See also 1round  2round  3round  5round
4round ರೌಂಡ್‍
ಉಪಸರ್ಗ
  1. ಸುತ್ತು(ಗಟ್ಟು)ವಂತೆ; ಬಳಸುವಂತೆ; ಸುತ್ತುವರಿಯುವಂತೆ: tour round the world ಪ್ರಪಂಚ ಸುತ್ತಿಕೊಂಡು ಬರುವ ಪ್ರವಾಸ.
  2. (...ಕ್ಕೆ) ಎಡೆಬಿಡದ ಭೇಟಿಗಳಿಂದ; ಪದೇಪದೇ ಹೋಗಿ: hawks them round the cafes ಕಾಹಿಯಂಗಡಿಗಳಿಗೆ ಪದೇಪದೇ ಅವುಗಳನ್ನು ಮಾರಾಟಕ್ಕಾಗಿ ಹೊತ್ತುಕೊಂಡು ತಿರುಗುತ್ತಾನೆ.
  3. ಸುತ್ತಲೂ; ಸುತ್ತಮುತ್ತ; ಪರಿಧಿಯ ಮೇಲಿನ ಸ್ಥಾನಗಳಲ್ಲಿ, ಸ್ಥಾನಗಳವರೆಗೆ: station them round the field ಬಯಲಿನ ಸುತ್ತಲೂ ಅವರನ್ನು ನಿಲ್ಲಿಸು.
  4. ಸುತ್ತಲೂ; ವಿವಿಧ ಕಡೆಗಳಲ್ಲಿ; ಒಂದು ಕಡೆಯಿಂದ ಬೇರೆಬೇರೆ ಕಡೆಗಳಲ್ಲಿ: diffuses cheerfulness round her ಅವಳ ಸುತ್ತಲೂ ಉಲ್ಲಾಸವನ್ನು ಹರಡುತ್ತಾಳೆ (ಬೀರುತ್ತಾಳೆ).
  5. ಸುತ್ತಲೂ; ಕೇಂದ್ರಬಿಂದುವಾಗಿ ಹೊಂದಿ: turns round its centre of gravity ಅದರ ಗುರುತ್ವಕೇಂದ್ರದ ಸುತ್ತಲೂ ತಿರುಗುತ್ತದೆ.
  6. ತಿರುಗು ಹಾಕುವಂತೆ; ತಿರುಗಿಹಾಕಿದಾಗಿನ ಸ್ಥಾನದಲ್ಲಿ: go round the corner ಮೂಲೆಯಲ್ಲಿ ತಿರುಗಿಕೊಂಡು ಹೋಗು; ಮೂಲೆ ಸುತ್ತಿ ಸಾಗು.
ಪದಗುಚ್ಛ
  1. argue round and round subject ವಿಷಯವನ್ನು ಬಿಟ್ಟು ಅದರ ಸುತ್ತ ವಾದ ಮಾಡು, ವಿಷಯದ ತಿರುಳನ್ನು ಬಿಟ್ಟು ಬಳಸಿ ಬಳಸಿ ವಾದಿಸು.
  2. get round
    1. ಪುಸಲಾಯಿಸು; ಒಡಂಬಡಿಸು.
    2. (ಉಪಾಯ ಮಾಡಿ) ತಪ್ಪಿಸಿಕೊ; ಜಾರಿಕೊ.