See also 2last  3last  4last  5last  6last  7last
1last ಲಾಸ್ಟ್‍
ಗುಣವಾಚಕ
  1. ಕೊನೆಯ; ಕಡೆಯ; ಅಂತ್ಯದ; ಅಂತಿಮ; ಆಖೈರಿನ; ಇತರ ಎಲ್ಲವೂ ಆದ ತರುವಾಯದ; ಕೊನೆಯಲ್ಲಿ ಬರುವ: the last two ಕಡೆಯ ಎರಡು. the last to be consulted ಸಲಹೆ ಕೇಳಿದವರ ಪೈಕಿ ಕಡೆಯವನು.
  2. (ಈಗ ಹೇಳುತ್ತಿರುವ ಯಾ ಸೂಚಿಸುತ್ತಿರುವ ಕಾಲಕ್ಕೆ) ಹಿಂದಿನ; ಪೂರ್ವದ; ಹೋದ; ಕಳೆದ; ಸಂದ: in the last fortnight ಕಳೆದ ಪಕ್ಷದಲ್ಲಿ. last Christmas ಹಿಂದಿನ ಕ್ರಿಸ್‍ಮಸ್‍ ಹಬ್ಬದಲ್ಲಿ. last week ಹೋದ ವಾರ.
  3. (ಕ್ರಮದಲ್ಲಿ) ಹಿಂದಿನ; ಮುಂಚಿನ; ಮೊದಲಿನ: got on at the last station ಹಿಂದಿನ ನಿಲ್ದಾಣದಲ್ಲಿ ಹತ್ತಿಕೊಂಡ. the last letter ಮುಂಚಿನ ಕಾಗದ; ಹಿಂದಿನ ಪತ್ರ. the last baby ಹಿಂದಿನ ಮಗು.
  4. ಕೊಟ್ಟಕೊನೆಯದಾದ; ಕಟ್ಟಕಡೆಯ; ಆಖೈರಿನ (ಎಲ್ಲವೂ ಆಗಿ) ಕೊನೆಯದಾಗಿ ಉಳಿದಿರುವ: the last biscuit ಕೊನೆಯ ಬಿಸ್ಕತ್ತು. our last chance ನಮ್ಮ ಕಟ್ಟಕಡೆಯ ಯಾ ಅಂತಿಮ ಅವಕಾಶ.
  5. ತೀರಾ ಅಸಂಭವದ; ಎಳ್ಳಷ್ಟೂ ಇಷ್ಟವಿಲ್ಲದ; ಸ್ವಲ್ಪವೂ ಉಚಿತವಲ್ಲದ. ತಕ್ಕುದಲ್ಲದ: I should be the last to do it ಅಂಥದನ್ನು ಮಾಡಲು ನನಗೆ ಎಳ್ಳಷ್ಟೂ ಮನಸ್ಸಿಲ್ಲ.
  6. (ದರ್ಜೆಗಳಲ್ಲಿ) ಕಡೆಯ; ಕೊನೆಯ; ಅಂತಿಮ; ಅತ್ಯಂತ, ತೀರ – ಕೆಳಗಿನ, ಕೆಳಮಟ್ಟದ, ಕೀಳಾದ: the last place ಕೊನೆಯ ಸ್ಥಾನ.
  7. (ಮುಖ್ಯವಾಗಿ ಬಾಳಿನ ಯಾ ಐಹಿಕ ಪ್ರಪಂಚದ) ಕೊನೆಯ; ಅಂತ್ಯದ; ಅವಸಾನದ: last days (ಬಾಳಿನ) ಕೊನೆಯ ದಿನಗಳು; ಅವಸಾನಕಾಲ.
  8. (ನಿರ್ಣಾಯಕ, ಅಸಂದಿಗ್ಧ ಎಂಬ ಅರ್ಥಗಳಲ್ಲಿ) ಕಡೆಯ; ಆಖೈರಿನ; ಕೊನೆಯ; ಅಂತ್ಯ; ಅಂತಿಮ: has said the last word in the matter ಈ ವಿಷಯದಲ್ಲಿ ಅವನು ಹೇಳಿದ್ದೇ ಕೊನೆಯ ಮಾತು.
  9. ಇತ್ತೀಚಿನ; ಇದೀಗಿನ; ಸದ್ಯದ; ಇದೀಗ ಬಳಕೆಯಲ್ಲಿರುವ: the last thing in shirts ಷರ್ಟುಗಳ ಹ್ಯಾಷನ್ನಿನಲ್ಲಿ ಇತ್ತೀಚಿನದು.
  10. ಅತ್ಯಂತ; ತೀರ; ಎಲ್ಲಕ್ಕಿಂತಲೂ ಮುಖ್ಯವಾದ: it is of the last importance ಅದು ಅತ್ಯಂತ ಮುಖ್ಯವಾದದ್ದು.
ಪದಗುಚ್ಛ
  1. last but one ಉಪಾಂತ್ಯದ್ದು; ಕೊನೆಯಿಂದ ಎರಡನೆಯದು.
  2. last day ಕ್ರೈಸ್ತಮಹಾವಿಚಾರಣೆಯ ದಿನ; ಕಡೆಯ ತೀರ್ಪಿನ ದಿನ.
  3. second last = ಪದಗುಚ್ಛ \((1)\).
  4. the four last things (ಮರಣ, ಕಡೆಯ ತೀರ್ಪು, ಸ್ವರ್ಗ, ನರಕಗಳೆಂಬ ಕ್ರೈಸ್ತಧರ್ಮದ) ಚರಮ ಚತುಷ್ಕ; ಅಂತಿಮ ಚತುಷ್ಟಯ.
  5. the Last Supper ಅಂತಿಮ ರಾತ್ರಿಯೂಟ, ಭೋಜನ; (ಹೊಸ ಒಡಂಬಡಿಕೆಯಲ್ಲಿರುವಂತೆ) ಕ್ರಿಸ್ತನನ್ನು ಶಿಲುಬೆಗೇರಿಸಿದ ಹಿಂದಿನ ರಾತ್ರಿ ಕ್ರಿಸ್ತನೂ ಅವನ ಅನುಯಾಯಿಗಳೂ ಮಾಡಿದ ಊಟ.
ನುಡಿಗಟ್ಟು
  1. last but not least ಕಡೆಯದಾದರೂ, ಕಡೆಯಲ್ಲಿ ಹೇಳುತ್ತಿದ್ದರೂ ಕಡಿಮೆಯದಲ್ಲದ; ಕೊನೆಯಲ್ಲಿ ತಿಳಿಸಿದರೂ ಅಮುಖ್ಯವಲ್ಲದ.
  2. on one’s last legs.
  3. the last straw
    1. ಕೊನೆಯ (ಹುಲ್ಲು)ಕಡ್ಡಿ; ಈಗಾಗಲೇ ಕಷ್ಟವಾಗಿರುವುದನ್ನು ಯಾ ಹೊರೆಯಾಗಿರುವುದನ್ನು ದುಸ್ಸಹವಾಗಿಸುವ, ಸಹಿಸಲು ಅಸಾಧ್ಯವಾಗಿಸುವ – ತುಸು ಹೆಚ್ಚಿನದು.
    2. ಸಹನೆಯ, ತಾಳ್ಮೆಯ – ಮಿತಿ.
  4. the last word
    1. ಕೊನೆಯ ಮಾತು; ಆ ಖೈರು ಮಾತು; ಅಂತಿಮವಾದ ಯಾ ಖಚಿತವಾದ ಹೇಳಿಕೆ: his is the last word on this subject ಈ ವಿಷಯದಲ್ಲಿ ಅವನದೇ ಕೊನೆಯ ಮಾತು.
    2. (ಬಹುವೇಳೆ in ಜೊತೆಗೆ) ಇತ್ತೀಚಿನ ಹ್ಯಾಷನ್ನು.