See also 1round  2round  4round  5round
3round ರೌಂಡ್‍
ಕ್ರಿಯಾವಿಶೇಷಣ
  1. ಸುತ್ತುತ್ತ; ಸುತ್ತಲೂ ತಿರುಗುತ್ತ; ಪರಿಭ್ರಮಿಸುತ್ತ (ರೂಪಕವಾಗಿ ಸಹ): earth goes round ಭೂಮಿಯು ಸುತ್ತುತ್ತ ಹೋಗುತ್ತದೆ.
  2. ಸುತ್ತ ಎಲ್ಲರಿಗೂ; ಸುತ್ತ ಎಲ್ಲ ಕಡೆಯೂ; ಪ್ರತಿಯೊಂದು ದಿಕ್ಕಿನಲ್ಲಿಯೂ: glasses round (ಗೋಷ್ಠಿಯ) ಸುತ್ತ ಎಲ್ಲರಿಗೂ ಮದ್ಯ.
  3. ಬಳಸಿಕೊಂಡು; ಸುತ್ತುಬಳಸಿ; ಬಳಸಾದ ದಾರಿಯಲ್ಲಿ; ಸುತ್ತಿಕೊಂಡು: will you jump or go round ಹಾರುತ್ತೀಯೋ, ಬಳಸಿಕೊಂಡು ಹೋಗುತ್ತೀಯೋ?
  4. ಆರಂಭಸ್ಥಿತಿಗೆ ಯಾ ಪೂರ್ವಸ್ಥಿತಿಗೆ ಮರಳಿ: summer soon comes round ಸದ್ಯದಲ್ಲೇ ಬೇಸಿಗೆ ಮತ್ತೆ ಬರುತ್ತದೆ, ಆರಂಭವಾಗುತ್ತದೆ.
  5. ವಿರುದ್ಧವಾದ ಅಭಿಪ್ರಾಯ, ಸ್ಥಿತಿ ಮೊದಲಾದವಕ್ಕೆ ಮತ್ತೆ ತಿರುಗಿ: they were angry but I soon won them round ಅವರು ಕೆಂಡಮಂಡಲವಾಗಿದ್ದರು, ನಾನು ಅವರನ್ನು ಸುಮುಖರನ್ನಾಗಿಸಿದೆ.
  6. ಸರ್ವತೋಮುಖವಾದ; ಕೇಂದ್ರಬಿಂದುವಿನಿಂದ ಸುತ್ತ ಎಲ್ಲ ದಿಕ್ಕಿಗೂ ಯಾ ದಿಕ್ಕಿನಲ್ಲೂ: every one for a mile round ಒಂದು ಮೈಲಿ ಹಾಸಲೆಯಲ್ಲಿನ ಪ್ರತಿಯೊಬ್ಬರೂ.
  7. ಒಬ್ಬ ವ್ಯಕ್ತಿಯ ಮನೆ ಮೊದಲಾದವಕ್ಕೆ: will be round soon ಸದ್ಯದಲ್ಲೇ ಮನೆಯಲ್ಲಿರುತ್ತೇವೆ.
  8. ಇನ್ನೂ ಹೆಚ್ಚು ಪ್ರಮುಖವಾದ ಯಾ ಅನುಕೂಲವಾದ ಸ್ಥಾನಕ್ಕೆ: brought the car round ಕಾರನ್ನು ಇನ್ನೂ ಅನುಕೂಲವಾದ ಸ್ಥಾನಕ್ಕೆ ತಂದ.
  9. ಸುತ್ತಳತೆಯಲ್ಲಿ (ನಿರ್ದಿಷ್ಟ ದೂರವನ್ನು) ಹೊಂದಿರುವ.
ಪದಗುಚ್ಛ
  1. all round ಸುತ್ತುಮುತ್ತಲೂ; ಸುತ್ತಲೂ.
  2. all the year round ವರ್ಷಪೂರ್ತ; ವರ್ಷವೆಲ್ಲ.
  3. an all round man ಬಗೆಬಗೆಯ ಸಾಮರ್ಥ್ಯವುಳ್ಳ ಮನುಷ್ಯ.
  4. ask one round ಒಬ್ಬನನ್ನು (ಅವನ ಮನೆಯಿಂದ ಹೊರಟು) ತನ್ನ ಮನೆಗೆ ಆಹ್ವಾನಿಸು, ಬರುವಂತೆ ಕರೆ.
  5. for a mile round ಒಂದು ಮೈಲಿ ಸುತ್ತಲೂ, ಫಾಸಲೆಯಲ್ಲಿ: all the neighbours for a mile round ಒಂದು ಮೈಲಿ ಸುತ್ತಲೂ, ಇರುವ ಎಲ್ಲ ನೆರೆಹೊರೆಯವರು.
  6. go a long way round ಬಳಸಿಕೊಂಡು ದೂರ ದಾರಿಯಲ್ಲಿ ಹೋಗು.
  7. Home Rule all round ಪ್ರತಿಯೊಂದು ರಾಷ್ಟ್ರಕ್ಕೂ ಸ್ವರಾಜ್ಯ.
  8. hung round with ಸುತ್ತ ತೂಗುಹಾಕಲ್ಪಟ್ಟ: room hung round with portraits ಭಾವಚಿತ್ರಗಳನ್ನು ಸುತ್ತಲೂ ತೂಗುಹಾಕಿರುವ ಕೋಣೆ.
  9. order the car round ವಾಹನವನ್ನು ಮೋಟಾರುಖಾನೆಯಿಂದ ಮನೆಯ ಬಾಗಿಲಿಗೆ ತರಹೇಳು.
  10. right around = ಪದಗುಚ್ಛ\((1)\).
  11. round and round ಅನೇಕ ಬಾರಿ ಸುತ್ತುತ್ತ.
  12. show one round ಒಬ್ಬನಿಗೆ ನೋಡಬೇಕಾದ ಸ್ಥಳಗಳನ್ನು ತೋರಿಸು.
  13. six inches round ಸುತ್ತಳತೆಯಲ್ಲಿ ಆರು ಅಂಗುಲ.
  14. sleep the clock round ಹನ್ನೆರಡು ಯಾ ಇಪ್ಪತ್ನಾಲ್ಕು ಘಂಟೆಗಳ ಕಾಲ ನಿದ್ದೆಮಾಡು.
  15. spread round ಎಲ್ಲ ಕಡೆಗೂ ಹರಡು: spread round destruction ಎಲ್ಲ ಕಡೆಗೂ ನಾಶವನ್ನುಂಟುಮಾಡು.
  16. tea was served round ಚಹಾವನ್ನು ಸುತ್ತ ಎಲ್ಲರಿಗೂ ಕೊಡಲಾಯಿತು.
  17. win one round ತನ್ನ ಕಡೆಗೆ ಒಲಿಸಿಕೊ; ವಿರುದ್ಧ ಅಭಿಪ್ರಾಯಕ್ಕೆ ತಿರುಗಿಸು: soon won him round ಅವನನ್ನು ಬೇಗ ತನ್ನ ಕಡೆಗೆ ಒಲಿಸಿಕೊಂಡನು.
  18. wheels go round ಗಾಲಿಗಳು ಸುತ್ತ ತಿರುಗುತ್ತವೆ.