See also 2that  3that  4that
1that ದ್ಯಾಟ್‍ ನಿರ್ದೇಶಕ
ಗುಣವಾಚಕ
(ಬಹುವಚನ those, ಉಚ್ಚಾರಣೆ ದೋಸ್‍).
  1. ಆ; ಅದು: observe that dog ಆ ನಾಯಿಯನ್ನು ಗಮನಿಸು. what bird is that ? ಅದು ಯಾವ (ಜಾತಿಯ) ಹಕ್ಕಿ?
  2. (ತೀಕ್ಷ್ಣ ಭಾವನೆ ವ್ಯಕ್ತಪಡಿಸುವಾಗ): I will not see that boy bullied ಆ ಹುಡುಗನನ್ನು ಪೀಡಿಸುವುದನ್ನು ನಾನು ಸಹಿಸಲಾರೆ.
  3. (this (ಇದು) ಎಂಬಉದರ ಜತೆಯಲ್ಲಿ ಬರುವಾಗ ಯಾ ಹೋಲಿಸುವಾಗ) ವಿರುದ್ಧವಾದ; ಆ: this is much heavier than that one ಇದು ಅದಕ್ಕಿಂತ ಬಹಳ ಭಾರ(ವಾಗಿದೆ).
ಪದಗುಚ್ಛ
  1. all that ಬಹಳ; ಅತ್ಯಂತ: not all that good ಬಹಳ ಒಳ್ಳೆಯದೇನೂ ಅಲ್ಲ; ಅಷ್ಟೇನೂ, ಅಂಥದೇನೂ ಒಳ್ಳೆಯದಲ್ಲ.
  2. and (all) that ಅದೆಲ್ಲವೂ; ಈಗ ಹೇಳಿದುದೆಲ್ಲವೂ.
  3. I wouldn’t give that for it (ಕೈಯಿಂದ ಚಿಟಿಕೆ ಹೊಡೆಯುತ್ತಾ) ಅದಕ್ಕೊಂದು ಚಿಟಿಕೆ ಬೆಲೆಯೂ ಇಲ್ಲ (ಬೆಲೆ ಕೊಡಲಾರೆ).
  4. like that
    1. ಅಂಥ; ಆ ಬಗೆಯ: is fond of books like that ಅಂಥ ಪುಸ್ತಕಗಳನ್ನು ಇಷ್ಟಪಡುತ್ತಾನೆ.
    2. ಹಾಗೆ; ಆ ರೀತಿಯಲ್ಲಿ; ಅಂತೆ: don’t roll your eyes like that ನೀನು ಹಾಗೆ (ಈಗ ಮಾಡುತ್ತಿರುವಂತೆ) ಕಣ್ಣು ಹೊರಳಿಸಬೇಡ. I wish they would not talk like that ಅವರು ಅಂತೆ ಮಾತನಾಡದಿರಲಿ ಎಂದು ನನ್ನ ಇಷ್ಟ.
    3. (ಆಡುಮಾತು) ಪ್ರಯಾಸವಿಲ್ಲದೆ; ಶ್ರಮಪಡದೆ; ಸುಭವಾಗಿ: did the job like that ಶ್ರಮಪಡದೆ ಆ ಕೆಲಸ ಮಾಡಿದ.
    4. ಅಂಥ; ಆ ಸ್ವಭಾವದ; ಆ ಗುಣದ: he would not accept any payment, he is like that ಅವನು ಹಣ ತೆಗೆದುಕೊಳ್ಳಲು ಒಪ್ಪುವುದಿಲ್ಲ, ಅವನು ಅಂಥವನು, ಅವನದು ಆ ಸ್ವಭಾವ.
  5. how is that ? ಅದು ಏನು? (ಹೇಗೆ?)
  6. (so) that’s that (ಕಥನ, ಚರ್ಚೆ, ಮೊದಲಾದವನ್ನು ಮುಗಿಸುವಲ್ಲಿ, ರೂಢಿಯ ಮಾತು) ವಿಷಯ ಹಾಗಿದೆ; ವಿಷಯ ಅಷ್ಟು.
  7. that’s a dear (a good boy, good boy) (ಆಡುಮಾತು) ಅದೀಗ ನನ್ನ ಚಿನ್ನ! ಇದೀಗ ನನ್ನ ಮುದ್ದು ಹುಡುಗ.
  8. that’s it.
  9. that’s more like it ಅದೆಷ್ಟೋ ವಾಸಿ; ಈಗ ಎಷ್ಟೋ ಉತ್ತಮ.
  10. that is not fair ಅದು (ನೀನು ಮಾಡಿದ್ದು, ನಿನ್ನ ಕಾರ್ಯ) ಸರಿಯಲ್ಲ.
  11. that’s right (ಒಪ್ಪಿಗೆ ಸೂಚಿಸುವಾಗ) ಅದು ಸರಿ!
  12. that is (to say) ( ಹಿಂದಿನ ಪದ ಯಾ ಪದಗಳನ್ನು ವಿವರಿಸಲು ಪ್ರಾರಂಭಿಸುವಾಗ) ಹಾಗೆಂದರೆ; ಅರ್ಥಾತ್‍; ಅಂದರೆ.
  13. that there (ಅಶಿಷ್ಟ) = 1that\((1)\).
  14. that will do ಅಷ್ಟು ಸಾಕು! ಅಷ್ಟಕ್ಕೆ ನಿಲ್ಲಿಸು! ಇನ್ನೇನೂ ಬೇಕಾಗಿಲ್ಲ.
  15. 1this and that.
  16. 1this, that and the other.
  17. with that.
See also 1that  3that  4that
2that ದ್ಯಾಟ್‍
ನಿರ್ದೇಶಕ ಸರ್ವನಾಮ
(ಬಹುವಚನ those ದೋಸ್‍).
  1. ಅದು ಯಾ ಅವನು; ಸೂಚಿಸಿದ ಯಾ ಹೆಸರಿಸಿದ ಯಾ ತಿಳಿದ ವ್ಯಕ್ತಿ, ವಸ್ತು ಯಾ ವಿಷಯ: I heard that ನಾನು ಅದನ್ನು ಕೇಳಿದೆ. who is that in the garden ತೋಟದಲ್ಲಿರುವವನು ಯಾರು?
  2. ನಿರ್ದಿಷ್ಟ ರೀತಿಯಲ್ಲಿ ವರ್ಣಿಸಿದ ಯಾ ಸೂಚಿಸಿದ ವಸ್ತು, ವ್ಯಕ್ತಿ, ಮೊದಲಾದವರು: hold fast that which is good ಯಾವುದು ಒಳ್ಳೆಯದೋ ಅದನ್ನು ಬಲವಾಗಿ ಹಿಡಿದುಕೊ. had that in his eye which forbade further trifling ಇನ್ನೂ ಹೆಚ್ಚಿನ ಹುಡುಗಾಟಿಕೆ ಬೇಡವೆಂದು ತಡೆಯುವ ನೋಟ ಅವನ ಕಣ್ಣಿನಲ್ಲಿತ್ತು. all those specimens that I saw ನಾನು ನೋಡಿದ ಎಲ್ಲಾ ಮಾದರಿಗಳೂ. the book that I sent ನಾನು ಕಳುಹಿಸಿದ (ಆ) ಪುಸ್ತಕ.
  3. ಅದು (this ಎಂಬಉದರ ಜೊತೆ ಹೋಲಿಸಿದ್ದು): this bag is much heavier than that ಈ ಚೀಲ ಅದಕ್ಕಿಂತ ಬಹಳ ಭಾರ(ವಾಗಿದೆ).
  4. ಅದು; ಈಗ ತಾನೆ ನೋಡಿದ್ದು ಯಾ ಹೆಸರಿಸಿದ ಕಾರ್ಯ, ವರ್ತನೆ ಯಾ ಸಂದರ್ಭ: don’t do that again ಅದನ್ನು ಮತ್ತೆ ಮಾಡಬೇಡ.
  5. (ಬ್ರಿಟಿಷ್‍ ಪ್ರಯೋಗ) ಅವನು; ಅದು; ದೂರವಾಣಿ ಮೊದಲಾದವುಗಳಲ್ಲಿ ಯಾರ ಸಂಗಡ ಮಾತಾಡುತ್ತಿದ್ದೇವೆಯೋ ಆ ವ್ಯಕ್ತಿ: who is that ? ಅದು ಯಾರು? ಮಾತನಾಡುತ್ತಿರುವವರು ಯಾರು?
  6. (ಆಡುಮಾತು) (ಸದ್ಯದಲ್ಲಿ ಹೆಸರಿಸಿದ ತೀವ್ರ ಭಾವನೆಯನ್ನು ಸೂಚಿಸುವಲ್ಲಿ) ಅದು; ಅವನು; ‘are you glad?’ ‘I’m that’ ‘ನಿನಗೆ ಸಂತೋಷವಾಗಿದೆಯೇ?’ ‘ಹೌದು, ನನಗೆ ಆಗಿದೆ’ shall not easily forget that day ಆ ದಿನವನ್ನು ನಾನು ಸುಭವಾಗಿ ಮರೆಯುವುದಿಲ್ಲ.
  7. (ಉಚ್ಚಾರಣೆ ದಟ್‍) (ಬಹುವಚನ ಅದೇ). (ವಿವರಣಾತ್ಮಕ ಉಪವಾಕ್ಯಗಳಲ್ಲಿ who ಯಾ which ಗೆ ಬದಲಾಗಿ ಬಳಸುವ ಸಂಬಂಧಾತ್ಮಕ ಸರ್ವನಾಮ) ಅದು; ಆ; ಅದೇ: the book which you sent ಗೆ ಬದಲಾಗಿ the book that you sent.
See also 1that  2that  4that
3that ದ್ಯಾಟ್‍
ಕ್ರಿಯಾವಿಶೇಷಣ
  1. ಅಷ್ಟು; ಆವರೆಗೆ; ಅಷ್ಟುಮಟ್ಟಿಗೆ: ಆ ಮಟ್ಟಿಗೆ: have done that much ಅಷ್ಟು(ಮಟ್ಟಿಗೆ) ಮಾಡಿದ್ದೇನೆ. will go that far ಅಷ್ಟು ದೂರ ಹೋಗುತ್ತೇನೆ.
  2. (ಉಚ್ಚಾರಣೆ ದಟ್‍) ಅಷ್ಟು; ಅಷ್ಟೊಂದು: at the speed that he was going he could not stop ಅವನು ಹೋಗುತ್ತಿದ್ದಷ್ಟು ವೇಗದಲ್ಲಿ ಅವನು ನಿಲ್ಲಿಸಲಾಗಲಿಲ್ಲ.
  3. (ಉಚ್ಚಾರಣೆ ದಟ್‍) ನಿರ್ದಿಷ್ಟವಾದ; ಅದೇ; ಆ: the day that I first met her ನಾನು ಅವಳನ್ನು ಮೊದಲು ಭೇಟಿಯಾದ ದಿನವೇ.
  4. (ಬ್ರಿಟಿಷ್‍ ಪ್ರಯೋಗ)(ಆಡುಮಾತು) ಬಹಳ; ಹೆಚ್ಚು: not that good ಅಂಥ ಚೆನ್ನಾಗೇನೂ ಇಲ್ಲ. not that costly ಬಹಳ ದುಬಾರಿಯೇನೂ ಅಲ್ಲ.
See also 1that  2that  3that
4that

(ಒತ್ತು ಹಾಕಿದಾಗ ಹೊರತುಪಡಿಸಿ) ದಟ್‍ ಸಂಯೋಜಕಾವ್ಯಯ.

  1. ಎಂದು; ಎಂಬಉದಾಗಿ; ಎಂಬಉದು; ಎಂದರೆ: there is no doubt that he meant it ಅವನು ಅದನ್ನು ಉದ್ದೇಶಿಸಿದ್ದ ಎನ್ನುವುದರಲ್ಲಿ ಸಂದೇಹವಿಲ್ಲ. they say that he is better ಅವನು ಮೇಲೆಂದು ಅವರು ಹೇಳುತ್ತಾರೆ.
  2. ಉದ್ದೇಶಕ್ಕಾಗಿ; ಎಂಬಉದಕ್ಕಾಗಿ: he lives that he may eat ತಿಂದುಕೊಂಡಿರಬೇಕೆಂದು (ಅವನು) ಜೀವದಿಂದಿದ್ದಾನೆ.
  3. ಕಾರಣಕ್ಕಾಗಿ; ಕಾರಣದಿಂದ: it is rather that he has not the time ತನಗೆ ಕಾಲಾವಕಾಶವಿಲ್ಲವೆಂಬಉದು ಅವನ ಕಾರ(ವಿರಬಹುದು).
  4. (ಆಸೆ, ಹಾರೈಕೆ ಸೂಚಿಸುವಾಗ): o! that this were all ಅಯ್ಯೋ, ಇದಿಷ್ಟೇ ಆಗಿದ್ದರೆ ಎಷ್ಟು ಚೆನ್ನಾಗಿತ್ತು!
  5. ಫಲವಾಗಿ; ಪರಿಣಾಮವಾಗಿ: am so sleepy that I cannot keep my eyes open ಕಣ್ಣು ಬಿಟ್ಟಿರಲಾಗದಷ್ಟು ನಿದ್ದೆ ಹತ್ತಿದೆ.
ಪದಗುಚ್ಛ

not that.