See also 1down  2down  3down  5down  6down  7down
4down ಡೌನ್‍
ಉಪಸರ್ಗ
  1. ಉದ್ದಕ್ಕೂ ಕೆಳಗೆ; ಕೆಳಗಡೆಯಲ್ಲಿ; ಕೆಳಮೊಗವಾಗಿ.
  2. ಮೇಲಿನಿಂದ ಕೆಳಗಿನವರೆಗೆ.
  3. ಕೆಳಭಾಗದಲ್ಲಿ; ಕೆಳಮುಖದಲ್ಲಿ: situated down the Ganges ಗಂಗಾನದಿಯ ಕೆಳಭಾಗದಲ್ಲಿ.
  4. ಉದ್ದಕ್ಕೂ: walk down the road ರಸ್ತೆಯುದ್ದಕ್ಕೂ ನಡೆದು ಹೋಗು.
  5. (ಕಾಲದ ವಿಷಯದಲ್ಲಿ) ಹಿಂದಿನಿಂದ ಅದುವರೆಗೆ: down the ages ಯುಗಾಂತರಗಳ ಮೂಲಕ ವರ್ತಮಾನದವರೆಗೆ.
ಪದಗುಚ್ಛ
  1. down stage ರಂಗದ – ಮುಂದುಗಡೆ, ಮುಂಭಾಗದಲ್ಲಿ.
  2. down (the) wind ಗಾಳಿಯೊಡನೆ; ಗಾಳಿಯ ಜೊತೆಗೆ; ಗಾಳಿಯ ದಿಕ್ಕಿನಲ್ಲಿ; ಗಾಳಿ ಬೀಸುವ ದಿಕ್ಕಿನಲ್ಲಿ.
  3. down town
    1. (ನಗರದ ಎತ್ತರದ ಯಾ ಹೊರ ಭಾಗದಿಂದ) ನಗರದೊಳಕ್ಕೆ.
    2. (ಅಮೆರಿಕನ್‍ ಪ್ರಯೋಗ) ನಗರದ – ಪೇಟೆಗೆ, ವ್ಯಾಪಾರ ವಿಭಾಗಕ್ಕೆ.
    3. (ಅಮೆರಿಕನ್‍ ಪ್ರಯೋಗ) ನಗರದ – ವ್ಯಾಪಾರ ಪ್ರದೇಶದಲ್ಲಿ, ಪೇಟೆಯಲ್ಲಿ.
  4. up and down ಮೇಲೆ ಕೆಳಗೆ; ಮೇಲೂ ಕೆಳಗೂ; ಅಲ್ಲಿಂದಿಲ್ಲಿಗೆ; ಹಿಂದಕ್ಕೂ ಮುಂದಕ್ಕೂ; ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ.
ನುಡಿಗಟ್ಟು

let go down the wind ಕೈಬಿಡು; ತೊರೆ; ಬಿಟ್ಟುಬಿಡು; ತ್ಯಜಿಸು.