See also 2round  3round  4round  5round
1round ರೌಂಡ್‍
ಗುಣವಾಚಕ
  1. ದುಂಡನೆಯ; ಗುಂಡಗಿರುವ; ಬಟ್ಟ; ವರ್ತುಲಾಕಾರದ; ಮಂಡಲಾಕಾರದ; ಚಕ್ರಾಕಾರದ; ಗೋಳಾಕಾರದ; ಉರುಳೆಯಾಕಾರದ: the round world ಗೋಳಾಕಾರದ ಪ್ರಪಂಚ.
  2. ಸುತ್ತು ತಿರುಗಿನ; ತ್ತಚಲನೆಯ: round dance ಸುತ್ತುತಿರುಗಿನ ತ್ಯ; ಮಂಡಲ ತ್ಯ; ಜೊತೆಗಾರರು ತಬ್ಬಿಕೊಂಡು ಒಬ್ಬರ ಸುತ್ತ ಒಬ್ಬರು ತಿರುಗುತ್ತಾ ಕುಣಿಯುವ ಒಂದು ಬಗೆಯ ತ್ಯ.
    1. ಸಂಪೂರ್ಣ; ಪೂರ್ತಿ; ಪೂರ್ಣ: round dozen (ಒಂದೂ ಕಡಮೆಯಿಲ್ಲದೆ) ಪೂರ್ತಿ ಹನ್ನೆರಡು.
    2. ಸಂತತ; ನಿರಂತರ; ಅಖಂಡ; ಸಮಗ್ರ.
    3. ಪೂರ್ಣ; ಪೂರ್ತಿ ಅಭಿವ್ಯಕ್ತವಾದ ಯಾ ಬೆಳೆದ.
    4. ಒಡೆದಿರದ ಯಾ ಕುಂದಿಲ್ಲದ.
    5. ಪೂರ್ತಿಯಾದ ಯಾ ಕೊರತೆಯಿಲ್ಲದ; ಇಡಿಯಾದ.
    1. ಬಟುವಾದ; ಇಡಿಯಾದ; ಪೂರ್ಣ: round numbers (ಚಿಲ್ಲರೆ ಸಂಖ್ಯೆ ಬಿಟ್ಟು) ಬಟುವು ಸಂಖ್ಯೆಗಳು; ಪೂರ್ಣಾಂಕಗಳು (10, 100 ಮೊದಲಾದವು).
    2. (ಸಂಖ್ಯೆಯ ವಿಷಯದಲ್ಲಿ) ಒಟ್ಟಾರೆ; ಒಟ್ಟಿನಲ್ಲಿ; ಇಡಿಯಾಗಿ ಹೇಳುವುದಾದರೆ; ಅನುಕೂಲಕ್ಕಾಗಿ ಭಿನ್ನರಾಶಿ ಮತ್ತು ದಶಮಾಂಶಗಳನ್ನು ತೆಗೆದುಹಾಕಿ ಇಡಿ ಸಂಖ್ಯೆಯನ್ನಾಗಿ ವ್ಯಕ್ತಪಡಿಸುವ: spent 13.86 rupees or in round figures 14 rupees 13.86 ರೂಪಾಯಿಗಳನ್ನು ಯಾ ಇಡಿಯಾಗಿ ಹೇಳುವುದಾದರೆ 14 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
  3. ಸರಿಸುಮಾರು; ಹೆಚ್ಚುಕಡಿಮೆ.
  4. (ಹಣದ ವಿಷಯದಲ್ಲಿ) ಸಾಕಷ್ಟು; ಕಡಿಮೆಯಲ್ಲದ; ತಕ್ಕಮಟ್ಟಿನ; ದೊಡ್ಡ; ಅಧಿಕ: a round sum ತಕ್ಕಮಟ್ಟಿನ ಮೊತ್ತ; ದೊಡ್ಡ ಮೊತ್ತ.
  5. ಸರಾಗವಾದ; ಸುಗಮವಾದ; ನಿರರ್ಗಳ; ತಿಳಿಯಾದ; ಸರಳ: a round style ಸರಾಗವಾದ ಶೈಲಿ; ನಿರರ್ಗಳ ಶೈಲಿ.
    1. (ಧ್ವನಿಯ ವಿಷಯದಲ್ಲಿ) ಕರ್ಕಶವಲ್ಲದ; ಬಿರುಸಲ್ಲದ; ಒರಟಲ್ಲದ; ಗಂಭೀರ: a round voice ಗಂಭೀರ ಧ್ವನಿ; ತುಂಬು ದನಿ.
    2. (ಧ್ವನಿವಿಜ್ಞಾನ) (ಸ್ವರದ ವಿಷಯದಲ್ಲಿ) ಓಷ್ಠ್ಯ; ತುಟಿಗಳನ್ನು ದುಂಡಗೆ ಮಾಡಿ ಉಚ್ಚರಿಸಿದ.
  6. ನೇರವಾದ; ಸರಳ; ಪ್ರಾಮಾಣಿಕ; ನಿಷ್ಕಪಟ; ಋಜು; ಮುಚ್ಚುಮರೆಯಿಲ್ಲದೆ ಆಡಿಬಿಡುವ; ಯಥಾವತ್ತಾದ: round unvarnished tale ವಾಸ್ತವಿಕ ಸಂಗತಿ; ಯಥಾವತ್ತಾದ ಕಥನ; ನಿಜಸ್ಥಿತಿ.
  7. (ಹೇಳಿಕೆ ಮೊದಲಾದವುಗಳ ವಿಷಯದಲ್ಲಿ) ನಿಸ್ಸಂದಿಗ್ಧ; ಸ್ಪಷ್ಟವಾದ; ಸಂದೇಹಕ್ಕೆ ಆಸ್ಪದವಿಲ್ಲದ: a round oath ಸ್ಪಷ್ಟವಾದ ಆಣೆ, ಶಪಥ.
  8. ವರ್ತುಲ ಚಲನೆಯ; ತ್ತಾಕಾರವಾಗಿ ಚಲಿಸುವುದರಿಂದ, ಮಂಡಲಾಕಾರವಾಗಿ ಸುತ್ತುವುದರಿಂದ, ಚಕ್ರಾಕಾರವಾಗಿ ತಿರುಗುವುದರಿಂದ–ಮಾಡಿದ ಯಾ ಅಂಥ ಚಲನೆಯನ್ನು ಒಳಗೊಂಡ.
ಪದಗುಚ್ಛ
  1. a round $^1$peg in a square hole.
  2. at a round trot ಜೋರಾಗಿ; ಕಸುವಿನಿಂದ.
  3. be round with one (ಪ್ರಾಚೀನ ಪ್ರಯೋಗ) (ಒಬ್ಬನಿಗೆ) ನಿರ್ದಾಕ್ಷಿಣ್ಯವಾಗಿ ಸತ್ಯವನ್ನು ಹೇಳಿಬಿಡು; ಸ್ಪಷ್ಟವಾಗಿ ಹೇಳಿಬಿಡು.
  4. bring up with a round turn ಥಟ್ಟನೆ ಜಗ್ಗಿ ಯಾ ದಿಡೀರನೆ ಯಾ ಇದ್ದಕ್ಕಿದ್ದಂತೆ–ಚಲನೆ ನಿಲ್ಲಿಸು.
  5. round buckler, hole ದುಂಡು ಗುರಾಣಿ, ತೂತು.
  6. round table conference ದುಂಡುಮೇಜಿನ ಪರಿಷತ್ತು; ಎಲ್ಲಾ ಸದಸ್ಯರೂ ಸಮಾನ ಸ್ಥಾನ ಪಡೆದಿರುವ ಯಾವುದೇ ಪರಿಷತ್ತು ಯಾ ಅನೌಪಚಾರಿಕ ಸಮ್ಮೇಳನ.
  7. the Round Table ದುಂಡುಮೇಜು:
    1. ಎಲ್ಲರಿಗೂ ಸಮಾನ ಗೌರವವಿರುವಂತೆ ಇಂಗ್ಲೆಂಡಿನ ಪೌರಾಣಿಕ ದೊರೆ ಆರ್ಥರ್‍ ಮತ್ತು ಅವನ ವೀರರು ಸಮಾನಸ್ಕಂಧರಾಗಿ ಸುತ್ತ ಕುಳಿತುಕೊಳ್ಳುತ್ತಿದ್ದ ದುಂಡು ಮೇಜು.
    2. (round table) ಸಭೆಸೇರಿ ಸಮ್ಮೇಳನದಲ್ಲಿ ಚರ್ಚೆ ಮೊದಲಾದವನ್ನು ನಡೆಸಿ ಸಮಾಜಸೇವಾ ಕಾರ್ಯಕ್ರಮವನ್ನು ಕೈಗೊಳ್ಳುವ ಒಂದು ಅಂತಾರಾಷ್ಟ್ರೀಯ ಸೇವಾಸಂಘ.