See also 1down  2down  3down  4down  6down  7down
5down ಡೌನ್‍
ಗುಣವಾಚಕ
( ತಮರೂಪ downmost).
  1. ಕೆಳಗಡೆಯ; ಕೆಳಮುಖವಾಗಿರುವ.
  2. ಕೆಳಗಿರುವ; ಅಡಿಯಲ್ಲಿರುವ.
  3. ಕುಗ್ಗಿದ; ಕಳೆಗುಂದಿದ; ಜೋಲುಮೋರೆಯ; ಖಿನ್ನ; ಸಪ್ಪೆಯಾದ; ಬೇಸರದ; ಬೇಜಾರಿನ: his face wore a down expression ಅವನ ಮುಖ ಕಳೆಗುಂದಿತ್ತು.
  4. (ವಸ್ತುವನ್ನು ಕೊಳ್ಳುವಾಗ ಯಾ ಪಡೆಯುವಾಗ ಪೂರ್ತಿಬೆಲೆಯ) ಸ್ವಲ್ಪ ಭಾಗದ; ಮೊದಲ ಕಂತಿನ.
  5. (ಜೂಜಿನಲ್ಲಿ) ಹಣ ಕಳೆದುಕೊಳ್ಳುವ ಯಾ ಹಣ ಕಳೆದುಕೊಂಡ: after an hour at cards he was down Rs.10 ಒಂದು ಗಂಟೆಯ ಇಸ್ಪೀಟ್‍ ಆಟದ ನಂತರ ಅವನು ಹತ್ತು ರೂಪಾಯಿ ಕಳೆದುಕೊಂಡ.
  6. ಬಾಜಿಕಟ್ಟಿದ; ಪಂದ್ಯಕಟ್ಟಿದ: are you down for the fourth race? ನಾಲ್ಕನೇ ರೇಸಿಗೆ ಬಾಜಿ ಕಟ್ಟಿದ್ದೀಯೋ?
ಪದಗುಚ್ಛ
  1. down beat (ಸಂಗೀತ) (ವಾದ್ಯಮೇಳದ ನಿರ್ದೇಶಕನು ಕೋಲಿನಿಂದಲೋ ಕೈಯಿಂದಲೋ ಕೆಳಕ್ಕೆ ಬೀಸಿ ಸೂಚಿಸುವ) ದ್ರುತತಾಳ.
  2. down draught ಇಳಿಗಾಳಿ; ಕಿಗ್ಗಾಳಿ; ಮೇಲಿನಿಂದ ಕೆಳಕ್ಕೆ ನುಗ್ಗುವ (ಮುಖ್ಯವಾಗಿ ಹೊಗೆ ಕೊಳವೆಯಲ್ಲಿ ನುಗ್ಗಿ ಕೋಣೆಯೊಳಕ್ಕೆ ಬರುವ) ಗಾಳಿ.
  3. down leap ಕೆಳನೆಗೆತ.
  4. down look ಕೆಳನೋಟ; ಕೆಳಷ್ಟಿ.
  5. down platform ರಾಜಧಾನಿಯಿಂದ ಯಾ ಪ್ರಮುಖ ನಗರದಿಂದ ಹೋಗುವ ಯಾ ಅಲ್ಲಿಂದ ಬರುವ ರೈಲುಗಳಿಗಾಗಿ ಏರ್ಪಡಿಸಿರುವ ಪ್ಲಾಟ್‍ಹಾರಂ.
  6. down train ರಾಜಧಾನಿಯಿಂದ ಯಾ ಪ್ರಮುಖನಗರದಿಂದ ಹೊರಡುವ ಯಾ ಅಲ್ಲಿಂದ ಬರುವ ರೈಲು.