See also 1last  2last  3last  5last  6last  7last
4last ಲಾಸ್ಟ್‍
ನಾಮವಾಚಕ
  1. ಕೊನೆಯದು; ಕೊನೆಯಲ್ಲಿ ಹೇಳಿದ, ಸೂಚಿಸಿದ – ವ್ಯಕ್ತಿ, ವಸ್ತು ಯಾ ವಿಷಯ: the last (person, thing) ಕೊನೆಯಲ್ಲಿ ಹೇಳಿದ (ವ್ಯಕ್ತಿ ಯಾ ವಸ್ತು).
  2. ಹಿಂದಿನದು; ಇತ್ತೀಚಿನದು (ಪತ್ರ ಮೊದಲಾದವು): as I said in my last ಹಿಂದಿನ ಕಾಗದದಲ್ಲಿ ನಾನು ಹೇಳಿದಂತೆ.
  3. ಕೊನೆಯ ಮಾತು; ಅಂತಿಮ ಪ್ರಸ್ತಾಪ: shall never hear the last of it ಈ ವಿಷಯದಲ್ಲಿ ಕೊನೆಯ ಮಾತನ್ನು ಎಂದಿಗೂ ಕೇಳುವಂತೆಯೇ ಇಲ್ಲ; ಇದಕ್ಕೆ ಕೊನೆಯೇ ಇಲ್ಲ; ಈ ವಿಷಯ ಮುಗಿಯುವಂತೆಯೇ ಇಲ್ಲ.
  4. ಕೊನೆಯ ನೋಟ; ಅಂತಿಮ ದರ್ಶನ: that was the last I ever saw him ಅದೇ ನಾನು ಅವನನ್ನು ಕೊನೆಯ ಬಾರಿಗೆ ಕಂಡದ್ದು; ನನಗೆ ಅದೇ ಅವನ ಕಡೆಯ ದರ್ಶನ.
  5. ಕೊನೆಯ, ಅಂತಿಮ – ಕ್ರಿಯೆ; ಕೆಲವು ಕ್ರಿಯೆಗಳ ಅಂತಿಮ ಆವೃತ್ತಿ: breathe one’s last ಕೊನೆಯ ಉಸಿರೆಳೆ; ಕಡೆಯ ಬಾರಿ ಉಸಿರೆಳೆ. look one’s last ಕೊನೆಯ, ಅಂತಿಮ ನೋಟ ನೋಡು; ಸಾಯು.
  6. ಕೊನೆ; ಅಂತ್ಯ; ಅಂತಿಮ ಕ್ಷಣ.
  7. ಸಾವು; ಮರಣ.
ನುಡಿಗಟ್ಟು
  1. at (long) last
    1. ಕಟ್ಟಕಡೆಗೆ; ಕಡೆಗೂ; ಕೊನೆಗೂ.
    2. ಬಹಳ ತಡವಾದ ಮೇಲೆ; ದೀರ್ಘ ವಿಳಂಬದ ಬಳಿಕ; ಬಹಳ ಕಾಲ, ಪ್ರಯತ್ನ, ಮೊದಲಾದವುಗಳ ತರುವಾಯ.
  2. to (or till) the last ಅಂತ್ಯದವರೆಗೂ; ಕೊನೆಯವರೆಗೂ (ಮುಖ್ಯವಾಗಿ ಸಾವಿನವರೆಗೂ): he died protesting his innocence to the last ತಾನು ನಿರಪರಾಧಿಯೆಂದು ಕೊನೆಯವರೆಗೂ ಸಾರುತ್ತಲೇ ಅವನು ಸತ್ತ.