See also 2talk
1talk ಟಾಕ್‍
ನಾಮವಾಚಕ
  1. ಸಂಭಾಷಣೆ; ಸಲ್ಲಾಪ; ಮಾತು; ಮಾತುಕತೆ: let us have some talk ಸ್ವಲ್ಪ ಮಾತನಾಡೋಣ.
  2. (ಬಹುವಚನದಲ್ಲಿ) ಚರ್ಚೆ; ಮಾತುಕತೆ ಯಾ ಸಮಾಲೋಚನೆ: talks were held ಮಾತುಕತೆ ನಡೆಸಲಾಯಿತು.
  3. (ಮುಖ್ಯವಾಗಿ ಬಾನುಲಿ ಪ್ರಸಾರದಲ್ಲಿನ) ಲಘು ಭಾಷಣ ಯಾ ಸಂಭಾಷಣೆ ಶೈಲಿಯ ಉಪನ್ಯಾಸ.
  4. ನಿರ್ದಿಷ್ಟ ಬಗೆಯ ಮಾತು(ಗಾರಿಕೆ): baby-talk ಮಕ್ಕಳ ಮಾತು; ಮಕ್ಕಳ ತೊದಲ್ನುಡಿ. sailors’ talk ನಾವಿಕ–ಭಾಷೆ, ಮಾತು.
    1. ಗುಲ್ಲು; ವದಂತಿ; ಗಾಳಿ–ಮಾತು, ಸುದ್ದಿ; ಗುಸುಗುಸು: there is a talk of merger ವಿಲೀನದ ಗುಸುಗುಸು ಹರಡಿದೆ.
    2. ಗಾಳಿಮಾತಿನ, ವದಂತಿಯ–ವಿಷಯ: their success was the talk of the town ಅವರ ವಿಜಯ ಊರಿನಲ್ಲೆಲ್ಲಾ ಸುದ್ದಿಯಾಗಿತ್ತು.
ಪದಗುಚ್ಛ
  1. it will end in talk ಅದು (ಬರಿಯ) ಮಾತಿನಲ್ಲಿ ಮುಗಿಯುತ್ತದೆ (ಕೆಲಸವೇನೂ ನಡೆಯುವುದಿಲ್ಲ).
  2. talk of the town ಎಲ್ಲರೂ ಮಾತಾಡುತ್ತಿರುವ ಸಂಗತಿ; ಊರ ಸುದ್ದಿ; ಸಾರ್ವಜನಿಕ ವದಂತಿ.