ್ಷಣವೇ – ಮಾಡಬೇಕಾದ: it is high time to go ನಾವು ಹೊರಡುವ ಸಮಯ ಬಂದಿತು; ನಾವು ಕೂಡಲೇ ಹೊರಡಬೇಕು.
  17. (ಮಾಂಸದ ವಿಷಯದಲ್ಲಿ) ಹಳಸಲು ಶುರುವಾದ; ಕೊಳೆಯಲು ಪ್ರಾರಂಭಿಸಿದ.
  18. (ಬೇಟೆಯಲ್ಲಿ ಕೊಂದ ಪ್ರಾಣಿಯ ವಿಷಯದಲ್ಲಿ) ಸ್ವಲ್ಪ ಕೊಳೆತು, ಬೇಯಿಸುವ ಹದಕ್ಕೆ ಬರುವವರೆಗೆ ತೂಗಹಾಕಿದ.
  19. (ಭೂಗೋಳಶಾಸ್ತ್ರ) (ಅಕ್ಷಾಂಶದ ವಿಷಯದಲ್ಲಿ) ಸಮಭಾಜಕ ವೃತ್ತಕ್ಕಿಂತ ದೂರದ; ಉತ್ತರ ಯಾ ದಕ್ಷಿಣ ಧ್ರುವ ಪ್ರದೇಶದ ಹತ್ತಿರವಾಗಿರುವ: high latitude ಸಮಭಾಜಕ ವೃತ್ತದಿಂದ ದೂರದ ಆಕ್ಷಾಂಶ.
  20. (ಧ್ವನಿ) (ಸ್ವರದ ವಿಷಯದಲ್ಲಿ) ಸಂವೃತ; ಬಾಯನ್ನು ಸಂಕೋಚ ಮಾಡಿಕೊಡು ಉಚ್ಚರಿಸುವ; ಇ, ಎ, ಊ, ಮೊದಲಾದವು (= $^1$close(2)).
  21. ಪುರಾತನ; ಪ್ರಾಚೀನ; ಬಹಳ ಹಿಂದೆಯೇ ಕಳೆದುಹೋದ: high antiquity ಪ್ರಪ್ರಾಚೀನತೆ; ಆದಿಪುರಾತನತೆ.
  22. (ಪ್ರಮಾಣ, ಅಳತೆ, ಮೊತ್ತದ ವಿಷಯದಲ್ಲಿ) ಹೆಚ್ಚು; ಅಧಿಕ; ಬಹಳ; ಭಾರೀ; ದೊಡ್ಡ: in high measure ದೊಡ್ಡ ಪ್ರಮಾಣದಲ್ಲಿ.
  23. ದರ್ಪದ; ಅಹಂಕಾರದ; ಸೊಕ್ಕಿನ.
  24. ಮಹತ್ವದ; ಗಂಭೀರವಾದ; ಮುಖ್ಯ.
  25. ಗೆಲುವಿನ; ನಲಿವಿನ; ಉಲ್ಲಾಸದ; ಉತ್ಸಾಹದ; ಸಂತೋಷದಿಂದ ಉಬ್ಬಿದ.
  26. (ಅಧಿಕಾರಿಗಳು ಮೊದಲಾದವರ ವಿಷಯದಲ್ಲಿ) ಪ್ರಧಾನ; ಮುಖ್ಯ; ಪ್ರಮುಖ; high Admiral ಪ್ರಧಾನ ನೌಕಾ (ಸೇನಾ)ಧಿಪತಿ.
ಪದಗುಚ್ಛ
  1. ace (or King or Queen etc.) high (ಇಸ್ಪೀಟಾಟ) ಕೈಯಲ್ಲಿರುವ ಎಲೆಗಳಲ್ಲಿ ಹಾಸೇ (ಮೊದಲಾದವು) ಅತಿ ಹೆಚ್ಚಿನ ಬೆಲೆಯದ್ದಾಗಿರುವುದು.
  2. higher mammal, plant, etc.ಉಚ್ಚ ಸಸ್ತನಿ, ಸಸ್ಯ, ಮೊದಲಾದವು.
  3. the higher criticism.
  4. high opinion of (ಯಾವುದರದೇ ಬಗ್ಗೆ) ಸದಭಿಪ್ರಾಯ; ಒಳ್ಳೆಯ ಭಾವನೆ; ಅನುಕೂಲವಾದ ಅಭಿಪ್ರಾಯ; ಉತ್ತಮ ಅಭಿಪ್ರಾಯ.
  5. high, wide, and handsome
    1. ಹಾಯಾಗಿ; ನಿರಾತಂಕವಾಗಿ; ನಿಶ್ಚಿಂತೆಯಿಂದ; ನೆಮ್ಮದಿಯಿಂದ.
    2. ಠಾಕುಠೀಕಾಗಿ; ನೀಟುಗಾರಿಕೆಯಿಂದ.
  6. in high feather.
ನುಡಿಗಟ್ಟು
  1. high and dry
    1. (ಹಡಗಿನ ವಿಷಯದಲ್ಲಿ) ನೀರಿನಿಂದ ಹೊರಗೆ.
    2. ನಡೆಯುತ್ತಿರುವ ಘಟನಾವಳಿಗಳಿಂದ ಹೊರಗಿರುವ; ಪ್ರಕೃತ ಪರಿಸ್ಥಿತಿಯಿಂದ ಹೊರಗುಳಿದ, ಹೊರಚ್ಚಾಗಿರುವ, ಹೊರಗಿಡಲ್ಪಟ್ಟಿರುವ, ಹಿಂದೆ ಬಿದ್ದುಹೋಗಿರುವ.
  2. high and low
    1. ಮೇಲುಕೀಳು; ಉಚ್ಚಾವಚ; ಸಮಾಜದ – ಎಲ್ಲಾ ಸ್ಥಿತಿಗಳವರೂ, ಎಲ್ಲಾ ವರ್ಗದವರೂ; ಎಲ್ಲರೂ; ಎಲ್ಲ ಬಗೆಯವರೂ.
    2. ಎಲ್ಲೆಲ್ಲೂ; ಎಲ್ಲೆಡೆಯಲ್ಲೂ; ಸರ್ವತ್ರ: search high and low ಎಲ್ಲೆಲ್ಲೂ ಹುಡುಕು.
  3. high and mighty
    1. (ಆಡುಮಾತು) ಅತಿ ಗರ್ವದ; ದುರಹಂಕಾರದ; ಸೊಕ್ಕಿನ.
    2. (ಪ್ರಾಚೀನ ಪ್ರಯೋಗ) ಉನ್ನತವರ್ಗದ; ಉಚ್ಚ ವರ್ಗದ.
  4. how is that for high? (ಅಶಿಷ್ಟ) (ಆಶ್ಚರ್ಯ ಕೆರಳಿಸುವಲ್ಲಿ) ಅದು ತೀರ ಆಶ್ಚರ್ಯವಲ್ಲವೆ? ಸೋಜಿಗವಲ್ಲವೆ?
  5. on one’s high ಸೊಕ್ಕಿನಿಂದ, ದುರಹಂಕಾರದಿಂದ – ವರ್ತಿಸುತ್ತ.
  6. on the high ropes (ಆಡುಮಾತು):
    1. ಉಬ್ಬಿಹೋದ; ಬೀಗಿದ.
    2. ತಿರಸ್ಕಾರದಿಂದ ಕೂಡಿದ.
    3. ರೇಗಿದ; ಕೆರಳಿದ; ಕ್ರೋಧಗೊಂಡ.
  7. with a high 1hand.