See also 2close  3close  4close  5close
1close ಕ್ಲೋಸ್‍
ಗುಣವಾಚಕ
  1. ಮುಚ್ಚಿದ: close carriage ಮುಚ್ಚಿದ ಗಾಡಿ.
  2. (ಸ್ವರಗಳ ವಿಷಯದಲ್ಲಿ) ಸಂವೃತ ತುಟಿ ಯಾ ಬಾಯನ್ನು ಸಂಕುಚಿಸಿ ಯಾ ಕಿರಿದಾಗಿಸಿ ಉಚ್ಚರಿಸಿದ, ಉದಾಹರಣೆಗೆ ಇ.
  3. ಕಿರಿದಾದ; ಇಕ್ಕಟ್ಟಾದ.
  4. ಸೆರೆಯಲ್ಲಿರುವ; ಬಂಧಿಸಿದ: close prisoner ಸೆರೆಯಲ್ಲಿರುವ, ಬಂಧನದಲ್ಲಿರುವ ಕೈದಿ.
  5. ಸಂಕುಚಿತ; ಕಿರಿದಾಗಿಸಿದ; ಕುಗ್ಗಿಸಿದ.
  6. (ಗಾಳಿಯ ವಿಷಯದಲ್ಲಿ) ಉಸಿರು ಕಟ್ಟಿಸುವ; ಸ್ವಚ್ಛ ಗಾಳಿಯಿಲ್ಲದ ಯಾ ಗಾಳಿಯಾಡದ: close air ಉಸಿರು ಕಟ್ಟಿಸುವ ವಾಯು.
  7. ಸುತ್ತುವರಿದಿರುವ; ಸುತ್ತಲೂ ಮುತ್ತಿರುವ; ಆವರಿಸಿರುವ; ಎಲ್ಲ ಕಡೆಯಿಂದಲೂ ಬಳಸಿರುವ; ಬೆಟ್ಟಸಾಲು, ಗೋಡೆ, ಮೊದಲಾದವುಗಳಿಂದ ಆವೃತವಾಗಿರುವ: close siege ಸುತ್ತುವರಿದ ಮುತ್ತಿಗೆ.
  8. ಬಚ್ಚಿಟ್ಟ; ಮರೆಯಲ್ಲಿಟ್ಟ; ಅಡಗಿಸಿಟ್ಟ; ಗುಪ್ತವಾದ; ಗೋಪ್ಯವಾದ; ಗುಟ್ಟಾದ; ಗುಟ್ಟಿನ; ರಹಸ್ಯವಾದ; keep close ಗುಟ್ಟಾಗಿಡು.
  9. ಜಿಪುಣತನದ; ಜುಗ್ಗತನದ; ಕೈಬಿಚ್ಚದ; ಕೃಪಣನಾದ.
  10. (ಸದಸ್ಯತ್ವ, ಸ್ಪರ್ಧೆ, ಮೊದಲಾದವಕ್ಕೆ ಪ್ರವೇಶ ಮೊದಲಾದವುಗಳ ವಿಷಯದಲ್ಲಿ) ಪರಿಮಿತ; ಸೀಮಿತ; ಸಾರ್ವಜನಿಕವಲ್ಲದ; ಎಲ್ಲರಿಗೂ ಪ್ರವೇಶವಿಲ್ಲದೆ ಕೆಲವರಿಗಾಗಿ ಮೀಸಲಿಟ್ಟಿರುವ.
  11. ನಿಷಿದ್ಧ; ತಡೆಗೊಳಗಾದ; ಬಹಿಷ್ಕಾರಕ್ಕೊಳಪಟ್ಟಿರುವ.
  12. (ಸಂಬಂಧದ ವಿಷಯದಲ್ಲಿ) ಹತ್ತಿರದ; ನಿಕಟ; ಸಮೀಪದ: close friend ನಿಕಟ ಸ್ನೇಹಿತ. a close relative ಹತ್ತಿರದ ಸಂಬಂಧಿ.
  13. (ಸ್ಥಳದ ವಿಷಯದಲ್ಲಿ) ಹತ್ತಿರದ; ಸನಿಯದ; ಬಳಿಯ; ಸಮೀಪದಲ್ಲಿರುವ; ಸ್ವಲ್ಪವೇ ದೂರದಲ್ಲಿರುವ.
  14. ಒತ್ತಾದ; ದಟ್ಟ; ಹತ್ತಿರ ಹತ್ತಿರದ; ನಿಬಿಡ; ತೆರಪಿಲ್ಲದ; ಸಂದು ಬಿಡದ: close texture ಒತ್ತು ನೇಯ್ಗೆ. close thicket ದಟ್ಟಪೊದೆ. close writing ಒತ್ತು ಬರವಣಿಗೆ. close order ಒತ್ತಾದ ಶ್ರೇಣಿ; ತೆರಪು ಬಿಡದ ಸಾಲು.
  15. ತಾಗಿರುವ; ಹೊದ್ದಿರುವ; ತಾಕಿ ಯಾ ತಾಕಿದಂತೆ ಯಾ ಮುಟ್ಟುವಷ್ಟು ಹತ್ತಿರ–ಇರುವ: close proximity ತಾಗುವಷ್ಟು ಸಮೀಪ; ಮುಟ್ಟುವಷ್ಟು ಸಮೀಪ. close combat ಕೈಕೈ ಯುದ್ಧ.
  16. ಗುತ್ತ; ಹತ್ತವಾದ; ಹಾಳತವಾದ: close cap ಗುತ್ತ ಟೋಪಿ.
  17. ಸರಿಯಾದ; ಪೂರ್ತಿ ಹೊಂದುವ; ತದ್ವತ್ತಾದ; ನಿಕಟ: close copy ತದ್ವತ್ತಾದ ಪ್ರತಿ. close resemblance ಪೂರ್ತಿ ಹೊಂದುವ ಹೋಲಿಕೆ. close translation ನಿಕಟ ಅನುವಾದ.
  18. ಆಪ್ತ; ನಿಕಟ; ಗಾಢ; ಅಂತರಂಗದ; ಆಪ್ತೇಷ್ಟ: close friendship ಗಾಢ ಮೈತ್ರಿ.
  19. ಸುಮಾರು, ಹತ್ತಿರ ಹತ್ತಿರ–ಸಮನಾದ; ಸಮಸಮ: close contest ಸಮಸಮ ಸ್ಪರ್ಧೆ; ಸರಿಸಮ ಸ್ಪರ್ಧೆ.
  20. ಸೂಕ್ಷ್ಮ; ತೀವ್ರ; ಕೂಲಂಕಷವಾದ; ಏಕಾಗ್ರವಾದ: close examination ಸೂಕ್ಷ್ಮ ಪರೀಕ್ಷೆ. close attention ನೆಟ್ಟಗಮನ; ಏಕಾಗ್ರಗಮನ.
  21. ನಿರ್ದುಷ್ಟ; ಸುಸಂಗತ; ದೋಷರಹಿತ; ಸಂದುಗೊಂದುಗಳಿಗೆ ಯಾ ದುರ್ಬಲ ವಿಷಯಗಳಿಗೆ ಅವಕಾಶವಿಲ್ಲದ: close reasoning ನಿರ್ದುಷ್ಟ ತರ್ಕ. close argument ಕೂಲಂಕಷವಾದ ವಾದ.
ಪದಗುಚ್ಛ
  1. keep close ಮರೆಯಾಗಿರು; ಅವಿತುಕೊಂಡಿರು; ಬಚ್ಚಿಟ್ಟುಕೊಂಡಿರು; ಕಾಣದಂತಿರು.
  2. lie close = ಪದಗುಚ್ಛ \((1)\).
  3. close to ಹತ್ತಿರದಲ್ಲಿರುವ.