with ವಿತ್‍
ಉಪಸರ್ಗ

ಒಡನೆ; ಕೂಡ; ಒಂದಿಗೆ; ಸಂಗಡ; ಜೊತೆಗೆ; ಜೊತೆಯಲ್ಲಿ; ಸಮೇತ; ಸಹಿತ:

  1. ಉಪಕರಣದಿಂದ; ಸಾಧನದಿಂದ (ಎಂಬರ್ಥಗಳಲ್ಲಿ): cut with a knife ಚಾಕುವಿನಿಂದ ಕತ್ತರಿಸು.
  2. ಸಹವಾಸದಲ್ಲಿ; ಸಾಹಚರ್ಯದಲ್ಲಿ; ಒಡನಾಟದಲ್ಲಿ: lives with his mother ತನ್ನ ತಾಯಿಯೊಡನೆ ವಾಸಿಸುತ್ತಾನೆ.
  3. ಕಾರಣದಿಂದ; ದೆಸೆಯಿಂದ: trembles with fear ಹೆದರಿಕೆಯಿಂದ ನಡುಗುತ್ತಾನೆ. in bed with fever ಜ್ವರದಿಂದ ಹಾಸಿಗೆ ಹಿಡಿದಿದ್ದಾನೆ.
  4. ಹೊಂದಿರುವ; ಒಳಗೊಂಡ; ಉಳ್ಳ: man with dark hair ಕಪ್ಪುಕೂದಲಿನ ಮನುಷ್ಯ. a vase with handles ಹಿಡಿಗಳುಳ್ಳ ಕಲಶ.
  5. ಪರಿಸ್ಥಿತಿಯಲ್ಲಿ: sleep with the windows open ಕಿಟಕಿಗಳನ್ನು ತೆರೆದು ಮಲಗಿಕೊ. a holiday with all the expenses paid ಖರ್ಚುವೆಚ್ಚಗಳನ್ನೆಲ್ಲಾ ಭರಿಸಿದ ರಜಾಪ್ರವಾಸ.
  6. ರೀತಿಯಲ್ಲಿ; ಅನುಸರಿಸಿದ ಯಾ ಪ್ರಕಟಿಸಿದ ಬಗೆಯಲ್ಲಿ: behaved with dignity ಘನತೆಯಿಂದ ನಡೆದುಕೊಂಡ. spoke with vehemence ಆವೇಶದಿಂದ ಮಾತಾಡಿದ. handle with care ಜಾಗರೂಕತೆಯಿಂದ ಮುಟ್ಟು, ಹಿಡಿ. won with ease ಸುಲಭವಾಗಿ ಗೆದ್ದ.
  7. ಸಹಮತ; ಸಾಮರಸ್ಯ; ಹೊಂದಿಕೆ; ಒಡಂಬಡಿಕೆ; ಸಮ್ಮತಿ; ಸಹಾನುಭೂತಿ: sympathise with ಸಹಾನುಭೂತಿ ಇರು, ತೋರು. I believe with you that it is true ಅದು ನಿಜವೆಂದು ನನಗೂ ನಿನ್ನ ಹಾಗೆಯೇ ಅನಿಸುತ್ತದೆ, ನಾನು ನಿನ್ನಂತೆಯೇ ಒಪ್ಪುತ್ತೇನೆ. blue does not go with green ನೀಲಿಯೂ ಹಸುರೂ ಹೊಂದುವುದಿಲ್ಲ.
  8. ಅಸಮ್ಮತಿ; ವಿರೋಧ; ಸ್ಪರ್ಧೆ: fight with ಒಡನೆ ಯಾ ವಿರುದ್ಧ ಹೋರಾಡು, ಕಾದಾಡು. incompatible with ಒಡನೆ – ಅಸಮಂಜಸವಾಗಿ, ಅಸಂಗತವಾಗಿ, ಹೊಂದಿಕೆಯಿಲ್ಲದೆ. argue with ಒಡನೆ ಯಾ ವಿರುದ್ಧ ವಾದಿಸು.
  9. (ಯಾವುದೋ ಒಂದರ) ಜವಾಬ್ದಾರಿ; ಹೊಣೆ; ವಶ; ಸುಫರ್ದು: the decision rests with you ನಿರ್ಧಾರ ನಿನ್ನ ಕೈಯಲ್ಲಿದೆ, ನಿನಗೆ ಬಿಟ್ಟದ್ದು. leave the child with me ಮಗುವನ್ನು ನನ್ನ ಹತ್ತಿರ, ನನ್ನ ವಶದಲ್ಲಿ ಬಿಡು.
  10. ವಸ್ತು; ಪದಾರ್ಥ: made with gold – ಚಿನ್ನದಿಂದ ಮಾಡಿದ್ದು.
  11. ಸೇರಿಕೆ; ಪೂರೈಕೆ; ಪದಾರ್ಥ, ಗುಣ, ಪರಿಸರ, ಮೊದಲಾದವನ್ನು ಹೊಂದಿರುವುದು: fill it with water ಅದಕ್ಕೆ ನೀರು ತುಂಬಉ, ಅದನ್ನು ನೀರಿನಿಂದ ತುಂಬಿಸು. threaten with dismissal ವಜಾ ಮಾಡುವುದಾಗಿ ಹೆದರಿಸು. decorate with garlands ಹೂಮಾಲೆಗಳಿಂದ ಅಲಂಕರಿಸು, ಸಿಂಗರಿಸು.
  12. ಕುರಿತು; ಸಂಬಂಧವಾಗಿ: be patient with them ಅವರೊಡನೆ ತಾಳ್ಮೆಯಿಂದಿರು. how are things with you ನೀನು ಹೇಗಿದ್ದೀಯೆ? ನಿನ್ನ ಸ್ಥಿತಿಗತಿಗಳು ಹೇಗಿವೆ? is it well with you? ನೀನು ಕ್ಷೇಮವೆ? what do you want with me ನನ್ನಿಂದ ನಿನಗೇನು ಬೇಕಾಗಿದೆ? nothing wrong with expressing one’s opinions ತನ್ನ ಅಭಿಪ್ರಾಯಗಳನ್ನು ತಿಳಿಸುವುದರಲ್ಲಿ ಯಾವ ತಪ್ಪೂ ಇಲ್ಲ.
  13. ಸಂಬಂಧಿಸಿದಂತೆ; ಕಾರಣವನ್ನು ಅನುಸರಿಸಿ; ಕಾರಣಕ್ಕೆ ಅನುಗುಣವಾಗಿ: changes with the weather ಹವಾಮಾನದೊಡನೆ, ಹವಾಮಾನಕ್ಕೆ ಅನುಗುಣವಾಗಿ ಬದಲಾಯಿಸುತ್ತದೆ. keeps pace with the cost of living ಜೀವನವೆಚ್ಚಕ್ಕೆ ಅನುಗುಣವಾಗಿ, ಜೀವನವೆಚ್ಚವನ್ನು ಅನುಸರಿಸಿ ಸಾಗುತ್ತದೆ, ಹೆಜ್ಜೆಯಿಡುತ್ತದೆ.
  14. ಆದಾಗ್ಯೂ; ಹಾಗಿದ್ದರೂ; ಹಾಗಿದೆಯೆಂದು ಒಪ್ಪಿದ್ದರೂ, ಪರಿಗಣಿಸಿದ್ದರೂ: with all your faults, we like you ನಿನ್ನ ದೋಷಗಳು ಎಷ್ಟೇ ಇದ್ದರೂ ನಿನ್ನ ಕಂಡರೆ ನಮಗೆ ಪ್ರೀತಿ. with all his riches, he is the simplest of men ಅವನಲ್ಲಿ ಅಷ್ಟೊಂದು ಐಶ್ವರ್ಯವಿದ್ದರೂ, ಅವನೊಬ್ಬ ಅತ್ಯಂತ ಸರಳ ವ್ಯಕ್ತಿ.
ಪದಗುಚ್ಛ
  1. away with (ವ್ಯಕ್ತಿ, ವಸ್ತು, ಮೊದಲಾದವನ್ನು) ತೊಲಗಿಸು; ಆಚೆಗೆ ದೂಡು.
  2. be with a person
    1. ವ್ಯಕ್ತಿಯೊಬ್ಬನ ಜೊತೆಗಿರು, ಒಡನಿರು; ಅವನ ಅಭಿಪ್ರಾಯ, ನಿಲವು, ಮೊದಲಾದವನ್ನು ಒಪ್ಪಿ ಅವನನ್ನು ಬೆಂಬಲಿಸು.
    2. (ಆಡುಮಾತು) ಒಬ್ಬನ ಅರ್ಥ, ಅಭಿಪ್ರಾಯ, ಸೂಚನೆ, ಇಂಗಿತ – ಗ್ರಹಿಸು: are you with me ನಾನು ಹೇಳಿದ್ದು ಅರ್ಥವಾಯಿತೇ? ನಾನು ಹೇಳಿದ್ದನ್ನು ಗ್ರಹಿಸಿದೆಯಾ? ನನ್ನ ಜೊತೆಗಿದ್ದೀಯಾ ತಾನೇ? ನನ್ನನ್ನು ಬೆಂಬಲಿಸುತ್ತಿದ್ದೀಯಷ್ಟೆ? not with you ನೀನು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ.
  3. bear with ತಾಳಿಕೊ; ಸಹಿಸು.
  4. begin with –ರಿಂದ ಪ್ರಾರಂಭಿಸು, ಮೊದಲು ಮಾಡು.
  5. blessed with ವರವಾಗಿ, ಅನುಗ್ರಹವಾಗಿ ಪಡೆದ: blessed with beauty ಸೌಂದರ್ಯದ ವರ ಪಡೆದು.
  6. can do nothing with him ಅವನನ್ನು ಏನು ಮಾಡಲೂ ಸಾಧ್ಯವಿಲ್ಲ; ಅವನನ್ನು ತಿದ್ದಲು, ಬದಲಾಯಿಸಲು ಆಗುವುದಿಲ್ಲ.
  7. have with you (ಪ್ರಾಚೀನ ಪ್ರಯೋಗ) ನಿನ್ನ ಆಹ್ವಾನವನ್ನು ಯಾ ಸವಾಲನ್ನು, ಪಂಥವನ್ನು – ಒಪ್ಪಿಕೊಳ್ಳುತ್ತೇನೆ.
  8. in with
    1. (ಒಬ್ಬನನ್ನು, ಒಂದನ್ನು) ಒಳಕ್ಕೆ ಸೇರಿಸು.
    2. ಸ್ನೇಹದಿಂದಿರು; ಅನ್ಯೋನ್ಯವಾಗಿರು: they are in with the boss ಅವರು ಯಜಮಾನನ ಜೊತೆ ಅನ್ಯೋನ್ಯವಾಗಿದ್ದಾರೆ.
  9. one with ಒಂದಕ್ಕೆ ಸೇರಿದ; ಒಂದರದೇ ಭಾಗವಾದ, ಅಂಗವಾದ.
  10. put up with (= ಪದಗುಚ್ಛ 3).
  11. rise with the sun ಸೂರ್ಯೋದಯಕ್ಕೆ ಸರಿಯಾಗಿ ಏಳು.
  12. to the devil with him ಅವನು ಹಾಳಾಗ, ಹಾಳಾಗಿ ಹೋಗಲಿ.
  13. up with him ಅವನನ್ನು ಮೇಲಕ್ಕೆ ಎತ್ತಿ ಒಯ್ಯಿರಿ.
  14. with child (or young)
    1. (ಮನುಷ್ಯರ ವಿಷಯದಲ್ಲಿ) ಬಸುರಾಗಿ; ಗರ್ಭಿಣಿಯಾಗಿ.
    2. (ಪ್ರಾಣಿಗಳ ವಿಷಯದಲ್ಲಿ) ಗಬ್ಬವಾಗಿ; ತೆನೆಯಾಗಿ.
  15. with God ಸ್ವರ್ಗಸ್ಥನಾಗಿ; ದೇವರ ಪಾದ ಸೇರಿ.
  16. with it (ಆಡುಮಾತು)
    1. ಅತ್ಯಾಧುನಿಕವಾಗಿ; ಆಧುನಿಕ ಭಾವನೆಗಳು ಮೊದಲಾದವುಗಳ ಪರಿಚಯ ಹೊಂದಿ.
    2. ಚೂಟಿಯಾಗಿ; ಎಚ್ಚರಿಕೆ ಮತ್ತು ಸೂಕ್ಷ್ಮಗ್ರಹಣಶಕ್ತಿಗಳಿಂದ ಕೂಡಿ.
  17. with that ತರುವಾಯ; ಅನಂತರ; ಅದಾದ ಕೂಡಲೇ; ಆ ಕೂಡಲೇ.