See also 1last  2last  3last  4last  5last  7last
6last ಲಾಸ್ಟ್‍
ನಾಮವಾಚಕ

ಮೋಚಿಯಚ್ಚು; ಕೆರ, ಜೋಡು, ಮೊದಲಾದವಕ್ಕೆ ಆಕಾರ ಕೊಡಲು ಯಾ ಅವನ್ನು ರಿಪೇರಿ ಮಾಡಲು ಮೋಚಿಯವನು ಬಳಸುವ ಮರದ ಯಾ ಲೋಹದ ಅಚ್ಚು.

ನುಡಿಗಟ್ಟು

stick to one’s last ಗೊತ್ತಿದ್ದಷ್ಟೇ ಮಾಡು; (ತನಗೆ) ತಿಳಿಯದ ವಿಷಯಕ್ಕೆ ಕೈ ಹಾಕದಿರು, ಕೈಹಚ್ಚದಿರು ಯಾ ಪ್ರಯತ್ನಿಸದಿರು; ತಾನು ದಕ್ಷ ಯಾ ಕುಶಲನಾಗಿರುವ ಕೆಲಸ, ವೃತ್ತಿ ಯಾ ಕ್ಷೇತ್ರದಲ್ಲಿಯೇ ಮುಂದುವರಿ.