See also 1down  2down  4down  5down  6down  7down
3down ಡೌನ್‍
ಕ್ರಿಯಾವಿಶೇಷಣ

(down most ತಮಭಾವದ ರೂಪಕವಾಗಿ).

  1. (ಚಲನೆಯ ವಿಷಯದಲ್ಲಿ) ಮೇಲಿಂದ ಕೆಳಕ್ಕೆ; ಕೆಳಗೆ; ನೆಲಕ್ಕೆ; ಅಧಃಪ್ರದೇಶಕ್ಕೆ: fall down ಕೆಳಕ್ಕೆ ಬೀಳು. knock down ಕೆಳಕ್ಕೆ ಕೆಡವು, ಬೀಳಿಸು.
  2. (ಪ್ರಧಾನವೆಂದಾಗಿರುವ ಸ್ಥಾನದಿಂದ) ಕೆಳಗೆಂದು ಯಾ ಕೀಳೆಂದು ಭಾವಿಸಲಾದ ಸ್ಥಾನಕ್ಕೆ: Lord’s amendments sent down to Commons ಲಾರ್ಡ್‍ ಸಭೆಯ ತಿದ್ದುಪಡಿಗಳನ್ನು ಕಾಮನ್ಸ್‍ ಸಭೆಗೆ ಕಳುಹಿಸಲಾಯಿತು.
  3. ಪ್ರವಾಹದ ದಿಕ್ಕಿನಲ್ಲಿ; ನೀರು ಹರಿಯುವ ದಿಕ್ಕಿನಲ್ಲಿ; ಪ್ರವಾಹದೊಂದಿಗೆ: row down the river ನದಿಯ ಪ್ರವಾಹದ ದಿಕ್ಕಿನಲ್ಲಿ ದೋಣಿ ನಡೆಸು.
  4. ಗಾಳಿಯೊಂದಿಗೆ; ಗಾಳಿ ಬೀಸುವ ದಿಕ್ಕಿನಲ್ಲಿ; ಗಾಳಿ ಜೊತೆಗೆ: bear down ಗಾಳಿಯ ದಿಕ್ಕಿನಲ್ಲಿ ಹಡಗು ನಡೆಸು.
  5. (ಉತ್ತರ ದಿಕ್ಕಿನಿಂದ) ದಕ್ಷಿಣಕ್ಕೆ; ದಕ್ಷಿಣ ದಿಕ್ಕಿಗೆ: down to Karnataka from Kashmir (ಉತ್ತರದ) ಕಾಶ್ಮೀರದಿಂದ (ದಕ್ಷಿಣದ) ಕರ್ನಾಟಕಕ್ಕೆ.
  6. (ಬ್ರಿಟಿಷ್‍ ಪ್ರಯೋಗ) ರಾಜಧಾನಿಯಿಂದ: down to Mysore from Delhi ರಾಜಧಾನಿ ದೆಹಲಿಯಿಂದ ಮೈಸೂರಿಗೆ. down to Hassan from Bangalore ರಾಜಧಾನಿ ಬೆಂಗಳೂರಿನಿಂದ ಹಾಸನಕ್ಕೆ.
  7. ವಿಶ್ವವಿದ್ಯಾನಿಲಯದಿಂದ: go down ರಜಕ್ಕೆ ಊರಿಗೆ ಹೋಗು; ವಿಶ್ವವಿದ್ಯಾನಿಲಯದ ವ್ಯಾಸಂಗ ಮುಗಿದ ಮೇಲೆ (ಊರಿಗೆ) ಹೋಗು. send down (ವಿಶ್ವವಿದ್ಯಾನಿಲಯದ ಶಿಕ್ಷಿಯಾಗಿ) ಹೊರಗೆ ಹಾಕು; ಹೊರಗಟ್ಟು, ಕಳುಹಿಸಿಬಿಡು.
  8. (ಹಡಗಿನ ಚುಕ್ಕಾಣಿಯ ವಿಷಯದಲ್ಲಿ) (ಗಾಳಿ ಬೀಸುವ ದಿಕ್ಕಿಗೆ) ಚುಕ್ಕಾಣಿ ಚಕ್ರವನ್ನಿಡು; ಚಕ್ರ ತಿರುಗಿಸು.
  9. (ಸ್ಥಳದ ವಿಷಯದಲ್ಲಿ) ಕೆಳಗೆ; ಕೆಳಗಿನ ಜಾಗಕ್ಕೆ; ಕೆಳಗಿನ ಜಾಗದಲ್ಲಿ: blinds were down ಕಿಟಕಿತೆರೆಗಳನ್ನು ಇಳಿಸಲಾಗಿತ್ತು. he is not down yet ಅವನು (ಮಲಗುವ ಕೋಣೆ ಮೊದಲಾದವುಗಳಿಂದ) ಇನ್ನೂ ಕೆಳಕ್ಕೆ ಬಂದಿಲ್ಲ, ಇಳಿದು ಬಂದಿಲ್ಲ.
  10. (ಬ್ರಿಟಿಷ್‍ ಪ್ರಯೋಗ) ರಾಜಧಾನಿಯಲ್ಲಿಲ್ಲದೆ; ರಾಜಧಾನಿಯಿಂದ ದೂರದಲ್ಲಿ: down in the country ಗ್ರಾಮಾಂತರ ಪ್ರದೇಶದಲ್ಲಿ.
  11. ವಿಶ್ವವಿದ್ಯಾನಿಲಯಕ್ಕೆ ಹೋಗದೆ.
  12. ಬಿದ್ದ ಸ್ಥಿತಿಯಲ್ಲಿ: don’t hit a man who is down ನೆಲಕ್ಕೆ ಬಿದ್ದಿರುವ ಮನುಷ್ಯನನ್ನು ಹೊಡೆಯ ಬೇಡ.
  13. ಕೆಳಮಟ್ಟದಲ್ಲಿ; ಕೆಳಮಟ್ಟಕ್ಕೆ; ಇಳಿದು: the river is down ನದಿ ಇಳಿದಿದೆ; ಪ್ರವಾಹ ತಗ್ಗಿದೆ. temperature is down ತಾಪ ಇಳಿದಿದೆ; ಸೆಕೆ ಕಡಮೆಯಾಗಿದೆ.
  14. ಖಿನ್ನವಾಗಿ; ವಿಷಣ್ಣತೆಯಲ್ಲಿ; ಎದೆಗುಂದಿ; ಮನಸ್ಸು ಕುಗ್ಗಿ; ಉತ್ಸಾಹವಿಲ್ಲದೆ.
  15. ನುಂಗಿ; ಗಂಟಲಲ್ಲಿಳಿದು: could not get the pill down ಮಾತ್ರೆಯನ್ನು ನುಂಗಲಾಗಲಿಲ್ಲ.
  16. ನಿಯಂತ್ರಣದಲ್ಲಿ; ಅಧೀನದಲ್ಲಿ.
  17. ಕುಗ್ಗಿ; ಇಳಿದು; ಕಡಮೆಯಾಗಿ: the prices are down ಬೆಲೆಗಳು ಇಳಿದಿವೆ. rice is down ಅಕ್ಕಿಯ ಬೆಲೆ ಕಡಮೆಯಾಗಿದೆ; ಅಕ್ಕಿ ಅಗ್ಗವಾಗಿದೆ.
  18. (ಅಮೆರಿಕನ್‍ ಪ್ರಯೋಗ ಮತ್ತು ಕೆನಡಗಳ ಹುಟ್‍ಬಾಲ್‍ ಚೆಂಡಿನ ವಿಷಯದಲ್ಲಿ) ಆಟದ ಲೆಕ್ಕಕ್ಕಿರದಂತೆ; ಆಟಕ್ಕೆ ಪರಿಗಣಿತವಾಗದಂತೆ; ಆಟಕ್ಕೆ ಸೇರದಂತೆ.
  19. ಅವಮಾನದಲ್ಲಿ; ತಲೆತಗ್ಗಿಸುವಂಥ ಸ್ಥಿತಿಯಲ್ಲಿ.
  20. ಶ್ರೇಣಿಯಲ್ಲಿ ಕೆಳಗಿನ ಮಿತಿಯನ್ನು ಒಳಗೊಂಡು: from king down to cobbler ರಾಜನಿಂದ ಮೋಚಿಯವರೆಗೆ; ಅರಸನಿಂದ ಆಳಿನವರೆಗೆ.
  21. (ಕಾಲದಲ್ಲಿ) ಹಿಂದಿನಿಂದ ಅಂದಿನವರೆಗೆ: history of India down to ೧೯೪೮;- ೧೯೪೮ರ ವರೆಗಿನ ಭಾರತದ ಚರಿತ್ರೆ. custom handed down ಹಿಂದಿನಿಂದಲೂ ಬಂದ ಪದ್ಧತಿ, ವಾಡಿಕೆ.
  22. ನಯವಾದ ಸ್ಥಿತಿಗೆ; ನುಣ್ಣಗೆ; ಸೂಕ್ಷ್ಮ ಕಣಗಳಾಗಿ: grind down ನುಣ್ಣಗೆ ಅರೆ; ಹಿಟ್ಟಾಗುವಂತೆ ಬೀಸು.
  23. ಶವಾಗಿ; ಗಾತ್ರದಲ್ಲಿ ಕುಗ್ಗಿ; ಸಣ್ಣದಾಗಿ: boil down ಕುದಿಸಿ ತಗ್ಗಿಸು; ಇಂಗಿಸು. wear down ಸವೆದುಹೋಗು; ತೇದುಹೋಗು. thin down ಶವಾಗು; ತೆಳುವಾಗು.
  24. ತೆಳ್ಳಗಾಗಿ; ನೀರಾಗಿ: water down ನೀರಾಗಿಸು; ತೆಳ್ಳಗಾಗಿಸು.
  25. ತಗ್ಗಿದ ಸವರಕ್ಕೆ; ಕಡಮೆ ಶ್ರುತಿಗೆ.
  26. ಶ್ರದ್ಧೆಯಿಂದ; ಪಟ್ಟಾಗಿ; ಮನಃಪೂರ್ವಕವಾಗಿ: to get down to work ಕೆಲಸಕ್ಕೆ ಶ್ರದ್ಧೆಯಿಂದ ಕುಳಿತುಕೊ.
  27. ಅಂಗತ್ತನಾಗಿ; ನೆಲದ ಮೇಲೆ ಅಡ್ಡಡ್ಡಲಾಗಿ: they tied down the struggling animal ಒದ್ದಾಡುತ್ತಿದ್ದ ಪ್ರಾಣಿಯನ್ನು ಅಂಗತ್ತನಾಗಿ ಕಟ್ಟಿಹಾಕಿದರು.
  28. ಮೂಲಕ್ಕೆ; ನಿಜಸ್ಥಾನಕ್ಕೆ: the dogs tracked down the bear ನಾಯಿಗಳು ಕರಡಿಯ ಜಾಡನ್ನು ಅದು ಇದ್ದಲ್ಲಿಗೇ ಹಿಡಿದವು.
  29. ಮಲಗಿ; ಹಾಸಿಗೆ ಹಿಡಿದು: he is down with a cold ನೆಗಡಿಯಿಂದ ಅವನು ಹಾಸಿಗೆ ಹಿಡಿದಿದ್ದಾನೆ.
  30. ಕೆಳ (ಮಟ್ಟದ) ಸ್ಥಾನದಲ್ಲಿ; ಕೀಳು ಅಂತಸ್ತಿನಲ್ಲಿ: some people are kept down by lack of education ವಿದ್ಯಾಭ್ಯಾಸವಿಲ್ಲದೆ ಕೆಲಜನ ಕೆಳಮಟ್ಟದಲ್ಲೇ ಉಳಿಯುತ್ತಾರೆ.
  31. (ಬ್ರಿಟಿಷ್‍ ಪ್ರಯೋಗ) ಹಿಂದಾಗಿ; ಹಿಂದೆಬಿದ್ದು; ಹಿಂದುಳಿದು: the team was three goals down ಆ ತಂಡ ಮೂರು ಗೋಲು ಹಿಂದಾಗಿತ್ತು.
  32. (ಬ್ರಿಟಿಷ್‍ ಪ್ರಯೋಗ) ನಷ್ಟವಾಗಿ; ನಷ್ಟಹೊಂದಿ; ಕಳೆದುಕೊಂಡು: the side was six wickets down ಆ ಪಕ್ಷ ಆರು ವಿಕೆಟ್ಟು ಕಳೆದುಕೊಂಡಿತು. Rs. 50 down on the transaction ಆ ವ್ಯವಹಾರದಲ್ಲಿ 50 ರೂ. ನಷ್ಟವಾಯಿತು.
  33. ಶಾಂತವಾಗಿ; ನಿಶ್ಚಲವಾಗಿ; ಸುಮ್ಮನಾಗಿ: the wind died down ಗಾಳಿ ನಿಶ್ಚಲವಾಯಿತು. calm down ಶಾಂತವಾಗು; (ಕೋಪ, ಉದ್ರೇಕ, ಮೊದಲಾದವು) ಅಡಗು; ತಣ್ಣಗಾಗು; ಸ್ತಿಮಿತವಾಗು.
  34. ಕೆಳಗೆ; ಕೆಳಕ್ಕೆ; ಕೆಳಗಡೆಗೆ: sit down (ಕೆಳಗೆ) ಕುಳಿತುಕೊ. he bent down to speak to the patient ರೋಗಿಯೊಡನೆ ಮಾತನಾಡಲು ಅವನು ಕೆಳಕ್ಕೆ ಬಗ್ಗಿದ.
  35. ಕೆಳ ಸ್ಥಿತಿಯಲ್ಲಿ; ದುರವಸ್ಥೆಯಲ್ಲಿ; ದುರ್ದೆಸೆಯಲ್ಲಿ: don’t insult a man who is down ದುರವಸ್ಥೆಯಲ್ಲಿರುವವನನ್ನು ಅವಮಾನಮಾಡಬೇಡ.
ಪದಗುಚ್ಛ
  1. bill down for second reading to-day ಈ ದಿನ ಮಸೂದೆ ಎರಡನೆಯ ಪಠನಕ್ಕೆ, ವಾಚನಕ್ಕೆ ಸಿದ್ಧವಿದೆ.
  2. brought down by river ನದಿ ತಂದ; ನದಿಯಿಂದ – ತರಲ್ಪಟ್ಟ ಸಾಗಿಸಲ್ಪಟ್ಟ.
  3. copy down ಪ್ರತಿಮಾಡು; ನಕಲುಮಾಡು.
  4. fall down ಕೆಳಕ್ಕೆ ಬೀಳು.
  5. get down from (carriage etc.) (ಗಾಡಿ ಮೊದಲಾದವುಗಳಿಂದ) ಇಳಿ; ಇಳಿಸು.
  6. howl down ಅಬ್ಬರಿಸಿ ಸುಮ್ಮನಾಗಿಸು.
  7. run, ride, hunt down ಮುಂದೆ ಹೋಗಿ ಹಿಡಿ; ಓಡುತ್ತಾ, ಸವಾರಿ ಮಾಡುತ್ತಾ, ಮುಂದೆ ಓಡುತ್ತಿರುವ ಪ್ರಾಣಿಗಿಂತ ಮುಂದೆ ಹೋಗಿ ಹಿಡಿ.
ನುಡಿಗಟ್ಟು
  1. be down in the dumps (ಆಡುಮಾತು) ಮನಕುಗ್ಗಿ; ನಿರುತ್ಸಾಹದಲ್ಲಿ.
  2. be down on ಅಸಮಾಧಾನ, ಅಸಂತೋಷ – ವ್ಯಕ್ತಪಡಿಸು; ಅಸಮ್ಮತಿ ತೋರಿಸು.
  3. cash down = ನುಡಿಗಟ್ಟು \((20)\).
  4. come down in the world ಸಾಮಾಜಿಕ ದರ್ಜೆಯಲ್ಲಿ ಕೆಳಗಿಳಿ; ಉತ್ಕೃಷ್ಟ ಸ್ಥಾನದಿಂದ ಕೆಳಗಿನ ಸ್ಥಾನಕ್ಕೆ ಬೀಳು; ಸಮಾಜದ ಷ್ಟಿಯಲ್ಲಿ ಕೀಳಾಗು.
  5. come down on ತೀಕ್ಷ್ಣವಾಗಿ ಛೀಮಾರಿ ಮಾಡು; ತೀವ್ರವಾಗಿ ನಿಂದಿಸು.
  6. DO down.
  7. down at (ಅಮೆರಿಕನ್‍ ಪ್ರಯೋಗ at the) heel
    1. (ಜೋಡಿನ ವಿಷಯದಲ್ಲಿ) ಹಿಮ್ಮಡಿ ಸವೆದುಹೋದ.
    2. (ವ್ಯಕ್ತಿಯ ವಿಷಯದಲ್ಲಿ) ಚಿಂದಿ ತೊಟ್ಟ; ದುಃಸ್ಥಿತಿಯಲ್ಲಿರುವ.
    3. (ವ್ಯಕ್ತಿಯ ವಿಷಯದಲ್ಲಿ) ಅಚ್ಚುಕಟ್ಟಿಲ್ಲದ; ಓರಣವಿಲ್ಲದ.
  8. down in the mouth (ಆಡುಮಾತು) ಖಿನ್ನವಾದ; ವಿಷಣ್ಣನಾದ: why do you look so down in the mouth? ನೀನೇಕೆ ಅಷ್ಟು ಖಿನ್ನನಾಗಿ ಕಾಣುತ್ತೀಯೆ?
  9. down on one’s luck ದುರಷ್ಟದಿಂದ ಎದೆಗುಂದಿ, ದಿಕ್ಕುಗೆಟ್ಟು.
  10. down to one’s last penny ದುಡ್ಡು ಮುಗಿದು: ಕೊನೆಯ ಕಾಸಿನವರೆಗೆ; ಹಣ ಖಾಲಿಯಾಗಿ.
  11. down to one’s underwear ಒಳಂಗಿಯ ಸ್ಥಿತಿ ತಲುಪಿ; ದುಃಸ್ಥಿಗೆ ಬಿದ್ದು; ನಿರ್ಗತಿಕನಾಗಿ.
  12. down to the ground ಪೂರ್ತಿಯಾಗಿ: ಸಂಪೂರ್ಣವಾಗಿ.
  13. down with ತೊಲಗಲಿ; ನಾಶವಾಗಲಿ; ಧಿಕ್ಕಾರ: down with fascists ಸರ್ವಾಧಿಕಾರಿಗಳು ತೊಲಗಲಿ; ಸರ್ವಾಧಿಕಾರಿಗಳಿಗೆ ಧಿಕ್ಕಾರ.
  14. get down to work, business, etc., ಕೆಲಸ ಪ್ರಾರಂಭಿಸು; ಕಾರ್ಯ ಶುರುಮಾಡು; ಕೆಲಸಕ್ಕಿಳಿ.
  15. $^1$go down.
  16. go down before ಸೋಲು: Germany went down before the Allies ಮಿತ್ರ ರಾಷ್ಟ್ರಗಳ ಕೈಯಲ್ಲಿ ಜರ್ಮನಿ ಸೋತಿತು.
  17. go down in ದಾಖಲಾಗು; ನಮೂದಾಗು; ಲಿಖಿತವಾಗು; ಲಿಖಿತದಲ್ಲಿ ನೆನಪುಳಿ: it all goes down in his diary ಅದೆಲ್ಲ ಅವನ ದಿನಚರಿಯಲ್ಲಿ ನಮೂದಾಗುತ್ತದೆ. Nehru will go down in history as a great statesman ಚರಿತ್ರೆಯಲ್ಲಿ ನೆಹ್ರೂ ಒಬ್ಬ ದೊಡ್ಡ ರಾಜನೀತಿಜ್ಞರಾಗಿ ಉಳಿಯುತ್ತಾರೆ.
  18. go down to
    1. (ಒಂದು ಸ್ಥಳಕ್ಕೆ) ಹೋಗು; ಭೇಟಿ ಕೊಡು.
    2. ಅಲ್ಲಿಯವರೆಗೆ ಇರು; ಅದುವರೆಗೆ ಮುಂದುವರಿ: go down to the present day ಇಂದಿನವರೆಗೆ ಮುಂದುವರಿ.
  19. go down with (ಕೇಳುಗ, ಓದುಗ, ಪ್ರೇಕ್ಷಕ, ಮೊದಲಾದವರಿಂದ) ಒಪ್ಪಿಗೆ ಪಡೆ; ಅಂಗೀಕಾರ ಪಡೆ; ಅಂಗೀತವಾಗು; ಸಮ್ಮತಿ ಪಡೆ; (ಅವರಿಗೆ) ಹಿಡಿಸು; ಒಪ್ಪಿಗೆಯಾಗು; ಸಮ್ಮತವಾಗು: the new novel went down well with middle class readers ಹೊಸ ಕಾದಂಬರಿ ಮಧ್ಯಮ ವರ್ಗದ ಓದುಗರಿಗೆ ಚೆನ್ನಾಗಿ ಹಿಡಿಸಿತು. that explanation won’t go down with me ಆ ವಿವರಣೆ ನನಗೆ ಒಪ್ಪಿಗೆಯಾಗದು.
  20. money down ಕೈಮೇಲೆ ಹಣಕೊಡು; ಕೈಮೇಲೆ ಕಾಸುಕೊಡು.
  21. pay down ದುಡ್ಡುಬಿಚ್ಚು; ದುಡ್ಡು ಮಡಗು; ಹಣ ಸಲ್ಲಿಸು; ತಕ್ಷಣ ಹಣ ಪಾವತಿಮಾಡು.
  22. put down (ಕಾಗದದ ಮೇಲೆ) ಬರೆ.
  23. put down for ಲಿಖಿತವಾಗಿರು; ದಾಖಲೆಗೊಂಡಿರು: you are put down for speaking at the meeting ಸಭೆಯ ಕಾರ್ಯಕ್ರಮದಲ್ಲಿ ಭಾಷಣಕಾರನಾಗಿ ನಿನ್ನ ಹೆಸರನ್ನು ಸೇರಿಸಿದೆ, ದಾಖಲೆ ಮಾಡಿದೆ.
  24. SET down.
  25. shout down ಕೂಗಿ – ಸುಮ್ಮನಾಗಿಸು, ತೆಪ್ಪಗಾಗಿಸು, ಬಾಯಿಕಟ್ಟು, ನಿಶ್ಯಬ್ದವಾಗಿಸು, ಮೌನವಾಗಿಸು.
  26. take down ಹೇಳಿದುದನ್ನು ಬರೆದುಕೊ.
  27. write down = ನುಡಿಗಟ್ಟು \((22)\).
  28. down south (ಅಮೆರಿಕನ್‍ ಪ್ರಯೋಗ) ದಕ್ಷಿಣದ ಸಂಸ್ಥಾನಗಳಲ್ಲಿ.
  29. down under
    1. ಭೂಗೋಳದ ಎದುರುಬದುರು ಸ್ಥಳಗಳಲ್ಲಿ; ನೇರವಾಗಿ ಅಭಿಮುಖವಾದ ಸ್ಥಳಗಳಲ್ಲಿ.
    2. ಆಸ್ಟ್ರೇಲಿಯ ಮೊದಲಾದ ದೇಶಗಳಲ್ಲಿ.