See also 1round  3round  4round  5round
2round ರೌಂಡ್‍
ನಾಮವಾಚಕ
    1. ದುಂಡನೆಯ, ಗುಂಡನೆಯ ವಸ್ತು; ಗುಂಡು; ಬಳೆ; ಗೋಲಿ; ಗೋಳ: this earthly round ಈ ಭೂಗೋಳ, ಭೂಮಂಡಲ.
    2. ದುಂಡನೆಯ ಆಕಾರ; ಚಕ್ರ; ಮಾಂಡಲ; ತ್ತ.
  1. (ಶಿಲ್ಪದ ವಿಷಯದಲ್ಲಿ) ಇಡಿಯ ಘನರೂಪ; ಪೂರ್ಣಾಕಾರ.
  2. ಪರಿಧಿ; (ಹೊರ)ಸುತ್ತು; ವ್ಯಾಪ್ತಿ; ಎಲ್ಲೆ; ಹರವು; ವಿಸ್ತಾರ: in all the round of Nature ನಿಸರ್ಗದ ವ್ಯಾಪ್ತಿಯಲ್ಲೆಲ್ಲಾ.
    1. ತ್ತಚಲನೆ; ಪರಿಭ್ರಮಣ; ಪರಿಕ್ರಮಣ; ಪ್ರದಕ್ಷಿಣೆ; ಸುತ್ತು(ವುದು): the earth in its daily round ಭೂಮಿ ತನ್ನ ದಿನನಿತ್ಯದ ಪರಿಭ್ರಮಣದಲ್ಲಿ.
    2. ಆವರ್ತ(ನ); ಆತ್ತಿ; ಚಕ್ರ; ಪುನರಾವರ್ತನೆ.
  3. (ಬಹುವಚನದಲ್ಲಿ)
    1. (ಕಾವಲು ಸಿಪಾಯಿಗಳನ್ನು ತನಿಖೆಮಾಡಲು ಸುತ್ತು ಹೋಗುವ) ಪಹರೆ; ಗಸ್ತು.
    2. ಗಸ್ತುದಳ; ಪಹರೆ, ಪರೀಕ್ಷಕ–ದಳ: visiting rounds ಪಹರೆಯವನು ಮತ್ತು ಕಾವಲು ಸಿಪಾಯಿಗಳ ತನಿಖೆಮಾಡುವ ಅಧಿಕಾರಿ ಹೋಗುವ ಸುತ್ತು; ಭೇಟಿಯ ಸುತ್ತು.
  4. (ಗಾಲ್‍ ಆಟ) ಎಲ್ಲ ಬದ್ದುಗಳನ್ನೂ ತುಂಬುವ ಒಂದು ಸುತ್ತು, ವರಿಸೆ.
  5. ನಿಯತವಾಗಿ ಮತ್ತೆ ಮತ್ತೆ ನಡೆಸುವ ಚಟುವಟಿಕೆಗಳ ಯಾ ಕೆಲಸಗಳ ಅನುಕ್ರಮ, ಸರಣಿ: one’s daily round ಒಬ್ಬನ ದಿನನಿತ್ಯದ ಕೆಲಸಗಳ ಸರಣಿ.
  6. ಆವರ್ತ; ಸುತ್ತು; ಮತ್ತೆ ಮತ್ತೆ ಒಂದಾದಮೇಲೊಂದರಂತೆ ನಡೆಯುವ ಚರ್ಚೆ ಮೊದಲಾದವುಗಳಿಗಾಗಿ ನಡೆಯುವ ಸಭೆಗಳ ಪಾಳಿ: a new round of talks on disarmament ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಮಾತುಕತೆಯ ಒಂದು ಹೊಸ ಸುತ್ತು.
  7. ವರಿಸೆ:
    1. ಒಂದು ಸಲ ಗುಂಡು ಹೊಡೆಯಲು ಬೇಕಾದ ಮದ್ದುಗುಂಡು.
    2. ಒಂದು ಸಲ ಗುಂಡು ಹಾರಿಸುವುದು.
    1. ಬ್ರೆಡ್ಡಿನ ಒಂದು ಹಲ್ಲೆ.
    2. ಬ್ರೆಡ್ಡಿನ ಹಲ್ಲೆಗಳಿಂದ ಮಾಡಿದ ಸ್ಯಾಂಡ್‍ವಿಚ್‍.
    3. ದನದ ಟೊಂಕದ ಕಡೆಯ ಮಾಂಸದಿಂದ ಕತ್ತರಿಸಿದ ದಪ್ಪ ಬಿಲ್ಲೆ.
  8. ಸುತ್ತು; ಪಾಳಿ; ಸರದಿ; ವರಿಸೆ; ಒಂದು ಬಾರಿಗೆ ಹಂಚಿದ, ವಿತರಣೆ ಮಾಡಿದ ಮೊತ್ತ: serve out a round of spirit ಒಂದು ಸುತ್ತು ಮದ್ಯವನ್ನು ಹಂಚು.
  9. ಶ್ರೇಣಿಯಲ್ಲಿ ಯಾ ತಂಡದಲ್ಲಿ ಒಂದು.
  10. ಸೂಳು; ಸರದಿ; ಪಟ್ಟು; ಬಾರಿ; ವರಿಸೆ: round after round of cheers ಬಾರಿಬಾರಿ ಮಾಡಿದ ಹರ್ಷೋದ್ಗಾರ.
  11. ಸ್ಪರ್ಧೆಯ ಒಂದು–ಪಾಳಿ, ಸುತ್ತು, ಹಂತ: the winners in the first round are paired for the second (ಸ್ಪರ್ಧೆಯ) ಮೊದಲನೆಯ ಹಂತದಲ್ಲಿ, ಸುತ್ತಿನಲ್ಲಿ ಗೆದ್ದವರನ್ನು ಎರಡನೆಯ ಹಂತದ, ಸುತ್ತಿನ ಸ್ಪರ್ಧೆಗೆ ಜೋಡಿ ಮಾಡಲಾಗುವುದು.
  12. (ಬಿಲ್ಲುಗಾರಿಕೆ) ನಿರ್ದಿಷ್ಟ ದೂರದಿಂದ ಹೊಡೆದ ಬಾಣಗಳ ನಿರ್ದಿಷ್ಟ ಸಂಖ್ಯೆ, ತಂಡ.
  13. (ಸಂಗೀತ) ಒಂದೇ ಶ್ರುತಿಯಲ್ಲಿ ಯಾ ಸ್ವರದಲ್ಲಿ ಹಾಡುವ ಮೂವರು ಯಾ ಹೆಚ್ಚಿನ ಗಾಯಕರಿಗಾಗಿ ಇರುವ ತಿಯ ಅನುಕರಣ ಚರಣ (ಭಾಗ).
  14. ಏಣಿಯ ಮೆಟ್ಟಿಲು.
ಪದಗುಚ್ಛ
  1. a milkman’s round ಹಾಲಿನವನ ಸುತ್ತಾಟ.
  2. round of days, pleasures, visits ದಿನಗಳ, ಸಂತೋಷಗಳ, ಭೇಟಿಗಳ ಒಂದು ಸುತ್ತು, ಪಾಳಿ.
  3. go for a good round ದೂರ ತಿರುಗಾಟಕ್ಕೆ ಹೋಗಿ ಬಾ, ಸುತ್ತಿಕೊಂಡು ಬಾ.
  4. go (or make) one’s rounds (ಮುಖ್ಯವಾಗಿ ತನಿಖೆಗಾಗಿ) ರೂಢಿಯಂತೆ ಸುತ್ತಾಡಿಕೊಂಡು ಬಾ; (ಪದ್ಧತಿಯಂತೆ) ಸುತ್ತುಹೋಗಿ ಬಾ.
  5. in the round
    1. ಎಲ್ಲ ಮುಖಭಾವಗಳು, ಲಕ್ಷಣಗಳು ಮೊದಲಾದವನ್ನು ಪೂರ್ತಿಯಾಗಿ ತೋರಿಸಿ.
    2. ಎಲ್ಲ ವಿಷಯಗಳನ್ನೂ ಪರಿಗಣಿಸಿ.
    3. (ನಾಟಕಶಾಲೆ) ರಂಗದ ಸುತ್ತಲೂ ಪ್ರೇಕ್ಷಕರಿಂದ ಕೂಡಿದ್ದು, ಸುತ್ತುವರೆದು.
    4. (ಶಿಲ್ಪದ ವಿಷಯದಲ್ಲಿ) ಎಲ್ಲ ಪಕ್ಕಗಳನ್ನೂ ತೋರಿಸುವ; ಪೂರ್ಣ.
  6. make the round of (ಒಂದರ) ಸುತ್ತ ತಿರುಗು, ಚಕ್ರಾಕಾರವಾಗಿ ಸುತ್ತು.
  7. (news, story etc) go the round(s) (ಸುದ್ದಿ, ಕಥೆ ಮೊದಲಾದವು) ಒಬ್ಬರಿಂದೊಬ್ಬರಿಗೆ ಸುತ್ತುತ್ತ ಹರಡು.
  8. round of beef ಗೋಮಾಂಸದ (ರೊಂಡಿ ಭಾಗದ) ದಪ್ಪ ದುಂಡು ಹಲ್ಲೆ.
  9. round of toast ಬ್ರೆಡ್ಡಿನಿಂದ ಕತ್ತರಿಸಿದ ದುಂಡು ಹಲ್ಲೆ; ಬ್ರೆಡ್ಡಿನ ಹಲ್ಲೆ.
  10. the daily round ದಿನವಹಿ ಕಾರ್ಯ; ನಿತ್ಯಗಟ್ಟಳೆಯ ಕೆಲಸಗಳು.