See also 1last  2last  3last  4last  6last  7last
5last ಲಾಸ್ಟ್‍
ಅಕರ್ಮಕ ಕ್ರಿಯಾಪದ
  1. ಸಾಕಾಗು; ಬಾಳು; ಬಾಳಿಕೆಬರು; ಒಂದು ನಿರ್ದಿಷ್ಟ ಯಾ ಸಾಕಷ್ಟು ಕಾಲದವರೆಗೆ ಉಳಿದಿರು ಯಾ ಸಾಕಾಗುವಂತಿರು ಯಾ ಜೀವದಿಂದಿರು: will last out ಅಷ್ಟು ಕಾಲವೂ ನಡೆಯುತ್ತದೆ; ಅಷ್ಟು ಕಾಲಕ್ಕೂ ಸಾಕಾಗುತ್ತದೆ, ಬಾಳಿಕೆ ಬರುತ್ತದೆ. enough food to last us a week ನಮಗೆ ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ. the battery lasts and lasts ಬ್ಯಾಟರಿ ಬಹಳ ಕಾಲ ಬಾಳಿಕೆ ಬರುತ್ತದೆ.
  2. ನಡೆ; ಸಾಗು; ನಡೆದು ಬರು: ಒಂದು ನಿರ್ದಿಷ್ಟ ಕಾಲದವರೆಗೆ ಆಗು, ಮುಂದುವರಿ: the journey lasts an hour ಪ್ರಯಾಣ ಒಂದು ಗಂಟೆಯವರೆಗೆ ಆಗುತ್ತದೆ. will last me eight months ನನಗೆ (ಅದು) ಎಂಟು ತಿಂಗಳ ಕಾಲ ಬರುತ್ತದೆ, ಎಂಟು ತಿಂಗಳಿಗೆ ಆಗುತ್ತದೆ. will last my time ನಾನು ಬದುಕಿರುವವರೆಗೆ ಇರುತ್ತದೆ.
ನುಡಿಗಟ್ಟು

last out ಹಿಂದೆ ಹೇಳಿದಷ್ಟು ಕಾಲದವರೆಗೂ ಯಾ ಸೂಚಿತವಾದಷ್ಟು ಕಾಲದವರೆಗೂ ಸಾಕಾಗು ಯಾ ಇರು.