not ನಾಟ್‍
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ಅಲ್ಲ; ಇಲ್ಲ: I know not ನನಗೆ ಗೊತ್ತಿಲ್ಲ. I doubt not ನನಗೆ ಸಂಶಯವಿಲ್ಲ.
  2. ಇಲ್ಲ:
    1. (ಸಹಾಯಕ ಕ್ರಿಯಾಪದದ ಜತೆ n’t ಸೇರಿಸಿದಾಗ) ಇಲ್ಲ: I can’t say ನಾನು ಹೇಳಲಾರೆ. he’ll not come ಅವನು ಬರುವುದಿಲ್ಲ. (ಅಶಿಷ್ಟ) he ain’t here ಅವನಿಲ್ಲಿಲ್ಲ.
    2. (ವಿಧ್ಯುಕ್ತ ಹೇಳಿಕೆಯಲ್ಲಿ) did you not tell me ನೀನು ನನಗೆ ಹೇಳಲಿಲ್ಲವೇ?
  3. ಕೃದಂತಗಳನ್ನು ಧಾತ್ವರ್ಥವಾಚಿಗಳ ಹಿಂದೆ ನಿಷೇಧಾರ್ಥ ಸೂಚಕವಾಗಿ ಬಳಸುವಾಗ: not knowing ತಿಳಿಯದೆ. asked him not to come ಬರಬೇಡವೆಂದು ಅವನಿಗೆ ಹೇಳಿದೆ.
  4. (ನಿಷೇಧಾರ್ಥಕ ವಾಕ್ಯ, ಕ್ರಿಯಾಪದ ಯಾ ಪದಗುಚ್ಛಗಳಿಗೆ ಅಧ್ಯಾಹಾರವಾಗಿ ಬರುವಾಗ): “Are you ill?" “Not at all" ನಿನಗೆ ಕಾಹಿಲೆಯಾಗಿದೆಯೇ? ಖಂಡಿತ ಇಲ್ಲ. popular or not, it is right ಜನಪ್ರಿಯವಾಗಿರಲಿ ಬಿಡಲಿ, ಅದು ಸರಿಯಾದ ಮಾತು ಹೌದು.
  5. (ಪರ್ಯಾಯವಾಗಿ ಕೆಲವು ಮಾತುಗಳನ್ನು ಸೇರಿಸುತ್ತಾ, ಅವುಗಳಲ್ಲಿ ಕೆಲವನ್ನು ನಿಷೇಧಿಸುತ್ತಾ ಮಾತನಾಡುವಾಗ) ‘ಅದು ಅದಲ್ಲ – ಆದರೆ ಅದು ಬೇರೊಂದು’ ಎನ್ನುವ ಹಾಗೆ: he is not my son, but yours ಅವನು ನನ್ನ ಮಗನಲ್ಲ, ನಿನ್ನ ಮಗ.
  6. (ಒಂದು ನಿಷೇಧಾರ್ಥಸೂಚಕ ವಾಕ್ಯದ ನಂತರ ಬರುವ ಸರ್ವನಾಮವನ್ನು ಒತ್ತಿ ಹೇಳುವಾಗ) they will not be fooled, not they ಅವರು ಮೋಸ ಹೋಗಲಾರರು – ಅವರೆ? ಎಂದಿಗೂ ಇಲ್ಲ.
  7. (‘a’ ಎಂಬ ಅನಿರ್ದೇಶಕ ಗುಣವಾಚಿಯ ಹಿಂದೆ ಬಂದಾಗ, ‘ಒಂದು ಸಹ ಇಲ್ಲ’ ಎಂಬರ್ಥದಲ್ಲಿ) not a hair of your head shall be touched ನಿನ್ನ ತಲೆಯ ಒಂದು ಕೂದಲನ್ನು ಸಹ ಮುಟ್ಟುವುದಿಲ್ಲ.
  8. (ಇನ್ನೊಂದು ನಿಷೇಧ ರೂಪದ ಶಬ್ದದ ಜತೆ, ಸೌಮ್ಯಾರ್ಥ ಸೂಚಕ ಸಂದರ್ಭದಲ್ಲಿ ಬಂದಾಗ) not a few ಅಲ್ಪಸ್ವಲ್ಪವಲ್ಲ (ಎಂದರೆ ‘ಬಹಳ’ ಎಂಬರ್ಥದಲ್ಲಿ). not seldom ಅಪರೂಪವಾಗಲ್ಲ; ಒಮ್ಮೊಮ್ಮೆಯಲ್ಲ (ಎಂದರೆ ‘ಅನೇಕ ವೇಳೆ’ ಎಂಬರ್ಥದಲ್ಲಿ).
ಪದಗುಚ್ಛ
  1. as likely as not ಎಷ್ಟು ಸಂಭವವೋ ಅಷ್ಟೇ ಅಸಂಭವವೂ ಹೌದು.
  2. not at all (ಯಾರಾದರೂ ಕೃತಜ್ಞತೆ ಸೂಚಿಸಿದಾಗ ಶಿಷ್ಟಾಚಾರಕ್ಕಾಗಿ ಉತ್ತರ ಕೊಡುತ್ತಾ) ಅಂಥದೇನೂ ಇಲ್ಲ; ಹಾಗೆ ನೀವು ಹೇಳುವ ಅಗತ್ಯವಿಲ್ಲ.
  3. not a thing ಯಾವುದೂ ಇಲ್ಲ ಒಂದೂ ಇಲ್ಲ.
  4. not but that = ಪದಗುಚ್ಛ\((16)\).
  5. not but(ಪ್ರಾಚೀನ ಪ್ರಯೋಗ) = ಪದಗುಚ್ಛ\((16)\).
  6. no $^3$half.
  7. not least ಕಡಮೆ ಪ್ರಾಮುಖ್ಯವಲ್ಲ (ಎಂದರೆ ಸಾಕಷ್ಟು ಪ್ರಮುಖವಾದ).
  8. not $^3$much.
  9. not once nor twice = ಪದಗುಚ್ಛ\((10)\).
  10. not once or twice ಒಂದೆರಡು ಸಲವಲ್ಲ; ಅನೇಕ ಬಾರಿ.
  11. not quite:
    1. ಹೆಚ್ಚು ಕಡಮೆ.
    2. ಅಷ್ಟೇನೂ ಅಲ್ಲ; ಹುತೇಕ: it is not quite proper ಅದು ಅಷ್ಟೇನೂ ಉಚಿತವಲ್ಲ.
  12. not so well ಅಷ್ಟೇನೂ ಒಳ್ಳೆಯದಲ್ಲದ (ರೀತಿಯಲ್ಲಿ).
  13. not that ಹಾಗೆಂದು ಅರ್ಥವಲ್ಲ, ಆದರೆ: if he said so-not that he ever did-he lied ಅವನು ಹಾಗೆ ಹೇಳಿದ್ದರೆ – ಹಾಗೆ ಎಂದಿಗೂ ಹೇಳಿರಲಾರ – ಅದು ಸುಳ್ಳು.
  14. not too well = ಪದಗುಚ್ಛ\((12)\).
  15. not $^2$very.
  16. not but what(ಪ್ರಾಚೀನ ಪ್ರಯೋಗ)
    1. ಅದೇನೇ ಇರಲಿ; ಆದರೂ; ಹಾಗಿದ್ದರೂ: not what I can do it, not but that a stronger man might ನಾನು ಅದನ್ನು ಮಾಡಲಾರೆ; ಅದೇನೇ ಇರಲಿ ನನಗಿಂತ ಶಕ್ತನಾದವನು ಅದನ್ನು ಮಾಡಿರುತ್ತಿದ್ದ.
    2. ಅಂಥದ್ದಲ್ಲ; ಅಂಥವನಲ್ಲ: not such a fool but what he can see itಅದನ್ನು ಕಾಣದಿರುವಷ್ಟು ಅವನು ದಡ್ಡನಲ್ಲ.