See also 1high  2high
3high ಹೈ
ಕ್ರಿಯಾವಿಶೇಷಣ
  1. ಬಹಳ ಮೇಲೆ; ತುಂಬ ಎತ್ತರದಲ್ಲಿ: flew the flag high ತುಂಬ ಎತ್ತರದಲ್ಲಿ ಧ್ವಜ ಹಾರಿಸಿದ.
  2. ಉನ್ನತ – ಸ್ಥಿತಿಯಲ್ಲಿ, ಸ್ಥಾನದಲ್ಲಿ ಯಾ ಉನ್ನತ ಮಟ್ಟಕ್ಕೆ: high on a throne Satan sat ಸೈತಾನನು ಸಿಂಹಾಸನದ ಮೇಲೆ ಉನ್ನತ ಸ್ಥಾನದಲ್ಲಿ ಕುಳಿತಿದ್ದ.
  3. ಏರಿದ ಬೆಲೆಗೆ: he agreed to go as high as twenty five thousand crowns ಇಪ್ಪತ್ತೈದು ಸಾವಿರ ಕ್ರೌನ್‍ಗಳಷ್ಟು ಹೆಚ್ಚು ಬೆಲೆಯವರೆಗೂ ಹೋಗಲು ಅವನು ಒಪ್ಪಿದ.
  4. (ಧ್ವನಿಗಳ ವಿಷಯದಲ್ಲಿ) ಎತ್ತರದಲ್ಲಿ; ಎತ್ತರಕ್ಕೆ; ಉನ್ನತ ಸ್ಥಾಯಿಗೆ; ತಾರಸ್ಥಾಯಿಯಲ್ಲಿ: I can’t sing as high as that ಅಷ್ಟು ಎತ್ತರದಲ್ಲಿ, ತಾರಸ್ಥಾಯಿಯಲ್ಲಿ ನಾನು ಹಾಡಲಾರೆ.
ನುಡಿಗಟ್ಟು
  1. aim high ಮೇಲಕ್ಕೆ; ಮೇಲಿನದಕ್ಕೆ ಗುರಿಯಿಡು.
  2. climb high ಮೇಲಕ್ಕೆ ಹತ್ತು, ಏರು.
  3. fly high:
    1. ಮೇಲೆ ಹಾರಾಟ ಮಾಡು, ಹಾರುತ್ತಿರು.
    2. ಮಹತ್ವಾಕಾಂಕ್ಷೆ ಹೊಂದಿರು.
  4. hold one’s head high ಸ್ವಾಭಿಮಾನದಿಂದಿರು; ಗರ್ವದಿಂದ ತಲೆ ಎತ್ತಿಕೊಂಡಿರು.
  5. live high ಭೂರಿಭೋಜನ ಮಾಡು; ಮೃಷ್ಟಾನ್ನ ಉಣ್ಣು.
  6. pay high ದುಬಾರಿ ಬೆಲೆಕೊಡು.
  7. play high
    1. ಭಾರಿ ಪಣ ಒಡ್ಡಿ ಜೂಜಾಡು.
    2. (ಇಸ್ಪೀಟಿನಲ್ಲಿ) ಭಾರೀ ಎಲೆ ಆಡು; ದೊಡ್ಡ ಎಲೆ ಆಡು.
  8. run high
    1. (ಸಮುದ್ರದ ವಿಷಯದಲ್ಲಿ) ಉಬ್ಬಿ ಹರಿ.
    2. ಉದ್ರೇಕಗೊಳ್ಳು; ಕಾವೇರು: party spirits ran high ಪಕ್ಷೀಯ ಮನೋಭಾವಗಳು ಉದ್ರೇಕಗೊಂಡವು.