See also 1last  3last  4last  5last  6last  7last
2last ಲಾಸ್ಟ್‍
ಕ್ರಿಯಾವಿಶೇಷಣ
  1. ಎಲ್ಲ ಆದ ಮೇಲೆ; ಕೊನೆಗೆ; ಕೊನೆಯಲ್ಲಿ; ಕಡೆಗೆ; ಎಲ್ಲರ ಯಾ ಎಲ್ಲದರ ನಂತರ, ತರುವಾಯ: last came and last did go (ಎಲ್ಲರೂ ಆದ ಮೇಲೆ) ಕೊನೆಯಲ್ಲಿ ಬಂದ, ಕೊನೆಯಲ್ಲಿ ಹೋದ; ಕೊನೆಗೆ ಬಂದು ಕೊನೆಗೆ ಹೋದ.
  2. ಹಿಂದೆ; ಈ ಮೊದಲು; ಇದಕ್ಕೆ ಮುಂಚೆ; ಪ್ರಕೃತಕಾಲಕ್ಕೆ ಹಿಂದಿನ ಸಂದರ್ಭದಲ್ಲಿ; when did you see him last? ಇದಕ್ಕೆ ಮುಂಚೆ ಅವನನ್ನು ನೀನು ನೋಡಿದ್ದು ಎಂದು?
  3. (ಎಣಿಕೆಯಲ್ಲಿ) ಕಡೆಯದಾಗಿ; ಕೊನೆಯದಾಗಿ; ಅಂತಿಮವಾಗಿ: in the last place ಕಡೆಯದಾಗಿ; ಕೊನೆಯದಾಗಿ.