See also 2talk
1talk ಟಾಕ್‍
ನಾಮವಾಚಕ
  1. ಸಂಭಾಷಣೆ; ಸಲ್ಲಾಪ; ಮಾತು; ಮಾತುಕತೆ: let us have some talk ಸ್ವಲ್ಪ ಮಾತನಾಡೋಣ.
  2. (ಬಹುವಚನದಲ್ಲಿ) ಚರ್ಚೆ; ಮಾತುಕತೆ ಯಾ ಸಮಾಲೋಚನೆ: talks were held ಮಾತುಕತೆ ನಡೆಸಲಾಯಿತು.
  3. (ಮುಖ್ಯವಾಗಿ ಬಾನುಲಿ ಪ್ರಸಾರದಲ್ಲಿನ) ಲಘು ಭಾಷಣ ಯಾ ಸಂಭಾಷಣೆ ಶೈಲಿಯ ಉಪನ್ಯಾಸ.
  4. ನಿರ್ದಿಷ್ಟ ಬಗೆಯ ಮಾತು(ಗಾರಿಕೆ): baby-talk ಮಕ್ಕಳ ಮಾತು; ಮಕ್ಕಳ ತೊದಲ್ನುಡಿ. sailors’ talk ನಾವಿಕ–ಭಾಷೆ, ಮಾತು.
    1. ಗುಲ್ಲು; ವದಂತಿ; ಗಾಳಿ–ಮಾತು, ಸುದ್ದಿ; ಗುಸುಗುಸು: there is a talk of merger ವಿಲೀನದ ಗುಸುಗುಸು ಹರಡಿದೆ.
    2. ಗಾಳಿಮಾತಿನ, ವದಂತಿಯ–ವಿಷಯ: their success was the talk of the town ಅವರ ವಿಜಯ ಊರಿನಲ್ಲೆಲ್ಲಾ ಸುದ್ದಿಯಾಗಿತ್ತು.
ಪದಗುಚ್ಛ
  1. it will end in talk ಅದು (ಬರಿಯ) ಮಾತಿನಲ್ಲಿ ಮುಗಿಯುತ್ತದೆ (ಕೆಲಸವೇನೂ ನಡೆಯುವುದಿಲ್ಲ).
  2. talk of the town ಎಲ್ಲರೂ ಮಾತಾಡುತ್ತಿರುವ ಸಂಗತಿ; ಊರ ಸುದ್ದಿ; ಸಾರ್ವಜನಿಕ ವದಂತಿ.
See also 1talk
2talk ಟಾಕ್‍
ಸಕರ್ಮಕ ಕ್ರಿಯಾಪದ
  1. ಮಾತನಾಡು; ಹೇಳು; ವ್ಯಕ್ತಪಡಿಸು; ಚರ್ಚಿಸು: you are talking nonsense ನೀನು ಅಸಂಬದ್ಧವಾಗಿ, ಅರ್ಥಹೀನವಾಗಿ ಮಾತನಾಡುತ್ತಿದ್ದೀಯೆ. talked cricket all day ದಿನವಿಡೀ ಕ್ರಿಕೆಟ್‍–ಮಾತನಾಡಿದ, ಚರ್ಚಿಸಿದ.
  2. ಒಂದು ಭಾಷೆ(ಯಲ್ಲಿ) ಮಾತನಾಡು: they were talking French ಅವರು ಹ್ರೆಂಚ್‍ನಲ್ಲಿ ಮಾತನಾಡುತ್ತಿದ್ದರು.
  3. (ಮಾತನಾಡುವುದರ ಮೂಲಕ) ಒಂದು ವಿಶಿಷ್ಟ ಸ್ಥಿತಿ, ಅನುಭವ, ಮೊದಲಾದವನ್ನು ಉಂಟುಮಾಡು: he talked himself hoarse ಅವನು ಗಂಟಲು ಒಡೆಯುವಷ್ಟು ಮಾತನಾಡಿದ; ಗಂಟಲು ಹೂತು ಹೋಗುವವರೆಗೆ ಮಾತನಾಡಿದ. how did you talk them into? ನೀನು ಹೇಗೆ ಮಾತನಾಡಿ ಅವರು ಅದನ್ನೊಪ್ಪುವಂತೆ ಮಾಡಿದೆ? talked them out of the difficulty ಚಾಕಚಕ್ಯತೆಯಿಂದ ಮಾತನಾಡಿ ಕಷ್ಟದ ಪರಿಸ್ಥಿತಿಯಿಂದ ಅವರನ್ನು ಪಾರುಮಾಡಿದ.
ಅಕರ್ಮಕ ಕ್ರಿಯಾಪದ
  1. ಮಾತನಾಡು; ಸಂಭಾಷಣೆ ನಡೆಸು: what are you talking about? ನೀನು ಏನು ಮಾತನಾಡುತ್ತಿದ್ದೀಯೆ?
  2. ಬಾನುಲಿಯಲ್ಲಿ ಮಾತನಾಡು.
  3. ಮಾತಾಡು; ಮಾತನಾಡುವ ಶಕ್ತಿ ಪಡೆದಿರು; ಮಾತನಾಡಲು ಕಲಿತಿರು: this parrot can talk ಈ ಗಿಳಿಗೆ ಮಾತನಾಡಲು ಬರುತ್ತದೆ.
  4. ಗುಟ್ಟೆಲ್ಲವನ್ನೂ ಹೇಳಿಬಿಡು; (ಮುಖ್ಯವಾಗಿ ರಹಸ್ಯ) ಸುದ್ದಿ, ಮಾಹಿತಿ ಬಯಲು ಮಾಡು; ಬಾಯಿ ಬಿಡು: we have ways of making you talk ನಿನ್ನನ್ನು ಹೇಗೆ ಬಾಯಿಬಿಡಿಸಬೇಕೆಂದು ನಾವು ಬಲ್ಲೆವು.
  5. ಚರ್ಚೆಗೆ ವಿಷಯವಾಗಿ–ಹೊಂದಿರು, ತೆಗೆದುಕೊ; (ವಿಷಯದ ಬಗ್ಗೆ) ಮಾತನಾಡು, ಭಾಷಣ ಮಾಡು, ಚರ್ಚೆಮಾಡು.
  6. (ವಿಧ್ಯರ್ಥದಲ್ಲಿ) (ಆಡುಮಾತು) ಒತ್ತಿ ಹೇಳುವಾಗ: talk about expense! it cost me Rs. 50 ಖರ್ಚಿನ ಬಗ್ಗೆ ಹೇಳಬೇಕೇ! ಅದಕ್ಕೆ ನನಗೆ 50 ರೂಪಾಯಿ ತಗುಲಿತು.
  7. ಆಡಂಬರದಿಂದ, ಆಲಂಕಾರಿಕವಾಗಿ–ಸಂಬೋಧಿಸು.
    1. ಹರಟೆ–ಹೊಡಿ, ಕೊಚ್ಚು.
    2. ಬೀದಿ ಮಾತು ಆಡು; ಗಾಳಿಸುದ್ದಿ ಹರಡು: people are beginning to talk ಜನ ಗಾಳಿಸುದ್ದಿ ಹರಡುತ್ತಿದ್ದಾರೆ.
  8. ಮಾತನಾಡು; ಪ್ರಭಾವ ಬೀರು: money talks ಹಣ ಮಾತಾಡುತ್ತದೆ (ದುಡ್ಡಿನ ಪ್ರಭಾವದಿಂದ ಏನು ಬೇಕಾದರೂ ನಡೆದೀತು ಎಂಬರ್ಥದಲ್ಲಿ).
  9. ರೇಡಿಯೋದಲ್ಲಿ ಮಾತನಾಡು; ರೇಡಿಯೋ ಮೂಲಕ ತಿಳಿಸು.
ಪದಗುಚ್ಛ
  1. do the talking (ಯಾರದೇ ಪರವಾಗಿ) ಮಾತನಾಡು; ವಕ್ತಾರನಾಗು.
  2. know what one is talking about (ವಿಷಯ) ಚೆನ್ನಾಗಿ ತಿಳಿದು ಮಾತನಾಡು; (ವಿಷಯದಲ್ಲಿ) ತಜ್ಞನಾಗಿರು; ಮಾತಾಡುತ್ತಿರುವ ವಿಷಯ ತಿಳಿದಿರು.
  3. now you’re talking (ಆಡುಮಾತು) ಇದೀಗ ಮಾತು; ನೀನು ಹೇಳುವುದು ಸರಿ; ನೀನು ಹೇಳುವುದನ್ನು ಒಪ್ಪಿದೆ.
  4. talk about
    1. ಒಂದು ವಿಷಯ ಕುರಿತು ಚರ್ಚಿಸು, ಮಾತುಕತೆ ನಡೆಸು, ಪರ್ಯಾಲೋಚಿಸು.
    2. ಗುಲ್ಲೆಬ್ಬಿಸು.
  5. talk about trouble etc.! (ಆಡುಮಾತು) ಅದರ ಕಷ್ಟ, ಪಾಡು, ವಿಷಯ ಏನು ಹೇಳುತ್ತೀರಿ! ಅದು ಬೇಕಾದಷ್ಟು ಇತ್ತು!
  6. talk a person down
    1. (ಒಬ್ಬನನ್ನು, ಅವನಿಗಿಂತ ಜೋರಾಗಿ, ಹೆಚ್ಚಾಗಿ ಮಾತಾಡಿ) ಬಾಯಿ ಮುಚ್ಚಿಸು; ದಬಾಯಿಸಿ ಕೂರಿಸು; ಬಾಯಿ ಬಡಿ.
    2. ನೆಲದ ಮೇಲಿನಿಂದ ರೇಡಿಯೋ ಮೂಲಕ ಮಾತನಾಡಿ, ವಿಮಾನ ಯಾ ವಿಮಾನ ಚಾಲಕನು ಭೂಸ್ಪರ್ಶ ಮಾಡುವಂತೆ ನಿರ್ದೇಶಿಸು.
  7. talk a person over (or round) (ಒಬ್ಬನನ್ನು) ಮಾತಿನಿಂದ–ಒಪ್ಪಿಸು, ಒಲಿಸಿಕೊ.
  8. talk at
    1. ಅಪ್ರತ್ಯಕ್ಷವಾಗಿ ಮಾತನಾಡು; ಗೋಷ್ಠಿಯಲ್ಲಿ ಒಬ್ಬನ ವಿಷಯ ಅವನ ಕಿವಿಗೇ ಕೇಳಿಸುವಂತೆ ಬೇರೊಬ್ಬನ ಜತೆ ಮಾತನಾಡು.
    2. ಆಡಂಬರದಿಂದ ಮಾತನಾಡು.
  9. talk away
    1. ಬರಿ ಮಾತಿನಲ್ಲೇ ಕಾಲ ಕಳೆದುಬಿಡು.
    2. ಮಾತಾಡುತ್ತಾ, ಹೇಳುತ್ತಾ–ಹೋಗು; ಮಾತನಾಡುವುದನ್ನು, ಹೇಳುವುದನ್ನು–ಮುಂದುವರಿಸು: talk away, I’m listening ಮಾತು ಮುಂದುವರಿಸು, ಕೇಳುತ್ತಿದ್ದೇನೆ.
  10. talk back
    1. ಹಿಂತಿರುಗಿಸಿ ಮಾತನಾಡು; ಎದುರು ಜವಾಬು, ಎದುರುತ್ತರ–ಕೊಡು.
    2. ದ್ವಿಮುಖಿ ರೇಡಿಯೋ ಮೂಲಕ–ಪ್ರತ್ಯುತ್ತರ ನೀಡು, ಸಂಭಾಷಣೆ ನಡಸು; ಸಂಕೇತಗಳನ್ನು ಕಳುಹಿಸುವುದರ ಜೊತೆಗೆ ಅವನ್ನು ಸ್ವೀಕರಿಸುವ ರೇಡಿಯೋ ವ್ಯವಸ್ಥೆಯ ಮೂಲಕ ಉತ್ತರ ನೀಡು.
  11. talk $^2$big.
  12. talk cricket ಕ್ರಿಕೆಟ್‍ ವಿಷಯ ಚರ್ಚಿಸು; ತಿಳಿಸು.
  13. talk down to ಅನುಗ್ರಹ ತೋರುವಂತೆ, ಹುಸಿ ದೊಡ್ಡಸ್ತಿಕೆಯಿಂದ ಮಾತನಾಡು.
  14. talk into his grave ಮಾತನಾಡಿ ಮಾತನಾಡಿ ಅವನನ್ನು ಗೋರಿ ಮಾಡಿದ, ಕೊಂದ.
  15. talk nineteen to the dozen.
  16. talk of
    1. (ಒಂದು ವಿಷಯ) ಮಾತನಾಡು; ಚರ್ಚಿಸು; ತಿಳಿಸು.
    2. (ಕೃದಂತದೊಡನೆ) ಯಾವುದೋ ನಿರ್ಧಾರ, ಉದ್ದೇಶ–ತಿಳಿಯಪಡಿಸು, ಸ್ಪಷ್ಟವಾಗಿ ಹೇಳು: talked moving to Mysore ಮೈಸೂರಿಗೆ ಹೋಗುವ ನಿರ್ಧಾರ ತಿಳಿಸಿದೆ.
  17. talk one out of a resolution ಒಬ್ಬನ ಜೊತೆ ನಿರಂತರ ಚರ್ಚೆ ಮಾಡಿ ಯಾ ಮಾತನಾಡಿ ಅವನ ನಿರ್ಧಾರ ಕದಲಿಸು ಯಾ ಬಿಡುವಂತೆ, ಬದಲಿಸುವಂತೆ ಮಾಡು.
  18. talk out (ಬ್ರಿಟಿಷ್‍ ಪ್ರಯೋಗ) (ಶಾಸನ ಸಭೆ ಮೊದಲಾದವುಗಳಲ್ಲಿ ಮಸೂದೆ, ಸೂಚನೆ, ಮೊದಲಾದವುಗಳನ್ನು) ಅಧಿವೇಶನದ ಕೊನೆಯವರೆಗೂ ಬೆಳೆಸುತ್ತಾ, ನಿರ್ಣಯವಾಗದಂತೆ ಮಾಡು; ಮಾತು ಬೆಳೆಸಿ ತಡೆಗಟ್ಟು, ತಡೆಹಿಡಿ.
  19. talk over (ಒಬ್ಬನ ಜತೆ) ಸಾವಕಾಶವಾಗಿ–ಮಾತನಾಡು, ವಿಚಾರಮಾಡು; ಸಾವಧಾನವಾಗಿ ಚರ್ಚೆ ನಡೆಸು.
  20. talk philosophy ಪಾರಮಾರ್ಥಿಕ ವಿಷಯಗಳನ್ನು ಚರ್ಚಿಸು; ತತ್ತ್ವವಿಚಾರಗಳ ಬಗ್ಗೆ ಮಾತನಾಡು.
  21. talk round (ವಿಷಯವನ್ನು) ದೀರ್ಘಕಾಲ ವೃಥಾ ಚರ್ಚಿಸು; ಯಾವ ನಿರ್ಣಯಕ್ಕೂ ಬರದೆ ಸುಮ್ಮನೆ ಚರ್ಚೆ ಬೆಳೆಸು.
  22. talk scandal ಗುಲ್ಲೆಬ್ಬಿಸು; ಅಪನಿಂದೆ ಹರಡು.
  23. talk shop (ಸಂಭಾಷಣೆಯಲ್ಲಿ) (ಮುಖ್ಯವಾಗಿ ಬೇಸರಗೊಳಿಸುವಂತೆ ಯಾ ಸಮಯೋಚಿತವಲ್ಲದೆ) ತನ್ನ ಕಸುಬಉ, ವ್ಯವಹಾರ, ಮೊದಲಾದ ವಿಷಯವನ್ನು ಮಾತಾಡು.
  24. talk tall ಜಂಬ ಹೊಡೆ; ಬಡಾಯಿ ಕೊಚ್ಚು.
  25. talk the hind leg off a donkey.
  26. talk treason ವಿದ್ರೋಹಿಯಂತೆ ಮಾತನಾಡು.
  27. talk through one’s $^1$hat.
  28. talk through one’s $^1$neck.
  29. talk to (ಆಡುಮಾತು) ತರಾಟೆಗೆ ತೆಗೆದುಕೊ; ವಾಗ್ದಂಡನೆ ಮಾಡು; ಆಕ್ಷೇಪಿಸಿ ಮಾತನಾಡು.
  30. talk to oneself ತನ್ನಷ್ಟಕ್ಕೆ ತಾನೇ ಮಾತನಾಡಿಕೊ; ಸ್ವಾಗತ ಭಾಷಣ ಮಾಡು.
  31. talk up ಆಸಕ್ತಿ ಹುಟ್ಟಿಸುವಂತೆ (ವಿಷಯವನ್ನು) ಚರ್ಚಿಸು; ವಿಷಯದಲ್ಲಿ ಉತ್ಸಾಹ ಕೆರಳಿಸಲು ಮಾತನಾಡು.
  32. you can (or can’t) talk (ಆಡುಮಾತು) ನೀನೂ ಅಷ್ಟೇ, ಚರ್ಚಿಸುತ್ತಿರುವ ವಿಷಯದಲ್ಲಿ ಸಂಬೋಧಿತನಾಗಿರುವ ವ್ಯಕ್ತಿಯೂ ಅಷ್ಟೇ ಭಾಗಿ ಎಂಬ ಆಕ್ಷೇಪದ ಮಾತು.
  33. talk turkey.