See also 1round  2round  3round  4round
5round ರೌಂಡ್‍
ಸಕರ್ಮಕ ಕ್ರಿಯಾಪದ
  1. ದುಂಡಗೆ, ಗುಂಡಗೆ ಮಾಡು: rounded mouth ದುಂಡಗೆ ಮಾಡಿದ, ದುಂಡಗಿರುವ ಬಾಯಿ.
  2. ಪೂರ್ಣಮಾಡು; ಪೂರ್ತಿಮಾಡು; ಸಮಗ್ರಮಾಡು; ಸಮರೂಪಕ್ಕೆ ತರು; ಸುವ್ಯವಸ್ಥೆಗೆ ತರು: round off a sentence ವಾಕ್ಯವನ್ನು (ಸರಳವಾಗಿ) ಪೂರ್ತಿಮಾಡಿದನು.
    1. (ಸುತ್ತ ಸವಾರಿಮಾಡಿ) ದನಗಳನ್ನು ಒಟ್ಟುಗೂಡಿಸು, ಮಂದೆಗೂಡಿಸು.
    2. (ಅಲೆದಾಡುವವರು, ಅಪರಾಧಿಗಳು ಮೊದಲಾದವರನ್ನು) ಒಂದು ಕಡೆ ಸೇರಿಸು.
  3. (ಭೂಶಿರ ಮೊದಲಾದವನ್ನು) ಸುತ್ತಿಕೊಂಡು ಹೋಗು; ಬಳಸಿಕೊಂಡು ಸಾಗು.
  4. (ವಿರಳ ಪ್ರಯೋಗ) ತಿರುಗಿಸು; ಸುತ್ತಿಸು.
  5. (ಸ್ವರವನ್ನು) ತುಟಿಗಳನ್ನು ದುಂಡಗೆ ಮಾಡಿ ಉಚ್ಚರಿಸು.
  6. (ಸಂಖ್ಯೆಯನ್ನು) ಕರಾರುವಾಕ್ಕಲ್ಲದ, ಆದರೆ ಅನುಕೂಲಕರವಾದ ರೂಪದಲ್ಲಿ ಹೇಳು; ಭಾಗಾಂಶಗಳನ್ನು ತೆಗೆದುಹಾಕಿ ಪೂರ್ಣಾಂಕ ಮಾಡು.
ಅಕರ್ಮಕ ಕ್ರಿಯಾಪದ
  1. ದುಂಡಗೆ, ಗುಂಡಗೆ ಆಗು: her form is rounding ಅವಳ ಆಕಾರ ದುಂಡಗೆ ಆಗುತ್ತಿದೆ.
  2. (ವಿರಳ ಪ್ರಯೋಗ) ತಿರುಗು; ಸುತ್ತು: rounded on his heel to look at me ನನ್ನ ಕಡೆ ನೋಡಲು ಅವನ ಹಿಮ್ಮಡಿಯ ಮೇಲೆ ತಿರುಗಿದನು.
ಪದಗುಚ್ಛ
  1. round boat off ಅಲೆ ಎದುರಿಸುವಂತೆ ದೋಣಿಯನ್ನು ತಿರುಗಿಸು.
  2. round dog’s ears ನಾಯಿಯ ಕಿವಿಗಳನ್ನು ದುಂಡಗೆ ಕತ್ತರಿಸು.
  3. round down (ಸಂಖ್ಯೆಗಳನ್ನು) ತಗ್ಗಿಸು; ಕಡಿಮೆ ಮಾಡು; ಇಳಿಸು; ಇಳಿಸಿ ಪೂರ್ಣಾಂಕ ಮಾಡು.
  4. round off (or out)
    1. ಪೂರ್ಣವಾದ, ಸಮನಾದ ಯಾ ವ್ಯವಸ್ಥಿತ ಸ್ಥಿತಿಗೆ ತರು.
    2. ನಯಗೊಳಿಸು; ಮೂಲೆಗಳನ್ನು ಯಾ ಕೋನಗಳನ್ನು ಸಮರಿ ಗುಂಡಾಗಿಸು: round off the angles ಮೂಲೆಗಳನ್ನು ತಿರುಗಿಸು, ದುಂಡುಮಾಡು; ಮೂಲೆಗಳ ಚೂಪನ್ನು ಕಡಿಮೆ ಮಾಡು.
  5. round on a person
    1. ಒಬ್ಬನಿಗೆ ಥಟ್ಟನೆ ಪ್ರತ್ಯುತ್ತರ ಕೊಡು.
    2. (ಒಬ್ಬನ ಮೇಲೆ) ಅನಿರೀಕ್ಷಿತವಾಗಿ, ಹಠಾತ್ತಾಗಿ–ಎದುರು ಬೀಳು, ತಿರುಗಿ ಬೀಳು.
    3. (ಅಪರಾಧ ತಿಳಿಸುವವನ ವಿಷಯದಲ್ಲಿ) ಒಬ್ಬನ ಅಪರಾಧ ತಿಳಿಸು; ದೋಷಾಪಾದಕನಾಗು.
  6. round the angles = ಪದಗುಚ್ಛ(4b).
  7. round up (ಮುಖ್ಯವಾಗಿ ಸುತ್ತಲೂ ಸುತ್ತಾಡಿ) ಸಂಗ್ರಹಿಸು ಯಾ ಒಟ್ಟು ತರು, ಸೇರಿಸು.
  8. round vowel ತುಟಿಯನ್ನು ದುಂಡು ತಿರುವಿ ಸ್ವರೋಚ್ಚಾರ ಮಾಡು.
  9. ship rounds ಹಡಗು ಅಲೆಗೆದುರಾಗಿ ತಿರುಗಿ ನಿಲ್ಲುತ್ತದೆ.